ಸುದ್ದಿ

ಜಮ್ಮು- ಕಾಶ್ಮೀರದಲ್ಲಿ ನಡೆದ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಆರು ಉಗ್ರರ ಹತ್ಯೆ, ಯೋಧ ಹುತಾತ್ಮ

24

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಪುಲ್ವಾಮ ಹಾಗೂ ಶೂಪಿಯಾನ್ ಬಳಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಆರು ಮಂದಿ ಉಗ್ರರು ಹತ್ಯೆಯಾಗಿದ್ದಾರೆ. ಈ ಮಧ್ಯೆ ಯೋಧರು ಹುತಾತ್ಮರಾಗಿದ್ದು, ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


ಪುಲ್ವಾಮಾದಲ್ಲಿ ಮೂವರು ಜೈಷ್ -ಇ- ಮೊಹಮ್ಮದ್ ಸಂಘಟನೆ ಉಗ್ರರು ಹತ್ಯೆಯಾಗಿದ್ದರೆ, ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಮಧ್ಯೆ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಶೂಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಕಾಳಗದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.


ಪುಲ್ವಾಮಾ ಜಿಲ್ಲೆಯ ಡೆಲಿಪೊರಾ ಪ್ರದೇಶದಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಬೆಳಗ್ಗೆಯಿಂದಲೂ ಶೋಧ ಕಾರ್ಯಾಚರಣೆ ನಡೆಸಿದ್ದು, ಉಗ್ರರ ಅಡಗುತಾಣಗಳನ್ನು ಪತ್ತೆ ಹಚ್ಚಿ ಗುಂಡಿನ ದಾಳಿ ನಡೆಸಿದ್ದಾರೆ.ಕಾರ್ಯಾಚರಣೆ ವೇಳೆ ಸೆಪೊಯ್ ಸಂದೀಪ್ ಎಂಬ ಯೋಧ ಹುತಾತ್ಮನಾಗಿದ್ದು, ರಾಯೇಸ್ ಡಾರ್ ಎಂಬ ಸ್ಥಳೀಯ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.


ಶೂಪಿಯಾನ್ ನಲ್ಲಿ ಶೋಧ ಕಾರ್ಯಾಚರವಣೆ ವೇಳೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆಯಲ್ಲಿ ಸೆಪೊಯ್ ರೊಹಿತ್ ಎಂಬ ಯೋಧರೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೋದಿ ಹೆಲಿಕಾಪ್ಟರ್ ಚೆಕ್ ಮಾಡಿ ಅಮಾನತು ಆಗಿದ್ದ ಚುನಾವಣಾ ಅಧಿಕಾರಿ..!ಅಮಾನತು ಆದೇಶ ಏನಾಯ್ತು..?

    ಒರಿಸ್ಸಾದ ಸಂಬಲ್ ಪುರದಲ್ಲಿ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದ ಕರ್ನಾಟಕದ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅಮಾನತು ಆದೇಶವನ್ನು ತಡೆ ಹಿಡಿಯಲಾಗಿದೆ.ಏಪ್ರಿಲ್ 18ರಂದು ಮೊಹಮ್ಮದ್ ಮೊಹ್ಸಿನ್ ಒರಿಸ್ಸಾದಲ್ಲಿ ಚುನಾವಣಾ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ್ದ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದರು. ಎಸ್ಪಿಜಿಯಿಂದ ವಿಶೇಷ ರಕ್ಷಣೆ ಪಡೆದಿರುವವರ ವಾಹನಗಳನ್ನು ತಪಾಸಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಆರೋಪದ ಮೇಲೆ ಚುನಾವಣಾ ಆಯೋಗ ಮೊಹ್ಸಿನ್ ಅವರನ್ನು ಅಮಾನತು ಮಾಡಿತ್ತು.  ಅಮಾನತಿನ…

  • ಮನರಂಜನೆ

    ಒಂದು ಕಾಲದಲ್ಲಿ 100ರೂ. ಸಿಕ್ಕರೆ ಸಾಕು ಎಂದುಕೊಳ್ಳುತ್ತಿದ್ದ ಹುಡುಗ ಇಂದು ಹಾಡಿಗೆ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ…

    ಕಠಿಣ ಪರಿಶ್ರಮ ಹಾಗೂ ಪ್ರಯತ್ನದ ಫಲವಾಗಿ  ರ್ಯಾಪರ್  ಚಂದನ್ ಶೆಟ್ಟಿ ಸ್ಯಾಂಡಲ್ವುಡ್ ನಲ್ಲಿ ಒಂದು ಹೆಸರು ಪಡೆದು ಇದೀಗ ದೊಡ್ಡ ಮಟ್ಟದ ಸಂಭಾವನೆ ಪಡೆಯುವ ಮೂಲಕ ಸಾಧನೆಯ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.. ಹೌದು, ದಂಗಾಗುವಂತಿದೆ ಚಂದನ್ ಶೆಟ್ಟಿ ಸಂಭಾವನೆ. ಹೌದು, ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ‘ಬಿಗ್ ಬಾಸ್’ನಿಂದ ಬಂದ ಬಳಿಕ ಫುಲ್ ಬ್ಯುಸಿಯಾಗಿದ್ದಾರೆ. ವಿವಿಧೆಡೆ ಕಾರ್ಯಕ್ರಮ ನೀಡುವ ಚಂದನ್ ಶೆಟ್ಟಿ ಅವರ ಅಭಿಮಾನಿಗಳ ಸಂಖ್ಯೆ ಭಾರೀ ಜಾಸ್ತಿಯಾಗಿದೆ. ರಿಯಾಲಿಟಿ ಶೋ, ಸಿನಿಮಾಗಳಲ್ಲಿಯೂ ಅವರು ಬ್ಯುಸಿಯಾಗಿದ್ದಾರೆ….

  • ಸುದ್ದಿ

    ಭಾರತದೊಂದಿಗೆ ಪಾಕ್ ವ್ಯಾಪಾರ ಬಂದ್…..!

    ಆರ್ಟಿಕಲ್ 370 ರದ್ದು ಪರಿಣಾಮ ಎಂಬಂತೆ ಪಾಕಿಸ್ತಾನ ವರ್ತಿಸತೊಡಗಿದೆ. ಪಾಕಿಸ್ತಾನವು ಬುಧವಾರ ಇಸ್ಲಾಮಾಬಾದ್ ನಲ್ಲಿ ಇರುವ ಭಾರತದ ರಾಯಭಾರಿಯನ್ನು ವಾಪಸ್ ಕಳುಹಿಸಿದೆ. ಇದರ ಜತೆಗೆ ಐದು ಅಂಶಗಳ ಯೋಜನೆಯನ್ನು ಸಹ ಘೋಷಿಸಿದೆ. ಭಾರತದ ಜತೆಗೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದ್ದು ದ್ವಿಪಕ್ಷೀಯವ್ಯಾಪಾರ- ವ್ಯವಹಾರಗಳನ್ನು ಬಂದ್ ಮಾಡುತ್ತೇನೆ ಎಂದಿದೆ.ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಕ್ಕೆ ಪಾಕಿಸ್ತಾನ ಮೊದಲು ಕ್ಯಾತೆ ತೆಗೆದಿತ್ತು. ಭಾರತದ ಹೈಕಮಿಷನರ್ ಆಗಿ ಅಜಯ್ ಬಿಸಾರಿಯಾ ಪಾಕಿಸ್ತಾನದಲ್ಲಿ ಇದ್ದರೆ, ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ನೇಮಕ…

  • ಸುದ್ದಿ

    ಟೀ ಪ್ರಿಯರಿಗೋಂದು ಸಿಹಿ ಸುದ್ದಿ, ಬೆಂಗಳೂರಿಗೆ ಬಂತು ಬಬಲ್ ಟೀ..!

    ಟೀ ಪ್ರಿಯರಿಗೆ ಹೊಸ ಸಿಹಿ ಸುದ್ದಿ . ಇದುವರೆಗೂ ಟೀ ಪ್ರಿಯರು ಮಸಾಲಾ ಟೀ, ಲೈಮ್ ಟೀ, ಹರ್ಬಲ್ ಟೀ, ಗ್ರೀನ್ ಟೀ, ಮಶ್ರೂಮ್ ಟೀ ಎಂದೆಲ್ಲ ಹೊಸ ಹೊಸ ಟೀಗಳನ್ನು ಜನರು ಟೆಸ್ಟ್ ಮಾಡಿರಬಹುದು ಇದೀಗಾ ಈ ಟೀಗಳ ಸಾಲಿಗೆ ಹೊಸ ಟೀಂ ಒಂದು ಸೇರ್ಪಡೆಯಾಗುತ್ತಿದೆ. ಯಾವುದಪ್ಪಾ ಅದು ಅಂತೀರಾ? ಹೌದು ಭಾರತಕ್ಕೆ ಬಬಲ್‌ ಟೀ ಎಂಬ ಹೊಸ ಟೀ ಬಂದಿದೆ. ಬಬಲ್ ಟೀ ಎಂದೊಡನೆ ಟೀ ನಲ್ಲಿ ಬಬಲ್ ಇರಬಹುದು ಎಂದು ಊಹಿಸಬೇಡಿ ….

  • ಉಪಯುಕ್ತ ಮಾಹಿತಿ

    ಕೇಂದ್ರ ಸರ್ಕಾರದಿಂದ ದಿಟ್ಟ ನಿರ್ಧಾರ, ವೋಟರ್ ಕಾರ್ಡ್ ಇದ್ದವರಿಗೂ ಇಲ್ಲದವರಿಗೂ ಸಿಹಿಸುದ್ದಿ.

    ಸ್ನೇಹಿತರೆ ನಿಮಗೆಲ್ಲ ತಿಳಿರುವ ಹಾಗೆ ಪ್ರಸ್ತುತ ದಿನಗಳಲ್ಲಿ ನಮ್ಮ ಪ್ರಪಂಚ ತಂತ್ರಜ್ಞಾನದಿಂದ ಎಷ್ಟೋ ಮುಂದಕ್ಕೆ ಸಾಗುತ್ತಿದೆ. ಇನ್ನು ಇದಕ್ಕೆ ತಂಜ್ರಜ್ಞಾನಕ್ಕೆ ಅನುಗುಣವಾಗಿ ನಮ್ಮ ಕೇಂದ್ರ ಸರ್ಕಾರ ಅದೆಷ್ಟೋ ಬದಲಾವಣೆಗಳನ್ನ ಜಾರಿಗೆ ತರುತ್ತಲೇ ಇದೆ, ಇನ್ನು ಈಗ ವೋಟರ್ ಕಾರ್ಡ್ ಗಳಲ್ಲಿ ಭಾರಿ ಪ್ರಮಾಣದ ಬದಲಾವಣೆಯನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು ಇದರಿಂದ ಜನರಿಗೆ ತುಂಬಾ ಸಂತಸವಾಗಿದೆ, ಹಾಗಾದರೆ ವೋಟರ್ ಕಾರ್ಡ್ ನಲ್ಲಿ ಆಗುತ್ತಿರುವ ಬದಲಾವಣೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ…