inspirational

ಗರ್ಭಿಣಿ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ ಮಾಡಿದ ಪೊಲೀಸರು.

191

 ಪೊಲೀಸ್ ಮಹಿಳಾ ಸಿಬ್ಬಂದಿಯ ಮಾನಸಿಕ ಒತ್ತಡ ಕಡಿಮೆ ಮಾಡಲು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಗರ್ಭಿಣಿಯರಿಗೆ ಪೊಲೀಸ್ ಠಾಣೆಯಲ್ಲಿ ಸೀಮಂತ ಮಾಡಿದ್ದಾರೆ. ಪೊಲೀಸರು ಗರ್ಭಿಣಿ ಸಿಬ್ಬಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ್ದು, ಠಾಣೆಯ ಎಲ್ಲಾ ಸಿಬ್ಬಂದಿ ಸೇರಿ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿದ್ದಾರೆ.

ಠಾಣೆಯ ಮಹಿಳಾ ಪೊಲೀಸ್ ಪೇದೆಯಾಗಿದ್ದ ಲಕ್ಷ್ಮೀ ಹಾಗೂ ಮತ್ತೊಬ್ಬ ಮಹಿಳಾ ಪೇದೆ ವೀರಮ್ಮ ಅವರಿಗೆ ಸೀಮಂತ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಕೆಲಸದ ಒತ್ತಡ, ಮಾನಸಿಕ ಒತ್ತಡ ಜಾಸ್ತಿ ಇರುತ್ತೆ. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡಲು ಗರ್ಭಿಣಿ ಮಹಿಳಾ ಸಿಬ್ಬಂದಿಗೆ ಸೀಮಂತ ಮಾಡಿರೋದು ನಿಜಕ್ಕೂ ಹೆಮ್ಮೆಪಡುವ ವಿಚಾರ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಒತ್ತಡದ ಮಧ್ಯೆ ಕೆಲಸ ಮಾಡುವ ಸನ್ನಿವೇಶಗಳು ಆಗಾಗ ಬೆಳಕಿಗೆ ಬರುತ್ತಿದ್ದವು. ಕಳೆದ ಬಾರಿ ಮಂಗಳೂರಿನಲ್ಲಿ ಗರ್ಭಿಣಿ ಮಹಿಳಾ ಪೊಲೀಸ್‍ ರೊಬ್ಬರನ್ನ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಬಂದೋಬಸ್ತ್‌ಗೆ ನಿಯೋಜನೆ ಮಾಡಿದ್ದರು. ಉರಿ ಬಿಸಿಲಲ್ಲಿ ಗರ್ಭಿಣಿ ಮಹಿಳೆಯನ್ನ ಬಂದೋಬಸ್ತ್‌ಗೆ ನಿಯೋಜನೆ ಮಾಡಿದ್ದಕ್ಕೆ ಎಲ್ಲೆಡೆ ಟೀಕೆಗಳು ಕೇಳಿಬಂದು ಪೊಲೀಸ್ ಅಧಿಕಾರಿಗಳು ಕ್ಷಮೆ ಕೇಳಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ, ಸುದ್ದಿ

    ವಿನೋದ್ ರಾಜ್ ರನ್ನು ಕ್ಯಾರೆ ಎನ್ನದ ಟಿವಿ ಶೋಗಳು, ಹುಡುಕಿಕೊಂಡು ಬಂತು ಬಂಪರ್ ಆಫರ್.

