inspirational, ಸುದ್ದಿ

ಪ್ರಕಟವಾಯ್ತು SSLC ಫಲಿತಾಂಶ..ರಾಜ್ಯಕ್ಕೆ ಇವರೇ ಪ್ರಥಮ…ನಿಮ್ಮ ಜಿಲ್ಲೆ ಯಾವ ಸ್ಥಾನದಲ್ಲಿದೆ ನೋಡಿ…

220

ಈ ಬಾರಿಯ ಎಸ್‍ಎಸ್‍ಎಲ್ ಸಿ ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನ ಪಡೆದಿದ್ದು, ಈ ಮೂಲಕ ಜಿಲ್ಲೆ ಹೊಸ ದಾಖಲೆ ಬರೆದಿದೆ.

ಹೌದು. ಫಲಿತಾಂಶದಲ್ಲಿ ಅರೆ ಮಲೆನಾಡು ರಾಜ್ಯದಲ್ಲೇ ನಂಬರ್ 1 ಸ್ಥಾನ ಪಡೆದಿದೆ. ಕಳೆದ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 7ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಹಾಸನ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹಿಂದಿಕ್ಕಿದೆ.

ಹಾಸನ ಪ್ರಥಮ ಸ್ಥಾನದ ಜೊತೆಗೆ ಹಾಸನದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ನಗರದ ವಿಜಯ ಶಾಲೆಯ ಪ್ರಗತಿ ಹಾಗೂ ಅಭಿನ್ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಪರಿಣಾಮ ಹಾಸನ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಕಳೆದ ಬಾರಿ ಶೇ.84.68 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು. ಆದರೆ ಈ ಬಾರಿ ಶೇ 89.33 ರಷ್ಟು ಉತ್ತೀರ್ಣರಾಗಿದ್ದಾರೆ. ಒಟ್ಟಿನಲ್ಲಿ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಚ್ಚರಿ ಫಲಿತಾಂಶ ಹೊರಬಿದ್ದಿದೆ.

ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು ಶೇ.73.70 ಫಲಿತಾಂಶ ದಾಖಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ.1.7ರಷ್ಟು ಏರಿಕೆಯಾಗಿದೆ.

ಶೇ.89.33 ಫಲಿತಾಂಶ ದಾಖಲಿಸುವ ಮೂಲಕ ಹಾಸನ ಮೊದಲ ಸ್ಥಾನ ಪಡೆದುಕೊಂಡರೆ, ಶೇ.88.49 ಫಲಿತಾಂಶ ದಾಖಲಿಸಿ ರಾಮನಗರ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.88.49 ಫಲಿತಾಂಶ ದಾಖಲಿಸುವ ಮೂಲಕ ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನ ಪಡೆದುಕೊಂಡರೆ ಶೇ.53.95 ಫಲಿತಾಂಶದೊಂದಿಗೆ ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ಈ 2 ವರ್ಷದ ಪುಟ್ಟ ಬಾಲಕಿಗೆ ಹಾವೇ ಫ್ರೆಂಡ್ಸ್..!ತಿಳಿಯಲು ಈ ಲೇಖನ ಓದಿ..

    ಹಾವು ಎಂದರೆ ಎಂಥವರಿಗೂ ಭಯ ಆಗುತ್ತೆ. ಅಂತಹದರಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದರೊಂದಿಗೆ ಸ್ನೇಹ ಬೆಳಸಿಕೊಂಡು ಅವುಗಳೊಂದಿಗೆ ಬೆರೆಯುತ್ತಾಳೆ ಈ ಪುಟ್ಟ ಬಾಲಕಿ.

  • ಸ್ಪೂರ್ತಿ

    ಹೆಣ್ಮಕ್ಕಳು ತಂದೆಯನ್ನೇ ಅತಿ ಹೆಚ್ಚು ಇಷ್ಟ ಪಡುತ್ತಾರೆ ಯಾಕೆ ಗೊತ್ತಾ.? ಈ ಕಾರಣಕ್ಕೆ.!

    ಪ್ರತಿ ತಂದೆ ತಾಯಿಗಳಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ, ಮಕ್ಕಳು ಕೂಡ ಅಷ್ಟೇ ತಂದೆ ತಾಯಿಯನ್ನು ಹೆಚ್ಚು ಇಷ್ಟಪಡುತ್ತಾರೆ. ವಿಶೇಷವೇನೆಂದರೆ ಹೆಣ್ಮಕ್ಕಳು ತಂದೆಯನ್ನು ಅತಿ ಹೆಚ್ಚು ಇಷ್ಟ ಪಡುತ್ತಾರೆ ಯಾಕೆ ಗೊತ್ತಾ.? ಈ ಕಾರಣಕ್ಕೆ ತಂದೆಯನ್ನು ಹೆಣ್ಮಕ್ಕಳು ಹೆಚ್ಚು ಇಷ್ಟ ಪಡೋದು. ಪ್ರತಿ ತಂದೆಗಳು ತನ್ನ ಹೆಂಡತಿಗಿಂತ ಮಗಳಿಗೆ ಹೆಚ್ಚು ಅಧ್ಯಾತೆ ಕೊಡುತ್ತಾರೆ, ಹಾಗು ಹೆಚ್ಚು ಪ್ರೀತಿಸುತ್ತಾರೆ, ತನ್ನ ತಂದೆಗೆ ಮಗಳೇ ಸರ್ವಸ್ವ ಆಗಿರುತ್ತಾಳೆ. ಅಷ್ಟೇ ಅಲ್ಲದೆ ಈ ಕಾರಣಗಳು ಕೂಡ ತಂದೆಯನ್ನು ಹೆಚ್ಚು ಇಷ್ಟಪಡುವಂತೆ ಮಾಡುತ್ತವೆ. ಪ್ರತಿ…

  • ಸುದ್ದಿ

    ಮಧುಮಗಳಿಲ್ಲದೆ ಮದುವೆ ಮಾಡಿ ಮಗನ ಕನಸನ್ನು ನನಸು ಮಾಡಿದ ಪೋಷಕರು…!

    ವಧುವಿಲ್ಲದೆ ತನ್ನ 27 ವರ್ಷದ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಮಗನ ಕನಸನ್ನು ನನಸು ಮಾಡಿದ ತಂದೆ… ಅಜಯ್ ಬಾರೋಟ್ ಸಣ್ಣ ಮಗುವಿರುವಾಗಲೇ ಆತನ ಹೆತ್ತವರು ಮಗ ದೊಡ್ಡವನಾದ ಬಳಿಕ ಆತನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ ಅಜಯ್ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ ಆತನಿಗೆ ಸಂಗಾತಿ ಹುಡುಕಲು ಮನೆಯವರಿಗೆ ಕಷ್ಟವಾಯಿತು. ಯಾಕಂದರೆ ಅಜಯ್ ಬೆಳೆಯುತ್ತಾ ಅಂಗವೈಕಲ್ಯದಿಂದ ಬಳಲತೊಡಗಿದ. ಹೀಗಾಗಿ ಆತನಿಗೆ ವಧು ಇಲ್ಲದೆ ಮದುವೆ ಮಾಡಲು ಕುಟುಂಬ ತೀರ್ಮಾನ ಮಾಡಿತ್ತು. ಹಾಗೆಯೇ…

  • ಆಧ್ಯಾತ್ಮ

    ಆ ದಿನ ಈ ಯಾಗ ಪೂರ್ಣವಾಗಿ ನಡೆದಿದ್ದರೆ,ಈ ದಿನ ನಾವು ನೋಡಲಿಕ್ಕೆ ಹಾವಿನ ಸಂತತಿಯೇ ಇರುತ್ತಿರಲಿಲ್ಲ!ಯಾಕೆ ಗೊತ್ತಾ..?ಈ ಲೇಖನಿ ಓದಿ…

    ಆಗ ಹಸ್ತಿನಾಪುರದಲ್ಲಿ ಪರೀಕ್ಷಿತನ ಮಗ ಜನಮೇಜಯನು ರಾಜ್ಯ ಆಳುತಿದ್ದ. ಅವನ ಅಸ್ತಾನಕ್ಕೆ ಉತ್ತಂಕನೆಂಬ ಮುನಿಯು ಆಗಮಿಸಿದ. ಈ ಮುನಿಗೆ ತಾನು ತಕ್ಷಕ ಎಂಬ ಹಾವಿನಿಂದ ಒದಗಿದ ಅನ್ಯಾಯಕ್ಕಾಗಿ ಸೇಡು ತೀರಿಸಿಕೊಳ್ಳಲು ಜನಮೇಜಯನ ಆಸ್ಥಾನಕ್ಕೆ ಬಂದಿದ್ದ. ಹಾಗಾಗಿ ತನಗೆ ನಮಸ್ಕರಿಸಿದ ರಾಜನನ್ನೂ ಅವನ ಪರಿವಾರವನ್ನು ಅಷಿರ್ವದಿಸಿದ. ರಾಜನು ನೀಡಿದ ಆಸನದಲ್ಲಿ ಕುಳಿತು ಅತಿಥ್ಯ ಸ್ವೀಕರಿಸಿದ. ಎಲ್ಲರ ಕುಶಲವನ್ನೂ ವಿಚಾರಿಸಿದ. ಅನಂತರ ರಾಜನನ್ನೂ ಕುರಿತು

  • ವಿಚಿತ್ರ ಆದರೂ ಸತ್ಯ

    ಈ ವ್ಯಕ್ತಿಯ ಹೊಟ್ಟೆಯಲ್ಲಿ ಸಿಕ್ಕಿದ್ವು,ಬರೋಬರಿ 70ಕ್ಕಿಂತ ಹೆಚ್ಚು ನಾಣ್ಯಗಳು..!ಇದು ಹೇಗೆ ಸಾಧ್ಯ ಅಂತೀರಾ…

    ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಶೇಷವಾದ ಸುದ್ದಿಯನ್ನು ನೋಡುತ್ತಲೇ ಇರುತ್ತೇವೆ.ಕೆಲವು ಸುದ್ದಿಗಳು ಅಚ್ಚರಿಯಾಗಿದ್ದರು ಸತ್ಯಕ್ಕೆ ಹತ್ತಿರವಾಗಿರುತ್ತವೆ. ಹಾಗು ಕೆಲವು ಸುದ್ದಿಗಳು ರೋಚಕತೆ ಸೃಷ್ಟಿಸುವ ರೀತಿಯಲ್ಲಿರುತ್ತವೆ.

  • ಸುದ್ದಿ

    ಬಾಣಂತಿಯರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದ ಬಿಬಿಎಂಪಿ,.!

    ಬಿಬಿಎಂಪಿ  ಆಸ್ಪತ್ರೆಗಳಲ್ಲಿ ಬಾಣಂತಿಯರಿಗಾಗಿ  ಹೊಸ ಯೋಜನೆಯನ್ನು  ಜಾರಿಗೆ ತರಬೇಕು ಎಂದು ನಿರ್ಧರಿಸಿದ್ದಾರೆ. ಈ ನಿರ್ಧಾರ ಕೈಗೊಳ್ಳಲು  ಮುಖ್ಯ ಕಾರಣವೇನೆಂದರೆ  ಬಾಣಂತಿಯರಿಗಾಗಿ ಉಪಯುಕ್ತ  ಪೌಷ್ಟಿಕಾಂಶ  ಮತ್ತು ಅವರಿಗಾಗಿ ಹಾಲು ಸಹ  ನೀಡಬೇಕು  ಎಂದು ನಿರ್ಧರಿಸಲಾಗಿದೆ.  ಬಿಬಿಎಂಪಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಬಾಣಂತಿಯರಿಗೆ ಎರಡು ಹೊತ್ತು ಹಾಲು ಪೂರೈಸಲು ನಿರ್ಧರಿಸಿದ್ದಾರೆ. ಬಿಬಿಎಂಪಿಯ 32 ಆಸ್ಪತ್ರೆಗಳಲ್ಲಿನ ಬಾಣಂತಿಯರಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಯೋಜನೆ ರೂಪಿಸಿರುವ ಅಧಿಕಾರಿಗಳು, ಪ್ರತಿದಿನ 500 ಎಂ.ಎಲ್. ಹಾಲು ಪೂರೈಸಲು ನಿರ್ಧರಿಸಿದ್ದಾರೆ. ಯೋಜನೆಗಾಗಿ ಸುಮಾರು 15 ಲಕ್ಷ ರೂ ಮೀಸಲಿಡಲಾಗಿದೆ.ವರ್ಷಕ್ಕೆ…