ಸುದ್ದಿ

ತಾಯಂದಿರು ಪರೀಕ್ಷೆ ಬರೆಯಲು ಹೋದಾಗ ಪೇದೆಗಳು ಮಾಡಿದ ಕೆಲಸವೇನು ಗೊತ್ತಾ?

38

ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ನೋಡಿಕೊಂಡ ಅಸ್ಸಾಂನ ಮಹಿಳಾ ಪೇದೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡು ಅವರನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ತಾಯಿ ಯಾಗುವುದು ಒಂದು ಕ್ರಿಯೆ. ನೀವು ಅದನ್ನು ಮಾಡಬೇಕಾಗುತ್ತದೆ. ಅಸ್ಸಾಂ ಪೊಲೀಸರು ದಾರಂಗಿ ಜಿಲ್ಲೆಯಲ್ಲಿ ಈ ಮಕ್ಕಳ ತಾಯಂದಿರು ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ಹೋಗಿದ್ದರು. ಈ ವೇಳೆ ಅವರವರ ಮಕ್ಕಳನ್ನು ಇಬ್ಬರು ಪೇದೆಗಳು ನೋಡಿಕೊಂಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ನವೆಂಬರ್ 10ರಂದು ಅಸ್ಸಾಂನಲ್ಲಿ ಈ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಆಯ್ಕೆಯಾದ ಶಿಕ್ಷಕರು ಮೊದಲನೇ ತರಗತಿಯಿಂದ 8 ನೇತರಗತಿವರೆಗೂ ಕಲಿಸಲು ಅರ್ಹರಾಗುತ್ತಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಹಲವು ಮಂದಿ ಪೇದೆಗಳನ್ನು ಹೊಗಳಿದ್ದಾರೆ. ಕೆಲವರು ‘ಸೆಲ್ಯೂಟ್’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ‘ಸೆಲ್ಯೂಟ್ಮ್ಯಾಮ್. ನೀವು ಸೂಪರ್ ಮೇಡಂ’ ಎಂದು ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಾಜಕಾರಣಿಯಾ ಕಚೇರಿ ಮುಂದೆಯೆ ಗೊಬ್ಬರ ಸುರಿದ ಭೂಪ….ಕಾರಣವೇನು ಗೊತ್ತಾ?

    ರಾಜಕಾರಣಿಗಳು ಕೆಲಸ ಮಾಡದಿದ್ದರೆ ಅವರ ವಿರುದ್ಧ ಜನರು ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಆದರೆ ಆಗಾಗ ಕೆಲವು ಪ್ರತಿಭಟನೆಗಳು ಎಲ್ಲರ ಗಮನ ಸೆಳೆಯುತ್ತವೆ. ಆಸ್ಟ್ರೇಲಿಯಾದ ತಾಸ್ಮಾನಿಯಾದ ಈ ವ್ಯಕ್ತಿ ಮಾಡಿದ ಪ್ರತಿಭಟನೆ ಕೂಡ ಬಹಳ ವಿಶಿಷ್ಟವಾಗಿದೆ. 51 ವರ್ಷದ ವ್ಯಕ್ತಿಯೊಬ್ಬ ಸ್ಥಳೀಯ ಜನಪ್ರತಿನಿಧಿ ಅವನ ಮಾತು ಕೇಳಲಿಲ್ಲವೆಂದು ಅವರ ಕಚೇರಿಯ ಮುಂದೆ 8000 ಕೆಜಿಯಷ್ಟು ಗೊಬ್ಬರ ಹಾಕಲು ಹೋಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅವನಿಗೆ ಬೇಕಾಗಿರುವ ಸರ್ಕಾರದ ಅನುದಾನದ ಬಗ್ಗೆ ಕೇಳಿದ್ದಾನೆ. ಯಾವಾಗ ಅವರು ಅವನ ಪ್ರಶ್ನೆಗೆ ಉತ್ತರಿಸಲಿಲ್ಲವೋ…

  • ಪ್ರೇಮ

    ಆಕೆ ನನಗೆ ಸ್ವಲ್ಪ ಉಸಿರಾಟದ ತೊಂದರೆಯಾಗಿದೆ ಎಂದಳು – ಒಂದು ಪ್ರೆಮ ಕಥೆ 2 ನಿಮಿಷ ಸಮಯ ವಿದ್ದರೆ ಓದಿ

    ಆಕೆಯ ಸುಮಧುರ ಧ್ವನಿ ಆಕರ್ಷಕ ರೂಪ ಮಲ್ಲಿಗೆ ಹೂವಿನಂತ ನಗು ಸೌಮ್ಯತೆಯ ಮಾತಿನ ಮೋಡಿಗೆ ನನ್ನ ನಿದ್ರೆ ಹಾರಿ ಹೋಗಿತ್ತು.

  • ಆರೋಗ್ಯ

    ಕೊಲೆಸ್ಟ್ರಾಲ್ ನಿಯಂತ್ರಿಸಲು ನೆಲ್ಲಿಕಾಯಿ ಉಪಯೋಗ ತಿಳಿಯಲು ಈ ಲೇಖನಿ ಓದಿ…

    ಇಂದಿನ ಸವಲತ್ತುಗಳ ಜೀವನದಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವ ಮತ್ತು ಸಿದ್ಧ ಆಹಾರಗಳ ಮೂಲಕ ಮತ್ತು ಸರಿಯಾದ ಸಮಯ ಮತ್ತು ಕ್ರಮದಲ್ಲಿ ಆಹಾರ ಸೇವಿಸದೇ ಇರುವ ಮೂಲಕಕೊಲೆಸ್ಟ್ರಾಲ್ ಮಟ್ಟಗಳು ಏರುಪೇರಾಗುತ್ತಾ ಇರುತ್ತವೆ. ರಕ್ತಪರೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನವರ ಫಲಿತಾಂಶ ಕೊಲೆಸ್ಟ್ರಾಲ್ ಇದೆ ಎಂದೇ ಇರುತ್ತದೆ. ಇಲ್ಲಿ ಕೊಲೆಸ್ಟ್ರಾಲ್ ಇದೆ ಎಂದರೆ ಮೂರೂ ಅಂಶಗಳ ಒಟ್ಟು ಪ್ರಮಾಣದಲ್ಲಿ ಎಲ್‌ಡಿಎಲ್ ಪ್ರಮಾಣ ಶೇಖಡಾವಾರು ಹೆಚ್ಚಿದ್ದು ವೈದ್ಯರು ಸೂಕ್ತ ಔಷಧಿ ಮತ್ತು ಆಹಾರದಲ್ಲಿ ಕಟ್ಟುಟ್ಟು ಸಾಧಿಸಲು ಸಲಹೆ ಮಾಡುತ್ತಾರೆ. ಕೊಲೆಸ್ಟ್ರಾಲ್  ಪ್ರಮಾಣ ಹೆಚ್ಚಿದಷ್ಟು ಹೃದಯ ಸಂಬಂಧಿ ರೋಗಗಳಿಗೆ ಮುಕ್ತ ಆಹ್ವಾನ ನೀಡಿದಂತೆ. ಒಂದು…

  • ಆರೋಗ್ಯ

    ಯುವಜನರು ಕುಡಿತದ ಪ್ರಮಾಣ ಸಾಕು ಎಂದು ನಿರ್ಧರಿಸುತ್ತಾರೆ, ಹೇಗೆ ಗೊತ್ತಾ???

    ಕುಡಿತದ ಮೇಲೆ ಹಿಡಿತ ಬರುವವರೆಗೂ ಯುವಜನರು ಎಗ್ಗಿಲ್ಲದೆ ಪೆಗ್ ಗಳನ್ನು ಏರಿಸುತ್ತಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದ್ದು, ಕುಡಿತದ ಪ್ರಮಾಣ ನಿರ್ಧರಿಸುವ ಕಲೆ ಹೇಗೆ ಕರಗತವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಿದೆ.

  • ಸುದ್ದಿ

    ಸಚಿವ ಸ್ಥಾನ ಕೈ ತಪ್ಪಿದ ಕಾರಣಕ್ಕಾಗಿ ಬೈಕ್​ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು…!

    ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. ಜೊತೆಗೆ ಅವರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. 6 ಬಾರಿ ಶಾಸಕರಾಗಿರುವ ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಹೆಚ್​.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಈ ಹಿನ್ನೆಲೆ ಅವರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಬೈಕ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ತಿಪ್ಪಾರೆಡ್ಡಿ ಅಭಿಮಾನಿ ಮಧು ಎಂಬುವವರ ಸ್ಕೂಟಿ ಟೈಯರ್​ಗೆ ಬೆಂಕಿ ಹಚ್ಚಲು ಪೊಲೀಸರು ಬಿಡದ ಕಾರಣ,…

  • ಸುದ್ದಿ

    ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಈ ಗ್ರಾಮಕ್ಕಿಲ್ಲ ವಿದ್ಯುತ್, ಆದರೆ ವಿದ್ಯುತ್ ಬಿಲ್ಮಾತ್ರ ತಲುಪುತ್ತದೆ, ಹೇಗೆ ಗೊತ್ತಾ, ಇದನ್ನೊಮ್ಮೆ ಓದಿ,.!

    ಸ್ವಾತಂತ್ರ್ಯಪಡೆದ 72 ವರ್ಷಗಳಾದರೂ ಬಲರಾಂಪುರ್ ಜಿಲ್ಲೆಯ ಗ್ರಾಮಕ್ಕೆ ವಿದ್ಯುತ್ತಲುಪಿಲ್ಲ. ಆದರೆ ವಿದ್ಯುತ್ ಬಿಲ್ಮಾತ್ರ ತಲುಪಿದೆ. ಈ ಗ್ರಾಮಸ್ಥರು ರಾತ್ರಿವೇಳೆ ಲ್ಯಾಂಟರ್ನ್ ಮತ್ತು ಧಿಬ್ರಿಗಳನ್ನು ಬಳಸುತ್ತಾರೆ.ಇದು ಬಿಜೆಪಿ ಆಳ್ವಿಕೆಯಲ್ಲಿ ಸಚಿವರಾಗಿದ್ದ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದ ರಾಮ್‌ವಿಚಾರ್ನೇತಮ್‌ಗೆ ಸೇರಿದ ಗ್ರಾಮವಾಗಿದೆ. ರಾಜ್ಯಸಭಾ ಸಂಸದ ರಾಮ್‌ವಿಚಾರ್ ನೇತಮ್ಅವರ ಮನೆ ಇಲ್ಲಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ ಎಂದು ಪತ್ರಿ ಪಾರಿಗ್ರಾಮಸ್ಥರು ಹೇಳುತ್ತಾರೆ. ಇಲ್ಲಿಯವರೆಗೆ ವಿದ್ಯುತ್‌ ನೀಡುವ ಬಗ್ಗೆ ಕೇವಲ ಭರವಸೆ ದೊರೆತಿದೆ ಅಷ್ಟೇ, ಆದರೆ ವಿದ್ಯುತ್ಮಾತ್ರ ತಲುಪಿಲ್ಲ ಎಂದು ಅವರು…