ಸುದ್ದಿ

ದಾರಿ ಮಧ್ಯೆ ಕಾರು ನಿಲ್ಲಿಸಿ ವೃದ್ಧನಿಗೆ ಹಣ ನೀಡಿದ ಕನ್ನಡದ ಟಾಪ್ ನಟ,.!ಯಾರು ಗೊತ್ತೇ

53

ಇತ್ತೀಚೆಗೆ ಶಿವರಾಜ್‍ಕುಮಾರ್ ಅವರು ತಮ್ಮ ನಿವಾಸ ನಾಗಾವರದ ಬಳಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅವರು ಬಿಸಿಲಲ್ಲಿ ನಿಂತಿದ್ದ ಹಿರಿಯ ವೃದ್ಧರೊಬ್ಬರನ್ನು ನೋಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಶಿವಣ್ಣ ವ್ಯಕ್ತಿ ನಿಂತಿದ್ದ ಜಾಗದಿಂದ ಸ್ವಲ್ಪ ಮುಂದೆ ಹೋಗಿದ್ದಾರೆ. ನಂತರ ಅವರನ್ನು ನೋಡಿ ಮತ್ತೆ ಕಾರು ರಿವರ್ಸ್ ಮಾಡಿ ವಾಪಸ್ ಬಂದು ಜೇಬಿನಲ್ಲಿದ್ದ ಹಣವನ್ನು ತೆಗೆದುಕೊಂಡು ವೃದ್ಧರೊಬ್ಬರಿಗೆ  ನೀಡಿ ಮಾನವೀಯತೆ ಮೆರೆದಿದ್ದಾರೆ.

ಶಿವರಾಜ್‍ಕುಮಾರ್ ಅವರು ಹಣ ನೀಡುತ್ತಿರುವಾಗ ಪಕ್ಕದಲ್ಲಿದ್ದ ವ್ಯಕ್ತಿ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಈ ಫೋಟೋದಲ್ಲಿ ಶಿವಣ್ಣ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ ಸ್ವಲ್ಪ ಗಮನಿಸಿದಾಗ ಗೊತ್ತಾಗುತ್ತದೆ. ಹಣ ನೀಡಿದ ನಂತರ ಶಿವಣ್ಣ ಫೋಟೋ ಕ್ಲಿಕ್ಕಿಸಿದವರಿಗೆ ಒಂದು ಲುಕ್ ಕೊಟ್ಟು ಅಲ್ಲಿಂದ ಹೊರಟು ಹೋದರು. ಮಾನವೀಯತೆ ಮೆರೆದ ಶಿವಣ್ಣರನ್ನು ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

 ಸಾಮಾನ್ಯವಾಗಿ ಅನೇಕ ನಟರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಾರೆ. ಇದೀಗ ಸ್ಯಾಂಡಲ್‍ವುಡ್ ನಟ ಶಿವರಾಜ್‍ಕುಮಾರ್ ಹಿರಿಯ ವ್ಯಕ್ತಿಯೊಬ್ಬರಿಗೆ ಕಾರನ್ನು ನಿಲ್ಲಿಸಿ ಹಣ ನೀಡುತ್ತಿರುವ  ದೃಶ್ಯವು  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಕಾರಿನಲ್ಲಿ ಹೋಗುತ್ತಿದ್ದ ವೇಳೆ ವೃದ್ಧರೊಬ್ಬರಿಗೆ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ. ಶಿವಣ್ಣರನ್ನು ನೋಡಿ ಅಭಿಮಾನಿಗಳು  ಸಹ ತಮ್ಮ  ಸಂತಸ ವ್ಯಕ್ತಪಡಿಸುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಬೆಂಡೆಕಾಯಿಯ ಆರೋಗ್ಯಕರ ಪ್ರಯೋಜನಗಳು ಏನೆಂದು ನಿಮಗೆ ಗೊತ್ತೇ? ಓದಿರಿ

    ಇಂಗ್ಲಿಷಿನಲ್ಲಿ ಲೇಡಿಸ್ ಫಿಂಗರ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಗೂಂಬೊ ಎಂದು ಕರೆಯುತ್ತಾರೆ. ಬೆಂಡೆಯ ಉಗಮಸ್ಥಾನ ಆಫ್ರಿಕಾ ಖಂಡದ ಉಷ್ಣವಲಯವೆಂದು ಸಸ್ಯ ವಿಜ್ಞಾನಿಗಳ ಅಭಿಪ್ರಾಯ. 1216ಕ್ಕಿಂತ ಪೂರ್ವದಲ್ಲಿ ಯೂರೊಪಿಯನ್ನರು ಇದನ್ನು ಬೆಳೆಸುತ್ತಿದ್ದರು. ಅಲ್ಲಂದೀಚೆಗೆ ಇದನ್ನು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳೆರಡರಲ್ಲೂ ಬೆಳೆಸಲಾಗುತ್ತದೆ. ಇದು ಸುಮಾರು 2 ಮೀ. ಎತ್ತರದವರೆಗೆ ಬೆಳೆಯುತ್ತದೆ. ಸಾಮಾನ್ಯವಾಗಿ ಕವಲೊಡೆಯದಿರದ ಉದ್ದನೆಯ ನೀಳವಾದ ಕಾಂಡ ಮತ್ತು ತಾಯಿ ಬೇರು ಸಮೂಹ ಇರುವುವು. ಕಾಂಡದ ಮೇಲೆ ಸಣ್ಣ ರೋಮಗಳಿವೆ. ಕಾಂಡದಲ್ಲಿ ಸರಳವಾದ ಮತ್ತು ಅಂಗೈಯಾಕೃತಿ ಹೋಲುವ ಅನೇಕ ಎಲೆಗಳಿವೆ….

  • ಸಿನಿಮಾ

    ಐಟಿ ದಾಳಿಯ ಬಳಿಕ ಹುಬ್ಬಳ್ಳಿಯಲ್ಲಿ ನಡೆದ ನಟಸಾರ್ವಭೌಮ ಚಿತ್ರದ ಚಿತ್ರದ ಆಡಿಯೋ ರಿಲೀಸ್ ವೇಳೆ ಅಪ್ಪು ಹೇಳಿದ್ದೇನು ಗೊತ್ತೇ?

    ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಆಯೋಜಿ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಹುಬ್ಬಳಿಯ ಜೊತೆಗಿನ ತಮ್ಮ ನಂಟನ್ನು ಬಿಚ್ಚಿಟ್ಟರು. ಅವರು “ಹುಟ್ಟಿದರೆ ಕನ್ನಡನಾಡಲಿ ಹುಟ್ಟಬೇಕು” ಹಾಡು ಹಾಡುವ ಮೂಲಕ‌ ಎಲ್ಲರನ್ನು ರಂಜಿಸಿದರು. ಕೊನೆಗೆ ಮಾತನಾಡಿದ ಅವರು, ಹುಬ್ಬಳ್ಳಿಗೆ ಬಂದೊಡನೆ ಸಿದ್ದಾರೂಢರ ಮಠಕ್ಕೆ ತೆರಳಿ ದರ್ಶನ ಪಡೆದೆ. ಈ ನಗರಕ್ಕೆ ಆಗಾಗ ಬರುತ್ತಲೇ ಇರುತ್ತೇನೆ. ದೊಡ್ಮನೆ ಹುಡುಗ ಚಿತ್ರದ ದೃಶ್ಯಗಳನ್ನು ನಾಲ್ಕು ದಿನಗಳ‌ಕಾಲ‌ ಇಲ್ಲೇ ಮಾಡಲಾಗಿತ್ತು ಎಂದರು. ಹುಬ್ಬಳ್ಳಿ ಜನರ…

  • ಸುದ್ದಿ

    ಅಂಬಾನಿ ಮನೆಯ ಒಂದು ತಿಂಗಳ ಕರೆಂಟ್ ಬಿಲ್ ಕೇಳಿದರೆ ಶಾಕ್, ನೋಡಿ ಭಾರತದ ಐಷಾರಾಮಿ ಮನೆ.

    ಭಾರತದ ಹೆಸರಾಂತ ಉದ್ಯಮಿ ಮುಖೇಶ್ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ ? ಇನ್ನು ಇತ್ತೀಚಿನ ದಿನಗಳಲ್ಲಿ ಜಿಯೋ ಸಿಮ್ ಅನ್ನು ಜಾರಿಗೆ ತಂದ ಮೇಲೆ ಆಟ ಆಡುವ ಹುಡುಗರಿಂದ ಹಿಡಿದು ಹಲ್ಲಿಲ್ಲದ ಮುದುಕರವರೆಗೂ ಅಂಬಾನಿ ಎಂದರೆ ಯಾರು ಎಂಬುದು ತಿಳಿದಿದೆ..ಯುವ ಪೀಳಿಗೆ ಅವರಿಗಂತೂ ಅವರನ್ನು ಜಿಯೋ ಅಂಬಾನಿ ಎಂದೇ ಕರೆಯುತ್ತಾರೆ. ಅಲ್ಲದೆ ಭಾರತ ದೇಶದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅವರೇ ಮೊದಲ ಸ್ಥಾನ..ಇನ್ನು ಎಲ್ಲರೂ ಸಹ ಮುಕೇಶ್ ಅವರ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದರೆ ಅವರ ಮನೆಯ…

  • ಸುದ್ದಿ

    ಮನೆಗೆ ಹೋದ ದಿವಾಕರ್ ಪತ್ನಿಯಿಂದ ಈ ಸುದ್ದಿ ಕೇಳಿ ಶಾಕ್ ಆದ್ರು..!ಏನದು ಸುದ್ದಿ ಗೊತ್ತಾ..?

    ‘ಬಿಗ್ ಬಾಸ್ ಕನ್ನಡ ಸಂಚಿಕೆ 5’ ಮುಕ್ತಾಯವಾಗಿದೆ. ಎಲ್ಲರೂ ಜಯರಾಂ ಕಾರ್ತಿಕ್(ಜೆಕೆ) ಅವರಿಗೆ ‘ಬಿಗ್ ಬಾಸ್ ಪಟ್ಟ ಸಿಗಬಹುದು, ಎಂದುಕೊಂಡಿದ್ದವರಿಗೆ ಶಾಕ್ ನೀಡಿದ್ದಾನೆ ಬಿಗ್ ಬಾಸ್. ಕಾಮಾನ್ ಮ್ಯಾನ್ ಆಗಿ ‘ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿವಾಕರ್ ರನ್ನರ್ ಆಪ್ ಆಗಿ ಹೊರಬಂದಿದ್ದಾರೆ.

  • ಸುದ್ದಿ

    ಪುಲ್ವಾಮಾದಲ್ಲಿ ಎನ್‍ಕೌಂಟರ್- ಇಬ್ಬರು ಉಗ್ರರನ್ನು ವಡೆದುರುಳಿಸಿದ ನಮ್ಮ ಭದ್ರತಾ ಪಡೆ!

    ಜಮ್ಮು-ಕಾಶ್ಮೀರದ ಪ್ರದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಉಗ್ರರ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದ ಪಂಜ್ಗಾಮ್ ಗ್ರಾಮದಲ್ಲಿ ನಡೆದ ಎನ್‍ಕೌಂಟರ್ ನಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅವಂತಿಪುರದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ದಾಳಿ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ನೆಲಸಮ ಮಾಡಿದೆ. ಸಿಆರ್​ಪಿಎಫ್​ ನ 130ನೇ ಬೆಟಾಲಿನ್‍ನ 55 ರಾಷ್ಟ್ರೀಯ ರೈಫಲ್(ಆರ್‍ಆರ್) ಹಾಗೂ ವಿಶೇಷ ಕಾರ್ಯಾಚರಣೆ ಗುಂಪಿನ(ಎಸ್‍ಓಜಿ) ಜಂಟಿ…