ಸುದ್ದಿ

ಈ ಏಡಿಯ ಬೆಲೆ ಕೇಳಿದ್ರೆ ಅಚ್ಚರಿ ಪಡೋದಲ್ಲಾ ಶಾಕ್ ಆಗೋದಂತು ಗ್ಯಾರಂಟಿ,ಇಷ್ಟು ಲಕ್ಷಾನಾ,.!

140

ಒಂದು ಏಡಿ ಬೆಲೆ ಎಷ್ಟಿರಬಹುದು…? ಜಾಸ್ತಿಅಂದರೆ ಭಾರತದಲ್ಲಿ ನಾವು ಸಾವಿರ ಲೆಕ್ಕದಲ್ಲಿ ಅಂದಾಜು ಹಾಕಬಹುದೇನೋ… ಆದರೆ, ಜಪಾನಿನಲ್ಲಿ ಒಂದು ಏಡಿ ಬಿಕರಿಯಾದ ಬೆಲೆ ಕೇಳಿದರೆ ತಲೆತಿರುಗುವುದು ಗ್ಯಾರಂಟಿ…! ಯಾಕೆಂದರೆ, ಇಲ್ಲಿ ಬೃಹತ್ ಏಡಿಮಾರಾಟವಾಗಿದ್ದು ಬರೋಬ್ಬರಿ 32 ಲಕ್ಷಕ್ಕೆ…! ಜಪಾನಿನ ಬಿಡ್ಡರ್ ಒಬ್ಬರು42 ಯುಎಸ್‌ ಡಾಲರ್ ಅಂದರೆ ಸರಿಸುಮಾರು ಭಾರತದ 32,61,216 ರೂಪಾಯಿಗೆ ಈ ಹಿಮ ಏಡಿಯನ್ನು ಹರಾಜಿನಲ್ಲಿ ಖರೀದಿಸಿದ್ದಾರೆ.

ಪಶ್ಚಿಮ ಟೊಟೊರಿ ಪ್ರಾಂತ್ಯದಲ್ಲಿ ಈ ವಾರದಿಂದ ಚಳಿಗಾಲದ ಮತ್ಸ್ಯ ಬೇಟೆ ಆರಂಭವಾಗಿದೆ. ಈ ವೇಳೆ, ಈ ಬೃಹತ್ ಪ್ರಮಾಣದ ಏಡಿ ಸಿಕ್ಕಿದೆ. ಇದನ್ನು ಹರಾಜಿನ ಮೂಲಕ ಮಾರಾಟ ಮಾಡಲಾಗಿದ್ದು, ಹರಾಜಿನಲ್ಲಿ ಈ ಏಡಿ ದಾಖಲೆಯ ಬೆಲೆಗೆ ಬಿಕರಿಯಾಗಿದೆ. ಇದು ಎಲ್ಲರನ್ನೂ ಒಂದು ಕ್ಷಣ ದಂಗಾಗುವಂತೆ ಮಾಡಿದೆ.

`ನನಗೆ ಈ ಏಡಿಯ ಬೆಲೆ ಕಂಡು ಅಚ್ಚರಿಯಾಗಿದೆ’ ಎಂದು ಇಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಮ ಏಡಿ1.2 ಕೆಜಿ ತೂಕವಿದ್ದು, 14.6 ಇಂಚು ಉದ್ದವಿದೆ. ಈ ದುಬಾರಿ ಏಡಿ ಈಗ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ. `ಇದು ವಿಶ್ವದ ಅತೀ ದುಬಾರಿ ಏಡಿ’ಯಾಗಿರುವ ಸಾಧ್ಯತೆ ಇದ್ದು, ಗಿನ್ನಿಸ್ ದಾಖಲೆಗೆ ಹೆಸರು ನೊಂದಾಯಿಸುವ ಪ್ರಯತ್ನ ನಡೆಯುತ್ತಿದೆ.

ಸ್ಥಳೀಯ ವ್ಯಾಪಾರಿಯೊಬ್ಬರು ಈ ಏಡಿಯನ್ನು ಖರೀದಿಸಿದ್ದು, ಟೋಕಿಯೊದ ಗ್ಲಿಟ್ಝಾ ಗಿಂಜಾ ಜಿಲ್ಲೆಯ ದುಬಾರಿ ಜಪಾನೀಸ್ ರೆಸ್ಟೋರೆಂಟ್‌ಗೆ ನೀಡಲಾಗುತ್ತದೆ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