ಉಪಯುಕ್ತ ಮಾಹಿತಿ

ಯಾವುದೇ ಹೊಸ ಗಡಿಯಾರಗಳನ್ನ ನೋಡಿದಾಗ ಅದರಲ್ಲಿ 10:10 ಟೈಮ್ ಗೆ ನಿಂತಿರುತ್ತದೆ ಯಾಕೆ ಗೊತ್ತಾ?

181

ಹೌದು ನೀವು ಗಮನಿಸಿರಬಹುದು ನೀವು ಯಾವುದೇ ಗಡಿಯಾರಗಳನ್ನು ತರಲು ಅಂಗಡಿಗಳಿಗೆ ಹೋದಾಗ ಆ ಎಲ್ಲ ಗಡಿಯಾರಗಳು 10:10 ಸಮಯವನ್ನು ತೋರಿಸುತ್ತದೆ ಅಂದರೆ ಗಡಿಯಾರ ರೆಡಿಯಾಗಿ ಬಂದಿರುವಾಗ ಎಲ್ಲವು ಕೂಡ 10 :10 ಸಮಯದಲ್ಲಿ ನಿಂತಿರುತ್ತದೆ, ಅದು ಯಾಕೆ ಅನ್ನೋದು ನಿಮಗೆ ತಿಳಿಯದೆ ಇರಬಹುದು ಆದ್ರೆ ಇದರ ಹಿಂದಿದೆ ಕೆಲವು ಇಂಟ್ರೆಸ್ಟಿಂಗ್ ವಿಚಾರ ಅದು ಏನು ಅನ್ನೋದನ್ನ ಮುಂದೆ ನೋಡಿ.

ನೀವು ಇದನ್ನು ಗಮನಿಸಿರಬಹುದು ಒಂದು ವೇಳೆ ಗಮನಿಸದೆ ಇದ್ರೆ ನೀವು ಒಮ್ಮೆ ಯಾವಾಗಲು ಗಡಿಯಾರದ ಅಂಗಡಿಗೆ ಹೋದಾಗ ನೋಡಿ ಅಲ್ಲಿ ನೋಡುವಂತ ಎಲ್ಲ ಹೊಸ ಗಡಿಯಾರಗಳು 10:10 ಕ್ಕೆ ನಿಂತಿರುತ್ತವೆ. ಯಾಕೆಂದರೆ ಇದು ಗಡಿಯಾರದ ಕಂಪನಿಯ ಲಾಂಛನ ಎಂಬುದಾಗಿ ಹೇಳಲಾಗುತ್ತದೆ. ಅಷ್ಟೇ ಅಲ್ದೆ ಅಮೇರಿಕಾದ ಅಧ್ಯಕ್ಷ ಅಬ್ರಾಹಂ ಲಿಂಕನ್ ಅವರು ಗುಂಡಿನ ದಾಳಿಗೆ ಬಲಿಯಾದ ಸಮಯದ ದ್ಯೋತಕವಾಗಿ ಹೊಸ ಗಡಿಯಾರಕ್ಕೆ 10.10 ರ ಸಮಯವನ್ನು ನಿಗದಿಗೊಳಿಸಲಾಗಿರುತ್ತದೆ ಎಂಬುದಾಗಿ ಕೆಲವರು ಹೇಳುತ್ತಾರೆ.

ಆದ್ರೆ ತಜ್ಞರು ಹೇಳೋದೇ ಬೇರೆ ಜರ್ಮನಿಯ ಟ್ಯೂಬಿಂಜೆನ್ ವಿಶ್ವವಿದ್ಯಾಲಯದ ಪ್ರಕಾರ ಗಡಿಯಾರದ ಸಮಯ 10.10 ಎಂದು ತೋರಿಸುತ್ತಿದ್ದರೆ ಅದೊಂದು ರೀತಿ ಮಂದಹಾಸದ ಮುಖದಂತಿರುತ್ತದೆ ಎಂದು ತಜ್ಞರು ಹೇಳಿದ್ದಾರೆ. ತಜ್ಞರು ಹೀಗೆ ಹೇಳೋದ್ಯಾಕೆ ಅನ್ನೋ ಪ್ರಶ್ನೆ ಬರಬಹುದು ಅದಕ್ಕೆ ಉತ್ತರ ಮುಂದೆ ನೋಡಿ.

ಇದರ ಕುರಿತು ಒಂದು ಸಂದರ್ಶನವನ್ನು ಮಾಡಿದಾಗ 40 ಕ್ಕೂ ಹೆಚ್ಚು ಮಂದಿಯನ್ನು ಈ ಸಂದರ್ಶನದಲ್ಲಿ ಬಳಸಲಾಗಿತ್ತು, ಆ ವೇಳೆಯಲ್ಲಿ ಗಡಿಯಾರದ ಸಮಯ 10.10 ರ ಬದಲಾಗಿ ಅದಕ್ಕೆ ವಿರುದ್ಧವಾದ 8.20 ರ ಸಮಯವನ್ನು ಗಡಿಯಾರದಲ್ಲಿ ನಿಲ್ಲಿಸಿದರೆ ಅದು ಬೇಸರದ ಮುಖಭಾವವನ್ನು ಸೂಸುತ್ತದೆಯಂತೆ. ಬಹಳಷ್ಟು ಜನರ ಮುಂದೆ ಬೇರೆ ಬೇರೆ ಸಮಯ ತೋರುವ ಗಡಿಯಾರ ಹಿಡಿದು ತೋರಿಸಿದಾಗ ಹೆಚ್ಚಿನ ಪಾಲು ಜನ ಹೇಳಿದ್ದು ಹೀಗೆ ಗಡಿಯಾರದ ಸಮಯವನ್ನು 10:10ಕ್ಕೆ ಇದ್ರೆ ಹೆಚ್ಚು ಕ್ರಿಯಾತ್ಮಕವಾಗಿರುತ್ತದೆ ಹಾಗಾಗಿ ಇದು ಮಂದಹಾಸವನ್ನು ನೀಡುತ್ತದೆ ಎಂಬುದಾಗಿ ಹಾಗಾಗಿ ಕಂಪನಿಯಿಂದ ಮಾರುಕಟ್ಟೆ ಬರುವ ಎಲ್ಲ ಗಡಿಯಾರದಲ್ಲಿ ಸಮಯ 10:10 ತೋರಿಸುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