ಸುದ್ದಿ

ಇನ್ಮುಂದೆ ವಾಹನಗಳ ಮೇಲೆ ಜಾತಿ ಸೂಚಕ,ಘೋಷ ವಾಕ್ಯಗಳಿರುವ ಚಿತ್ರಗಳನ್ನು ಹಾಕಿಕೊಳ್ಳುವಂತಿಲ್ಲ,ಹಾಕಿದರೆ ಬಾರಿ ಮೊತ್ತದ ದಂಡ ಕಟ್ಟಬೇಕಾಗುತ್ತದೆ,.!!

99

ಇನ್ಮುಂದೆ ವಾಹನಗಳ ಮೇಲೆ ಜಾತಿ ಸೂಚಕ  ನಮ್ಮದೇ ಶ್ರೇಷ್ಠ ಜಾತಿ ಎಂದು ಬಿಂಬಿಸುವ  ಘೋಷ ವಾಕ್ಯಗಳಿದ್ದ  250 ವಾಹನಗಳ ಮಾಲೀಕರಿಗೆ ಪೊಲೀಸರು ದಂಡ ವಿಧಿಸಿದ್ದಾರೆ   ಸುಲಲಿತ ಸಂಚಾರ ಮತ್ತು  ಆಂದೋಲನದ ಭಾಗವಾಗಿ ಶುಕ್ರವಾರ ‘ಆಪರೇಷನ್ ಕ್ಲೀನ್ ‘ ಕಾರ್ಯಾಚರಣೆ ನಡೆಸಿರುವ ಪೊಲೀಸರು ಜನರಲ್ಲಿ ಭೀತಿ ಹುಟ್ಟಿಸುವಂತ ಘೋಷ ವಾಕ್ಯಗಳಿರುವ  ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದರು.

ವಾಹನಗಳಮೇಲೆ ‘ಗೌಡ್ರ ಗೂಳಿ’, ‘ಕುಂತರೆ ಕುರುಬ, ನಿಂತರೆ ಕಿರುಬ’, ‘ತಿಗಳರ ಹುಡ್ಗ’ ಇನ್ನೂ ಹಲವು ರೀತಿಯಜಾತಿ ಸೂಚಕ ಸ್ಟಿಟಕರ್‌ಗಳನ್ನು ಅಂಟಿಸಿಕೊಂಡಿರುವುದು ಸಾಮಾನ್ಯವಾಗಿ ಕಾಣುತ್ತದೆ ಆದರೆ ಇನ್ನುಮುಂದೆ ಹೀಗೆ ಜಾತಿ ಸೂಚಕ ಸ್ಟಿಕರ್‌ಗಳನ್ನು ಅಂಟಿಸಿಕೊಳ್ಳುವುದಕ್ಕೆ ಬ್ರೇಕ್ ಬೀಳಲಿದೆ. ಹೌದು,ಇನ್ನು ಮುಂದೆ ಕಾರು, ಬೈಕ್‌ ಗಳು ಸೇರಿದಂತೆ ಎಲ್ಲ ವಾಹನಗಳ ಮೇಲೆ ಜಾತಿ, ಧರ್ಮ ಸೂಚಕ ಸ್ಟಿಕರ್‌ಗಳನ್ನುಹಾಕಿಕೊಳ್ಳುವುದನ್ನು ನಿಷೇಧಿಸುವ ಸಾಧ್ಯತೆ ಇದೆ. ಈಗಾಗಲೇ ರಾಜಸ್ಥಾನ ರಾಜ್ಯದಲ್ಲಿ ಇದು ಜಾರಿಗೆಬಂದಿದೆ.

ದೀಪಾವಳಿ  ಹಿನ್ನೆಲೆಯಲ್ಲಿ ಆಭರಣ ಮಳಿಗೆಗಳು, ಪೆಟ್ರೋಲ್ ಬಂಕ್ ಮತ್ತು ಮಾರುಕಟ್ಟೆಯ ಹಲವು ಮಳಿಗೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು.ವಾಹನಗಳ ಮೇಲೆ ಜಾತಿಸೂಚಕ ಅಥವಾ ಆಕ್ಷೇಪಾರ್ಹ ಬರಹಗಳಿಗೆ ಕಡಿವಾಣ ಹಾಕಬೇಕಿದೆ. ಇಂತ ಬರಹಗಳು ಜನರಲ್ಲಿ ಭೀತಿ, ಇರಿಮುರಿಸು ಉಂಟು ಮಾಡುತ್ತದೆ  ಎಂಬ ದೂರುಗಳು ಬಂದ  ಹಿನ್ನೆಲೆಯಲ್ಲಿ ಅಂಥ ವಾಹನಗಳ ವಿರುದ್ಧ ಕ್ರಮ ಜರುಗಿಸಲಾಯಿತು ಎಂದು ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಪ್ರತಿಕ್ರಿಯಿಸಿದರು .

ರಾಜಸ್ಥಾನದಲ್ಲಿ, ಜಾತಿ, ಧರ್ಮಸೂಚಕ ಸ್ಟಿಕರ್‌ಗಳು ಮಾತ್ರವಲ್ಲದೆ, ವೃತ್ತಿ ಸೂಚಕ, ರಾಜಕೀಯ ಪಕ್ಷದ ಜೊತೆ ಸಂಬಂಧ ಗುರುತಿಸುವಂತಹಾಸ್ಟಿಕ್ಕರ್‌ಗಳನ್ನು ಸಹ ಹಾಕಿಕೊಳ್ಳುವಂತಿಲ್ಲ. ಸ್ಟಿಕ್ಕರ್‌ಗಳು ಹಾಕಿಕೊಂಡರೆ ದಂಡ ಕಟ್ಟುವ ಜೊತೆಗೆಸ್ಟಿಕ್ಕರ್ ಗಳನ್ನು ಕಿತ್ತು ಹಾಕಲಾಗುತ್ತದೆ. ಹಾಗೆಯೇ ಇಲ್ಲಿಯೂ ಸಹ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ .

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸರ್ಕಾರಿ ಬಸ್‌ಗಳಲ್ಲಿ ಇಂದಿನಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಸ್ಟಾರ್ಟ್ …!

    ‘ಭಾಯ್ ದೂಜ್’ ಹಬ್ಬದ ಪ್ರಯುಕ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಮಹಿಳೆಯರಿಗೆ ಉಡುಗೊರೆ ನೀಡಿದ್ದಾರೆ. ಇಂದಿನಿಂದ ದೆಹಲಿಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ದೆಹಲಿಯಲ್ಲಿ ಸಂಚರಿಸುವ 55 ಸಾವಿರ ಸರ್ಕಾರಿ ಬಸ್‌(ಡಿಟಿಸಿ)ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಅವರಿಗೆ ಪಿಂಕ್ ಟಿಕೆಟ್ ನೀಡಲಾಗುತ್ತಿದೆ. ಅದರಲ್ಲಿ ಭಾಯ್ ದೂಜ್ ಪ್ರಯುಕ್ತ ನನ್ನ ಸಹೋದರಿಯರಿಗೆ ಈ ಅಣ್ಣನಿಂದ ಪ್ರೀತಿಯ ಉಡುಗೊರೆ ಎಂದು ಬರೆಯಲಾಗಿದೆ.ಮಹಿಳೆ ಬಸ್ಸಿನಲ್ಲಿ ಪಿಂಕ್ ಟಿಕಟ್ ಹಿಡಿದು ಕುಳಿತಿರುವ ಫೋಟೊವನ್ನು ದೆಹಲಿ ಸಾರಿಗೆ ಸಚಿವ ಕೈಲಾಶ್…

  • ಜ್ಯೋತಿಷ್ಯ

    ಇಂದು ಶುಕ್ರವಾರ 09/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಇಂದು ಶುಕ್ರವಾರ 09/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಇವತ್ತಿನ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದೆ. ಮನೆಯಲ್ಲಿನ ಕೆಲವು ಬದಲಾವಣೆಗಳು ಪ್ರೀತಿಪಾತ್ರರೊಡನೆ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯ ಸಮಸ್ಯೆಯ ಸಾಧ್ಯತೆಯಿದೆ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುವುದು. ಸರಿಯಾದ ಜ್ಞಾನ ಮತ್ತು ತಿಳುವಳಿಕೆಯ ನಂತರ ಸ್ನೇಹಿತರಾಗಿ. ಶತ್ರುವನ್ನು ಕೂಡಾ ಪ್ರೀತಿಸುವಿರಿ. ವೃಷಭ:- ನೀವು ವಿವಾದಗಳು ಮತ್ತು ಸಂಘರ್ಷಗಳಿಂದ ದೂರವಿರಬೇಕು. ಬಹುದಿನದ ನಿರೀಕ್ಷೆ ಕನಸು ಕೈಗೂಡುವುದು. ನಿಮ್ಮ ಪ್ರೀತಿಪಾತ್ರರು ಇಂದು…

  • ದೇವರು-ಧರ್ಮ

    ಹನುಮಂತ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

    ಮೇಷ ರಾಶಿ ಭವಿಷ್ಯ (Sunday, November 21, 2021) ಮೇಷ ರಾಶಿಯವರಿಗೆ ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಸ್ನೇಹಿತರು ಮತ್ತು ಸಂಬಂಧಿಗಳೊಡನೆ ಆನಂದಿಸಿ. ಮನ್ಮಥನ ಬಾಣದಿಂದ ತಪ್ಪಿಸಿಕೊಳ್ಳುವ ಅವಕಾಶ ಕಡಿಮೆಯಿದೆ. ನೀವಿಂದು ತಾರೆಯಂತೆ ಪ್ರಕಾಶಿಸಿ – ಆದರೆ ಕೇವಲ ಪ್ರಶಂಸಾರ್ಹ ಕೆಲಸಗಳನ್ನು ಮಾತ್ರ ಮಾಡಿ. ಇಂದು, ನಿಮ್ಮ ಸಂಗಾತಿ ಅವರ ಅದ್ಭುತವಾದ…

  • ಸಿನಿಮಾ

    CBSE ಪರೀಕ್ಷೆಯಲ್ಲಿ ಅತ್ತ್ಯುತ್ತಮ ಸಾಧನೆ ಮಾಡಿದ ನಟಿ ಸುಧಾರಾಣಿ ಮಗಳು…

    ಇತ್ತೀಚಿಗಷ್ಟೇ ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಇದರ ಬೆನ್ನಲ್ಲೆ ಈಗ ಸಿಬಿಎಸ್‍ಇ 12ನೇ ತರಗತಿಯ ಫಲಿತಾಂಶ ಕೂಡ ಹೊರಬಿದ್ದಿದೆ. ಈ ಪರೀಕ್ಷೆಯಲ್ಲಿ ನಟಿ ಸುಧಾರಾಣಿ ಪುತ್ರಿ ಅತಿಹೆಚ್ಚು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸುಧಾರಾಣಿ ಮಗಳು ನಿಧಿ ಸಿಬಿಎಸ್‍ಇ ಪರೀಕ್ಷೆಯಲ್ಲಿ 96.4% ಮಾರ್ಕ್ಸ್ ಪಡೆದಿದ್ದು, ಈ ಮೂಲಕ ಪೋಷಕರಿಗೆ ಹೆಮ್ಮೆ ತಂದಿದ್ದಾರೆ. ಈ ಸಂತೋಷವನ್ನು ನಟಿ ಸುಧಾರಾಣಿ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. “ಇದು ನಮ್ಮ ಜೀವನದಲ್ಲಿ ತುಂಬಾ ಸಂತೋಷದ ಸಮಯವಾಗಿದೆ. ನಮ್ಮ ಸುಬ್ಬಿಕುಟ್ಟಿ…

  • ಉಪಯುಕ್ತ ಮಾಹಿತಿ, ಗ್ಯಾಜೆಟ್

    ಮಿಲಿಯನ್ ಬಳಕೆದಾರರಿಗೆ ಜಿಯೋ ಕ್ರಿಸ್‌ಮಸ್’ಗೆ ನೀಡುತ್ತಿದೆ ಹೊಸ ಸೇವೆ.! ತಿಳಿಯಲು ಈ ಲೇಖನ ಓದಿ…

    ರಿಲಾಯನ್ಸ್ ಮಾಲೀಕತ್ವದ ಜಿಯೋ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಕೇವಲ ಡೇಟಾ-ಉಚಿತ ಕರೆಗಳ ಸೇವೆಯನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲಿಲ್ಲ. ಇದರ ಬದಲಿಗೆ ಹೊಸ ಮಾದರಿಯ ಆಪ್‌ ಸೇವೆಗಳನ್ನು ನೀಡುವ ಮೂಲಕ ಹೊಸ ಹಾದಿಯನ್ನು ಟೆಲಿಕಾಂ ಕಂಪನಿಗಳಿಗೆ ತೋರಿಸಿಕೊಟ್ಟಿತ್ತು.