ಸುದ್ದಿ

ಗೊಂಬೆ ನಿವೇದಿತಾ ಗೌಡ ಹೊಸ ಕೆಲಸಕ್ಕೆ ಸೇರಿದ್ದೇಕೆ? ಅದು ಯಾವ ಕೆಲಸ ಗೊತ್ತಾ ?

99

ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಪ್ರಣಯ ಜೋಡಿ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕೂ ಮುನ್ನವೇ ನಿವೇದಿತಾ ಗೌಡ ಗುಡ್ ನ್ಯೂಸ್ ನೀಡಿದ್ದಾರೆ. ಬಿಗ್‌ ಬಾಸ್‌ ಮನೆಯ ಬೇಬಿ ಡಾಲ್‌ ಎಂದೇ ಹೆಸರಾದ ನಿವೇದಿತಾ ಗೌಡರನ್ನು ಯಾರು ತಾನೇ ಮರೆಯುವುದುಂಟ ಹೇಳಿ. ತನ್ನ ಮುದ್ದು-ಮುದ್ದಾದ ಮಾತುಗಳನ್ನಾಡುತ್ತ ಸೋಷಿಯಲ್ ಮೀಡಿಯಾದಿಂದ ಬಿಗ್ ಬಾಸ್ ಮನೆಯ ತನಕ ಹೆಜ್ಜೆಯಿಟ್ಟ ಚೆಲುವೆ ನಿವೇದಿತಾ. ಬಿಗ್ ಬಾಸ್ ಮನೆಯಲ್ಲಿ ಕನ್ನಡದ ರ‍್ಯಾಪ್‌ ಸ್ಟಾರ್ ಚಂದನ್ ಶೆಟ್ಟಿಯವರ ಮನಸ್ಸನ್ನು ಗೆದ್ದು ಬಿಗ್ಬಾಸ್ ಬೊಂಬೆ ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದು ನಮಗೆ ಗೊತ್ತಿದೆ. ಈ ಸಾಲಿಗೆ ಮತ್ತೊಂದು ವಿಷಯವೆಂದೆ ಈಗ ನಿವ್ವಿ ಕೆಲಸಕ್ಕೆ ಹೊರಟ್ಟಿದ್ದಾರೆ.

ಇದೇ ವರ್ಷ ಮೈಸೂರಿನ ಯುವ ದಸರಾದಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಓಪನ್‌ ಆಗಿ ಪ್ರಪೋಸ್ ಮಾಡಿದ್ದು ಯಾರು ಮರೆಯಲು ಸಾಧ್ಯವಿಲ್ಲ. ಅಂದಿನಿಂದ ಇಂದಿನ ತನಕ ಚಂದನ್ ಶೆಟ್ಟಿ-ನಿವೇದಿತಾ ಗೌಡ ಜೋಡಿಯ ಮೇಲೆ ಎಲ್ಲರೂ ಒಂದು ಕಣ್ಣಿಟ್ಟಿದ್ದಾರೆ. . ಈಗ ಇದೇ ಬೇಬಿ ಡಾಲ್ ನಿವೇದಿತಾ ಗೌಡರ ಮನೆಯಿಂದ ಹೊಸದೊಂದು ಸ್ಪೆಷಲ್ ಸಮಾಚಾರ ಹೊರಬಂದಿದೆ. ನಿವೇದಿತಾ ಗೌಡ ಕೆಲಸಕ್ಕೆ ಹೊಗುತ್ತಿದ್ದಾರೆ. ಅದು ಏರ್‌ ಪೋರ್ಟ್‌ ನಲ್ಲಿ ಎಂಬುದನ್ನು ಖುದ್ದು ಸೋಷಿಯಲ್‌ ಮೀಡಿಯಾದಲ್ಲಿ ಬೇಬಿ ಡಾಲ್‌ ಪೋಸ್ಟ್‌ ಮಾಡಿದ್ದಾರೆ.

ಬಾರ್ಬಿ ಡಾಲ್ ನಿವೇದಿತಾ ಗೌಡ ಏರ್​ಪೋರ್ಟ್​ ಕೆಲಸ ಮಾಡುವ ಗುರಿಯಿಟ್ಟುಕೊಂಡಿದ್ದರು. ಅದರಂತೆ ಅವರಿಗೆ ಇದೀಗ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್)ದಲ್ಲಿ ಆಪರೇಟರ್ ಅಸಿಸ್ಟೆಂಟ್ ಕೆಲಸ ಸಿಕ್ಕಿದೆ. ಈ ವಿಚಾರವನ್ನು ನಿವೇದಿತಾ ಗೌಡ ತಮ್ಮ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ, ಕೊನೆಗೂ ಎಂದು ಬರೆದು ವಿಮಾನ ಹಾಗೂ ಹಾರ್ಟ್ ಎಮೋಜಿ ಹಾಕಿಕೊಂಡಿದ್ದಾರೆ. ಇದನ್ನು ನೋಡಿದ 79 ಸಾವಿರಕ್ಕೂ ಅಧಿಕ ನೆಟ್ಟಿಗರು ಅಭಿನಂದನೆ ತಿಳಿಸಿದ್ದಾರೆ.

