ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಳೆದ ನಾಲ್ಕು ವರ್ಷಗಳಿಂದ ಪತ್ರಗಳನ್ನು ಹಂಚದೆ ಯಲಬುರ್ಗಾ ತಾಲೂಕಿನ ಪೋಸ್ಟ್ಮ್ಯಾನ್ ನಿರ್ಲಕ್ಷ್ಯ ತೋರಿದ ಸುರೇಶ್.
ಪೋಸ್ಟ್ಮ್ಯಾನ್ ಸುರೇಶ್ ತಳವಾರ ಎನ್ನುವರು ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರ, ಎಟಿಎಮ್ ಕಾರ್ಡ್, ಪರೀಕ್ಷಾ ಪ್ರವೇಶ ಪತ್ರ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಹಂಚದೆ ನಿರ್ಲಕ್ಷ್ಯ ತೋರಿರುವ ಈ ಘಟನೆ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕಂಡುಬಂದಿದೆ.

ಸರ್ಕಾರಿ ಕಚೇರಿಗಳಿಂದ ಬಂದ ಪೋಸ್ಟ್, ಹಾಗೂ ಬ್ಯಾಂಕಿನಿಂದ ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳು ಬರುತ್ತಿಲ್ಲವೆಂದು ಗ್ರಾಹಕರು ತಲೆಕೆಡಿಸಿಕೊಂಡಿದ್ದಾರೆ. ಇದಾದ ನಂತರ ಅಂಚೆ ಕಚೇರಿಗೆ ಹೋಗಿ ಪರಿಶೀಲನೆ ಮಾಡಿ ನೋಡಿದಾಗ ಗ್ರಾಹಕರು ಕಳಿಸಿದ ಎಲ್ಲ ದಾಖಲೆಗಳು ಸಿಕ್ಕಿವೆ, ಸುಮಾರು ನಾಲ್ಕು ವರ್ಷಗಳಿಂದ ಪೋಸ್ಟ್ ಗ್ರಾಹಕರಿಗೆ ಹಂಚದೆ ಇರುವ ಪತ್ರಗಳು ಲಭ್ಯವಾಗಿವೆ.

2016 ರಿಂದ ಇಲ್ಲಿಯವರೆಗೆ ಪೋಸ್ಟಿಗೆ ಬಂದ ಎಲ್ಲ ಪತ್ರಗಳನ್ನು ಸುರೇಶ್ ವಿತರಣೆ ಮಾಡದೆ ಸುಮಾರು 1 ಸಾವಿರಕ್ಕೂ ಅಧಿಕ ಪತ್ರ, ಎಟಿಎಮ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಹಾಗೆ ಇಟ್ಟಿದ್ದ. ಇದನ್ನು ಕಂಡು ಬೆರಗಾಗಿದ್ದಾರೆ. ನಿರ್ಲಕ್ಷ್ಯ ತೋರಿದ ಸುರೇಶ್ ತಳವಾರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಿಳುನಾಡಿನಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಎಂಥವರೂ ಶಾಕ್ ಆಗುತ್ತಾರೆ. ಭಿಕ್ಷೆ ಬೇಡುವವರನ್ನು ಕಂಡರೆ ಸಾಮಾನ್ಯವಾಗಿ ಜನರು ಮುಖ ಕಿವುಚುತ್ತಾರೆ. ಕೈಯಲ್ಲಿರುವ ಎರಡು ಮೂರು ರೂಪಾಯಿ ಕೊಟ್ಟು ಮುಂದೆ ಹೋಗುತ್ತಾರೆ. ಹೀಗೆ ಪಡೆದ ಭಿಕ್ಷೆಯ ಹಣವೇ ಇಲ್ಲೊಬ್ಬಮಹಿಳೆಯನ್ನು ಲಕ್ಷಾಧೀಶೆಯನ್ನಾಗಿ ಮಾಡಿದೆ. ಪಾಂಡಿಚೇರಿಯ ದೇವಾಲಯವೊಂದರ ಹೊರಗಡೆ ಭಿಕ್ಷೆ ಬೇಡುತ್ತಿರುವ ವೃದ್ಧೆಯ ಕೈಯಲ್ಲಿ 12 ಸಾವಿರ ರೂ. ಹಾಗೂ ಆಕೆಯ ಬ್ಯಾಂಕ್ ಅಕೌಂಟಿನಲ್ಲಿ ಸುಮಾರು 2 ಲಕ್ಷ ಹಣ ಇರುವುದು ಗುರುವಾರ ಬೆಳಕಿಗೆ ಬಂದಿದೆ. ವೃದ್ಧೆಯನ್ನು ಪಾರ್ವತಮ್ಮ(70)ಎಂದು ಗುರುತಿಸಲಾಗಿದೆ. ಪ್ರತಿ…
ಕೇರಳದ ಅಲತ್ತೂರಿನ ವಿಶೇಷ ಚೇತನ ಪ್ರಣವ್ ಬಾಲಸುಬ್ರಹ್ಮಣ್ಯನ್ ಅವರು ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿರುವ ಪ್ರಣವ್ ಅವರು ಕಾಲಿನಿಂದಲೇ ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡು ಸಾಕಷ್ಟು ಹೆಸರುಗಳಿಸಿದ್ದಾರೆ. ಮಂಗಳವಾರ ಕೇರಳ ಸಿಎಂ ಪಿಣರಾಯಿ ವಿಜಯ್ನ್ ಅವರನ್ನು ಪ್ರಣವ್ ಭೇಟಿಯಾಗಿ ಕೇರಳ ನೆರೆಸಂತ್ರಸ್ತರ ನೆರವಿಗಾಗಿ ದೇಣಿಗೆ ಚೆಕ್ ನೀಡಿದ್ದಾರೆ. ಭೀಕರ ನೆರೆಯಿಂದ ಕೇರಳ ಅಕ್ಷರಶಃ ನಲುಗಿಹೋಗಿದೆ. ನೆರೆ ಪೀಡಿತ ಪ್ರದೇಶಗಳ ಜನರ ಪಾಡು ಮೂರಾಬಟ್ಟೆಯಾಗಿದೆ. ಹೀಗಾಗಿ…
ಜೋಗ ಜಲಪಾತದ ನೆತ್ತಿ ಪ್ರದೇಶದ ಜಲಪಾತಕ್ಕೆ ಧುಮುಕಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಹುಡುಕಲು ಜಲಪಾತಕ್ಕೆ ಇಳಿದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಕತ್ತಲಾದರೂ ವಾಪಸ್ಸು ಬರದೆ ಇದ್ದದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿತ್ತು.
ನಿಮ್ಮನ್ನು ನಂಬಿ ಎಷ್ಟು ದಿನ ನಾವೂ ಹೀಗೆ ಶಾಲೆಗೆ ಬರಬೇಕು. ಅದೇಗೆ ಕಲಿತು ತಂದೆ ತಾಯಿಗೆ ಒಳ್ಳೆಯ ಹೆಸರು ತರೊಕಾಗುತ್ತದೆ? ಎಂದು ಶಾಸಕನ ಮುಂದೆ ವಿದ್ಯಾರ್ಥಿನಿ ಪೋನ್ ಮಾಡಿ ಬಿಇಓ ವೆಂಕಟೇಶ ಗುಡಿಯಾಳಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಜಿಲ್ಲೆಯ ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಈ ಮೊದಲು ವಿದ್ಯಾರ್ಥಿಗಳು ಶಾಸಕರಿಗೆ ನಮ್ಮ ಶಾಲೆಗೆ ಭೇಟಿ ಕೊಡಿ ಎಂದಿದ್ದರು. ವಿದ್ಯಾರ್ಥಿಗಳ ಕರೆಗೆ ಶಾಲೆಗೆ ಭೇಟಿ ನೀಡಿದ ಮಾನವಿ ಶಾಸಕ ರಾಜಾ…
ರಾಜ್ಯದ ಪ್ರಮುಖ ಮುಜರಾಯಿ ದೇಗುಲದಲ್ಲಿ ಇನ್ನೂ ಮುಂದೆ ವಸ್ತ್ರ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಜೀನ್ಸ್, ಟೀ ಶರ್ಟ್ ಧರಿಸಿದರೆ ದೇವರ ದರ್ಶನ ಸಿಗುವುದು ಅನುಮಾನವಾಗಿದೆ. ಮುಜರಾಯಿ ಇಲಾಖೆ ಸಚಿವರು ಈ ಸಂಬಂಧ ಸಭೆ ಕರೆಯಲ್ಲಿದ್ದು, ಶೀಘ್ರದಲ್ಲಿಯೇ ವಸ್ತ್ರ ಸಂಹಿತೆ ಯಾವ ರೀತಿ ಇರಬೇಕು ಎನ್ನುವ ನಿಯಮವನ್ನು ರೂಪಿಸಲು ಸಜ್ಜಾಗಿದ್ದಾರೆ. ಈಗಾಗಲೇ ಕುಕ್ಕೆಯಿಂದ ಮನವಿ ಕೂಡ ಮಾಡಲಾಗಿದ್ದು, ಭಕ್ತಾದಿಗಳು ದೇವರ ದರ್ಶನಕ್ಕೆ ಬರುವಾಗ ತುಂಡು ಬಟ್ಟೆ ಜೀನ್ಸ್, ಟೀ ಶರ್ಟ್ ಧರಿಸಿ ಬರುತ್ತಿದ್ದಾರೆ. ವಸ್ತ್ರ ಸಂಹಿತೆ ಜಾರಿ…
ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಾಗಲೇ ಆರಂಭವಾಗಿವೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೆಚ್ಚಿನ ಹೋಂವರ್ಕ್ ನೀಡಲಾಗುತ್ತಿದೆ. ಇದು ಪಾಲಕ, ಪೋಷಕರಿಗೆ ನೇರ ಹೊರೆಯಾಗಲಿದೆ. ಅಲ್ಲದೆ, ಈ ಮಕ್ಕಳ ಹೋಂ ವರ್ಕ್ನ್ನು ಮನೆಯಲ್ಲಿ ಪಾಲಕ, ಪೋಷಕರೇ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ…