ಉಪಯುಕ್ತ ಮಾಹಿತಿ

ಯಾವ ದಿಕ್ಕಿಗೆ ಮಲಗಿದ್ರೆ ಒಳ್ಳೆಯದು ಗೊತ್ತಾ?ಇದು ಮೂಡ ನಂಬಿಕೆಯಲ್ಲ.. ಇದರ ಹಿಂದಿದೆ ನೋಡಿ ಅಧ್ಬುತ ಮಹತ್ವ..!

3119

ನಮ್ಮ ಹಿರಿಯರು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ನಮಗೆ ತಿಳಿಸುತ್ತಾರೆ. ಸಾಮಾನ್ಯವಾಗಿ ಪೂರ್ವ ದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿಕೊಳ್ಳುವುದು ನಮ್ಮ ಹಿಂದೂ ಧರ್ಮದಲ್ಲಿ ವಾಡಿಕೆಯಾಗಿದೆ.

ನಾವು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಭೂತ ಪ್ರೇತಗಳು ನಮ್ಮನ್ನು ಆವರಿಸುತ್ತವೆ ಎಂಬ ಮೂಢನಂಬಿಕೆಗಳಿವೆ. ಅಲ್ಲದೆ  ಪುರಾಣದಲ್ಲಿ ಗಣೇಶನಿಗೆ ತೊಡಿಸಿದ ಆನೆಯ ತಲೆಯನ್ನು ಕಡಿದಿದ್ದು ಸಹ ಅದು ಉತ್ತರಕ್ಕೆ ತಲೆ ಹಾಕಿ ಮಲಗಿದ್ದರಿಂದ.

ಈ ಕಾರಣಕ್ಕೆ ನಾವು ಉತ್ತರಕ್ಕೆ ತಲೆ ಹಾಕಿ ಮಲಗಿದರೆ ನಮ್ಮ ಪ್ರಾಣಕ್ಕೂ ಸಂಚಕಾರ ಬರುತ್ತದೆ ಎಂಬ ಕಲ್ಪನೆಗಳು ಮೂಢನಂಬಿಕೆಗಳು ಇವೆ. ಆದರೆ ಇದರ ಹಿಂದಿನ ನಿಜವಾದ ವೈಜ್ಞಾನಿಕ ಕಾರಣ ಇಲ್ಲಿದೆ ನೋಡಿ.

ನಿಜ, ನಾವು ಉತ್ತರಕ್ಕೆ ಅಥವಾ ಪಶ್ಚಿಮಕ್ಕೆ ತಲೆಹಾಕಿ ಮಲಗುವುದು ಒಳ್ಳೆಯದಲ್ಲ. ನೀವು ಗಮನಿಸಬಹುದು  ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳು ದಕ್ಷಿಣಕ್ಕೆ ಅಥವಾ ಪೂರ್ವಕ್ಕೆ ತಲೆ ಹಾಕಿ ಮಲಗುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ನಾವು ಸಹ ನಮ್ಮ ಹಿರಿಯರ ನಂಬಿಕೆಯಂತೆ ಅದನ್ನೇ ಪಾಲಿಸುತ್ತೇವೆ.

ಈ ನಂಬಿಕೆ ಹಿಂದೆ ಇದೆ ನೋಡಿ ಅದ್ಭುತವಾದ ಮಹತ್ವ.

ಭೂಮಿಗೆ ಶಕ್ತಿಶಾಲಿಯಾದ ಕಾಂತಿಯ ಕ್ಷೇತ್ರ (ಮ್ಯಾಗ್ನೆಟಿಕ್ ಫೀಲ್ಡ್ )ಇರುತ್ತದೆ. ನಮ್ಮ ದೇಹಕ್ಕೂ ಸಹ ತನ್ನದೇ ಆದ ಒಂದು ಮ್ಯಾಗ್ನೆಟಿಕ್ ಫೀಲ್ಡ್ ಇರುತ್ತದೆ. ನಾವು ದಕ್ಷಿಣಕ್ಕೆ ತಲೆಹಾಕಿ ಮಲಗಿದಾಗ ಭೂಮಿಯ ಹಾಗೂ ನಮ್ಮ ದೇಹದ ವಿರುದ್ಧ ಧ್ರುವಗಳು ಆಕರ್ಷಣೆಗೆ ಒಳಪಡುತ್ತವೆ. ಮತ್ತು ನಾವು ಬೆಳಗ್ಗೆ ಎದ್ದಾಗ ನಮಗೆ ಹಿತಕರವಾದ ಸಂವೇದನೆ ಯಾಗುತ್ತದೆ ಮತ್ತು ನಾವು ತುಂಬಾ ಆರೋಗ್ಯವಾಗಿ ಇದ್ದಂತೆ ನಿರಾಳವಾಗಿ ಇದ್ದಂತೆ ಭಾಸವಾಗುತ್ತದೆ. ಮನಸ್ಸು  ದೇಹವು ಹಗುರಾಗುತ್ತದೆ.

ಹಾಗೆ ನಾವು ಪೂರ್ವಕ್ಕೆ ತಲೆಹಾಕಿ ಮಲಗಿದಾಗ ಸೂರ್ಯೋದಯದ ಸಮಯದಲ್ಲಿ ಸೂರ್ಯನ ಬೆಳಕು ನಮ್ಮ ತಲೆಯ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿ ನಮ್ಮ ಪಾದಗಳ ಮೂಲಕ ಹೊರಗಡೆ ಹೋಗುತ್ತದೆ. ಹೀಗಾಗಿ ನಾವು ಏಳುವಾಗ ತಲೆಯ ಭಾಗವು ತಣ್ಣಗೆ ಹಾಗೂ ಕಾಲಿನ ಭಾಗವು ಬೆಚ್ಚಗೆ ಇದ್ದಂತೆ ಆಗುತ್ತದೆ.

ಅದೇ ನಾವು ಪಶ್ಚಿಮಕ್ಕೆ ತಲೆಹಾಕಿ ಮಲಗಿದಾಗ ಸೂರ್ಯನ ಕಿರಣಗಳು ನಮ್ಮ ಪಾದದ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿ ತಲೆಯ ಮೂಲಕ ಹೊರಗಡೆ ಹೋಗುತ್ತದೆ ಇದರಿಂದ ತಲೆಯ ಭಾಗವು ಬಿಸಿಯಾಗಿ ಪಾದಗಳು ತಣ್ಣಗಿರುತ್ತವೆ.

ಇದರಿಂದ ದುಷ್ಪರಿಣಾಮಗಳು ಬೀರುತ್ತವೆ. ಇದರಿಂದ ತಲೆನೋವಿನಂತಹ ಕಾಯಿಲೆಗಳು  ಉಲ್ಬಣಗೊಳ್ಳುತ್ತವೆ.ಮತ್ತು ನಾವು ಉತ್ತರಕ್ಕೆ ತಲೆ ಹಾಕಿ ಮಲಗುವುದರಿಂದ ಭೂಮಿಯ ಹಾಗೂ ನಮ್ಮ ದೇಹದ ಕಾಂತಿಯ ಧ್ರುವಗಳು ಘರ್ಷಣೆಗೆ ಒಳಗಾಗಿ  ನಮ್ಮ ದೇಹದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಇದರಿಂದ ನಮಗೆ ಹಿತಕರವಾದ ಸಂವೇದನೆ ಉಂಟಾಗುತ್ತದೆ.

ಇದು ನಮ್ಮ ದೇಹದಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ತಲೆನೋವು, ಪಾರ್ಕಿಂಗ್ ಸನ್ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆಗಳು ಇರುತ್ತವೆ.
ಆದ್ದರಿಂದ ನಮ್ಮ ಹಿರಿಯರ ಮಾತಿನಂತೆ ಪೂರ್ವಕ್ಕೆ ಇಲ್ಲವೇ ದಕ್ಷಿಣಕ್ಕೆ ತಲೆಹಾಕಿ ಮಲಗುವುದು ಅತ್ಯುತ್ತಮ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ಈ ದಿನದಂದು ತುಳಸಿ ಎಲೆ ಕಿತ್ತರೆ ಕಷ್ಟ ಬರುವುದು ಪಕ್ಕ…! ಯಾಕೆ ಹಾಗು ಯಾವ ದಿನ ಗೊತ್ತಾ?