ಮದುವೆ ತಯಾರಿ ನಡುವೆಯೂ ನಿವೇದಿತಾ ಗೌಡ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ನನಗೆ  ಏರ್​ಪೋರ್ಟ್​ ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತು. ಈಗ ನಾನು ಇಷ್ಟಪಟ್ಟ ಕೆಲಸವೇ ಸಿಕ್ಕಿದೆ. ಏರ್​ಪೋರ್ಟ್​ ನಲ್ಲಿ ಕೆಲಸ ಮಾಡಲು ತುಂಬಾ ತಾಳ್ಮೆ, ಫ್ಯಾಶನ್ ಮತ್ತು ಆಸಕ್ತಿ ಇರಬೇಕು. ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ದು, ಆಪರೇಶನ್ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ತಮ್ಮ ಕೆಲಸದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    SSLC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ನೇಮಕಾತಿ, 20 ಸಾವಿರ ರೂ. ವೇತನದ ಉದ್ಯೋಗಾವಕಾಶ,..!!

    ರೈಲ್ವೆ ಇಲಾಖೆಯಲ್ಲಿನ ಸಹಾಯಕ ಲೊಕೊ ಪೈಲಟ್ (ALP) ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ವಿಭಾಗದಲ್ಲಿ ಒಟ್ಟು 306 ಹುದ್ದೆಗಳು ಖಾಲಿ ಇದ್ದು, ಆಸಕ್ತರು ನವೆಂಬರ್ 11ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ರೈಲ್ವೆ ನೇಮಕಾತಿ ಸೆಲ್ (ಆರ್‌ಆರ್‌ಸಿ) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ. ಒಟ್ಟು ಹುದ್ದೆಗಳ ಸಂಖ್ಯೆ – 306ಸಹಾಯಕ ಲೊಕೊ ಪೈಲಟ್ – 85 ಹುದ್ದೆಗಳುತಂತ್ರಜ್ಞ (ಟೆಕ್ನಿಷಿಯನ್) – 221 ಹುದ್ದೆಗಳು ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ…

  • ಆರೋಗ್ಯ

    ಹಾಗಲಕಾಯಿಯ ಆರೋಗ್ಯಕರ ಪ್ರಯೋಜನಗಳು

     ಇಂಗ್ಲಿಷ್ ನಲ್ಲಿ  ಬಿಟರ್ ಗೌರ್ಡ್ ಎಂದು ಕರೆಯಲಾಗುವ ಇದು,ಸೌತೆಕಾಯಿಯಂತಹ ಕ್ಯುಕರ್ಬಿಟೇಸಿಯೆ ಜಾತಿಗೆ ಸೇರಿದ ಉಷ್ಣವಲಯ ಹಾಗು ಉಪೋಷ್ಣವಲಯದ ಬಳ್ಳಿಯಾಗಿದೆ. ಇದು ತಿನ್ನಲು ಯೋಗ್ಯವಾದ ಹಣ್ಣನ್ನು ಹೊಂದಿರುವ ಕಾರಣಕ್ಕೆ ಏಷಿಯಾ , ಆಫ್ರಿಕಾ ಹಾಗು ಕ್ಯಾರೆಬಿಯನ್ ಅಂದರೆ ವೆಸ್ಟ್ ಇಂಡೀಸ್ ದ್ವೀಪ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದರ ಹಣ್ಣು ಇತರ ಎಲ್ಲ ಹಣ್ಣು ಗಳಿಗಿಂತ ಅತ್ಯಧಿಕ ಕಹಿಯಾಗಿರುತ್ತದೆ. ಇದರಲ್ಲಿಯೂ ಮೂಲಭೂತವಾಗಿ ಹಣ್ಣಿನ ಆಕಾರ ಹಾಗು ಕಹಿಯಲ್ಲಿ ವ್ಯತ್ಯಾಸ ಹೊಂದಿರುವ ಹಲವು ಪ್ರಭೇದಗಳಿವೆ. ಹಾಗಲಕಾಯಿಯ ಉಪಯೋಗಗಳು ಕೊಲೆಸ್ಟ್ರಾಲ್‍ ಕಡಿಮೆ ಮಾಡುತ್ತದೆ: ಹಾಗಲಕಾಯಿಯಲ್ಲಿ ಪೈಟೋನ್ಯೂಟ್ರಿಯೆಂಟ್‍ಗಳೆಂಬ ಆಂಟಿ ಆಕ್ಸಿಡೆಂಟಗಳಿರುತ್ತದೆ. ಇವು ಕೆಟ್ಟ…

  • ಸುದ್ದಿ

    ಡಾಕ್ಟರೇಟ್ ಪಡೆದ ರವಿಮಾಮ : ತಪ್ಪಿರುವ ದಾರಿಯನ್ನ ಸರಿ ಮಾಡಿಕೊಳ್ಳುತ್ತೇನೆ ಎಂದ ಕ್ರೇಜಿ ಸ್ಟಾರ್…!

