ಸುದ್ದಿ

ಬೆಳ್ಳಂಬೆಳ್ಳಗ್ಗೆ ಮೂರು ಉಗ್ರರನ್ನು ಭಾರತೀಯ ವೀರ ಯೋಧರಿಂದ ಹತ್ಯೆ…!

47

ಜಮ್ಮು-ಕಾಶ್ಮಿರದ ಪುಲ್ವಾಮಾದಲ್ಲಿ ಬೆಳ್ಳಂಬೆಳಗ್ಗೆ ಭಾರತೀಯ ಸೇನೆ ಮೂವರು ಉಗ್ರರನ್ನು ಹತ್ಯೆ ಮಾಡಿದೆ.

ಉಗ್ರರನ್ನು ಹತ್ಯೆ ಮಾಡಿದ ಬಳಿಕ ಯೋಧರು ಅವರ ಬಳಿ ಇದ್ದ ಮೂರು ಎಕೆ ಸರಣಿ ರೈಫಲ್‍ಗಳನ್ನು ವಶಪಡೆಸಿಕೊಂಡಿದ್ದಾರೆ. ಸದ್ಯ ಭದ್ರತಾ ಪಡೆಗಳು ಉಳಿದ ಉಗ್ರರನ್ನು ಹುಡುಕಿ ಎನ್‍ಕೌಂಟರ್ ಮಾಡಲು ಮುಂದಾಗಿದ್ದಾರೆ.

ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು(ಎಸ್‍ಪಿಒ) ಪುಲ್ವಾಮ ಪೊಲೀಸ್ ಲೈನ್‍ಗಳಿಂದ ತಮ್ಮ ಸೇವಾ ರೈಫಲ್‍ಗಳೊಂದಿಗೆ ಕಾಣೆಯಾಗಿದ್ದಾರೆ. ಇಬ್ಬರು ಅಧಿಕಾರಿಗಳ ಹುಡುಕಾಡುವ ಕಾರ್ಯ ನಡೆಯುತ್ತಿದೆ. ಅಧಿಕಾರಿಗಳು ಕಾಣೆಯಾದ ಪ್ರಕರಣ ಪುಲ್ವಾಮದಲ್ಲಿನ ಎನ್‍ಕೌಂಟರ್ ಗೆ ಸಂಬಂಧಿಸಿದ್ದೀಯಾ ಎಂಬುದು ಖಚಿತಪಡಿಸಬೇಕಾಗಿದೆ.

ಮತ್ತೊಂದು ಪ್ರಕರಣದಲ್ಲಿ ಗುರುವಾರ ಸಂಜೆ ಅನಂತ್‍ನಾಗ್ ಜಿಲ್ಲೆಯ ಸಾದೂರ ಗ್ರಾಮದಲ್ಲಿ ಯೋಧರು ಉಗ್ರನನ್ನು ಗುಂಡಿಕ್ಕಿ ಎನ್‍ಕೌಂಟರ್ ಮಾಡಿದ್ದಾರೆ. ಹತ್ಯೆಯಾದ ಉಗ್ರನನ್ನು ಮನ್ಜೂರ್ ಅಹ್ಮದ್ ಬೇಗ್ ಎಂದು ಗುರುತಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