    ಒಂದು ಕಾಲದಲ್ಲಿ ನೃತ್ಯ ಅಂದ್ರೆ ಏನು ಅಂತ ಸ್ಯಾಂಡಲ್ ವುಡ್ ಗೆ ತೋರಿಸಿಕೊಟ್ಟವರು ಅಂದ್ರೆ ನಟ ವಿನೋದ್ ರಾಜ್. ಹೌದು. ತಮ್ಮ ನೃತ್ಯದ ಮೂಲಕ ಇಡೀ ಕರ್ನಾಟಕವನ್ನೇ ಗೆದ್ದಿದ್ದರು. ಇನ್ನು ಅವರು ಕೆಲವು ಸಿನಿಮಾಗಳಲ್ಲಿ ನಟನಾಗಿ ನಟಿಸಿದ್ದು, ಎಲ್ಲರೂ ಅವರ ನಟನೆ ಹಾಗು ನೃತ್ಯಕ್ಕೆ ಫಿದಾ ಆಗಿದ್ದರು. ಆದರೆ ಕಾಲ ಕಳೆದಂತೆ ಅವರಿಗೆ ಚಿತ್ರಗಳ ಅವಕಾಶ ಕಡಿಮೆಯಾಗಿದ್ದರಿಂದ ಅವರು ಚಿತ್ರರಂಗದಿಂದ ದೂರ ಉಳಿಯಬೇಕಾಯಿತು. ಇನ್ನು ಅವರ ಕೊನೆ ಸಿನಿಮಾ 2009ರಲ್ಲಿ ತೆರೆ ಕಂಡ ‘ಯಾರದು’ ಆಗಿದ್ದು, ನಂತರ…

  • ಸುದ್ದಿ

    ಸಹಕಾರಿ ಬ್ಯಾಂಕ್ ಗಳಿಂದ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ‘ಬಿಗ್ ಶಾಕ್’

    ಹೊಸ ಬೆಳೆ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರದಿಂದ ಬಿಗ್ ಶಾಕ್ ನೀಡಿದ್ದು, ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಬ್ರೇಕ್ ಹಾಕಲಾಗಿದೆ. ಸಂಪನ್ಮೂಲ ಕೊರತೆ ಕಾರಣದಿಂದ ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ ಎನ್ನಲಾಗಿದ್ದು, ಇದರಿಂದಾಗಿ ಸಹಕಾರಿ ಬ್ಯಾಂಕುಗಳಿಗೆ ಸಂಕಷ್ಟ ಎದುರಾಗಿದೆ. ಪರಿಣಾಮ ರೈತರು ಹೊಸದಾಗಿ ಬೆಳೆ ಸಾಲ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ರೈತರ ಸಾಲ ಮನ್ನಾ ಯೋಜನೆಯಡಿ ಮರುಪಾವತಿ ಮೊತ್ತ ಬಿಡುಗಡೆಯನ್ನು ಹಣಕಾಸು ಇಲಾಖೆ ತಡೆಹಿಡಿದಿದೆ. ಸಹಕಾರ…

  • ತಂತ್ರಜ್ಞಾನ, ವಿಸ್ಮಯ ಜಗತ್ತು

    ಇವಳೇ ರೋಬೋಟ್ ತಯಾರಿಸಿ, ಇವಳೇ ರೋಬೋಟ್ ಪ್ರೀತಿಯಲ್ಲಿ ಬಿದ್ದಿದ್ದಾಳೆ..!ಈ ಲೇಖನ ಓದಿ ಶಾಕ್ ಆಗ್ತೀರಾ… ..

    ಆಧುನಿಕತೆ ಬೆಳೆದಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಾನವ ಅನೇಕ ಸಾಧನೆ ಮಾಡಿದ್ದಾನೆ. ಅವುಗಳಿಂದ ಅದೆಷ್ಟು ಒಳ್ಳೆಯ ಫಲಿತಾಂಶ ಪಡೆಯುತ್ತೇವೆಯೋ ಅಷ್ಟೇ ಕೆಟ್ಟಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ನಾವು ಕ್ಷಣ ಮಾತ್ರಕ್ಕೂ ಮರೆಯುವಹಾಗಿಲ್ಲ. ತಂತ್ರಜ್ಞಾನಗಳ ನವೀಕರಣವಾಗುತ್ತಿದ್ದಂತೆ ಮನುಷ್ಯನ ಸಂಬಂಧಗಳಲ್ಲಿ ಬಹಳಷ್ಟು ಅಂತರಗಳು ಸೃಷ್ಟಿಯಾಗುತ್ತಿವೆ.

  • ಸುದ್ದಿ

    ಕುಮಾರಸ್ವಾಮಿಯವರು ಆಪರೇಷನ್ ಕಮಲಕ್ಕೆ ಬೆಚ್ಚಿಬಿದ್ರಾ..?ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇಕೆ..?

