ವಿಸ್ಮಯ ಜಗತ್ತು

ಇಲ್ಲಿ ಬುಲೆಟ್ ಗೆ ದೇವಸ್ಥಾನ ಕಟ್ಟಿ ಪೂಜೆ ದಿನನಿತ್ಯ ಪೂಜೆ ಮಾಡ್ತಾರೆ..!ಕಾರಣ ಕೇಳಿದ್ರೆ ಶಾಕ್ ಆಗ್ತೀರಾ…

500

ನಮ್ಮಲ್ಲಿ ದೇವರಿಗೆ, ಗೋವುಗಳಿಗೆ, ದಸರಾ ಸಂಧರ್ಭದಲ್ಲಿ ವಾಹನಗಳಿಗೂ ಸಹ ನಾವು ಪೂಜೆ ಸಲ್ಲಿಸುತ್ತೇವೆ. ಆದರೆ ವಿಚಿತ್ರ ಎಂದರೆ ಇಲ್ಲಿ ಒಂದು ಬುಲೆಟ್ ಗೆ ಗುಡಿಯನ್ನು ಕಟ್ಟಿ ಪೂಜೆ ಸಲ್ಲಿಸುತ್ತಾರೆ ಎಂದರೆ ನೀವು ನಮ್ಬೋದಿಲ್ಲಾ.. 

ರಾಜಸ್ಥಾನದ ಜೈಪುರದಿಂದ 50 ಕಿ.ಮೀ. ದೂರದಲ್ಲಿರುವ ಪಾಲಿ ಜಿಲ್ಲೆಯಲ್ಲಿ ಒಂದು ವಿಶೇಷವಾದ ದೇವಾಲಯವಿದೆ. ಈ ದೇವಾಲಯದಲ್ಲಿರುವ 350 ಸಿಸಿ ಯ ರಾಯಲ್ ಎನ್ ಫೀಲ್ಡ್  ಬುಲೆಟ್ ಬೈಕ್ ಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಬೈಕ್ ಗೆ ಪೂಜೆ ಸಲ್ಲಿಸಲೂ ಒಂದು ಕಾರಣವಿದೆ. ಅದೇನು ಅಂತೀರಾ? ಮುಂದೆ ಓದಿ.

1988 ರ ಡಿಸೆಂಬರ್ 2 ರಂದು ನಡೆದ ಬುಲೆಟ್ ಅಪಘಾತದಲ್ಲಿ ಓಂ ಸಿಂಗ್ ರಾಥೋರ್ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ತಮ್ಮ ಬೈಕ್ ನಲ್ಲಿ ಅವರು ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ್ದು, ಮರವೊಂದಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿತ್ತು.

ಅಪಘಾತ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಪಘಾತಕ್ಕೀಡಾದ ಬೈಕ್ ಅನ್ನು ಪೊಲೀಸ್ ಠಾಣೆಯಲ್ಲಿ ತಂದಿರಿಸಿದ್ದರು. ಆದರೆ ಮಾರನೇ ದಿನ ಬೈಕ್ ಠಾಣೆಯಲ್ಲಿ ಕಾಣಿಸದಿದ್ದಾಗ ಹುಡುಕಿದ ವೇಳೆ ಅಪಘಾತಕ್ಕೀಡಾದ ಸ್ಥಳದಲ್ಲಿ ಅದು ಪತ್ತೆಯಾಗಿತ್ತು. ಸರಿ, ಯಾರೋ ಕಳ್ಳರ ಕೃತ್ಯವೆಂದು ಭಾವಿಸಿದ ಪೊಲೀಸರು ಪುನಃ ಬೈಕ್ ಅನ್ನು ಠಾಣೆಗೆ ತಂದು ಅದರಲ್ಲಿದ್ದ ಪೆಟ್ರೋಲ್ ಖಾಲಿ ಮಾಡಿ ನಿಲ್ಲಿಸಿದ್ದರು.

ಅಚ್ಚರಿಯೆಂಬಂತೆ ಠಾಣೆಯಿಂದ ಕಾಣೆಯಾಗಿದ್ದ ಬೈಕ್ ಮತ್ತೇ ಅಪಘಾತ ಸ್ಥಳದಲ್ಲಿ ಕಂಡು ಬಂದಿತ್ತು. ಪ್ರತಿ ಬಾರಿಯೂ ಇದು ಪುನರಾವರ್ತನೆಯಾಗಿದ್ದು, ಈ ಸುದ್ದಿ ಸುತ್ತಮುತ್ತಲ ಹಳ್ಳಿಯಲ್ಲಿ ಕಾಡ್ಗಿಚ್ಚಿನಂತೆ ಹರಡಿತು.

ಇದು ಓಂ ಸಿಂಗ್ ರಾಥೋರ್ ಪವಾಡವೆಂದೇ ಭಾವಿಸಿದ ಗ್ರಾಮಸ್ಥರು ದೇವಾಲಯ ನಿರ್ಮಾಣ ಮಾಡಿದ್ದಲ್ಲದೇ ಈ ಬೈಕ್ ಅನ್ನು ಅಲ್ಲಿ ನಿಲ್ಲಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಈ ದೇವಾಲಯವೀಗ ಬುಲೆಟ್ ಬಾಬಾ ಮಂದಿರವೆಂದೇ ಪ್ರಸಿದ್ದಿಯಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮ್ಮ ಜಮೀನಿನ ಪಹಣಿ (ಆರ್.ಟಿ.ಸಿ.) ಪತ್ರದ ಮಾಹಿತಿಯನ್ನು ನಿಮ್ಮ ಮೊಬೈಲ್’ನಲ್ಲೇ ನೋಡಿ ಪಡೆಯಿರಿ..!ತಿಳಿಯಲು ಈ ಲೇಖನ ಓದಿ…

    ನಮ್ಮ ಜಮೀನುಗಳಿಗೆ ಸಂಬಂದಪಟ್ಟಪಹಣಿ (RTC), ಮತ್ತು ಮಿಟೆಶನ್ ಗಳನ್ನೂ ನಾವು ನಿಮ್ಮ ಮೊಬೈಲ್ನಲ್ಲಿ ಚೆಕ್ ಮಾಡಿಕೊಳ್ಳಬಹುದು.

  • Information, karnataka, ಆರೋಗ್ಯ, ಜೀವನಶೈಲಿ

    ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

  • ಸಿನಿಮಾ

    ತನ್ನ ಹೆತ್ತ ತಾಯಿ ಮಾಡಿದ್ದ ಶೋಷಣೆಯನ್ನ ಬಹಿರಂಗ ಮಾಡಿದ ಫೇಮಸ್ ನಟಿ..!

    ಮಲಯಾಳಂ ಚಲನಚಿತ್ರ ನಟಿ ಸಂಗೀತ ಕ್ರಿಶ್ ತಮ್ಮ ತಾಯಿಯ ಆರೋಪಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಶ್ ತಾಯಿ ಇತ್ತೀಚೆಗೆ ಮಗಳು ತನ್ನನ್ನ ವೃದ್ಧಾಪ್ಯದಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆಸ್ತಿಗಾಗಿ ಕ್ರಿಶ್ ನನ್ನನ್ನ ಮನೆಯಿಂದ ಹೊರ ಹಾಕಲು ಮುಂದಾಗಿದ್ದಾಳೆ ಎಂದು ಆರೋಪಿಸಿದ್ದರು. ಈ ಹೇಳಿಕೆ ಕ್ರಿಶ್ ಳನ್ನ ಹೆಚ್ಚು ಸುದ್ದಿಯಲ್ಲಿರುವ ಹಾಗೆ ಮಾಡಿತ್ತು. ಈ ಆರೋಪಗಳಿಗೆ ಕ್ರಿಶ್ ಟ್ವಟರ್ ಮೂಲಕ ಸರಿಯಾಗೇ ಉತ್ತರ ನೀಡಿದ್ದಾರೆ. ತಾನು 13 ವರ್ಷದ ಬಾಲಕಿಯಾಗಿದ್ದಾಗ ಹೇಗೆ ತನ್ನನ್ನ ಶೋಷಿಸಲಾಯಿತು ಎಂದು ವಿವರಿಸಿದ್ದಾಳೆ. ಕುಡುಕ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯಕಾರಿ ಉಪಯೋಗಗಳ ಬಗ್ಗೆ ನಿಮ್ಗೆ ಗೊತ್ತಾ.?ತಿಳಿಯಲು ಈ ಲೇಕನ ಓದಿ ಶೇರ್ ಮಾಡಿ..

    ಸೊಪ್ಪು ತರಕಾರಿಗಳನ್ನ ಸೇವಿಸಿದರೆ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ ಹಾಗೂ ನಮ್ಮ ಅರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಯಾವ ಸೊಪ್ಪು ತರಕಾರಿ ಯಾವ ರೋಗಕ್ಕೆ ಹಾಗೂ ಯಾವುದರಿಂದ ಲಾಭ ಹೆಚ್ಚು ಎಂಬುದು ತಿಳಿದಿಲ್ಲ. ಪಾಲಕ್ ಸೊಪ್ಪಿನಲ್ಲಿ ಅಧಿಕವಾದ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು.

  • ಸುದ್ದಿ

    ಬರದಿಂದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋದ ರೈತರು…..!

    ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ಗಳು ಮೊರೆ ಹೋಗಿದ್ದಾರೆ. ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು. ಬೆಳೆ ಮೊಳಕೆಯೊಡೆದು ಈಗ ನೆಲ…

  • ಆಯುರ್ವೇದ, ಆರೋಗ್ಯ

    ಜೇನುತುಪ್ಪದ ಆರೋಗ್ಯಕರ ಗುಣಗಳು

    ಜೇನುತುಪ್ಪವನ್ನು ಯಾರು ತಾನೇ ಬೇಡ ಎನ್ನುತ್ತಾರೆ. ಪ್ರಪಂಚದಲ್ಲಿ ‘ಏಕ್ಸ್ಪಾರ್ ಡೇಟ್’ ಇಲ್ಲದೆ ಇರುವ ಏಕೈಕ ವಸ್ತು ಎಂದರೆ ಅದು ಈ ಜೇನು ತುಪ್ಪ. ಈ ಜೇನು ತುಪ್ಪವನ್ನು ಗಾಜಿನ ಬಾಟಲಿಯಲ್ಲಿ ಇಟ್ಟರೆ ಅದು ಎಷ್ಟೇ ವರ್ಷ ಹಳೆಯದಾದರೂ ಬಳಸಬಹುದು.ಇದನ್ನು ಫ್ರಿಜ್ ನಲ್ಲಿ ಮತ್ತು ಬಿಸಿಲಿನಲ್ಲಿ ಇರಬಾರದು. ಯಾರಿಗೆ ಜೇನು ತುಪ್ಪ ಇಷ್ಟ ಇಲ್ಲವೋ ಅಥವಾ ಅದರ ಬಗ್ಗೆ ಮಾಹಿತಿ ಇಲ್ಲವೋ, ಅವರು ಈ ಮಾಹಿತಿಯನ್ನು ಒಮ್ಮೆ ಓದಿ.ಇದನ್ನು ಎಲ್ಲಾ ವಯೋಮಾನದವರು ಬಳಸ ಬಹುದು. ಇದನ್ನು ರಕ್ತವರ್ಧಕ ಟಾನಿಕ್…