ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎರಡನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. ಕೆಲ ವಸ್ತುಗಳು ಹಾಗೂ ಸೇವೆಗಳು ದುಬಾರಿಯಾದರೆ ,ಕೆಲವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ.ಯಾವ ವಸ್ತುಗಳ ಬೆಲೆ ಏರಿಕೆಯಾಗಲಿದೆ? ಯಾವ ವಸ್ತುಗಳ ಬೆಲೆ ಇಳಿಕೆಯಾಗಲಿದೆ? ಎಂಬುದರ ಪೂರ್ತಿ ವಿವರ ಇಲ್ಲಿದೆ ನೋಡಿ..
ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬುದರ ವಿವರ ಇಲ್ಲಿದೆ.
ಪ್ರಮುಖವಾಗಿ ಚಿನ್ನ ಮತ್ತು ಆಭರಣಗಳ ದರ ಏರಿಕೆಯಾಗಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸೆಸ್ ಏರಿಕೆಯಾಗಿದ್ದು, ಒಂದು ಲೀಟರ್ ಮೇಲೆ 1 ರೂಪಾಯಿ ದರ ಏರಿಕೆಯಾಗಿದೆ. ಇನ್ನುಳಿದಂತೆ, ತಂಬಾಕು, ತರಕಾರಿ, ಹಣ್ಣಿನ ಜ್ಯೂಸ್, ಸನ್ ಗ್ಲಾಸ್, ಸುಗಂಧ ದ್ರವ್ಯಗಳು, ಅಡುಗೆ ತಯಾರಿಸಲು ಬಳಸುವ ವಸ್ತುಗಳು, ಮೆನಿಕ್ಯೂರ್ ಮತ್ತು ಪೆಡಿಕ್ಯೂರ್,ಸಿಸಿ ಕ್ಯಾಮರಾ ದುಬಾರಿ,ಪೈಪ್, ಟೈಲ್ಸ್, ಡಿವಿಡಿ ಬೆಲೆ ಏರಿಕೆ. ಮದ್ಯ, ಸಿಗರೇಟ್,ಮೊಬೈಲ್, ಟಿವಿ, ಫ್ರಿಡ್ಜ್, ರಬ್ಬರ್ ಬೆಲೆ ಏರಿಕೆ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ ವಸ್ತುಗಳು
ಸಿಸಿಟಿವಿ, HD ಕ್ಯಾಮೆರಾ, ಫರ್ನಿಚರ್ಸ್,ಆಟೋ ಪಾರ್ಟ್ಸ್,ವಾಟರ್ ಬ್ಲಾಕಿಂಗ್ ಟೇಪ್ಸ್, ಸೆರಾಮಿಕ್ ಟೈಲ್ಸ್,ಗೋಡಂಬಿ, ತಾಳೆ ಎಣ್ಣೆ, ಇಂಡಸ್ಟ್ರಿಯಲ್ ಆಸಿಡ್,ಪ್ಲಾಸ್ಟಿಕ್, ಸೀಲಿಂಗ್ ಕವರ್, ಫ್ಲೋರ್ ಕವರ್,AC ಹಾಗೂ ಎಲೆಕ್ಟ್ರಿಕ್ ವೈರ್ಗಳ ಬೆಲೆ ಏರಿಕೆ,ವಾಹನಗಳ ವೈಪರ್, ಸಿಗ್ನಲಿಂಗ್ ವಸ್ತುಗಳು ತುಟ್ಟಿ,ಇಂಜಿನ್ ಚಾಸಿಸ್, ವಾಹನದ ಲಾಕ್,ದ್ವಿಚಕ್ರ ವಾಹನಗಳ ಲೈಟಿಂಗ್ಸ್, ಹಾರ್ನ್ ಸಾಮಾಗ್ರಿ ತುಟ್ಟಿ ದುಬಾರಿಯಾಗಿದೆ.
ಇನ್ನು ಯಾವೆಲ್ಲ ವಸ್ತುಗಳ ಬೆಲೆ ಇಳಿಕೆಯಾಗಿದೆ ಅನ್ನೋದನ್ನು ಗಮನಿಸೋದಾದರೇ, ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ನೀಡಲಾಗಿದ್ದು, ಇ ವಾಹನಗಳ ಜಿ ಎಸ್ ಟಿ ದರವನ್ನು ಶೇಕಡಾ 12ರ ಬದಲು ಶೇಕಡಾ 5ಕ್ಕೆ ಇಳಿಕೆ ಮಾಡಲಾಗಿದೆ. ಗೃಹ ಸಾಲ ಇಳಿಕೆ ಕಿಡ್ನಿ ಕಸಿ, ಡಯಾಲಿಸಿಸ್ ಯಂತ್ರದ ಬೆಲೆ ಇಳಿಕೆ.ಸ್ವದೇಶಿ ಎಲೆಕ್ಟ್ರಾನಿಕ್ ಉತ್ಪನ್ನಗಳು,ಎಲೆಕ್ಟ್ರಿಕ್ ಕಾರು-ಬೈಕ್,ಆನ್ಲೈನ್ ವಹಿವಾಟು ಡಿಜಿಟಲ್ ಪಾವತಿಗೆ ಶುಲ್ಕ ಇಲ್ಲ,ಗೃಹಸಾಲದ ಮೇಲಿನ ಬಡ್ಡಿ ಕಡಿತ,ರಕ್ಷಣಾ ಸಾಮಗ್ರಿ,ಪಾಮ್ ಆಯಿಲ್ಫ್ಯಾಟಿ ಆಯಿಲ್ ಪೇಪರ್ ಅಗ್ಗ ,ಸೌರಫಲಕ, ಇಟ್ಟಿಗೆ, ಕಿವುಡು ಮೂಗರಿಗೆ ಬಳಸುವ ಸಾಧನಗಳು ಮೇಲಿನ ಬೆಲೆ ಇಳಿಕೆಯಾಗಿದೆ. ಒಟ್ಟಿನಲ್ಲಿ 2019 ರಲ್ಲಿ ಮೋದಿ ಬಜೆಟ್ ನಿರಾಶಾದಾಯ ಎಂದೇ ಬಣ್ಣಿಸಲಾಗುತ್ತಿದ್ದು ಮಧ್ಯಮವರ್ಗದ ಜನರ ಜೀವನಕ್ಕೆ ನೆರವಾಗುವಂತ ಯಾವುದೇ ಸೌಲಭ್ಯಗಳಿಲ್ಲ ಎಂಬ ಟೀಕೆಗೊಳಗಾಗುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ಯಾಂಡಲ್ವುಡ್ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರು ವಂಚನೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬುಧವಾರ ಡಿಸಿಪಿ ರವಿ ಕುಮಾರ್ ಕಚೇರಿಗೆ ಆಗಮಿಸಿದ ಅವರು 1.60 ಕೋಟಿ ರೂ. ವಂಚನೆ ವಿರುದ್ಧ ದೂರು ದಾಖಲಿಸಿದ್ದಾರೆ. ಕನ್ನಡದಲ್ಲಿ ನಿರ್ಮಾಪಕ, ನಿರ್ದೇಶಕ, ನಟರಾಗಿ ಗುರುತಿಸಿಕೊಂಡಿರುವ ಎಸ್. ನಾರಾಯಣ್ ಅವರು ಕಳೆದ ವರ್ಷ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದರು. ಮೂವರು ನಿರ್ಮಾಪಕರು ಸೇರಿ ನಿರ್ಮಿಸಬೇಕಿದ್ದ ಆ ಸಿನಿಮಾದ ಮುಹೂರ್ತ ಕೂಡ ನೆರವೇರಿಸಲಾಗಿತ್ತು. ಇದೇ ವೇಳೆ ಪಾಲುದಾರರು ಸಂಭಾವನೆ ಬದಲು ನಿವೇಶನ ಖರೀದಿಸುವಂತೆ ಎಸ್.ನಾರಾಯಣ್…
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಹಂತದ ಐದು ಸಾವಿರ ಸೈಟ್ಗಳ ಹಂಚಿಕೆಗೆ ಫಲಾನುಭವಿಗಳ ಅಂತಿಮ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ, ಮತ್ತೆ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ಮುಂದಾಗಿದೆ.
ಹೋಟೆಲ್ನಲ್ಲಿ ಆಹಾರವನ್ನು ಎಂಜಲು ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಹೋಟೆಲ್ನ್ನು ಸೀಲ್ಡೌನ್ ಮಾಡಿದ್ದಾರೆ. ನಗರದ ಹೋಟೆಲ್ ಒಂದರಲ್ಲಿ ಹೋಟೆಲ್ ಮಾಲೀಕನ ಮಗ ಗ್ರಾಹಕರಿಗೆ ನೀಡುವ ಆಹಾರವನ್ನು ಎಂಜಲು ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಹೋಟೆಲ್ ಬಾಗಿಲು ಹಾಕಿಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ. ಓರ್ವ ವ್ಯಕ್ತಿ…
ವಿಶ್ವ ಮಹಿಳಾ ದಿನದಂದು ಬಾಲಿವುಡ್ ಸ್ಟಾರ್ಸ್ ಪತ್ನಿಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬಾಲಿವುಡ್ ನ ಕೆಲ ನಟರ ಪತ್ನಿಯರು ಕೇವಲ ಸ್ಟಾರ್ಸ್ ಪತ್ನಿಯರಾಗಿ ಗುರುತಿಸಲ್ಪಡುವುದಿಲ್ಲ. ತಮ್ಮದೇ ಬ್ಯುಸಿನೆಸ್ ಶುರು ಮಾಡಿ, ಅದ್ರಲ್ಲಿ ಹೆಸ್ರು ಮಾಡಿದವರ ಸಂಖ್ಯೆ ಸಾಕಷ್ಟಿದೆ. ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್. ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಕದ್ದವರು ರಜನಿಕಾಂತ್. ಅವ್ರ ಪತ್ನಿ ಲತಾ ತಮ್ಮ ವೃತ್ತಿ ಜೀವನದಲ್ಲಿ ತುಂಬಾ ಬ್ಯುಸಿಯಾಗಿರ್ತಾರೆ. ಲತಾ, ಮಕ್ಕಳ ಶಿಕ್ಷಣಕ್ಕಾಗಿ ದಿ ಆಶ್ರಮ ಹೆಸರಿನ…
ಟೈಗರ್ ಪ್ರಭಾಕರ್, ದಕ್ಷಿಣ ಭಾರತದಲ್ಲಿ ಈ ಸ್ಟಾರ್ ನಟ ಯಾರಿಗೆ ಗೊತ್ತಿಲ್ಲ ಹೇಳಿ, ಎಷ್ಟೋನಟರಿಗೆ ಆದರ್ಶ, ಚಿತ್ರರಂಗದಲ್ಲಿ ಘರ್ಜಿಸಿದ ನಟ, ಆದರೆ ಪ್ರಭಾಕರ್ ಅವರ ಕೊನೆಯ ದಿನಗಳು ಜನರು ಊಹಿಸಿದಷ್ಟು ಸುಂದರವಾಗಿರಲಿಲ್ಲ, ಅತಿಯಾದ ಅನಾರೋಗ್ಯದಿಂದ ಕೈಯಲ್ಲಿದ್ದ ಕಾಸು ಖಾಲಿ ಆಗಿತ್ತು. 25 ಮಾರ್ಚ್ 2001 ರಂದು ಟೈಗರ್ ಪ್ರಭಾಕರ್ ಅವರು ಬಹು ಅಂಗಾಂಗ ವೈಪಲ್ಯದಿಂದ ಇಹಲೋಕ ತ್ಯಜಿಸಿದರು, ಈ ಸುದ್ದಿ ಕೇಳಿ ಕಣ್ಣೀರು ಹಾಕಿದ ಲಕ್ಷಾಂತರ ಅಭಿಮಾನಿಗಳು, ಕೊನೆಯದಾಗಿ ಟೈಗರ್ ಪ್ರಭಾಕರ್ ಅವರ ಅಂತಿಮ ದರ್ಶನ ಪಡೆಯಲು…
ದೇವರ ಪೂಜೆಗೆ, ಅಡುಗೆ ತಯಾರಿಕೆಗೆ, ವಾಮಾಚಾರಕ್ಕೆ, ಶುಭ ಕಾರ್ಯಗಳಿಗೆ, ಅಶುಭ ಕಾರ್ಯಗಳಿಗೆ ಬಹುತೇಕ ಎಲ್ಲಾ ಕೆಲಸಗಳಿಗೂ ನಿಂಬೆ ಹಣ್ಣು ಬೇಕೇ ಬೇಕು.ನಿಂಬೆಹಣ್ಣಿನ ಉಪಯೋಗ ಕೇವಲ ಅಡುಗೆ ಮಾಡಲಿಕ್ಕೆ, ಇಲ್ಲವೇ ಮಾಟ ಮಂತ್ರ ಮಾಡಲಿಕ್ಕೆ ಮಾತ್ರ ಸೀಮಿತವಲ್ಲ.