    ಲೋಕಸಭಾ ಚುನಾವಣೆಯವರೆಗೆ ತಣ್ಣಗಿದ್ದ ಆಪರೇಷನ್ ಕಮಲ ವಿಚಾರ ಮತದಾನ ಮುಗಿದ ಬಳಿಕ ತರೆಮರೆಯಲ್ಲಿ ಆರಂಭವಾಗಿದೆ ಎನ್ನಲಾಗಿದ್ದು, ಈಗ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ತಮ್ಮ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಮಾತಿನ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರಿಗೆ ಆತಂಕ ಶುರುವಾಗಿದೆ ಎನ್ನಲಾಗಿದ್ದು ಹೀಗಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಭಾನುವಾರ ಸಂಜೆ ಖಾಸಗಿ ಹೋಟೆಲ್‍ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ನಡೆಯಲಿರುವ ಮೊದಲ ಜೆಡಿಎಸ್ ಶಾಸಕಾಂಗ ಸಭೆ ಇದಾಗಿದೆ….

  • ಸಿನಿಮಾ

    ವೈರಲ್ ಆಯ್ತು ರಾತ್ರೋ ರಾತ್ರಿ ಸ್ಟಾರ್ ಆದ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಕಿಸ್ಸಿಂಗ್ ವಿಡಿಯೋ..!

    ಕಣ್ಸನ್ನೆ ಮೂಲಕ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಆದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಅವರ ಲಿಪ್ ಲಾಕ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರಿಯಾ ತಮ್ಮ ಮುಂಬರುವ ‘ಒರು ಅಡಾರ್ ಲವ್’ ಚಿತ್ರದಲ್ಲಿ ನಟ ರೋಶನ್ ಅಬ್ದುಲ್ ರಹೂಫ್ ಅವರಿಗೆ ಕಣ್ಣು ಹೊಡೆದ ವಿಡಿಯೋ ವೈರಲ್ ಆಗಿತ್ತು. ಈಗ ಇದೇ ಚಿತ್ರದ ಪ್ರೋಮೋವೊಂದು ಬಿಡುಗಡೆ ಆಗಿದೆ.ಈ ಪ್ರೋಮೋದಲ್ಲಿ ರೋಶನ್ ಹಾಗೂ ಪ್ರಿಯಾ ಲಿಪ್ ಲಾಕ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ವೈರಲ್…

  • inspirational, ಉಪಯುಕ್ತ ಮಾಹಿತಿ

    ಅಮ್ಮ ಸತ್ತು 1.5 ವರ್ಷ ನಂತರ ಭಾರತಕ್ಕೆ ಬಂದ ಮಗ ಇಂತಹ ಪರಿಸ್ಥಿತಿ ಯಾರಿಗೂ ಬೇಡ

    ಆಷಾ ಸಾಹ್ನಿ ಎನ್ನುವ ವೃದ್ದೆ ಮುಂಬೈ ನಗರದ ಒಂದು ಅಪಾರ್ಟ್ ಮೆಂಟ್ನಾ ಹತ್ತನೆ ಮಳಿಗೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಧಣಿಕರಾದ ಇವರ ಸ್ವಂತ ಮಹದಡಿ ಗಳಾಗಿದ್ದವು 10ನೆ ಮಹಡಿಯ 2 ಪ್ಲಾಟ್ಗಳು. ಮಗನನ್ನು ಪ್ರೀತಿಯಿಂದ ಬೆಳೆಸಿ ಓದಿಸಿ ಅಮೇರಿಕಾದಲ್ಲಿ ನೆಲೆಸುವ ಹಾಗೆ ಮಾಡಿದ್ದಾರೆ. ಮಗ ಅಮೇರಿಕಾದಲ್ಲಿಯೇ ನೆಲೆಸಿದ್ದಾನೆ. ಒಬ್ಬ ಸಾರಾಸರಿ ಭಾರತೀಯನಿಗೆ ಇರಬೇಕಾದ ಎಲ್ಲ ಸುಖ ಲೋಲುಪಗಳು ಅವರಿಗಿದೆ.