ಸುದ್ದಿ

ವೇಶ್ಯೆಯರನ್ನೂ ಬಿಡದ ಕಾಮುಕರು, ಮೂವರ ಮೇಲೆ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ…!

1511

ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಮೂವರು ವೇಶ್ಯರನ್ನು 9 ಮಂದಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದಿರುವ ವಿದ್ರಾವಕ ಘಟನೆ ನಡೆದಿದೆ.

ದೆಹಲಿಯ ಲಜಪತ್ ನಗರದ ಮೆಟ್ರೋ ನಿಲ್ದಾಣದ ಬಳಿ ಗಿರಾಕಿಗಳಿಗಾಗಿ ಕಾಯುತ್ತಿದ್ದಾಗ ಓಲಾ ಕ್ಯಾಬ್ ನ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಬಂದ ಇಬ್ಬರು ಗಿರಾಕಿಗಳ ಸೋಗಿನಲ್ಲಿ ಮಹಿಳೆಯರನ್ನು ಸಂಪರ್ಕಿಸಿದ್ದಾರೆ. 3000 ಸಾವಿರ ರೂಗಳಿಗೆ ಡೀಲ್ ಮಾಡಿಕೊಂಡ ದುಷ್ಕರ್ಮಿಗಳು ಮಹಿಳೆಯರನ್ನು ನೊಯ್ಡಾದ ಸೆಕ್ಟರ್ 18ಗೆ ಬರುವಂತೆ ಹೇಳಿ 3600 ರೂ ಮುಂಗಡ ಹಣವನ್ನೂ ನೀಡಿದ್ದಾರೆ.

ಬಳಿಕ ಮಹಿಳೆಯರನ್ನು ಕರೆದುಕೊಂಡು ನೋಯ್ಡಾ ಸೆಕ್ಟರ್ 135 ಸಮೀಪದ ಫಾರ್ಮ್ ಹೌಸ್ ಗೆ ಕರೆದೊಯ್ದ ದುಷ್ಕರ್ಮಿಗಳು ಅಲ್ಲಿ ಮತ್ತೆ ಏಳು ಮಂದಿಯೊಂದಿಗೆ ಸೇರಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಗೈದಿದ್ದಾರೆ. ಈ ವೇಳೆ ಮಹಿಳೆಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಒಪ್ಪಂದ ಪ್ರಕಾರ ಇಬ್ಬರು ಮಾತ್ರ ಬರಬೇಕು. ಆದರೆ 9 ಮಂದಿ ಇದ್ದೀರಿ.. ನಮಗೆ ಈ ಒಪ್ಪಂದ ಬೇಡ. ನಾವು ದೆಹಲಿಗೆ ವಾಪಸ್ ಆಗುತ್ತೇವೆ ಎಂದಾಗ ಮಹಿಳೆಯರನ್ನು ಬೆದರಿಸಿದ ಕಾಮುಕರು ಒಬ್ಬರಾದ ಮೇಲೆ ಒಬ್ಬರಂತೆ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ.

ಅಲ್ಲದೆ ಮಹಿಳೆಯರನ್ನು ಥಳಿಸಿ ಅವರ ಬಳಿ ಇದ್ದ ಹಣವನ್ನೂ ಕಸಿದುಕೊಂಡಿದ್ದಾರೆ. ಈ ಸಂಬಂಧ ಮಹಿಳೆಯರು ನೋಯ್ಡಾ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ನಡೆದ ಫಾರ್ಮ್ ಹೌಸ್ ಗೆ ಬೀಗ ಜಡಿದಿದ್ದು, 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಜಗತ್ತನ್ನ ಆಳಲು ಸಿದ್ದವಾಗಿವೆ ಟೆಕ್ನಾಲಜಿ ಕಂಪನಿಗಳು…!

    ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ ಕಪ್ಪು ಪರದೆ ಕಂಡರೆ ..? ಫೇಸ್ ಬುಕ್, ಟ್ವಿಟ್ಟರ್, ಅಮೆಜಾನ್ ಮತ್ತು ಮೈಕ್ರೋ ಸಾಫ್ಟ್ ಯಾವುದೂ ಇಲ್ಲದ ಜಗತ್ತನ್ನ ಊಹಿಸಿಕೊಳ್ಳಿ…. ಇದು ನಿಜ ಜೀವನದಲ್ಲಿ ಆಗಿಬಿಟ್ಟರೆ? ಜಗತ್ತು ಎಂತಹ ಪ್ಯಾನಿಕ್ ಗೆ ಒಳಗಾಗಬಹದು? ಗಮನಿಸಿ ನೋಡಿ ಇಂದು ಜಗತ್ತನ್ನ ಆಳುತ್ತಿರುವುದು ಟೆಕ್ನಾಲಜಿ…

  • ಉಪಯುಕ್ತ ಮಾಹಿತಿ

    ರೇಲ್ವೆ ಹಳಿಗಳ ಜೆಲ್ಲಿಕಲ್ಲು ಹಾಕುವುದು ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ರೇಲ್ವೆ ಪ್ರಯಾಣ ಎಂದರೆ ಎಂತಹವರಿಗೂ ಒಂದು ರೀತಿ ರೋಮಾಂಚನ.ಅದರಲ್ಲೂ ಬೆಟ್ಟ ಗುಡ್ಡಗಳ ನಡುವೆ,ದಟ್ಟವಾದ ಕಾಡುಗಳ ನಡುವೆ ಹೊರಟಾಗ ರೈಲಿನ ಕಿಟಕಿಯಿಂದ,ಬಾಗಿಲಿನಲ್ಲಿ ಕುಳಿತು ಆ ಪ್ರಕೃತಿ ಸೌಂದರ್ಯವನ್ನು ನೋಡುವಾಗ ಎಂತಹವರಿಗೂ ಮೈ ಮನ ರೋಮಾಂಚನಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.

  • ಸುದ್ದಿ

    ನೀವು ʼಟೀʼ ಪ್ರಿಯರೆ …? ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ…

    ನೀವು ಟೀ ಕುಡಿಯುತ್ತೀರಾ…? ಹಾಗಿದ್ದರೆ ನಿಮ್ಮ ಬುದ್ಧಿಮತ್ತೆ ಭಾರಿ ಚುರುಕಾಗಿರುತ್ತೆ. ನಾವು ಇದನ್ನು ಹೇಳುತ್ತಿಲ್ಲ. ಅಧ್ಯಯನ ಒಂದು ಹೇಳುತ್ತಿದೆ. ಚಹಾ ಕುಡಿಯುವವರು ಮತ್ತು ಕುಡಿಯದವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಚಹಾ ಕುಡಿಯುವವರ ಮೆದುಳಿನ ಬೆಳವಣಿಗೆ ಚೆನ್ನಾಗಿರುವುದಲ್ಲದೆ, ಅವರ ಬುದ್ಧಿ ಮತ್ತೆ ಸಹ ಚುರುಕಾಗಿರುತ್ತದೆ ಎನ್ನುವ ಅಂಶ ತಿಳಿದು ಬಂದಿದೆ. ‘ನಮ್ಮ ಸಂಶೋಧನೆಯಲ್ಲಿ ತಿಳಿದು ಬಂದ ಮೊದಲ ಸಕಾರಾತ್ಮಕ ಅಂಶವೆಂದರೆ ನಿತ್ಯವೂ ಚಹಾ ಸೇವಿಸುವವರ ಮೆದುಳು ಚುರುಕಾಗಿರುವುದಲ್ಲದೆ, ವಯಸ್ಸಾದ ಬಳಿಕ ಕುಂಠಿತವಾಗುವ ಸಾಮರ್ಥ್ಯವನ್ನು ರಕ್ಷಣೆ ಮಾಡುವಲ್ಲಿ ಸಹಕರಿಸುತ್ತದೆ’ ಎಂದು ಸಿಂಗಾಪುರದ…

  • ದೇಶ-ವಿದೇಶ

    2018ರ ಮೊದಲ ದಿನದ ಯಾವ ದೇಶದಲ್ಲಿ ಎಷ್ಟು ಶಿಶುಗಳ ಜನನ..!ತಿಳಿಯಲು ಈ ಲೇಖನ ಓದಿ..

    2018ರ ಮೊದಲ ದಿನದ ಪ್ರಕಾರ ವಿಶ್ವದಲ್ಲಿ 3,86,000 ಲಕ್ಷ ಶಿಶುಗಳ ಜನನವಾಗಿದೆ. ಆದ್ರೆ ಇದರಲ್ಲಿ ಭಾರತದ ಪಾಲು 69,070. ಈ ಮೂಲಕ ಈ ವರ್ಷದ ಮೊದಲ ದಿನ ಹೆಚ್ಚು ಮಕ್ಕಳು ಜನಿಸಿದ ದೇಶದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ ಲಭಿಸಿದೆ.

  • ಸಿನಿಮಾ

    ಈ ನಟಿಯ ಮದುವೆಗೆ ಬೆತ್ತಲೆಯಾಗಿ ಹೋದ್ರೆ ಮಾತ್ರ ಪ್ರವೇಶವಂತೆ..!

    ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ತಾವು ದೀಪಕ್ ಕಲಾಲ್ ಎಂಬುವವರ ಜೊತೆ ಮದುವೆ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ತಾವು ಬೆತ್ತಲೆಯಾಗಿ ಮದುವೆಯಾಗುತ್ತೇನೆ ಎಂದು ಹೇಳುವುದರ ಮುಖಾಂತರ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಈಗ ಮತ್ತೊಂದು ಸುದ್ದಿಯಲ್ಲಿರುವ ರಾಖಿ ಸಾವಂತ್ ತಮ್ಮ ಮದುವೆಗೆ ಬೆತ್ತಲೆಯಾಗಿ ಬಂದರೆ ಮಾತ್ರ ಪ್ರವೇಶ ಇರಲಿದೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಕುರಿತು ಹೇಳಿಕೆ ಕೊಟ್ಟಿರುವ ರಾಖಿ ಸಾವಂತ್ ನಿಕ್…

  • ಸಿನಿಮಾ

    ಹೋಟೆಲ್ ನಿಂದ ಎಸ್ಕೇಪ್ ಹಾಗಿದ್ದೇಕೆ ನಟಿ ಪೂಜಾ ಗಾಂಧಿ!

    ಸ್ಯಾಂಡಲ್ ವುಡ್ ಸ್ಟಾರ್ ನಟಿಯ ವಿರುದ್ಧ ದೂರು ದಾಖಲಾಗಿದೆ. ಕನ್ನಡ ಸಿನಿರಸಿಕರನ್ನ ಮಳೆಯಲ್ಲಿ ಮಿಂದೇಳಿಸಿದ ನಟಿ ಹೋಟೆಲ್ ಬಿಲ್ ಕಟ್ಟದೆ ಕದ್ದು ಓಡಿ ಹೋಗಿರುವುದರಿಂದ ದೂರು ನೀಡಲಾಗಿದೆ. ಅಶೋಕ ಹೋಟೆಲ್ ಕಡೆಯಿಂದ ಪೂಜಾಗಾಂಧಿ ವಿರುದ್ಧ ನಗರದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.  ಪೂಜಾಗಾಂಧಿ ಒಟ್ಟು 4.5 ಲಕ್ಷ ಬಿಲ್ ಮಾಡಿ ಎಸ್ಕೇಪ್ ಆಗಿದ್ದರು. ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ….