ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನವದೆಹಲಿ, ದೇಶಾದ್ಯಂತ ಮುಂಗಾರು ಮಳೆ ಆರ್ಭಟದಿಂದಾಗಿ ಪೂರೈಕೆ ಕುಸಿತವಾದ ಬೆನ್ನಲ್ಲೇ, ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳವಾಗಿದ್ದು, 20-30 ರು.ಗೆ ಬಿಕರಿಯಾಗುತ್ತಿದ್ದ ಈರುಳ್ಳಿ ದರ ಒಂದೇ ವಾರದಲ್ಲಿ 70-80ರು.ಗೆ ಏರಿಕೆಯಾಗಿದೆ. ಈರುಳ್ಳಿ ಬೆಳೆಯವ ರಾಜ್ಯಗಳಲ್ಲಿ ವಿಪರೀತ ಮಳೆ ಹಾಗೂ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ.

ಅತೀ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ಪೂರ್ವ ರಾಜಸ್ತಾನ ಹಾಗೂ ಪಶ್ಚಿಮ ಮಧ್ಯಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಳೆ ನಾಶ ಹಾಗೂ ಸಾಗಣೆ ಸ್ಥಗಿತದಿಂದಾಗಿ ಈರುಳ್ಳಿ ಕಣ್ಣೀರು ತರಿಸಿದೆ.

ಸದ್ಯ ದೇಶದಾದ್ಯಂತ ದಾಸ್ತಾನು ಇರುವ ಈರುಳ್ಳಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಹೊಸ ಬೆಳೆ ನವೆಂಬರ್ ಬಳಿಕ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ದಾಸ್ತಾನು ಇರುವ ಕಳೆದ ವರ್ಷದ ಬೆಳೆ ಬೇಡಿಕೆಗೆ ತಕ್ಕಷ್ಟಿದೆ. ಆದರೆ ದೇಶದ ವಿವಿದೆಡೆ ಮಳೆಯಿಂದಾಗಿ ಸಾಗಣೆಗೆ ಅಡಚಣೆ ಉಂಟಾಗಿದೆ. ಅಲ್ಲದೇ ವ್ಯಾಪರಿಗಳು ಹೆಚ್ಚು ದಾಸ್ತಾನು ಮಾಡಿಕೊಂಡಿದ್ದರಿಂದ ಕೃತಕ ಅಭಾವ ಸೃಷ್ಟಿಯಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಕಳೆದ ವರ್ಷ ಇದೇ ವೇಳೆ ಕೆ.ಜಿ ಈರುಳ್ಳಿಗೆ 10 ರು. ಇತ್ತು.

ಇದೇ ವೇಳೆ ಈರುಳ್ಳಿ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, 2-3 ದಿನಗಳಲ್ಲಿ ಬೆಲೆ ನಿಯಂತ್ರಣಕ್ಕೆ ಬಾರದಿದ್ದರೆ ವ್ಯಾಪಾರಿಗಳಿಗೆ ದಾಸ್ತಾನು ಮಿತಿ ಹೇರಲು ಚಿಂತನೆ ನಡೆಸಿದೆ. ಅಲ್ಲದೇ ತುರ್ತು ದಾಸ್ತಾನಿನಿಂದ 16000 ಟನ್ಗಳಷ್ಟುಈರುಳ್ಳಿ ಬಿಡುಗಡೆ ಮಾಡಲಾಗಿದ್ದು. ರಾಷ್ಟ್ರೀಯ ಗ್ರಾಹಕ ಒಕ್ಕೂಟ ಹಾಗೂ ನಾಫೆಡ್ ಮೂಲಕ ಕೆ.ಜಿಗೆ 22ರು. ನಂತೆ ದೆಹಲಿಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಅಲ್ಲದೇ ಕೆಲ ರಾಜ್ಯಸರ್ಕಾರಗಳಿಗೂ ತುರ್ತು ದಾಸ್ತಾನಿಂದ ಈರುಳ್ಳಿ ಬಿಡುಗಡೆಗೆ ಸೂಚನೆ ನೀಡಲಾಗಿದ್ದು, ರಾಜ್ಯಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ಇದೇ ವೇಳೆ ರಫ್ತು ಕಡಿವಾಣಕ್ಕೆ ಕೇಂದ್ರ ಮುಂದಾಗಿದ್ದು, ಕನಿಷ್ಠ ರಫ್ತು ದರ ನಿಗದಿ ಪಡಿಸಿ ರಿಯಾಯಿತಿಯನ್ನು ರದ್ದು ಮಾಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮತದಾನ ಪ್ರತಿಯೊಬ್ಬರ ಹಕ್ಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ , ಮತದಾನದ ದಿನ ಎಷ್ಟೋ ಮಂದಿ ಮನೆಯಿಂದ ಹೊರಬರುವುದಿಲ್ಲ.. ಅದರಲ್ಲಿ ಕೆಲವರು ಯುವ ಜನತೆಯೂ ಕೂಡ ಸೇರಿರುತ್ತಾರೆ..
ಚಳಿಗಾಲ ಬಂದಾಗಿದೆ. ಚಳಿಗಾಲದಲ್ಲಿ ತಿನ್ನೋ ಹ್ಯಾಬಿಟ್ ಸ್ಪಲ್ಪ ಜಾಸ್ತಿಯಾಗೋದು ಸಹಜ. ಪದೇಪದೆ ಏನಾದ್ರೂ ತಿನ್ನಬೇಕು ಅನ್ನಿಸ್ತಾ ಇರತ್ತೆ.ಅದರಲ್ಲೂ ಸಂಜೆ ಚಳಿ ದೂರ ಮಾಡಿಕೊಳ್ಳಲು ಏನಾದ್ರೂ ಸರಿ ಬಿಸಿಬಿಸಿಯಾಗಿ ಕುರುಕಲು ತಿಂಡಿ ಬೇಕೇಬೇಕು. ಅದರಲ್ಲೂ ಪಕೋಡಾ, ಬಜ್ಜಿಯಂತಹ ಕುರುಕುಲ ಜತೆಗೆ ಒಂದು ಕಪ್ ಚಹಾನೋ, ಕಾಫಿನೋ ಇದ್ದುಬಿಟ್ಟರೆ ಅದಕ್ಕಿಂತ ಆಹ್ಲಾದಕರ ಇನ್ನೊಂದಿಲ್ಲ.ಆದರೆ ಹೀಗೆ ಚಳಿಗಾಲದಲ್ಲಿ ಆಹಾರ ಸೇವನೆಗೆ ಸಂಬಂಧಪಟ್ಟಂತೆ ಕೆಲವು ತಪ್ಪು ಕಲ್ಪನೆಗಳೂ ಇವೆ. ಆ ತಪ್ಪು ಕಲ್ಪನೆಗಳು ಏನು? ಚಳಿಗಾಲದಲ್ಲಿ ಏನು ಆಹಾರ ಸೇವಿಸಬಹುದು? ಎಷ್ಟು ತಿನ್ನಬೇಕು…
ಇಂದು ಗುರುವಾರ, 22/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಈಗಂತೂ ಹುಡುಗ ಹುಡುಗಿಯರು ಡೇಟಿಂಗ್ ಮಾಡೋ ವಿಧಾನವೇ ಬದಲಾಗಿದೆ.ಕೆಲವರಂತೂ ತಮ್ಮ ಪ್ರಿಯ, ಪ್ರಿಯತಮೆಯನ್ನು ಭೇಟಿ ಮಾಡಲು ಹೋಗುವ ಸಂದರ್ಭದಲ್ಲಿ, ಬಟ್ಟೆ ಹೇಗಿರಬೇಕು, ಹೇಗೆ ಕಾಣಬೇಕು ಎಂಬುದರ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ.ಆದರೆ ಯುವತಿಯೊಬ್ಬಳು ತನ್ನ ಪ್ರಿಯತಮನ ಜೊತೆ ಡೇಟಿಂಗ್ ಮಾಡುವ ಸಲುವಾಗಿ,ತಾನು ಬಟ್ಟೆ ಬರೆಯಿಲ್ಲದೆ ನಗ್ನವಾಗಿ ಭೇಟಿ ಮಾಡಲು ಹೋಗಿದ್ದಾಳೆ..!
ಬಿಗ್ ಬಾಸ್ ಶಾಕಿಂಗ್ ಸುದ್ದಿ ಮನೆಯಿಂದ ಹೊರಬಂದಿದೆ. ಅನಾರೋಗ್ಯದ ಕಾರಣಕ್ಕೆ ಮೊದಲ ದಿನವೇ ಮನೆಯಿಂದ ಹೊರಬಂದಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಕುರಿತಂತೆ ಬಿಗ್ ಬಾಸ್ ಸುದ್ದಿಯನ್ನು ನೀಡಿದೆ. ರವಿ ಬೆಳಗರೆ ಆರೋಗ್ಯದ ಪರಿಶೀಲನೆ ಮಾಡಲಾಗಿದ್ದು ಟಾಸ್ಕ್ ಗಳಲ್ಲಿ ಅವರು ಭಾಗವಹಿಸಲು ಸಾಧ್ಯವಿಲ್ಲ. ಹಾಗಾಗಿ ರವಿ ಬೆಳಗೆರೆ ಈ ಶನಿವಾರದವರೆಗೆ ಮನೆಯಲ್ಲಿ ಅತಿಥಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಲ್ಲಿಗೆ ರವಿ ಬೆಳಗೆರೆ ಅವರ ವೋಟಿಂಗ್ ಸಹ ಬಂದ್ ಆಗಲಿದೆ. ಸ್ಪರ್ಧಿಯಾಗಿ ಮನೆ ಒಳ ಪ್ರವೇಶ ಮಾಡಿದ್ದ…
ಬ್ಯುಸಿ ಜೀವನ ಶೈಲಿಯಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಿಸೋಕೆ ಸಮಯ ಸಿಗ್ತಿಲ್ಲ. ಅದರಲ್ಲೂ ಇತ್ತೀಚಿನ ಕಾಲಘಟ್ಟದಲ್ಲಿ ಆರೋಗ್ಯಕರ ಆಹಾರಕ್ಕಿಂತ ಫಾಸ್ಟ್ ಫುಡ್ಗಳ ಹಾವಳಿಯೇ ಹೆಚ್ಚಾಗಿದೆ. ಆದ್ದರಿಂದ ಆರೋಗ್ಯಕರ ಆಹಾರಗಳು ಯಾವುದು? ಅದರ ಲಾಭಗಳೇನು..? ಎನ್ನುವ ವಿಷಯವೇ ಅನೇಕರಿಗೆ ತಿಳಿದಿಲ್ಲ. ಫಾಸ್ಟ್ ಫುಡ್ಸ್ ಗಳ ರುಚಿಗೆ ಮನಸೋತ ಮಂದಿಗೆ ಅದರಿಂದ ಅಷ್ಟೇ ಫಾಸ್ಟಾಗಿ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದಿರಲ್ಲ. ಹೌದು, ಇಂತಹ ಆರೋಗ್ಯಕ್ಕೆ ಮಾರಕವಾದ ಜೀವನ ಶೈಲಿಯ ಮಧ್ಯೆ ಆರೋಗ್ಯಕರ ಆಹಾರಗಳನ್ನು ಜನ ಮರೆತಿದ್ದಾರೆ. ಸೊಪ್ಪು ತರಕಾರಿ,…