ಸುದ್ದಿ

ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷದವರಿಂದ ಕುದುರೆ ವ್ಯಾಪಾರ: ಸಿಎಂ ಕಮಲ್‍ನಾಥ್ ಹೇಳಿಕೆ….!

34

ಲೋಕಸಮರದ ಫಲಿತಾಂಶಕ್ಕೂ ಮುನ್ನ ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದೆ. ಈಗಾಗಲೇ ಆಡಳಿತರೂಢ ಸರ್ಕಾರಕ್ಕೆ ಬಹುಮತವಿಲ್ಲ ವಿಶೇಷ ಅಧಿವೇಶನ ಕರೆಯಬೇಕೆಂದು ಬಿಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಿಎಂ ಕಮಲ್‍ನಾಥ್ ಬಿಜೆಪಿ ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.


ಸುಮಾರು 10 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಡಿಯಲ್ಲಿ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಮ್ಮ ಶಾಸಕರಿಗೆ ಆಫರ್ ಸುರಿಮಳೆಯ ಫೋನ್ ಕರೆಗಳು ಬರುತ್ತಿವೆ. ಬೇಕಾದರೆ ಆ 10 ಶಾಸಕರ ಹೆಸರನ್ನು ಬಹಿರಂಗಗೊಳಿಸಬಲ್ಲೆ ಎಂದು ಕಮಲ್ ನಾಥ್ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ ಪಕ್ಷ ತೊರೆಯಲು ಒಬ್ಬರಿಗೆ 50 ಕೋಟಿಯ ಆಫರ್ ನೀಡಲಾಗಿದೆ ಎಂದು ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ, ಬಿಜೆಪಿ ನಾಯಕರು ಯಾವೆಲ್ಲ ಆಫರ್ ನೀಡುತ್ತಿದ್ದಾರೆ ಎಂಬುವುದು ಗೊತ್ತಿಲ್ಲ ಎಂದರು. ಬಿಜೆಪಿ ಮಾತ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂಬ ವಾದವನ್ನು ಮಂಡಿಸುತ್ತಿದೆ.


2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 230 ಕ್ಷೇತ್ರಗಳ ಪೈಕಿ 114ರಲ್ಲಿ ಗೆಲುವಿನ ನಗೆ ಬೀರಿತ್ತು. ಬಿಜೆಪಿ 109, ಬಹುಜನ ಸಮಾಜ ಪಾರ್ಟಿ 2 ಮತ್ತು ಸಮಾಜವಾದಿ ಪಾರ್ಟಿ 1, ನಿರ್ದಲಿಯ ಪಕ್ಷ 4 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಬಿಎಸ್‍ಪಿ ಬೆಂಬಲ ಪಡೆದ ಕಾಂಗ್ರೆಸ್, ಮಧ್ಯಪ್ರದೇಶದಲ್ಲಿ ಕಮಲನಾಥ್ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು ಹೀಗೆ ಮಾಡಿ..!

    ತಲೆ ನೋವು ಕಾಣಿಸಿಕೊಳ್ಳಲು ಕಾರಣ ಒಂದಾ ಅಥವಾ ಎರಡ ಅನೇಕ ಕಾರಣಗಳಿವೆ. ಅದರಲ್ಲಿಯೂ ಅಧಿಕ ಒತ್ತಡ ಉಂಟಾದಾಗ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುತ್ತಾದೆ ಇಂತಹ ಸಂದರ್ಭದಲ್ಲಿ ಮಾತ್ರೆ ಬಳಸದೆ ಮುಕ್ತಿ ಪಡೆಯಬಹುದು. ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು 10 ಸುಲಭ ಪರಿಹಾರಗಳು 1) ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ತಲೆಗೆ ಲೇಪನ ಮಾಡಿಕೊಳ್ಳಬೇಕು ನಂತರ ನಿದ್ದೆ ಮಾಡಿ, ತಲೆನೋವು ಸರಿ ಹೋಗುತ್ತಾದೆ. 2) ಜಾಯಿಕಾಯಿಯ ಪುಡಿಯನ್ನು ತಣ್ಣಗಿನ ನೀರಲ್ಲಿ ಕಲಸಿ ಅದನ್ನು ದಿನದಲ್ಲಿ ಮೂರು ಭಾರೀ ಕುಡಿಯುವುದರಿಂದ ತಲೆನೋವು…

  • ಸುದ್ದಿ

    ನಮಗೆ ಶಂಕ್ರಣ್ಣನ ಬಗ್ಗೆ ಗೊತ್ತಿರದ ಕುತೂಹಲಕಾರಿ ವಿಚಾರವೊಂದನ್ನು ಅಂಚಿಕೊಂಡ ಜೈ ಜಗದೀಶ್…​!

    ಬಿಗ್​ಬಾಸ್​ ರಿಯಾಟಲಿ ಶೋ ದಿನದಿಂದ ದಿನಕ್ಕೆ ತನ್ನ ಕುತೂಹಲವನ್ನು ದ್ವಿಗುಣಗೊಳಿಸುತ್ತಿದೆ. ಚಿತ್ರರಂಗದಲ್ಲಿ ಘಟಿಸಿಹೋದಂತಹ ಹಲವು ಘಟನೆಗಳು ಬಿಗ್​ಬಾಸ್​ನಲ್ಲಿ ಅನಾವರಣಗೊಳ್ಳುತ್ತಿದೆ. ಮೊನ್ನೆ ಶಂಕರ್​ನಾಗ್​ ಹಾಗೂ ಮಂಜುಳಾ ಬಗ್ಗೆ ರವಿಬೆಳಗೆರೆ ಅವರು ಮಾತನಾಡಿದ್ದರು. ಇದೀಗ ಹಿರಿಯ ನಟ ಜೈ ಜಗದೀಶ್ ಶಂಕರ್​ನಾಗ್​ ಬಗ್ಗೆ ಕುತೂಹಲಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ನಿನ್ನೆ ನಡೆದ ಸಂಚಿಕೆಯಲ್ಲಿ ಜೈ ಜಗದೀಶ್​ ಇತರೆ ಸ್ಪರ್ಧಿಗಳ ಜತೆ ಮಾತನಾಡುವಾಗ ಒಂದು ಪ್ರಶ್ನೆಯನ್ನು ಮುಂದಿಟ್ಟರು. ಒಬ್ಬ ಫೇಮಸ್​ ನಟ ತನ್ನ ಮಾರ್ಕೆಟ್​ ಬಿದ್ದಾಗ ವ್ಯಾನ್​ ಒಳಗೆ ಕ್ಯಾಂಟೀನ್​ ಇಟ್ಟುಕೊಂಡು ಓಡಾಡುತ್ತಿದ್ದರು….

  • ನೀತಿ ಕಥೆ

    ಸ್ವರ್ಗ..ನರಕಗಳ ನಡುವೆ ಇರುವ ವ್ಯತ್ಯಾಸವೇನೆಂದು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ …

    ಅದೊಂದು ಶಾಲೆ…ಅದರಲ್ಲಿ ಒಬ್ಬ ವಿದ್ಯಾರ್ಥಿಗೆ ಯಾವುದಾದರೂ ಹೊಸ ವಿಷಯವನ್ನು ತಿಳಿದುಕೊಳ್ಳುವು ದೆಂದರೆ ಬಹಳ ಇಷ್ಟ. ಈ ನಿಟ್ಟಿನಲ್ಲಿ ಒಂದು ದಿನ ಆ ಹುಡುಗ ತನ್ನ ಟೀಚರ್ ಬಳಿ ಸ್ವರ್ಗ ಹಾಗೂ ನರಕ ಎಂದರೇನು. ಇವೆರಡರ ನಡುವೆ ಇರುವ ವ್ಯತ್ಯಾಸವೇನು? ಎಂದು ಪ್ರಶ್ನಿಸುತ್ತಾನೆ.

  • ಸುದ್ದಿ

    ಗಂಡು ಹೆಣ್ಣು ಹಾರ ಬದ್ಲಾಯಿಸಿಕೊಂಡ ನಂತರ ವರನ ದುರ್ಮರಣ……?ಯಾಕೆ

    ವಧುವಿನೊಂದಿಗೆ ಹಾರ ಬದಲಾಯಿಸಿಕೊಂಡ ನಂತರ ಸಂಭ್ರಮಾಚರಣೆಯಲ್ಲಿ ಸ್ನೇಹಿತ ಗುಂಡು ಹಾರಿಸಿದ್ದ ಪರಿಣಾಮ ಬುಲೆಟ್ ವರನಿಗೆ ಬಿದ್ದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.ಸತ್ಯೇಂದ್ರ ಕುಮಾರ್ ಮೃತ ವರ. ಈ ಘಟನೆ ಭಾನುವಾರ ರಾತ್ರಿ ಶಹಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡು ಬಿದ್ದ ತಕ್ಷಣ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ವರನ ಸಹೋದರನಿಗೂ ಗಾಯಗಳಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಏನಿದು ಪ್ರಕರಣ? ಮೃತ ಕುಮಾರ್ ಮದುವೆ ಭಾನುವಾರ ನಿಗದಿಯಾಗಿತ್ತು….

  • ಸುದ್ದಿ

    ಹೊಸ ವರ್ಷದ ಆರಂಭದಲ್ಲಿ ಮದ್ವೆ ಮಾಡಿಕೊಳ್ಳಬೇಕು ಎಂದಿದ್ದವರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್..!

    2019 ರ ಜನವರಿಯಿಂದ ಮಾರ್ಚ್ ವೇಳೆ ವಿವಾಹವಾಗಬೇಕೆಂದು ಪ್ಲಾನ್ ಮಾಡಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜನತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶಾಕ್ ನೀಡಿದೆ. ಕುಂಭ ಮೇಳದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ವಿವಾಹದ ದಿನಾಂಕ ನಿಗದಿಯಾಗಿದ್ದರೆ ಅದನ್ನು ಮುಂದೂಡಿ ಇಲ್ಲವೇ ಸ್ಥಳ ಬದಲಾಯಿಸಿಕೊಳ್ಳಿ ಎಂದು ಸೂಚಿಸಿದೆ. ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಹಾಗೂ ಪುಷ್ಯ ಪೂರ್ಣಿಮಾದಂದು ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ನಾನ ಮಾಡಲಾಗುತ್ತದೆ. ಹಾಗೆಯೇ ಫೆಬ್ರವರಿಯಲ್ಲಿ ಮೌನಿ ಅಮಾವಾಸ್ಯೆ, ಬಸಂತ ಪಂಚಮಿ ಹಾಗೂ…

  • ಸುದ್ದಿ

    ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು,ಡಿಲೀಟ್ ಮತ್ತು ತಿದ್ದುಪಡಿ ಮಾಡಲು ಅವಕಾಶ,ಇಲ್ಲಿದೆ ನೋಡಿ ಎಲ್ಲಾ ಮಾಹಿತಿ,.!

    18 ವರ್ಷಆಗಿರುವಯುವಕ-ಯುವತಿಯರೇ…  ನೀವು ಇನ್ನೂ ಮತದಾನದ ಹಕ್ಕು ಪಡೆದುಕೊಂಡಿಲ್ಲವೇ?,ಪಡೆದಿದ್ದರೂ ಏನಾದ್ರೂ ತಿದ್ದುಪಡಿಮಾಡಬೇಕೆ?ಚಿಂತೆಮಾಡ್ಬೇಡಿ.ಅಗತ್ಯ ದಾಖಲೆಗಳೊಂದಿಗೆ ರೆಡಿಯಾಗಿರಿ.ನಿಮ್ಮಮನೆಗೆ ಬಂದು ಮತದಾರರ ಪಟ್ಟಿಗೆ ಹೆಸರು ಬರೆದುಕೊಂಡುಹೋಗುತ್ತಾರೆ.ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಇದು ಉತ್ತಮ ಅವಕಾಶವಾಗಿದೆ.ಮಿಸ್ಮಾಡ್ಕೋಬೇಡಿ.ಹಾಗಿದ್ರೆ ಇದಕ್ಕೆ ದಾಖಲಾತಿಗಳೇನುಬೇಕು ಅಂತೀರಾ?ಮುಂದೆ ಓದಿ ಎಲ್ಲಾ ಮಾಹಿತಿ ಇದೆ. ಬೆಂಗಳೂರು, ಮತದಾರರ ಪಟ್ಟಿಯ ಪರಿಶೀಲನೆ ದೃಢೀಕರಣ, ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದುಪಡಿಗೆ ಚುನಾವಣಾ ಆಯೋಗ ಮುಂದಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸೆಪ್ಟೆಂಬರ್ 1 ರಿಂದ 30ರ ತನಕ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ…