ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಐವತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿಯೊಬ್ಬ ಈಗ ಜೀವಂತವಾಗಿ ದೀಪಾವಳಿ ಹಬ್ಬಕ್ಕೆ ಏಕಾಏಕಿ ಪ್ರತ್ಯಕ್ಷನಾಗಿದ್ದಾನೆ. ಆದರೆ ಸತ್ತಿದ್ದು, ಸಮಾಧಿ ಮಾಡಿದ್ದು, ಅಲ್ಲಿಂದ ಎದ್ದು ಹೋದದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಇನ್ನು ಖಚಿತ ಉತ್ತರ ಸಿಗಲಿಲ್ಲ ಎನ್ನಲಾಗಿದೆ.

ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯ ಕಾಡುಗೊಲ್ಲ ಸಮುದಾಯದ 76 ವರ್ಷದ ಈರಜ್ಜ ಮರಳಿ ಬಂದಿರುವ ವ್ಯಕ್ತಿ. ಈದುವರೆಗೆ ಆಂಧ್ರದಲ್ಲಿದ್ದ ಈತ ಮಂಗಳವಾರ ದೀಪಾವಳಿಗೆ ಮರಳಿ ಹುಟ್ಟೂರಿಗೆ ಬಂದಿದ್ದಾನೆ. ಈರಜ್ಜನ ಸಾವಿನ ಘಟನೆ ಕುರಿತು ಈತನ ಸಹೋದರ ಬೇವಿನಪ್ಪ ವಿಕ ಜತೆ ಹೇಳಿಕೊಂಡದ್ದು ಹೀಗೆ. ‘‘ಈರಣ್ಣಗೆ 22ನೇ ವರ್ಷಕ್ಕೆ ಮದುವೆಯಾಗಿತ್ತು. ಆಂಧ್ರ ಗಡಿ ಗ್ರಾಮ ದಾಸರಹಳ್ಳಿಯ ಈರಮ್ಮನನ್ನು ಮದುವೆಯಾಗಿ ಊರಿನ ತೋಟದಲ್ಲಿ ಕೂಲಿ ಮಾಡಿಕೊಂಡಿದ್ದ.

ಇಬ್ಬರು ಗಂಡು ಮಕ್ಕಳಿದ್ದರು. ಆದರೆ, ಈರಣ್ಣನಿಗೆ ಯಾರೋ ಮಾಟ ಮಂತ್ರ ಮಾಡಿಸಿದ್ದರಂತೆ. ಅದರಿಂದ ಸತ್ತು ಹೋದ. ತಿಥಿ ಕೂಡ ಮಾಡಿದ್ದರು. ನಂತರ ಮಕ್ಕಳ ಸಲುವಾಗಿ ಪತ್ನಿಗೆ ಮರು ಮದುವೆ ಮಾಡಿದರು. ಅವರಿಗೂ ಮಕ್ಕಳಾಗಿದ್ದಾರೆ,’’ಎಂದು ಹೇಳಿದ್ದಾರೆ.

‘‘ಪತಿ ಈರಣ್ಣ ಸತ್ತು 53 ವರ್ಷ ಕಳೆದಿವೆ. ಈಗ ಬದುಕಿ ಬಂದಿರುವುದು ಆಶ್ಚರ್ಯ. ಎಲ್ಲ ಘಟನೆಗಳನ್ನು ಇಂದಿಗೂ ಅಜ್ಜ ಕಣ್ಣಿಗೆ ಕಟ್ಟಿದಂತೆ ಹೇಳುತ್ತಿದ್ದಾರೆ. ಹಾಗಾಗಿ ನಾನು ಪತಿಯೆಂದು ಒಪ್ಪಿಕೊಂಡಿದ್ದೇನೆ,’’ ಎಂದು ಪತ್ನಿ ಈರಜ್ಜಿ ತಿಳಿಸಿದ್ದಾರೆ .
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಾದ ಬ್ರಿಜೇಶ್ ಶ್ರೀವಾತ್ಸವ ಮತ್ತವರ ಪತ್ನಿ ಶಬೀಸ್ತಾ ಶ್ರೀವಾತ್ಸವ ತಾವು ಸಾಕಿರುವ ಮಂಗನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮಂಗನ ವಾಸ್ತವ್ಯಕ್ಕೆ ಎಸಿ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ.
ದುಬೈ: 8 ವರ್ಷದ ಭಾರತೀಯ ಬಾಲಕಿಯೊಬ್ಬಳು ಬರೋಬ್ಬರಿ 15 ಸಾವಿರ ಕಿಲೋಗ್ರಾಂ ಕಾಗದದ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾಳೆ.ಭಾರತೀಯ ಮೂಲದ ನಿಯಾ ಟೋನಿ 15 ಸಾವಿರ ಕೆಜಿ ತೂಕದ ಪೇಪರ್ ತ್ಯಾಜ್ಯ ಸಂಗ್ರಹಿಸಿದ್ದಾಳೆ. ಈಕೆ ಪೋಷಕರ ಜೊತೆ ದುಬೈನಲ್ಲಿ ನೆಲೆಸಿದ್ದಾಳೆ. ಟೋನಿ ಎಮಿರೇಟ್ಸ್ ಎನ್ವಿರಾನ್ಮೆಂಟಲ್ ಗ್ರೂಪ್‍ನ ರಾಷ್ಟ್ರವ್ಯಾಪಿ ಮರುಬಳಕೆ ಅಭಿಯಾನದ ಭಾಗವಾಗಿ ವೇಸ್ಟ್ ಪೇಪರ್‌ಗಳನ್ನು ಸಂಗ್ರಹಿಸಿದ್ದಾಳೆ. ಇತ್ತೀಚೆಗಷ್ಟೆ ದುಬೈಯ ಎಮಿರೇಟ್ಸ್ ರಿಸೈಕ್ಲಿಂಗ್ ಅವಾರ್ಡ್ಸ್ ನ 22ನೇ ಆವೃತ್ತಿಯಲ್ಲಿ ಬಾಲಕಿಯ ಅಸಾಮಾನ್ಯ ಸಾಧನೆಗೆ ಆಕೆಯನ್ನು ಗೌರವಿಸಲಾಗಿದೆ. ಇಂಗಾಲದ…
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಬಿಡುಗಡೆಯಾದಲ್ಲೆಲ್ಲ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬೆಳಗಿನ ಜಾವದಿಂದಲೇ ಪ್ರದರ್ಶನ ಆರಂಭವಾಗುವ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರದ ಮೊದಲ ದಿನದ ಗಳಿಕೆ ಕುರಿತಾಗಿ ಲೆಕ್ಕಾಚಾರ ನಡೆದಿದೆ. ಕರ್ನಾಟಕದ 450 ಸ್ಕ್ರೀನ್ ಗಳು, ಅಮೆರಿಕದ 50 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ‘ಪೈಲ್ವಾನ್’ ತೆರೆಕಂಡಿದೆ. ರಾಜ್ಯ ಮಾತ್ರವಲ್ಲದೇ, ದೇಶ, ವಿದೇಶಗಳಲ್ಲಿಯೂ ‘ಪೈಲ್ವಾನ್’ ಅಬ್ಬರ ಜೋರಾಗಿದೆ. ಕನ್ನಡ, ತೆಲುಗು ಸೇರಿ ಬಹುಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಪೈಲ್ವಾನ್’ 3000 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ…
ಎರಡು ದಿನಗಳ ಹಿಂದಷ್ಟೆ ಮುಂಬೈನಲ್ಲಿ ಮೃತಪಟ್ಟ ಭಿಕ್ಷುಕನ ಮನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿತ್ತು. ಈಗ ವಿದೇಶದ ಭಿಕ್ಷುಕಿಯೊಬ್ಬರ ಬ್ಯಾಂಕ್ ಅಕೌಂಟ್ ಖಾತೆಯಲ್ಲಿ 5 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ. ಅರಬ್ ದೇಶದ ಲೆಬನನ್ನ ವಾಫಾ ಮಹಮ್ಮದ್ ಎಂಬ ಭಿಕ್ಷುಕಿಯ ಬ್ಯಾಂಕ್ ಅಕೌಂಟಿನಲ್ಲಿ ಬರೋಬ್ಬರಿ 1.33 ಮಿಲಿಯನ್ ಲೆಬನಾನ್ ಪೌಂಡ್(ಭಾರತೀಯ ರೂಗಳಲ್ಲಿ 5.62 ಕೋಟಿ ರೂ.) ಪತ್ತೆಯಾಗಿದೆ. ಲೆಬನನ್ನ ಜಮ್ಮಲ್ ಟ್ರಸ್ಟ್ ಬ್ಯಾಂಕ್ ನಲ್ಲಿ ಹಣವಿಡಲಾಗಿದ್ದು, ತನ್ನ ಖಾತೆಯಲ್ಲಿ ಎಷ್ಟು ಹಣವಿದೆ ಎಂಬ ವಿಷಯ ಸ್ವತಃ…
ಕರ್ನಾಟಕದ ರಾಜಕೀಯ ದೆಹಲಿಯಲ್ಲೂ ಜೋರು ಸದ್ದು ಮಾಡುತ್ತಿದೆ. ಸೋಮವಾರವೂ ಲೋಕಸಭೆಯಲ್ಲಿ ಪ್ರತಿಧ್ವನಿಸಿದ್ದ ಕರ್ನಾಟಕದ ರಾಜಕೀಯ ನಾಟಕ, ಇಂದು ಸಹ ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿದೆ. ಆ ಪರೇಷನ್ ಕಮಲ ಮತ್ತು ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಹೊರನಡೆದು, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜಕೀಯದ ಬಗ್ಗೆ ಮಾತನಾಡಿದ ಲಕಾಂಗ್ರೆಸ್ ನ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿ, “ಕುದುರೆ ವ್ಯಾಪಾರ ಮೊದಲು ನಿಲ್ಲಬೇಕು. ಇದು ರಾಜಕೀಯಕ್ಕೆ ಒಳಿತಲ್ಲ” ಎಂದರು. ಈ ಕುರಿತು…
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಚಿತ್ರೀಕರಣ ಭರದಿಂದ ಸಾಗಿದೆ. ‘ರಾಜಕುಮಾರ’ ಬಳಿಕ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಯುವರತ್ನ’ ಭಾರಿ ನಿರೀಕ್ಷೆ ಮೂಡಿಸಿದೆ. ‘ಯುವರತ್ನ’ ಚಿತ್ರೀಕರಣ ನಡೆದಿರುವಾಗಲೇ ಪುನೀತ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ‘ಭರ್ಜರಿ’ ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರದಲ್ಲಿ ಪುನೀತ್ ಅಭಿನಯಿಸಲಿದ್ದಾರೆ. ಬಹಳ ಹಿಂದೆಯೇ ‘ಜೇಮ್ಸ್’ ಚಿತ್ರದ ಮೋಷನ್ ಪೋಸ್ಟರ್…