    ಕನಸುಗಾರ ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇವರು ಮಾಡಿದ ಕೆಲಸ ಗುರುತಿಸಿ ಈಗ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದೆ. ನಟ ವಿ.ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಬೆಂಗಳೂರಿನ ಸಿಎಂಆರ್‌ ಕಾಲೇಜು ಆವರಣದಲ್ಲಿ ಸಂಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರಿಗೆ ಡಾಕ್ಟರೇಟ್  ಗೌರವ ನೀಡಲಾಗಿದೆ. ಅಕ್ಟೋಬರ್ 18 ರವಿಚಂದ್ರನ್ ಮಗಳು ಗೀತಾಂಜಲಿ ಹುಟ್ಟಿದ ದಿನ. ಆ ದಿನವೇ ಅವರಿಗೆ ಗೌರವ ಡಾಕ್ಟರೇಟ್ ನೀಡಲಿದ್ದೇವೆ ಎಂದು ಯುನಿವರ್ಸಿಟಿಯಿಂದ ಕಾಲ್ಬಂದಿತ್ತಂತೆ. ಅಷ್ಟೇ ಅಲ್ಲದೆ ಅವರ 35ವರ್ಷಗಳ…

  • ಸುದ್ದಿ

    ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬಿತ್ತು ಬರೋಬ್ಬರಿ 47,500 ರೂ. ದಂಡ

    ಭುವನೇಶ್ವರ, ಸಂಚಾರಿ ನಿಯಮ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದು, ಕುಡಿದು ಆಟೋ ಚಾಲನೆ ಮಾಡಿರುವುದು ಸೇರಿದಂತೆ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬರೋಬ್ಬರಿ 47,500 ರೂ. ದಂಡ ವಿಧಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಕುಡಿದು ವಾಹನ ಚಾಲನೆ ಮಾಡಿರುವುದು, ಪರ್ಮಿಟ್, ಚಾಲನಾ ಪರವಾನಗಿ, ನೋಂದಣಿ ಸೇರಿದಂತೆ ತಿದ್ದುಪಡಿ ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 47,500 ರೂ. ದಂಡ ವಿಧಿಸಲಾಗಿದೆ. ಭಾನುವಾರದಿಂದ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಭುವನೇಶ್ವರದ ಪೊಲೀಸ್ ಅಧಿಕಾರಿಗಳು…

  • ಸುದ್ದಿ

    ಮೈಸೂರಿನ ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ….!

    ಮೈಸೂರು ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದ ರೈತರ ಬ್ಯಾಂಕಿನ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಪ್ರವಾಹದಿಂದ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಟಿ. ನರಸೀಪುರ, ಪಿರಿಯಾಪಟ್ಟಣ, ನಂಜನಗೂಡು, ಹುಣಸೂರು ತಾಲ್ಲೂಕಿನ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಇದರಿಂದ ಸಕಾಲಕ್ಕೆ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕಿಗೆ ರಾಜ್ಯ ಸರ್ಕಾರ ಈ ಕುರಿತಾಗಿ ಮನವಿ ಸಲ್ಲಿಸಿದ್ದು‌, ಸರ್ಕಾರದ ಮನವಿ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೈತರು ಪಡೆದ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷದ…

  • ಸುದ್ದಿ

    ‘ಸರ್ಕಾರಿ ಆಸ್ಪತ್ರೆ’ ವೈದ್ಯರಿಗೆ ಖಡಕ್ ಹೆಚ್ಚರಿಕೆ ನೀಡಿದ ಬಿ.ಶ್ರೀರಾಮುಲು…!

    ಈ ಸರ್ಕಾರದಲ್ಲಿ ನಾನು ಆರೋಗ್ಯ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡೋಕ್ಕೆ ನಿಮಗೆ ಆಗಲ್ಲ ಎಂದ್ರೆ ಇಲ್ಲಿಂದ ತೊಲಗಿ ಎಂದು ಕೊಡಗು ಜಿಲ್ಲೆಯ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾತ್ರಿ ವೇಳೆಯಲ್ಲಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ, ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಹಾಗೂ ವಾಸ್ತವ್ಯ ಹೂಡಲು ಭೇಟಿ ನೀಡಿದ ಆರೋಗ್ಯ ಮಂತ್ರಿ ಶ್ರೀರಾಮುಲುರವರು, ಆಸ್ಪತ್ರೆಯ ಒಳಗೆ ಪರಿಶೀಲನೆ ನಡೆಸಿ ಆಸ್ಪತ್ರೆಯಲ್ಲಿ ಇದ್ದಂತಹ ರೋಗಿಗಳನ್ನು…