ಸುದ್ದಿ

ತೆಲುಗು ನಟ ರಾಮ್‍ಗೆ ಪೊಲೀಸರಿಂದ 200 ರೂ. ದಂಡ…!

57

ಹೈದರಾಬಾದ್: ಧೂಮಪಾನ ನಿಷೇಧ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಟಾಲಿವುಡ್ ನಟ ರಾಮ್ ಪೋಥಿನೇನಿ ಅವರಿಗೆ ಸೋಮವಾರ ಹೈದರಾಬಾದ್ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ.

ಈ ಘಟನೆ ನಗರದ ಐತಿಹಾಸಿಕ ಚಾರ್ಮಿನಾರ್ ಬಳಿ ನಡೆದಿದೆ. ನಟ ರಾಮ್ ತಮ್ಮ ಮುಂಬರುವ ‘ಐಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದಲ್ಲಿ ಅವರ ಪಾತ್ರದ ಭಾಗವಾಗಿ ನಟ ಸಿಗರೇಟ್ ಸೇದಿದ್ದರು. ನಟ ರಾಮ್ ಸಿಗರೇಟ್ ನಿಷೇಧಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದರು. ಜೊತೆಗೆ ಹೈದರಾಬಾದ್ ಪೊಲೀಸರಿಗೂ ಟ್ಯಾಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಕೊಪ್ಟಾ) 2003 ರ ಅಡಿಯಲ್ಲಿ ದಂಡ ವಿಧಿಸಿದ್ದಾರೆ. ರಾಮ್ ಕೂಡ ದಂಡದ ಶುಲ್ಕವನ್ನು ಪಾವತಿಸಿದ್ದಾರೆ.

ಇಲ್ಲಿಯವರೆಗೆ ಚಾರ್ಮಿನಾರ್ ನಲ್ಲಿ ಧೂಮಪಾನ ಮಾಡಿದ್ದಕ್ಕಾಗಿ 20 ಜನರನ್ನು ಹಿಡಿದು ದಂಡ ವಿಧಿಸಲಾಗಿದೆ. ಇದೇ ರೀತಿ ಕಾರ್ಯಚರಣೆಯನ್ನು ಮುಂದುವರಿಸುತ್ತೇವೆ. ಇದರಿಂದ ಜನರಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಎಂದು ಸಬ್ ಇನ್ಸ್‍ಪೆಕ್ಟರ್ ಬಿ.ಪಾಂಡರಿ ಹೇಳಿದ್ದಾರೆ.
ಇಸ್ಮಾರ್ಟ್ ಶಂಕರ್’ ಸಿನಿಮಾವನ್ನು ಪ್ರಸ್ತುತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ಮಾಡುತ್ತಿದ್ದು, ನಭಾ ನಟೇಶ್ ಮತ್ತು ನಿಧಿ ಅಗರ್ವಾಲ್ ಸಿನಿಮಾದಲ್ಲಿ ಪ್ರಮುಖವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ಹುಷಾರ್’ ಹೆತ್ತವರನ್ನು ನಿರ್ಲಕ್ಷಿಸಿದರೆ ಜೈಲು ಪಾಲು ಗ್ಯಾರಂಟಿ..ಎಚ್ಚರ..!

    ತಮ್ಮನ್ನು ಹೆತ್ತು ಹೊತ್ತು ಬೆಳೆಸಿದವರನ್ನು ನಿರ್ಲಕ್ಷಿಸುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದರ ಪರಿಣಾಮ ವಯೋವೃದ್ಧರು ತಮ್ಮ ಜೀವನ ಸಂಧ್ಯಾಕಾಲದಲ್ಲಿ ಅಸಹಾಯಕರಂತೆ ಬದುಕಬೇಕಾಗಿದೆ. ಇದೀಗ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಇರುವ ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೆಲವೊಂದು ತಿದ್ದುಪಡಿಗಳನ್ನು ತರಲಾಗಿದ್ದು. ಇದರ ಜೊತೆಗೆ ಹೆತ್ತವರನ್ನು ನಿರ್ಲಕ್ಷಿಸುವವರಿಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ಮೂರು ತಿಂಗಳಿನಿಂದ ಆರು ತಿಂಗಳವರೆಗೆ ವಿಸ್ತರಿಸುವ ತೀರ್ಮಾನ ಕೈಗೊಳ್ಳಲಾಗಿದೆ….

  • ಆರೋಗ್ಯ

    ಊಟ ಮಾಡಿದ ಕೂಡಲೆ ಈ 7 ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು..! ಯಾಕೆ ಗೊತ್ತಾ.? ತಿಳಿಯಲು ಈ ಲೇಖನ ಓದಿ …

    ಇಂದು ನಮ್ಮ ಜೀವನ ವಿಧಾನದಲ್ಲಿ ನಾವು ಅನುಸರಿಸುತ್ತಿರುವ ಅಭ್ಯಾಸಗಳು, ಮಾಡುತ್ತಿರುವ ತಪ್ಪುಗಳಿಂದ ನಮಗೆ ಅನೇಕ ವಿಧದ ದೀರ್ಘಕಾಲಿಕ ಅನಾರೋಗ್ಯ ಸಮಸ್ಯೆಗಳು ಬರುತ್ತಿವೆ.

  • ಸುದ್ದಿ

    ಅಂತರ್ಜಾತಿ ಮದುವೆ ಆದ್ರೆ ಸಿಗುತ್ತೆ ಲಕ್ಷ ಲಕ್ಷ ಹಣ…ಹೆಚ್ಚಿನ ಮಾಹಿತಿಗೆ ಈ ಸುದ್ದಿ ನೋಡಿ

    ಅಂತರ್ಜಾತಿ ವಿವಾಹವಾದರೆ 3 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಅಂತರ್ಜಾತಿ ವಿವಾಹವಾಗುವ ಪರಿಶಿಷ್ಟ ಜಾತಿಯವರಿಗೆ ಪ್ರೋತ್ಸಾಹಧನ ನೀಡುತ್ತಿದ್ದು, ಇದನ್ನು ಪರಿಶಿಷ್ಟ ಪಂಗಡದ ಸಮುದಾಯಕ್ಕೂ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಪರಿಶಿಷ್ಟ ಪಂಗಡದವರಿಗೆ ಅಂತರ್ಜಾತಿ ವಿವಾಹವಾದರೆ 3 ಲಕ್ಷ ರೂ. ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಈ ಮೊದಲು 2 ಲಕ್ಷ ರೂ. ನೀಡಲಾಗುತ್ತಿತ್ತು. ಅದನ್ನು 3 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಪರಿಶಿಷ್ಟ ಪಂಗಡ ಸಮುದಾಯದ 51 ಜಾತಿಯವರು ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಎಸ್.ಟಿ. ಸಮುದಾಯದ ಹೆಣ್ಣುಮಕ್ಕಳನ್ನು…

  • ಸೌಂದರ್ಯ

    ಮೊಣಕೈ ಕಪ್ಪು ಕಲೆ ಹೋಗಲಾಡಿಸಲು ಏನು ಮಾಡಬೇಕು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡ್ತೇವೆ. ಆದ್ರೆ ಮೊಣಕೈ ಹಾಗೂ ಮೊಣಕಾಲನ್ನು ನಿರ್ಲಕ್ಷ್ಯಿಸ್ತೇವೆ. ಮೊಣಕೈ ಹಾಗೂ ಮೊಣಕಾಲು ಜಿಡ್ಡುಗಟ್ಟಿದಂತಾಗಿ ಕಪ್ಪಗೆ ಕಾಣಿಸುತ್ತದೆ.

  • ಸುದ್ದಿ

    ಮೆಟ್ರೋದಲ್ಲಿ ತೊಂದರೆಯುಂಟಾಗಿ – ಟ್ರ್ಯಾಕ್ ಮೇಲೆ ನಡೆದು ಸಾಗಿದ ಪ್ರಯಾಣಿಕರು….!

    ನವದೆಹಲಿ: ದೆಹಲಿ ಮೆಟ್ರೋ ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಹಳದಿ ಮಾರ್ಗದ ಮೆಟ್ರೋ ಮಾರ್ಗ ಮಧ್ಯೆಯೇ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಹಳಿ ಮೇಲೆ ನಡೆದುಕೊಂಡು ಹೋಗಿ ನಿಲ್ದಾಣ ತಲುಪಿದ್ದಾರೆ. ಮಂಗಳವಾದ ಬೆಳಗ್ಗೆ ಸುಮಾರು 9.30ಕ್ಕೆ ಹಳದಿ ಮಾರ್ಗದಲ್ಲಿ ಕುತಬ್ ಮಿನಾರ್ ನಿಲ್ದಾಣದಿಂದ ಮೆಟ್ರೋ ರೈಲು ನಿಧಾನವಾಗಿ ಚಲಿಸುತ್ತಿತ್ತು. ಹೀಗೆ ಚಲಿಸುತ್ತಿರುವಾಗಲೇ ಸುಲ್ತಾನಪುರ ನಿಲ್ದಾಣಕ್ಕೆ ಮೊದಲೇ ನಿಂತಿದೆ. ಕೊನೆಗೆ ಎಮೆರ್ಜೆನ್ಸಿ ಗೇಟ್‍ನಿಂದ ಪ್ರಯಾಣಿಕರನ್ನು ಹೊರ ಬಂದು, ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ…