ಸುದ್ದಿ

ಫ್ರೆಂಡ್​ಶಿಪ್ ಡೇಗೆ ಸ್ನೇಹಿತರೊಂದಿಗೆ ಪವರ್ ​ಸ್ಟಾರ್ ಪುನೀತ್ ಜಾಲಿ ಟ್ರಿಪ್…!

39

ಪವರ್​ ಫುಲ್ ಆ್ಯಕ್ಟಿಂಗ್, ಪವರ್ ಫುಲ್ ಡ್ಯಾನ್ಸ್, ಪವರ್ ಫುಲ್ ವಾಯ್ಸ್, ಫುಲ್ ಪವರ್​ನಲ್ಲೇ ಆ್ಯಕ್ಷನ್. ಪವರ್​ ಸ್ಟಾರ್ ಎನ್ನಲು ಇನ್ನೇನು ಬೇಕು ಅಲ್ಲವೇ, ಹೌದು ಕನ್ನಡದ ‘ರಾಜರತ್ನ’ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹೋದಲ್ಲಿ ಬಂದಲ್ಲಿ ಗೆಳೆಯರಿರುವುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ.

ಅದರಲ್ಲೂ ಬಿಡುವು ಸಿಕ್ಕಾಗೆಲ್ಲಾ ಅಪ್ಪು ಗೆಳೆಯರೊಂದಿಗೆ ಟ್ರಿಪ್ ಹೋಗುತ್ತಾರೆ ಎಂಬ ಮಾತಿದೆ. ಹಾಗಿದ್ರೆ ಸ್ನೇಹಿತರ ದಿನ ಬುಟ್​ ಬಿಡ್ತಾರಾ ಇಲ್ಲ ಎಂಬುದಕ್ಕೆ ನಟ ಪುನೀತ್ ರಾಜ್​ಕುಮಾರ್ ಅವರು ಹಾಕಿರುವ ಈ ವಿಡಿಯೋ ಸಾಕ್ಷಿ. ಫ್ರೆಂಡ್​ಶಿಪ್ ದಿನವಾದ ಭಾನುವಾರ ಪ್ರೇಮಿಗಳ ಪಾಲಿನ ಸ್ವರ್ಗದಂತಿರೋ ‘ನಂದಿಬೆಟ್ಟ’ಕ್ಕೆ ಅಪ್ಪು ಅ್ಯಂಡ್ ಟೀಮ್ ಭೇಟಿ ಕೊಟ್ಟಿದೆ. ‘ಯುವರತ್ನ’ ಚಿತ್ತೀಕರಣದಿಂದ ಬಿಡುವು ಮಾಡಿಕೊಂಡಿರುವ ಅಪ್ಪು ತಮ್ಮದೇ ಕಾರಿನಲ್ಲಿ ಫುಲ್ ಜೋಷ್​ನಲ್ಲೇ ಜಾಲಿ ರೈಡ್ ಹೋಗಿದ್ದಾರೆ.

ಇಬ್ಬರು ಗೆಳೆಯರೊಂದಿಗೆ ಮಿನಿ ಕೂಪರ್​ನಲ್ಲಿನ ಒಂದು ಸುಂದರ ಪ್ರಯಾಣದ ವಿಡಿಯೋ ತುಣುಕನ್ನು ಅಪ್ಪು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರಕೃತಿ ರಮಣೀಯ ತಾಣಗಳಲ್ಲಿನ ಸುತ್ತಾಟದ ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಕರುನಾಡ ‘ಯುವರತ್ನ’ನಿಗೆ ಅಭಿಮಾನಿಗಳು ಗೆಳೆಯರ ದಿನದ ಶುಭಾಶಯ ತಿಳಿಸಿದ್ದಾರೆ.

ಸದ್ಯ ‘ಯುವರತ್ನ’ ಚಿತ್ರದ ಚಿತ್ರೀಕರಣದಲ್ಲಿ ಅಪ್ಪು ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿ ಅಪ್ಪು ಕಾಲೇಜು ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂತೋಷ್​ ಆನಂದ್​ರಾಮ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಸಾಯೆಷಾ ಸೈಗಲ್ ಬಣ್ಣ ಹಚ್ಚುತ್ತಿದ್ದಾರೆ. ಹಾಗೆಯೇ ಚಿತ್ರದ ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ್, ಪ್ರಕಾಶ್ ರಾಜ್, ರಾಧಿಕಾ ಶರತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಕಾಣಿಸಿಕೊಳ್ಳುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹೆತ್ತ ತಾಯಿಗೆ ಈ ಮಗ ಮಾಡಿರುವ ಕೆಲಸ ಕೇಳಿದ್ರೆ ನೀವೂ ಬೆಚ್ಚಿ ಬೀಳ್ತೀರಾ..

    ಹೆತ್ತು ಹೊತ್ತು ಸಾಕಿ.. ಮಕ್ಕಳನ್ನು ದೊಡ್ಡವರನ್ನಾಗಿ ಮಾಡುತ್ತಾರೆ.. ಮಕ್ಕಳು ದೊಡ್ಡ ದೊಡ್ಡ ಮನೆಯಲ್ಲಿ ಇರಬೇಕು.. ದೊಡ್ಡ ಮನುಷ್ಯರಾಗಿ ಬದುಕಬೇಕು ಎಂದೆಲ್ಲಾ ಆಸೆ ಪಡುತ್ತಾರೆ.. ಆದರೆ ಅದ್ಯಾಕೊ ಕೆಲವು ಪಾಪಿ ಹೃದಯಗಳು ಅಷ್ಟೆಲ್ಲಾ ಆಸೆ ಪಟ್ಟ ಹೆತ್ತವರನ್ನು ಅಯ್ಯೋ ಎನಿಸಿ ನರಕದ ದಾರಿಯನ್ನು ಸುಗಮ ಮಾಡಿಕೊಳ್ಳುತ್ತಾರೆ.. ಇಂತಹ ಮನಕಲುಕುವ ಘಟನೆ ನಡೆದಿದ್ದು ಮಗ ತನ್ನ ಪತ್ನಿಯ ಜತೆಗೂಡಿ ಹೆತ್ತತಾಯಿಯನ್ನೇ 3 ತಿಂಗಳಿಂದ ಗೃಹಬಂಧನದಲ್ಲಿರಿಸಿದ್ದ ಘಟನೆ, ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಬಿಸನಹಳ್ಳಿಯಲ್ಲಿ ನಡೆದಿದ್ದು, ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ…

  • ಸುದ್ದಿ

    ಎಲ್ಐಸಿ ಪಾಲಿಸಿ ಹೊಂದಿರುವವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ…!ಇದನ್ನೊಮ್ಮೆ ಓದಿ..,

    ಭಾರತೀಯ ಜೀವ ವಿಮಾ ನಿಗಮ ಪಾಲಿಸಿ ಹೂಡಿಕೆದಾರರ  ಹಣ ಭದ್ರವಾಗಿದೆ.ಸುಳ್ಳು ವದಂತಿಗಳನ್ನು  ನಂಬಬೇಡಿ ಎಂದು ನಿಗಮದಿಂದ ಸ್ಪಷ್ಟನೆ ನೀಡಲಾಗಿದೆ. ಭಾರತೀಯ ವಿಜಯ ವಿಮಾ ನಿಗಮ(ಎಲ್ಐಸಿ) ನಷ್ಟದಲ್ಲಿದೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ  ಸುಳ್ಳು ಸುದ್ದಿಗಳು ಹರಿದಾಡುತ್ತಿರುವುದರ  ಕುರಿತಾಗಿ ಸ್ಪಷ್ಟನೆ ನೀಡಿರುವ ಎಲ್ಐಸಿ ಇದು ಸಂಪೂರ್ಣ ಸುಳ್ಳು ಎಂದು ಹೇಳಿಕೆ ನೀಡಿದೆ. ಎಲ್ಐಸಿ ಭಾರಿ ನಷ್ಟದಲ್ಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳಾಗಿದೆ.ಪಾಲಿಸಿದಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸಂಸ್ಥೆಯ ಆರ್ಥಿಕ ಶಕ್ತಿ ಉತ್ತಮವಾಗಿದೆ ಎಂದುಹೇಳಲಾಗಿದೆ,ಸುಳ್ಳು…

  • ಭವಿಷ್ಯ

    ಈ 4 ರಾಶಿಯಲ್ಲಿ ಜನಿಸಿದ ಯುವಕ ಮತ್ತು ಯುವತಿಯರು ಸುಂದವರಾಗಿ ಇರುತ್ತಾರೆ..! ನಿಮ್ಮ ರಾಶಿಯು ಇದೆಯಾ ನೋಡಿ?

    ಸಾಮಾನ್ಯವಾಗಿ ವ್ಯಕ್ತಿ ಹೊಂದಿರುವ ಸೌಂದರ್ಯ ತನ್ನ ತಂದೆ ತಾಯಿ ಅಥವಾ ಅಘೋಷಿತವಾಗಿ ಬಂದಿರುವ ಸಂಪತ್ತು ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಹೊಂದಿರುವ ಮಾನಸಿಕ ಮತ್ತು ದೈಹಿಕ ಗುಣಗಳು ಅವನ ಜಾತಕ ಕುಂಡಲಿ ಹಾಗೂ ಅವನ ರಾಶಿ ಚಕ್ರಗಳಿಗೆ ಅನುಗುಣವಾಗಿ ಇರುತ್ತವೆ ಎಂದು ಹೇಳಲಾಗುತ್ತದೆ. ವ್ಯಕ್ತಿ ಹುಟ್ಟುವ ಸಮಯದಲ್ಲಿ ಅವನ ಗ್ರಹಗತಿಗಳು ಯಾವ ಸ್ಥಾನದಲ್ಲಿ ಇದ್ದವು ಎನ್ನುವುದನ್ನು ಅನುಸರಿಸಿ ದೇಹ ಮತ್ತು ಮಾನಸಿಕ ಸ್ಥಿತಿಯ ರಚನೆಯಾಗುತ್ತದೆ ಎನ್ನಲಾಗಿದೆ. ಒಂದು ಅಂದಾಜಿನ ಪ್ರಕಾರ 12 ರಾಶಿ ಚಕ್ರಗಳಲ್ಲಿ…

  • ಉಪಯುಕ್ತ ಮಾಹಿತಿ

    ದಯವಿಟ್ಟು ಊಟ ತಿಂದ ತಕ್ಷಣ ಈ 5 ತಪ್ಪುಗಳನ್ನು ಮಾಡಲೇಬೇಡಿ..ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ಊಟ ಆದ ತಕ್ಷಣ ಮಲ್ಕೋಳ್ಳೋ ಅಭ್ಯಾಸ ನಮ್ಮಲ್ಲಿ ತುಂಬಾ ಜನ್ರಿಗೆ ಇದ್ದೇ ಇರತ್ತೆ. ಹಾಗಂತ ಇದು ಒಳ್ಳೆ ಅಭ್ಯಾಸ ಅನ್ಕೊಂಡ್ರಾ? ಖಂಡಿತ ಇಲ್ಲ.ಆರೋಗ್ಯದ ವಿಷ್ಯಕ್ಕೆ ಬಂದಾಗ ಈ ಅಭ್ಯಾಸದ ಜೊತೆಗೆ ಇನ್ನೂ ಹಲವು ವಿಷ್ಯಗಳು ಊಟವಾದ ತಕ್ಷಣ ಮಾಡೋದು ಒಳ್ಳೇದಲ್ಲ .

  • ಆರೋಗ್ಯ

    ಶೇಂಗಾವನ್ನು ನೀರಿನಲ್ಲಿ ನೆನೆಸಿ ತಿಂದರೆ ಇಷ್ಟೊಂದು ಪ್ರಯೋಜನನಾ! ಈ ಅರೋಗ್ಯ ಮಾಹಿತಿ ನೋಡಿ.

    ನಾವು ಸಾಮಾನ್ಯವಾಗಿ ಹೊಣಗಿದ ಅಥವಾ ಬೇಯಿಸಿದ ಶೇಂಗಾ ತಿನ್ನುವುದೇ ಜಾಸ್ತಿ ಆದರೆ ಅದೇ ಶೇಂಗಾವನ್ನು ನೀರಿನಲ್ಲಿ ನೆನೆಸಿ ತಿಂದರೆ ಹಲವಾರು ಆರೋಗ್ಯಕಾರಿ ಲಾಭಗಳಿವೆ. ಕ್ಯಾನ್ಸರ್‌ ಸೆಲ್‌ ದೊಡ್ಡದಾಗುವುದಕ್ಕೆ ತಡೆ :ನೀರಿನಲ್ಲಿ ನೆನೆಸಿದ ಶೇಂಗಾ ಸೇವನೆ ಮಾಡೋದರಿಂದ ಕ್ಯಾನ್ಸರ್‌ ಸೆಲ್ಸ್‌ ದೊಡ್ಡದಾಗೋದನ್ನು ತಡೆಯಬಹುದು. ಜೊತೆಗೆ ಬ್ಲಡ್‌‌ ಸರ್ಕ್ಯುಲೇಶನ್‌ ಚೆನ್ನಾಗಿ ಆಗುವಂತೆ ಮಾಡುತ್ತದೆ. ನಿಮ್ಮ ಮಸಲ್ಸ್‌ ಆಕರ್ಷಕವಾಗುತ್ತದೆ :ಕೆಲವೊಮ್ಮೆ ಶರೀರದಲ್ಲಿ ಹೇಗೇಗೊ ಮಸಲ್ಸ್‌‌ ಬರುತ್ತದೆ. ಇದರಿಂದ ನಿಮ್ಮ ಲುಕ್‌ ಹಾಳಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ನೀವು ಪ್ರತಿದಿನ ಶೇಂಗಾವನ್ನು ನೀರಿನಲ್ಲಿ…