ಸುದ್ದಿ

5 ಲಕ್ಷ ರೂ ಬಂಡವಾಳದಿಂದ ಮುಂಬೈ ಗೆ ತೆರೆಳಿದ ಸಿದ್ದಾರ್ಥ್ ಈಗ ದೇಶವೇ ತಲೆ ಎತ್ತಿ ನೋಡುವಂತೆ ಬೆಳೆದಿದ್ದಾರೆ …..!

93

ಚಿಕ್ಕಮಗಳೂರಿನ ಖ್ಯಾತ ಉದ್ಯಮಿಯಾದ  ಸಿದ್ದಾರ್ಥ್ ರವರು  ನಿಗೂಢವಾಗಿ ಕಣ್ಮರೆಯಾಗಿರುವುದು ಅವರ ಹುಟ್ಟೂರು ಚಿಕ್ಕಮಗಳೂರಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಿದ್ಧಾರ್ಥ್ ಅವರ ಸಂಸ್ಥೆಯಲ್ಲಿ ಮೊದಲಿನಿಂದಲೂ ವಿದ್ಯುತ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿರುವ ರುದ್ರೇಶ್ ಕಡೂರು ಕೆಲವೊಂದು ವಿಚಾರಗಳನ್ನು ನಮ್ಮ ಜೊತೆಗೆ ಹಂಚಿಕೊಂಡು ಕಣ್ಣೀರನ್ನು  ಹಾಕಿದ್ದಾರೆ.

ಸಿದ್ಧಾರ್ಥ್ ಅವರ ತಂದೆ ನೀಡಿದ ಮಾಹಿತಿ ಪ್ರಕಾರ, 1983ರಲ್ಲಿ ಸಿದ್ಧಾರ್ಥ್ 2 ಲಕ್ಷ ರೂ. ಪಡೆದು ಮುಂಬೈಗೆ ಹೋಗಿದ್ದರು. ಅಲ್ಲಿ ಉದ್ಯಮ ಆರಂಭಿಸಿ ನಷ್ಟ ಅನುಭವಿಸಿ ಮನೆಗೆ ವಾಪಸ್ ಬಂದಿದ್ದರು. ಕೆಲ ದಿನಗಳ ಬಳಿಕ ನಾನು ಮುಂಬೈಗೆ ಹೋಗಬೇಕು, 5 ಲಕ್ಷ ರೂ. ಕೊಡಿ ಎಂದು ಪಟ್ಟು ಹಿಡಿದಿದ್ದರು. ಮಗನಿಗೆ ಹಣ ನೀಡಲು ಸಿದ್ಧಾರ್ಥ್ ಅವರ ತಂದೆ ಸ್ವಲ್ಪ ಜಮೀನು, ಜಾಗ ಮಾರಾಟ ಮಾಡಿದ್ದರು ಎಂದು ರುದ್ರೇಶ್ ಕಡೂರು ತಿಳಿಸಿದ್ದಾರೆ.

ಅಂದು 5 ಲಕ್ಷ ರೂ. ಪಡೆದು ಮುಂಬೈಗೆ ಹೋಗಿದ್ದ ಸಿದ್ಧಾರ್ಥ್ ಅವರು ಕೆಲವೇ ವರ್ಷಗಳಲ್ಲಿ ಪ್ರಪಂಚವೇ ಅವರತ್ತ ನೋಡುವಂತೆ ಬೆಳೆದರು. ಅವರನ್ನು ನಂಬಿ ಇಂದು ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಸಿದ್ಧಾರ್ಥ್ ಅವರು ನಾಪತ್ತೆಯಾದ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದೇವೆ. ನಮ್ಮ ದನಿ ನಮ್ಮನ್ನ ಬಿಟ್ಟು ಎಲ್ಲಿಗೆ ಹೋದರು ಎನ್ನುವಷ್ಟು ಕಂಗಾಲಾಗಿದ್ದೇವೆ ಎಂದು ಅಳಲು ತೋಡಿಕೊಂಡರು.

ಸಿದ್ಧಾರ್ಥ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂದಾಜು 13 ಸಾವಿರ ಎಕರೆ ಕಾಫಿ ತೋಟ ಹೊಂದಿದ್ದಾರೆ. ಅವರ ವಿವಿಧ ಕಂಪನಿಗಳಲ್ಲಿ ಸುಮಾರು ಒಂದು ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಟಿವಿ ಆನ್ ಮಾಡುತ್ತಿದ್ದಂತೆ ಸಿದ್ಧಾರ್ಥ್ ಅವರು ನಾಪತ್ತೆ ಸುದ್ದಿ ಕೇಳಿ ದುಃಖವಾಯಿತು ಎಂದು ಭಾರವಾದ ಮನಸ್ಸಿನಿಂದ ಹೇಳಿದರು.ಸಿದ್ಧಾರ್ಥ್ ಅವರು ಚಿಕ್ಕಮಗಳೂರು, ಕರ್ನಾಟಕದ ಆಸ್ತಿ. ಅನೇಕರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಅವರು ವಾಪಸ್ ಬರಲಿ ಎಂದು ದೇವರಲ್ಲಿ ಪಾರ್ಥಿಸುತ್ತಿದ್ದೇವೆ ಎಂದು ತಿಳಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಕನ್ನಡಕ್ಕೆ ಬಾಹುಬಲಿಯ “ಬಲ್ಲಾಳದೇವ”

    ಜಗತ್ತಿನಾದ್ಯಂತ ದಾಖಲೆ ಕಲೆಕ್ಷನ್ ಮಾಡುತ್ತಿರುವ ಬಾಹುಬಲಿ ಚಿತ್ರದ ಖಳನಟ ಬಲ್ಲಾಳದೇವ ಪಾತ್ರದಲ್ಲಿ ಮಿಂಚಿದ ರಾಣಾ ದಗ್ಗುಬಾಟಿ ಕನ್ನಡ ಚಿತ್ರದಲ್ಲಿ ಅಭಿನಯಿಸಲಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

  • ಸಾಧನೆ, ಸುದ್ದಿ

    ಸೆಮಿಫೈನಲ್‍ನಲ್ಲಿ ಪಾಕ್ ವಿರುದ್ಧ ಶತಕ ಸಿಡಿಸಿದ ಪಾನಿಪುರಿ ಮಾರುತ್ತಿದ್ದ 18ರ ಪೋರ ಜೈಸ್ವಾಲ್

    ಅಂಟರ್ 19 ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಭಾರತದ ಯುವ ಪಡೆ ಪಾಕಿಸ್ತಾನದ ವಿರುದ್ಧ 88 ಎಸೆತಗಳು ಬಾಕಿ ಇರುವಂತೆ 10 ವಿಕೆಟ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಮಿಂಚಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ 18 ವರ್ಷದ ಯಶಸ್ವಿ ಜೈಸ್ವಾಲ್ 105 ರನ್ (113 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ (99 ಎಸೆತ, 6 ಬೌಂಡರಿ) ಗಳಿಸಿ ತಂಡಕ್ಕೆ ಗೆಲುವು…

  • ಆರೋಗ್ಯ

    ಅಳುವುದರಿಂದ ದೇಹಕ್ಕೆ ಆಗುವ ಲಾಭ ಕೇಳಿದರೆ ಶಾಕ್, ಎಷ್ಟೋ ಮಂದಿಗೆ ಅಳುವಿನ ರಹಸ್ಯ ತಿಳಿದಿಲ್ಲ.

    ಅಳು ಹುಟ್ಟಿನಿಂದಲೇ ನಮ್ಮ ಸಂಗಾತಿ, ನಾವು ಮಕ್ಕಳಾಗಿದ್ದಾಗ ನಮ್ಮ ಭಾವನಾತ್ಮಕ, ಶಾರೀರಿಕ ಅವಶ್ಯಕತೆಗಳಿಗಾಗಿ ಅಳುತ್ತಿದ್ದೆವು, ಇನ್ನು ಭಾವನಾತ್ಮಕ ಕಣ್ಣೀರು ಉಕ್ಕಿ ಬರಲು ಅನೇಕ ಕಾರಣಗಳಿವೆ. ದುಃಖ, ನಿರಾಶೆ, ದೈಹಿಕ ಅಥವಾ ಮಾನಸಿಕ ವೇದನೆ ಇವೆಲ್ಲಾ ನಾವು ಕಣ್ಣೀರಿಡುವಂತೆ ಮಾಡುತ್ತವೆ, ಸಂತೋಷ, ಸಮಾಧಾನ, ಸಾಧನೆಯಂಥ ಸನ್ನಿವೇಶಗಳು ಕೂಡ ಭಾವನಾತ್ಮಕ ಕಣ್ಣೀರು ಬರಿಸುತ್ತವೆ, ಆದರೆ ಇವು ಆನಂದಬಾಷ್ಪಗಳು. ಕೆಲವೊಮ್ಮೆ ಒಬ್ಬರು ಅಳುವುದನ್ನು ನೋಡಿ ಇನ್ನೊಬ್ಬರಿಗೆ ಕಣ್ಣೀರು ಬರುತ್ತದೆ, ನಿಮಗೆ ಗೊತ್ತಿರಲು ಸಾಧ್ಯವಿಲ್ಲ ಅಳುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ, ಅಮೆಕದ ವಿಜ್ಞಾನಿಗಳು…

  • ಸಿನಿಮಾ

    ಸೆಂಚುರಿ ಸ್ಟಾರ್ ಶಿವಣ್ಣನ ವಿರುದ್ದ, ಹುಚ್ಚ ವೆಂಕಟ್ ತಿರುಗಿ ಬಿದ್ದಿದೇಕೆ.!

    ‘ನನ್ ಎಕ್ಕಡ’ ಡೈಲಾಗ್’ನಿಂದ್ಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ಹ್ಯಾಟ್ರಿಕ್ ಹಿರೋ, ಸೆಂಚುರಿ ಸ್ಟಾರ್ ಶಿವಣ್ಣ ವಿರುದ್ದ ವೀಡಿಯೋ ಮೂಲಕ ತಿರುಗಿ ಬಿದ್ದಿದ್ದಾರೆ.

  • ಜ್ಯೋತಿಷ್ಯ

    ಏಪ್ರಿಲ್ ನಲ್ಲಿ ಹುಟ್ಟಿದ ತಿಂಗಳು ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ ನೋಡಿ!

    ಏಪ್ರಿಲ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳಲ್ಲಿ ಕಾಣುವಂತಹ ಗುಣಗಳು ಯಾವುದು. ಹಾಗೇ ಅವರು ಯಾವ ಗುಣಗಳಿಂದಾಗಿ ಬೇರೆಯವರಿಗಿಂತ ತುಂಬಾ ಭಿನ್ನವಾಗಿ ನಿಲ್ಲುವರು ಅಂತ ತಿಳಿಯೋಣ. * ಈ ತಿಂಗಳಲ್ಲಿ ಹುಟ್ಟಿರುವ ಜನರು ತುಂಬಾ ಸ್ವತಂತ್ರರಾಗಿರುವರು. ಈ ವ್ಯಕ್ತಿಗಳು ಯಾವುದಾದರೂ ಉದ್ಯಮವನ್ನು ಆರಂಭಿಸುವರು ಮತ್ತು ಅದರಲ್ಲಿ ಇವರು ಉನ್ನತಿ ಪಡೆಯುವರು. * ಇವರು ತಮ್ಮದೇ ಆದ ದಾರಿಯಲ್ಲಿ ಸಾಗುವರು. ಇವರಲ್ಲಿ ಇರುವಂತಹ ಆಕರ್ಷಣೀಯ ಗುಣವು ಬೇರೆಯವರನ್ನು ಆಕರ್ಷಣೆ ಮಾಡುವುದು. * ಹಣ ಸಂಪಾದನೆ ಮಾಡಬೇಕು ಎಂದು ಬಯಸುವಂತಹ ವ್ಯಕ್ತಿಗಳು ತಮ್ಮ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ,ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….ಶೇರ್ ಮಾಡಿ…

    ಮೇಷ ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ. ವೃಷಭ ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ. ಮಿಥುನ ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ….