ಸುದ್ದಿ

ಸ್ನಾಕ್ಸ್ ಗೆ ಮನೆಯಲ್ಲೇ ಸ್ಪೈಸಿ ಸ್ಪೈಸಿ ಸೋಯಾ ಮಂಚೂರಿ ಮಾಡುವ ವಿಧಾನ,.!

35

ಭಾನುವಾರ ರಜೆ ದಿನ. ಪ್ರತಿನಿತ್ಯ ಕೆಲಸ, ಶಾಲೆ ಎಂದು ಬ್ಯುಸಿಯಾಗಿರೋ ಕುಟುಂಬಸ್ಥರು ಮನೆಯಲ್ಲಿ ರೆಸ್ಟ್ ಮಾಡುತ್ತಾ ಇರುತ್ತಾರೆ. ಮಕ್ಕಳು ಸಹ ಇಂದು ಮನೆಯಲ್ಲಿಯೇ ಇರುತ್ತಾರೆ. ಎಲ್ಲರೂ ಒಟ್ಟಿಗೆ ಕುಳಿತು ರುಚಿ ರುಚಿಯಾದ ಮಸಲಾ ಚಾಟ್ಸ್ ತಿನ್ನೋ ಬಯಕೆ ಎಲ್ಲರಲ್ಲಿ ಮನೆ ಮಾಡಿರುತ್ತದೆ. ಹೊರಗಡೆ ತಂದ ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಮನೆಯಲ್ಲಿ ಏನು ಮಾಡಬೇಕೆಂದು ಚಿಂತೆಯಲ್ಲಿದ್ದೀರಾ. ಒಮ್ಮೆ ಸ್ಪೈಸಿ ಸೋಯಾ ಮಂಚೂರಿ ಮಾಡಿ ತಿನ್ನಿ. ಸ್ಪೈಸಿ ಸೋಯಾ ಮಂಚೂರಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವಸಾಮಾಗ್ರಿಗಳು
* ಸೋಯಾ – 100 ಗ್ರಾಂ, * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಸ್ಪೂನ್, * ಹಸಿಮೆಣಸಿನಕಾಯಿ – 2-3
* ಈರುಳ್ಳಿ – ಮಿಡಿಯಂ ಸೈಜ್, * ಸೋಯಾ ಸಾಸ್, * ಟೊಮೆಟೊ ಸಾಸ್, * ಜೋಳದ ಹಿಟ್ಟು (ಕಾರ್ನ್ ಫ್ಲೋರ್), * ಮೈದಾ ಹಿಟ್ಟು, * ಕ್ಯಾಪ್ಸಿಕಂ, * ಉಪ್ಪು, * ಎಣ್ಣೆ.

ಮಾಡುವ ವಿಧಾನ
* ಒಂದು ಪಾತ್ರೆಗೆ ಸೋಯಾ ಹಾಕಿ ಸ್ವಲ್ಪ ಉಪ್ಪು ಹಾಕಿ ಐದರಿಂದ ಆರು ನಿಮಿಷ ಬೇಯಿಸಿ.
ಒಂದು ಚೂರು ನೀರಿಲ್ಲದಂತೆ ಹಿಂಡಿ ಮಿಕ್ಸಿಂಗ್ ಬೌಲ್ ಗೆ ಹಾಕಿ.
* ಮಿಕ್ಸಿಂಗ್ ಬೌಲ್ ಗೆ ಬೇಯಿಸಿದ ಸೋಯಾ, ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಸ್ಪೂನ್ ಸೋಯಾ ಸಾಸ್, ಒಂದು ಸ್ಪೂನ್ ಟೊಮೆಟೋ ಸಾಸ್, 2 ಸ್ಪೂನ್ ಮೈದಾ, ಮೂರು ಸ್ಪೂನ್ ಜೋಳದ ಹಿಟ್ಟು ಹಾಕಿ ಚೆನ್ನಾಗಿ ಕಲಸಿ ಐದು ನಿಮಿಷಗಳ ಕಾಲ ತಟ್ಟೆ ಮುಚ್ಚಿಡಿ.

