ಸುದ್ದಿ

ತನ್ನ ಪ್ರೊಫೆಸರ್ ಮದುವೆಗೆ ಹೋದ ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಟೇಜ್ ಮೇಲೆ ಮಾಡಿದ್ದೇನು. ಶಾಕ್ ಆದ ಹೆಣ್ಣು.

51

ಸಮಯ ಮತ್ತು ಸಂದರ್ಭದ ಅರಿವಿಲ್ಲದೆ ನಾವು ಮಾಡುವ ಕೆಲವು ಕೆಲಸಗಳು ಕೆಲವೊಮ್ಮೆ ನಗೆಪಾಟಲಿಗೆ ದಾರಿಮಾಡಿ ಕೊಡುತ್ತದೆ. ಇಂತಹದ್ದೇ ಒಂದು ಕೆಲಸವನ್ನ ಇಂಜಿನಿಯರಿಂಗ್ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮಾಡಿದ್ದಾನೆ ಮತ್ತು ಈತ ಮಾಡಿದ ಕೆಲಸಕ್ಕೆ ಒಂದು ಕ್ಷಣ ಎಲ್ಲರೂ ಬೆರಗಾಗಿದ್ದಾರೆ. ಇನ್ನು ಇದೂ ದೊಡ್ಡ ಸುದ್ದಿ ಅಲ್ಲದೆ ಇರಬಹುದು ಆದರೆ ಇದು ವಿಭಿನ್ನ ಅನ್ನುವ ಕಾರಣಕ್ಕೆ ನಾವು ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ. ಕೇರಳದ ಒಂದು ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಶ್ರೀನಾಥ್ ಮಾಡಿದ ಕೆಲಸಕ್ಕೆ ನಗಬೇಕೋ ಅಥವಾ ಹೊಗಳಬೇಕೋ ಎಂದು ಜನರು ಟೆನ್ಶನ್ ಗೆ ಒಳಗಾಗಿದ್ದಾರೆ.

ಹೌದು ಸ್ನೇಹಿತರೆ ಆ ದಿನ ಆ ಕಾಲೇಜಿನ ಉಪನ್ಯಾಸಕರ ಮದುವೆ ನಡೆಯುತ್ತಿತ್ತು ಮತ್ತು ಆ ಮದುವೆಗೆ ವಿದ್ಯಾರ್ಥಿಗಳು ಕೂಡ ಬಂದಿದ್ದರು ಮತ್ತು ಅವರಲ್ಲಿ ಶ್ರೀನಾಥ್ ಕೂಡ ಇದ್ದ. ಇನ್ನು ಎಲ್ಲಾ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರ ಮದುವೆಯನ್ನ ನೋಡಿ ಶುಭಾಶಯವನ್ನ ಹೇಳಿಹೋಗಲು ಬಂದಿದ್ದರು, ಆದರೆ ಶ್ರೀನಾಥ್ ಮಾತ್ರ ಬೇರೆ ಕೆಲಸಕ್ಕಾಗಿಯೇ ಬಂದಿದ್ದ. ಹೌದು ಸ್ನೇಹಿತರೆ ಉಪನ್ಯಾಸಕರ ಮದುವೆಯ ಆರತಕ್ಷತೆ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಎಲ್ಲರೂ ಫೋಟೋಗಳಿಗೆ ಪೋಸ್ ಕೊಟ್ಟು ಶುಭಾಶಯವನ್ನ ಹೇಳಿ ಹೋಗುತ್ತಿದ್ದರು, ಇನ್ನು ಈ ಸಮಯದಲ್ಲಿ ಸ್ಟೇಜ್ ಮೇಲೆ ಬಂದ ಶ್ರೀನಾಥ್ ತನ್ನ ಅಸೈನ್ಮೆಂಟ್ ರೆಕಾರ್ಡ್ ಪುಸ್ತಕ ಕೊಟ್ಟು ಅದಕ್ಕೆ ಸಹಿ ಮಾಡಿಕೊಡುವಂತೆ ಉಪನ್ಯಾಸಕರ ಮುಂದೆ ಇಟ್ಟಿದ್ದಾನೆ.

ಇನ್ನು ಇದನ್ನ ನೋಡಿ ಒಂದು ಕ್ಷಣ ಆಶ್ಚರ್ಯನಾದ ಆ ಉಪನ್ಯಾಸಕ ನಗಾಡುತ್ತಲೇ ಆ ಪುಸ್ತಕಕ್ಕೆ ಸಹಿ ಮಾಡಿ ಕೊಟ್ಟರು, ಇನ್ನು ಇದನ್ನ ನೋಡಿದ ಮದುವೆಯ ಹೆಣ್ಣು ನಾನು ಈ ಸಮಯದಲ್ಲಿ ನಗಾಡಿದರೆ ಚೆನ್ನಾಗಿರಲ್ಲ ಎಂದು ತನ್ನ ನಗುವನ್ನ ಕಂಟ್ರೋಲ್ ಮಾಡಿಕೊಂಡು ಕೈ ಅಡ್ಡ ಇಟ್ಟುಕೊಂಡು ನಗಾಡಿದ್ದಾರೆ. ಇನ್ನು ಈ ಸಮಯದಲ್ಲಿ ಯಾರ ಬಗ್ಗೆ ಆಲೋಚನೆ ಮಾಡದ ಶ್ರೀನಾಥ್ ತನ್ನ ಪಾಡಿಗೆ ತಾನು ಸಹಿ ಮಾಡಿಕೊಂಡು ಫೋಟೋಗೆ ಪೋಸ್ ಕೊಟ್ಟು ಅಲ್ಲಿಂದ ಹೊರಟು ಹೋಗಿದ್ದಾನೆ, ಮದುವೆಯಾದ ಮೇಲೆ ಹಾನಿಮುನು ಅದೂ ಇದು ಅಂತ ಉಪನ್ಯಾಸಕರು ಕಾಲೇಜ್ ಗೆ ಬರುವುದಿಲ್ಲ ಮತ್ತು ಉಪನ್ಯಾಸಕರು ಕೈಗೆ ಸಿಗಲ್ಲ ಎಂದು ಭಾವಿಸಿದ ಶ್ರೀನಾಥ್ ರೆಕಾರ್ಡ್ ಪುಸ್ತಕಕ್ಕೆ ಸಹಿ ಮಾಡಿಸಿಕೊಳ್ಳುವ ಸಲುವಾಗಿಯೇ ಶ್ರೀನಾಥ್ ಮದುವೆಗೆ ಬಂದಿದ್ದನಂತೆ.

ಇನ್ನು ಇದನ್ನ ನೋಡಿದ ಅಲ್ಲಿನ ಜನ ಒಂದು ಕ್ಷಣ ನಗುವನ್ನ ತಡೆಯಲಾಗದೆ ಮೂಕವಿಸ್ಮಿತರಾಗಿದ್ದಾರೆ, ಇನ್ನು ಇದೆಲ್ಲದರ ನಡುವೆ ಯಾವುದೇ ಮುಜುಗರವನ್ನ ಮಾಡಿಕೊಳ್ಳದೆ ತನ್ನ ವಿದ್ಯಾರ್ಥಿಯ ರೆಕಾರ್ಡ್ ಪುಸ್ತಕಕ್ಕೆ ಸಹಿ ಮಾಡಿದ ಉಪನ್ಯಾಸಕರ ವಿನಯವನ್ನ ನಾವು ಮೆಚ್ಚಿಕೊಳ್ಳಲೇಬೇಕು. ಕೆಲವು ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರ ಬಳಿ ಮಾತನಾಡಲು ಕೂಡ ಹೆದರುತ್ತಾರೆ ಆದರೆ ಶ್ರೀನಾಥ್ ಮಾತ್ರ ಯಾವುದೇ ಭಯಪಡದೆ ತನ್ನ ಉಪನ್ಯಾಸಕರ ಮದುವೆಗೆ ಬಂದು ರೆಕಾರ್ಡ್ ಪುಸ್ತಕಕ್ಕೆ ಸಹಿ ಹಾಕಿಸಿಕೊಳ್ಳುವುದರಲ್ಲಿಯೇ ಗೊತ್ತಾಗುತ್ತದೆ ಈ ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳ ಬಳಿ ಎಷ್ಟು ಅನ್ಯೋನ್ಯವಾಗಿ ಇದ್ದಾರೆ ಅನ್ನುವುದು, ಸ್ನೇಹಿತರೆ ಉಪನ್ಯಾಸಕರ ತಾಳ್ಮೆ, ವಿನಯತೆ ಮತ್ತು ವಿದ್ಯಾರ್ಥಿ ಶ್ರೀನಾಥ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