ಸುದ್ದಿ

ಸಲ್ಮಾನ್ ಖಾನ್ ಆಸೆ ತಿಳಿದರೆ ಕನ್ನಡಿಗರು ಶಾಕ್ ಆಗುವುದು ಖಚಿತ..!ಅಷ್ಟಕ್ಕೂ ಆ ಆಸೆ ಏನು ಗೊತ್ತಾ.?

229

ಬಾಲಿವುಡ್‍ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇದೀಗ ದಬಾಂಗ್ 3 ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ದೇಶಾದ್ಯಂತ ಕಾತರ ಮೂಡಿಸಿರೋ ಈ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಇದೀಗ ಈ ಸಿನಿಮಾದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಈ ಕುರಿತಾದ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿರುವ ಸಲ್ಮಾನ್ ಖಾನ್ ಕನ್ನಡದಲ್ಲಿಯೇ ಮಾತಾಡೋ ಮೂಲಕ ಕನ್ನಡಿಗರೆಲ್ಲರ ಮನ ಗೆದ್ದಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಲೂ ಉತ್ಸುಕರಾಗಿರೋದರ ಬಗ್ಗೆಯೂ ಮಾತಾಡಿದ್ದಾರೆ.

ಬೆಂಗಳೂರಿನಲ್ಲಿ ದಬಾಂಗ್ 3 ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿರುವ ಸಲ್ಮಾನ್ ಖಾನ್, ಅವಕಾಶ ಸಿಕ್ಕರೆ ಖಂಡಿತಾ ಕನ್ನಡ ಚಿತ್ರದಲ್ಲಿ ನಟಿಸೋದಾಗಿ ಹೇಳಿಕೊಂಡಿದ್ದಾರೆ. ಇದರ ಲೈವ್ ಸ್ಟ್ರೀಮಿಂಗ್ ಸಂದರ್ಭದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಈ ಬಗ್ಗೆ ಸಲ್ಮಾನ್ ಮುಂದೊಂದು ಆಫರ್ ಇಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ ಖಂಡಿತಾ ನಟಿಸೋದಾಗಿ ಹೇಳಿಕೊಂಡಿದ್ದಾರೆ.

ಈಗಾಗಲೇ ಸುದೀಪ್ ಅವರೊಂದಿಗೆ ನಟಿಸಿಯಾಗಿದೆ. ಕನ್ನಡ ನಿರ್ದೇಶಕರೊಂದಿಗೂ ನಟಿಸೋ ಆಸೆಯಿದೆ. ಇಷ್ಟರಲ್ಲಿಯೇ ಬೆಂಗಳೂರಿಗೆ ಬಂದು ಅಭಿಮಾನಿಗಳನ್ನೆಲ್ಲ ಭೇಟಿಯಾಗೋದಾಗಿಯೂ ಸಲ್ಮಾನ್ ಹೇಳಿಕೊಂಡಿದ್ದಾರೆ.

ಕಿಚ್ಚ ಸುದೀಪ್ ದಬಾಂಗ್ 3 ಚಿತ್ರದಲ್ಲಿ ಖಡಕ್ ವಿಲನ್ ಆಗಿ ನಟಿಸಿದ ಮೇಲಂತೂ ಸಲ್ಮಾನ್ ಖಾನ್‍ಗೆ ಕನ್ನಡದೊಂದಿಗಿನ ನಂಟು ಬಲವಾಗಿದೆ. ಅವರು ಮುಂಬರೋ ದಿನಗಳಲ್ಲಿ ಸುದೀಪ್ ಅವರೊಂದಿಗೇ ಕನ್ನಡಕ್ಕೆ ಆಗಮಿಸುವಂತಾದರೂ ಅಚ್ಚರಿಯೇನಿಲ್ಲ. ಹೀಗೆ ಇಂದು ಬಿಡುಗಡೆಗೊಂಡಿರೋ ಟ್ರೇಲರ್‍ಗೆ ಅಭೂತಪೂರ್ವ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