* ಈಗ ಎಣ್ಣೆ ಕಾಯಲು ಇಟ್ಟುಕೊಳ್ಳಿ. ಎಣ್ಣೆ ಬಿಸಿಯಾದ ಮೇಲೆ ಒಂದೊಂದು ಸೋಯಾವನ್ನು ಗೋಲ್ಡನ್ ಬ್ರೌನ್ ಬರೋವರೆಗೂ ಫ್ರೈ ಮಾಡಿ.
* ಈಗ ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡು ಹಸಿ ಮೆಣಸಿನಕಾಯಿ, ದಪ್ಪಗೆ ಹೆಚ್ಚಿದ ಈರುಳ್ಳಿ ಹಾಕಿ ಅರೆಬರೆ ಫ್ರೈ ಮಾಡಿ.
* ಈಗ ಅದಕ್ಕೆ ಕ್ಯಾಪ್ಸಿಕಂ ಹಾಕಿ ಅದಕ್ಕೆ ಒಂದು ಸ್ಪೂನ್ ಸೋಯಾ ಸಾಸ್, ಟೊಮೆಟೋ ಸಾಸ್, ರುಚಿ ಹೆಚ್ಚಿಸಲು ಪೆಪ್ಪರ್ ಪೌಡರ್ ಸ್ವಲ್ಪ ಉಪ್ಪು ಸೇರಿಸಿ ಎರಡು ನಿಮಿಷ ಫ್ರೈ ಮಾಡಿ.
* ಈಗ ಒಂದು ಸಣ್ಣ ಬಟ್ಟಲಿಗೆ ಜೋಳದ ಹಿಟ್ಟು ನೀರು ಹಾಕಿ ಪೇಸ್ಟ್ ಮಾಡಿ ಮಿಕ್ಸ್ ಮಾಡಿ.
* ಅದು ಗಟ್ಟಿಯಾಗುತ್ತಿದ್ದಂತೆ ಕರಿದ ಸೋಯಾವನ್ನು ಮಿಕ್ಸ್ ಮಾಡಿ ಸವಿಯಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸರ್ಕಾರದ ಯೋಜನೆಗಳು

    ರಾಜಕಾರಣಿಗಳ ಮತ್ತು ಸರಕಾರಿ ಅಧಿಕಾರಿಗಳ ಮಕ್ಕಳು ಸರಕಾರಿ ಶಾಲೆಗೆ..! ತಿಳಿಯಲು ಈ ಲೇಖನ ಓದಿ ..

    ಖಾಸಗಿ ಶಾಲೆಗಳು ಇದೀಗ ಎಲ್ಲೆಂದರೆಲ್ಲಿ ತಲೆಯೆತ್ತುತ್ತಿವೆ. ಗಲ್ಲಿಗೊಂದರಂತೆ ಶಾಲೆಗಳು ನಮಗೆ ಕಾಣಸಿಗುತ್ತವೆ. ಶಿಕ್ಷಣವು ಮೂಲಭೂತ ಹಕ್ಕಾಗಿರದೇ, ಇದೀಗ ವ್ಯಾಪಾರದ ಸರಕಾಗಿ ಮಾರ್ಪಟ್ಟಿದೆ.

  • ಸಿನಿಮಾ

    ಆ ಆರೋಪವನ್ನು ಪ್ರೂವ್ ಮಾಡಿದ್ರೆ ಮಂಡ್ಯ ಅಲ್ಲ, ರಾಜ್ಯವನ್ನೇ ಬಿಟ್ಟು ಹೋಗ್ತೀನಿ ಎಂದು ದಳಪತಿಗಳಿಗೆ ಸವಾಲು ಹಾಕಿದ ಯಶ್.!?

    ನಾನು ಜೆಡಿಎಸ್​​ ಕಳ್ಳರ ಪಕ್ಷ ಅಂತಾ ಹೇಳಿದ್ದೇನೆ ಎಂದು ನನ್ನ ಮೇಲೆ ಒಬ್ಬರು ಆರೋಪ ಮಾಡಿದ್ದಾರೆ. ನಾನು ತುಂಬಾ ನಂಬೋದು ಧರ್ಮಸ್ಥಳದ ಮಂಜುನಾಥ ಸ್ವಾಮಿ. ಆ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡುತ್ತೇನೆ. ಒಂದು ವೇಳೆ ನಾನು ಕಳ್ಳರ ಪಕ್ಷ ಅಂತಾ ಹೇಳಿದ್ದರೆ ಅವ್ರು ಹೇಳಿದ್ದನ್ನ ಕೇಳುತ್ತೇನೆ. ಒಂದು ವೇಳೆ ಹಾಗೆ ಹೇಳಿದ್ದು ಸತ್ಯವಾಗಿದ್ದರೆ ನಾನು ಮಂಡ್ಯ ಅಲ್ಲ, ಸಿನಿಮಾ ಇಂಡಸ್ಟ್ರಿ ಅಲ್ಲ, ಕರ್ನಾಟಕವನ್ನೇ ಬಿಟ್ಟು ಹೋಗುತ್ತೇನೆ. ರಾಜ್ಯ ಬಿಡ್ತೀನಿ ಅಂತಾ ಸುಮ್ಮನೇ ಹೇಳುತ್ತಿಲ್ಲ. ಹಾಗೆ ಹೇಳಿ…

  • ಸುದ್ದಿ

    ಚರ್ಚೆಗೆ ರೆಡಿ ಎಂದ ಸುಮಲತಾಗೆ ಟಾಂಗ್ ಕೊಟ್ಟ ಸಿಎಂ!ಕುಮಾರಸ್ವಾಮಿ ಹೇಳಿದ್ದೇನು?

    ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಜಿಲ್ಲೆಯಲ್ಲಿಂದು ಮಗ ನಿಖಿಲ್ ಪರ ಪ್ರಚಾರ ಮಾಡಿದ ಕುಮಾರಸ್ವಾಮಿ, ಯಾವ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಾರೆ. ನನ್ನ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನ ಜೊತೆ ಚರ್ಚೆ ಮಾಡುವುದಕ್ಕೂ ಅವರ ಕೈಯಲ್ಲಿ ಶಕ್ತಿಯಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಮಂಡ್ಯ ಜಿಲ್ಲೆಗೆ ದೇವೇಗೌಡ ಕುಟುಂಬ ಕೊಟ್ಟಿರುವ ಕೊಡುಗೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೋ ಅಥವಾ ಇನ್ನು ಯಾರ…

  • ಸುದ್ದಿ

    ತೃತೀಯ ಲಿಂಗ ವರ್ಗಕ್ಕೆ ಮಾದರಿಯಾದ ರಾಣಿ ಕಿಣ್ಣರ್,.!! ಯಾಕೆ ಗೊತ್ತೇ,.?

    ತೃತೀಯ ಲಿಂಗಿ ರಾಣಿ ಕಿಣ್ಣರ್ ದೇಶದ ಮೊದಲ ಉಬರ್ ಕ್ಯಾಬ್ ಡ್ರೈವರ್ ಆಗಿದ್ದು, ಸದ್ಯ ಉಬರ್ ಕಂಪನಿಯ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಣಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಫುಟ್ ಪಾತ್ ನಲ್ಲಿ ಭಿಕ್ಷೆ ಬೇಡುವುದನ್ನು ನಿರಾಕರಿಸಿದ್ದಾರೆ. ಹೀಗಾಗಿ ಸಮಾಜದಲ್ಲಿ ಧೈರ್ಯವಾಗಿ ಮೆಟ್ಟಿ ನಿಂತು ಇತರರಿಗೆ ಮಾದರಿಯಾಗಿದ್ದಾರೆ. ರಾಣಿ 2016ರಲ್ಲಿ ಆಟೋ ರಿಕ್ಷಾ ತೆಗೆದುಕೊಂಡು ಆ ಮೂಲಕ ತಮ್ಮ ಜೀವನ ನಡೆಸಿಕೊಳ್ಳಲು ಆರಂಭಿಸಿದ್ದರು. ಆದರೆ ರಾಣಿ ತೃತೀಯ ಲಿಂಗಿ ಎಂಬ ಕಾರಣಕ್ಕೆ ಯಾರೂ ಅವರ ಆಟೋವನ್ನು ಬಳಸಿಕೊಂಡಿರಲಿಲ್ಲ….

  • Cinema

    ರೂಮಿಗೆ ಬಾ ಎಂದ ನಿರ್ದೇಶಕ : ನಟಿ ಮಾಡಿದ್ದೇನು ಗೊತ್ತ..?

    ಇತ್ತೀಚೆಗೆ ವಿದ್ಯಾ ಬಾಲನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಕೆರಿಯರ್ ಬಗ್ಗೆ ಹಾಗೂ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. 2005ರಲ್ಲಿ ವಿದ್ಯಾ ಬಾಲಾನ್ ‘ಪರಿಣೀತಾ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ಬಾಲಿವುಡ್‍ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು. ಸಂದರ್ಶನದಲ್ಲಿ ವಿದ್ಯಾ ತಾವು ನಟಿಯಾಗಲು ಎಷ್ಟು ಕಷ್ಟಪಟ್ಟಿದ್ದೇನೆ ಎಂಬ ವಿಷಯವನ್ನು ಈಗ ಹಂಚಿಕೊಂಡಿದ್ದಾರೆ. ಅಲ್ಲದೆ ಒಂದೇ ಸಮಯದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 12 ಚಿತ್ರಗಳನ್ನು ಕಳೆದುಕೊಂಡಿದ್ದರ…

  • ದೇವರು, ದೇವರು-ಧರ್ಮ

    ಹಿಂದೂ ಮಹಾ ಗಣಪತಿ – ಚಿತ್ರದುರ್ಗ ಕರ್ನಾಟಕದ ಅತಿ ಹೆಚ್ಚು ಜನ ಸೇರುವ ಗಣಪತಿ…

    2016 ರಲ್ಲಿ ಚಿತ್ರದುರ್ಗದ ಈ ಗಣಪತಿ ಅತಿ ಹೆಚ್ಚು ಜನ ಸೇರಿದರಿಂದ ಕರ್ನಾಟಕದ ಹೆಚ್ಚು ಜನ ಆಕರ್ಷಿಸಿದ ಗಣಪ ಎಂದು ತಿಳಿದು ಬಂದಿದೆ.