ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ಸಂಸ್ಕೃತಿ ಎಂದರೆ ಜಗತ್ಪ್ರಸಿದ್ಧ ಸಂಸ್ಕೃತಿ ಎಂಬುದರಲ್ಲಿ ಸಂಶಯವಿಲ್ಲ. ಹಿಂದೂ ಧರ್ಮದ ಆಚರಣೆಗಳು ಯಾವ ರೀತಿ ಜಗತ್ತು ಒಪ್ಪಿಕೊಂಡಿವೆ ಎಂದರೆ ಮನುಷ್ಯರು ಮಾತ್ರವಲ್ಲದೆ ಇಡೀ ಪ್ರಕೃತಿಯೇ ಸನಾತನ ಧರ್ಮದ ಆಚರಣೆಗೆ ಒಳಪಡುತ್ತದೆ. ಕಣ ಕಣದಲ್ಲೂ ದೇವರನ್ನು ಕಾಣುವ ಹಿಂದೂ ಧರ್ಮ, ಕಲ್ಲು, ಮಣ್ಣು, ನೀರು, ಬೆಂಕಿ, ಪ್ರಾಣಿ ಪಕ್ಷಿ, ಗಿಡ ಮರ, ಹೀಗೆ ಎಲ್ಲಾ ಜೀವಿಗಳಲ್ಲೂ ದೇವರನ್ನು ಕಾಣುವ ಧರ್ಮ ಒಂದಿದ್ದರೆ ಅದು ಹಿಂದೂ ಧರ್ಮ ಮಾತ್ರ ಎಂಬುದು ಸ್ಪಷ್ಟ. ಭೂಮಿಯ ಯಾವುದೇ ಮೂಲೆಗೆ ಹೋದರೂ ಅಲ್ಲಿ ಹಿಂದೂ ಧರ್ಮದ ದೇವಾಲಯ, ಗುಡಿಗಳು ನಮಗೆ ಸಿಗುತ್ತವೆ.

ದೇವಾಲಯದ ಇತಿಹಾಸ ಮತ್ತು ವಿಶೇಷತೆ! :ನೆಲ್ಲಿತೀರ್ಥ ಹೆಸರಲ್ಲೇ ನಮಗೆ ಈ ದೇವಾಲಯದ ವಿಶೇಷತೆ ಏನೆಂಬುದನ್ನು ತಿಳಿಯಬಹುದು. ನೆಲ್ಲಿತೀರ್ಥ ದೇವಾಲಯ ಇರುವುದು ಮಂಗಳೂರು ನಗರದಿಂದ ಕೇವಲ 17 ಕಿಮೀ ದೂರದಲ್ಲಿ ಇರುವ ಈ ದೇವಾಲಯ ಸುಮಾರು 500 ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ. ಈ ದೇವಾಲಯದ ಪ್ರಮುಖ ದೇವರೆಂದರೆ ಶಿವ. ನೆಲ್ಲಿತೀರ್ಥ ಎಂಬ ಹೆಸರಿನಿಂದ ಈ ದೇವಾಲಯ ಜಗತ್ಪ್ರಸಿದ್ಧವಾದರೆ, ಸೋಮನಾಥ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇದೊಂದು ಗುಹಾ ದೇವಾಲಯ ಆಗಿರುವುದರಿಂದ ಇಲ್ಲಿನ ಪೂಜೆ ಬಹಳ ವಿಶೇಷ. ಗುಹೆಯ ಹೊಸ ಭಾಗದಲ್ಲಿ ದೇವಾಲಯವಿದ್ದು, ಶಿವನ ಪೂಜೆ ನಿತ್ಯ ನಡೆಯುತ್ತದೆ. ಅದೇ ರೀತಿ ಗುಹೆಯ ಒಳಗೂ ಕೂಡ ಒಂದು ದೊಡ್ಡ ಶಿವಲಿಂಗ ಸ್ಥಾಪನೆಯಾಗಿದ್ದು, ಭಕ್ತರು ಅಲ್ಲಿಗೂ ಹೋಗಿ ಪ್ರಾರ್ಥಿಸುವ ಅವಕಾಶ ಇದೆ.

ಈ ದೇವಾಲಯದ ಮತ್ತೊಂದು ವಿಶೇಷವೆಂದರೆ, ವರ್ಷದ ಆರು ತಿಂಗಳು ಗುಹೆ ತೆರೆದಿರುತ್ತಾರೆ ಮತ್ತು ಇನ್ನುಳಿದ ಆರು ತಿಂಗಳು ಗುಹೆಯ ಒಳಗೆ ಅರ್ಚಕರು ಅಥವಾ ಭಕ್ತರು ಯಾರಿಗೂ ಅವಕಾಶ ಇರುವುದಿಲ್ಲ. ಇಲ್ಲಿನ ನಂಬಿಕೆಯ ಪ್ರಕಾರ, ಮಳೆಗಾಲದ ಈ ತಿಂಗಳುಗಳಲ್ಲಿ ಗುಹೆಯ ಒಳಗೆ ನದಿ ನೀರಿನ ಹರಿವು ಇರುತ್ತದೆ ಎಂದು ಹೇಳಲಾಗುತ್ತದೆ ಮಾತ್ರವಲ್ಲದೆ ಈ ಆರು ತಿಂಗಳು ಈ ಗುಹೆಯಲ್ಲಿ ದೇವರು ವಾಸವಾಗಿರುತ್ತಾರೆ ಎಂಬುದು ನಂಬಿಕೆ. ಪುರಾಣದ ಉಲ್ಲೇಖದಂತೆ, ಈ ದೇವಾಲಯದಲ್ಲಿ ಜಾಬಾಲಿ ಋಷಿ ಮುನಿಗಳು ತಪಸ್ಸು ಮಾಡಿದ್ದರು ಮತ್ತು ಅವರು ಕೈಗೊಂಡ ತಪಸ್ಸಿಗೆ ಮೆಚ್ಚಿ ಸ್ವತಃ ಶಿವನೇ ಅನುಗ್ರಹ ನೀಡಿದ್ದ ಎಂಬುದು ಇತಿಹಾಸ. ಸದ್ಯ ಈ ಗುಹಾ ದೇವಾಲಯ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಒಂದು ಪುಣ್ಯ ಕ್ಷೇತ್ರವಾಗಿದೆ.

ಈ ದೇವಾಲಯ ಇರುವುದು ಒಂದು ಸಣ್ಣ ಹಳ್ಳಿಯಲ್ಲಿ, ಆದರೆ ಸದ್ಯ ಈ ಹಳ್ಳಿಯನ್ನೇ ನೆಲ್ಲಿತೀರ್ಥ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಪ್ರಕೃತಿಯ ಮಡಿಲಲ್ಲೇ ಇರುವ ಈ ದೇವಾಲಯ ನಿಜಕ್ಕೂ ಭಕ್ತರ ಮನದಲ್ಲಿ ಏಕಾಗ್ರತೆ ಮೂಡಿಸುವ ತಾಣವಾಗಿದೆ. ಈ ದೇವಾಲಯದ ಹೊರ ಭಾಗದಲ್ಲಿ “ನಾಗಪ್ಪ” ಎಂಬ ಕೆರೆ ಇದ್ದು, ಗುಹೆಯನ್ನು ಪ್ರವೇಶಿಸುವ ಮೊದಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಈ ಕೆರೆಯಲ್ಲಿ ಸ್ನಾನ ಮಾಡಿ ಹೋಗಬೇಕು ಎಂಬುದು ಸ್ಥಳ ಪುರಾಣ. ಗುಹೆಯ ಒಳಗೆ ಯಾವುದೇ ಲಿಂಗ ತಾರತಮ್ಯ ಇಲ್ಲದೆ ಮುಕ್ತ ಪ್ರವೇಶವಿದ್ದು, ಶುಚತ್ವ ಮತ್ತು ಮಡಿ ಕಾಪಾಡಬೇಕಾದ ಕರ್ತವ್ಯ ಭಕ್ತರದ್ದೇ ಆಗಿರುತ್ತದೆ. 5 ವರ್ಷದೊಳಗಿನ ಮಕ್ಕಳಿಗೆ ಗುಹೆಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಈ ಗುಹೆಯ ಮತ್ತೊಂದು ವಿಶೇಷವೆಂದರೆ ಗುಹೆಯ ಪ್ರವೇಶ ಭಾಗದಲ್ಲಿ ಭಕ್ತರು ನೇರವಾಗಿ ನಿಂತುಕೊಂಡು ಹೋಗಬಹುದು, ನಂತರದಲ್ಲಿ ಸ್ವಲ್ಪ ಬಗ್ಗಿ ನಡೆಯಬೇಕಾಗುತ್ತದೆ. ಅದಾದ ನಂತರ ಸಂಪೂರ್ಣ ನೆಲಕ್ಕೆ ಸಮನಾಗಿ ಮಲಗಿ ಮಣ್ಣಿನಲ್ಲಿ ತೆವಳಿಕೊಂಡು ಹೋಗಬೇಕಾಗುತ್ತದೆ. ಗುಹೆಯ ಒಳ ಭಾಗದಲ್ಲಿ ಕಲ್ಲಿನಿಂದ ನೀರು ಹರಿಯುತ್ತಿದ್ದು, ಇದು ನೆಲ್ಲಿ ಕಾಯಿಯ ಆಕಾರದಲ್ಲಿ ಕಾಣಿಸುತ್ತದೆ. ಇದೇ ಕಾರಣಕ್ಕೆ “ನೆಲ್ಲಿತೀರ್ಥ” ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ಗುಹೆ ದಿನೇ ದಿನೇ ಬೆಳೆಯುತ್ತಲಿದ್ದು ಸದ್ಯ ಇರುವ ದೇವಾಲಯದ ಒಂದು ದಿಕ್ಕಿನಿಂದ ಈ ಗುಹೆ ದೇವಾಲಯವನ್ನೇ ಆವರಿಸಿದೆ. ಕೆಲವರು ಹೇಳುವ ಪ್ರಕಾರ, ಈ ಗುಹೆಯ ಒಳಗೆ ಏಳು ಶಿವಲಿಂಗ ಇದೆ. ಶಿವ ಭಕ್ತರು ಪೂಜಿಸುವ ಲಿಂಗವನ್ನು ಈ ಗುಹೆ ಬೆಳೆಯುತ್ತಾ ಹೋದಂತೆ ತನ್ನೊಳಗೆ ಸೇರಿಸಿಕೊಂಡಿದೆ ಎಂದು ಹೇಳುತ್ತಾರೆ.ನಿಜಕ್ಕೂ ಇದೊಂದು ಅಚ್ಚರಿ ಮೂಡಿಸುವ ದೇವಾಲಯವೇ ಆಗಿದೆ. ಒಂದೊಂದು ಕಥೆ ಪುರಾಣಗಳು ಒಂದೊಂದು ರೀತಿಯಾಗಿ ಹೇಳುತ್ತವೆ. ಇಲ್ಲಿನ ಅರ್ಚಕರು ಈ ಕ್ಷೇತ್ರದ ಸಂಪೂರ್ಣ ಕಥೆ ಹೇಳುತ್ತಾರೆ ಮತ್ತು ಅದರ ಆಧಾರದಲ್ಲಿ ನಾವು ಇಲ್ಲಿನ ಇತಿಹಾಸ ತಿಳಿಯಬಹುದಾಗಿದೆ. ಅದೇನೇ ಇರಲಿ ಶಿವನ ಮಹಿಮೆ ಯಾವ ರೀತಿ ಇದೆ ಮತ್ತು ಹಿಂದೂ ಪುರಾಣಗಳು ಯಾವ ರೀತಿ ಇದೆ ಎಂಬುದಕ್ಕೆ ಈ ಒಂದು ಗುಹಾ ದೇವಾಲಯವೇ ಸಾಕ್ಷಿ..!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕ್ರಿಕೆಟ್ ಬಹುತೇಕರ ಕನಸು. ಆದ್ರೆ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭದ ಕೆಲಸವಲ್ಲ. ಕ್ರೀಡೆ ಗೊತ್ತಿಲ್ಲದವರಿಗೂ ಕ್ರಿಕೆಟ್ ಜಗತ್ತಿನಲ್ಲಿ ಕೆಲಸ ಸಿಗುತ್ತದೆ. ಒಳ್ಳೆ ವಿದ್ಯಾಭ್ಯಾಸ ಹೊಂದಿರುವವರು ಕ್ರಿಕೆಟ್ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಗಳಿಕೆ ಮಾಡ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ, ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ ಕ್ರಿಕೆಟ್ ಗೆ ಸಂಬಂಧಿಸಿದ ಅನೇಕ ಕೆಲಸಗಳಿವೆ. ಪಂದ್ಯದ ತೀರ್ಪುಗಾರನಾಗಿ ನೀವು ಕೆಲಸ ಮಾಡಬಹುದು. ಪ್ರತಿ ಪಂದ್ಯಕ್ಕೆ 30 ಸಾವಿರ ರೂಪಾಯಿ ನೀಡಲಾಗುತ್ತದೆ. ಐಸಿಸಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ…
ಚಿನ್ನದ ನಾಡು ಕೆಜಿಎಫ್ ನ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂಡ ಬಳಲುತ್ತಿದ್ದರೂ ಸೂಕ್ತ ಸಮಯಕ್ಕೆ ವೈದ್ಯರು ಶುಶ್ರೂಷೆ ಮಾಡದ ಕಾರಣ ತಾಯಿಯೊಬ್ಬಳು ತನ್ನ ಮಗುವನ್ನು ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ. ಗರ್ಭಿಣಿ ಮಹಿಳೆ ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ವೀಡಿಯೋ ದೃಶ್ಯಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಜಿಎಫ್ 8ನೇ ಬ್ಲಾಕ್‍ನ ರಿಯಾಜ್ ಎಂಬವರ ಪತ್ನಿ ಸಮೀನಾ ಅವರಿಗೆ ಸೋಮವ್ರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿದೆ. ಆಕೆಯನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ…
ಆಕೆಯ ಸುಮಧುರ ಧ್ವನಿ ಆಕರ್ಷಕ ರೂಪ ಮಲ್ಲಿಗೆ ಹೂವಿನಂತ ನಗು ಸೌಮ್ಯತೆಯ ಮಾತಿನ ಮೋಡಿಗೆ ನನ್ನ ನಿದ್ರೆ ಹಾರಿ ಹೋಗಿತ್ತು.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ಸೆಷೆನ್ಸ್ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ.ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.
ಕಳೆದ 19 ವರ್ಷಗಳಲ್ಲಿ ಉಭಯ ತಂಡಗಳ ನಡುವೆ 128 ಏಕದಿನ ಪಂದ್ಯ ನಡೆದಿವೆ. ಆದರೆ, ಐಸಿಸಿ ಆಯೋಜನೆಯ ಏಕದಿನ ಟೂರ್ನಿಯೊಂದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ತಂಡಗಳು ಫೈನಲ್ನಲ್ಲಿ ಭಾನುವಾರ ಎದುರಾಗುತ್ತಿವೆ.
ಕಷ್ಟ ಕಂಡರೇ ಕಟುಕನು ಮರುಗುತ್ತಾನೆ ಎಂಬ ಮಾತಿದೆ. ಈ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತದೆ. ಈ ಸಿಸಿಟಿವಿ ವಿಡಿಯೋ ಪಾಕಿಸ್ತಾನದ ಕರಾಚಿಯಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋದಲ್ಲಿ ದರೋಡೆಕೋರರಿಬ್ಬರು ಬೈಕಿನಲ್ಲಿ ಬಂದು ಓರ್ವ ಯುವಕನ ಬಳಿ ದರೋಡೆ ಮಾಡುವ ದೃಶ್ಯ ಸೆರೆಯಾಗಿದೆ. ಕೇವಲ 59 ಸೆಕೆಂಡ್ ಇರುವ ಈ ವಿಡಿಯೋದಲ್ಲಿ, ಒಂದು ಮನಮಿಡಿಯುವ ಸ್ಟೋರಿ ಇದೆ. ಮೊದಲಿಗೆ ಫುಡ್ ಡೆಲಿವರಿ ಯುವಕನೊಬ್ಬ ಅಂಗಡಿಯಿಂದ ತನ್ನ ಬೈಕ್ ಬಳಿ ಬರುತ್ತಾನೆ. ಈ ವೇಳೆ ಅಲ್ಲಿಗೆ ಬೈಕಿನಲ್ಲಿ ಬಂದ ಇಬ್ಬರು…