    ಹಿಂದೂ ದೇವಾಲಯಗಳ ಸುತ್ತ, ಮನೆಯ ಮುಂಭಾಗದಲ್ಲಿ ತುಳಸಿ ಗಿಡಗಳು ಇರುವುದನ್ನು ಕಾಣಬಹುದು. ಇದು ಪುಟ್ಟ ಸಸ್ಯವಾದರೂ ಇದರ ಎಲೆಗಳು ಅಥವಾ ದಳಗಳು ಭಗವಾನ್ ವಿಷ್ಣುವಿಗೆ ಅತ್ಯಂತ ಶ್ರೇಷ್ಠವಾದದ್ದು. ಹಾಗಾಗಿ ದೇವತೆಗಳ ಆರಾಧನೆಯ ಸಂದರ್ಭದಲ್ಲಿ ತುಳಸಿ ಎಲೆಯನ್ನು ಕಡ್ಡಾಯವಾಗಿ ಬಳಸುತ್ತಾರೆ. ಇದು ಧಾರ್ಮಿಕವಾಗಿ ಪವಿತ್ರ ಸ್ಥಾನವನ್ನು ಪಡೆದುಕೊಂಡಂತೆಯೇ ವೈಜ್ಞಾನಿಕ ವಾಗಿಯು ಅತ್ಯುತ್ತಮ ಗಿಡ ಮೂಲಿಕೆಯ ಸಸ್ಯ. ತುಳಸಿ ಗಿಡವನ್ನು ಸೂಕ್ತ ಸ್ಥಳದಲ್ಲಿ ಇಟ್ಟು ಆರಾಧನೆ ಮಾಡಿದಾಗ ಮಾತ್ರ ಮನೆಯಲ್ಲಿ ಸಕಲ ದೇವತೆಗಳು ಆಗಮಿಸುತ್ತಾರೆ. ದುಷ್ಟ ಶಕ್ತಿಗಳು ಮನೆಯಿಂದ ದೂರ…

  • inspirational

    ಕಾಫಿ ಸೇವನೆಯ ಆರೋಗ್ಯಕರ ಪ್ರಯೋಜನಗಳು

    ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಕೆಫೀನ್‌ನ ಇನ್ನೊಂದು ಉತ್ತಮ ಗುಣವೆಂದರೆ ಇದರ ಸೇವನೆಯಿಂದ ರಕ್ತದಲ್ಲಿ ಅಡ್ರಿನಲಿನ್ ಎಂಬ ಹಾರ್ಮೋನು ಬಿಡುಗಡೆಯಾಗುವುದು. ನಮ್ಮ ದೈಹಿಕ ಚಟುವಟಿಕೆಗಳಿಗೆ ಈ ಹಾರ್ಮೋನು ಅಗತ್ಯವಾಗಿದೆ. ಕಾಫಿ ಸೇವನೆಯ ಮೂಲಕ ಹೆಚ್ಚಿನ ಅಡ್ರಿನಲಿನ್ ಲಭ್ಯವಾಗುವುದರಿಂದ ನಿಮ್ಮ ಹಲವು ದೈಹಿಕ ಚಟುವಟಿಕೆಗಳು ಚುರುಕಾಗುತ್ತವೆ. ಕೆಫಿನ್ ಅಧಿಕವಾಗಿ ಇರುವಂತಹ ಕಾಫಿ ಸೇವನೆ ಮಾಡಬಾರದು ಎನ್ನುವಂತಹ ಮಾತನ್ನು ನಾವು ಹೆಚ್ಚಿನವರ ಬಾಯಿಯಿಂದ ಕೇಳುತ್ತಲಿರುತ್ತೇವೆ. ಕಾಫಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಾದಿಸುವವರು ಹಲವಾರು ಮಂದಿ. ಆದರೆ ಕೆಲವು ಜನರು ಕಾಫಿ ಆರೋಗ್ಯಕ್ಕೆ ಒಳ್ಳೆಯದು…

  • ಸುದ್ದಿ

    ಕೇವಲ 12 ವರ್ಷಗಳಲ್ಲಿ 9 ಸಿನಿಮಾ ; ಶಂಕ್ರಣ್ಣ ನಿರ್ದೇಶಿಸಿದ ಸಿನಿಮಾಗಳಿಗೆ ಸಿಕ್ಕಿದ ಬಿರುದುಗಳೆಷ್ಟು ಗೊತ್ತಾ?

    ಶಂಕರ್ ನಾಗ್ ನಟಿಸಿದ್ದ ಬಹುತೇಕ ಸಿನಿಮಾಗಳು ಕಮರ್ಷಿಯಲ್‌ ಮಾದರಿಯಲ್ಲೇ ಇದ್ದವು. ಆದರೆ, ಅವರು ನಿರ್ದೇಶನಕ್ಕೆ ಆಯ್ದುಕೊಳ್ಳುತ್ತಿದ್ದ ಕಥಾ ವಸ್ತುಗಳು ಮಾತ್ರ ಭಿನ್ನವಾಗಿರುತ್ತಿದ್ದವು. ಜತೆಗೆ ಆ ಸಿನಿಮಾಗಳಿಗೆ ಅನೇಕ ಪ್ರಶಸ್ತಿಗಳು ಸಿಕ್ಕಿದ್ದವು. ಶಂಕರ್ ನಾಗ್  ಬದುಕಿದ್ದರೆ, ಇಂದು ಅವರಿಗೆ 65 ವರ್ಷ ತುಂಬುತ್ತಿತ್ತು. 1954ರ ನವೆಂಬರ್ 9 ರಂದು ಹೊನ್ನಾವರದಲ್ಲಿ ಜನಿಸಿದ ಶಂಕರ್‌, ತಮ್ಮ 36ನೇ ವಯಸ್ಸಿನಲ್ಲೇ ಅಪಘಾತದಲ್ಲಿ ಮರಣ ಹೊಂದಿದರು. ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಎರಡೇ ವರ್ಷಗಳಲ್ಲಿ ‘ಮಿಂಚಿನ ಓಟ’ ಸಿನಿಮಾ ಮೂಲಕ ನಿರ್ದೇಶಕರಾದರು. ಮೊದಲ…

  • ಜೀವನಶೈಲಿ

    ಖಾಲಿ ಹೊಟ್ಟೆಯಲ್ಲಿ ಚಹಾ(ಟೀ) ಕುಡಿದರೆ ಏನಾಗುತ್ತೆ ಗೊತ್ತಾ?

    ನಾವು ದಿನಾಲು ಬೆಳಿಗ್ಗೆ ಎದ್ದ ತಕ್ಷಣ ನಮಗೆ ಏನಿಲ್ಲಾ ಅಂದ್ರು ಬಿಸಿ ಬಿಸಿ ಚಹಾ(ಟೀ) ಬೇಕೇ ಬೇಕು. ಒಂದು ಸಮೀಕ್ಷೆಯ ಪ್ರಕಾರ ಶೇ. ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ. ಆದರೆ ಚಹಾ ಕುಡಿಯುವವರಲ್ಲಿ ಹೆಚ್ಚಿನವರು ದಿನದ ಪ್ರಥಮ ಆಹಾರವಾಗಿ ಒಂದು ಟೀ ಸೇವಿಸುತ್ತಾರೆ. ಕೆಲವರಂತೂ ಹಾಸಿಗೆಯಿಂದ ಏಳುವ ಮುನ್ನವೇ ಬೆಡ್ ಟೀ ಎಂದು ಕುಡಿಯುತ್ತಾರೆ.

  • ಆರೋಗ್ಯ

    ಬಾಳೆಲೆ ಊಟ ಮಾಡುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ! ಹಲವು ಜನರಿಗೆ ತಿಳಿದಿಲ್ಲ.

    ಸಾಮಾನ್ಯವಾಗಿ ಬಾಳೆಲೆ ಊಟ ಹಿಂದಿನ ಕಾಲದಿಂದಲೂ ಬಳಕೆಯಲ್ಲಿದೆ ಹಾಗೂ ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ದೊರೆಯುವ ಬಾಳೆಲೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ. ಮಾಡುವೆ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಹಾಗೂ ಇತ್ತೀಚಿನ ದಿನಗಳಲ್ಲಿ ಹೋಟಲ್ ರೆಸ್ಟೋರೆಂಟ್ಗಳಲ್ಲಿ ಸಹ ಬಾಳೆಲೆ ಉಪಯೋಗಕಾರಿಯಾಗಿದೆ. ಚಿನ್ನದ ತಟ್ಟೆಗಿಂತ ಬೆಲ್ಲೆಲಿ ಊಟ ಮಾಡೋದು ಬೆಸ್ಟ್ ಅನ್ನೋದು ಯಾಕೆ ಅನ್ನೋದನ್ನ ತಿಳಿಸುತ್ತೇವೆ ಮುಂದೆ ನೋಡಿ. ಮನುಷ್ಯನಿಗೆ ಅರೋಗ್ಯ ಅತಿ ಹೆಚ್ಚು ಅವಶ್ಯಕ ಹಾಗಾಗಿ ಬೇಲಿ ಊಟ ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಅರೋಗ್ಯ ದೊರೆಯುತ್ತದೆ ಹಾಗೂ ನಾನಾ ತರಹದ ರೋಗಗಳನ್ನು…