ಆರೋಗ್ಯ

ನೇರಳೆ ಹಣ್ಣು ತಿನ್ನುವುದರಿಂದ ಆಗುವ ಲಾಭಗಳನ್ನ ತಿಳಿದರೆ ನೀವು ಆಶ್ಚರ್ಯ ಪಡುತ್ತೀರಾ, ಈ ಉಪಯುಕ್ತ ಮಾಹಿತಿ ನೋಡಿ.

481

ನೇರಳೆ ಹಣ್ಣಿನಲ್ಲಿ ಪ್ರೊಟೀನ್, ಫೈಬರ್ ಮತ್ತು ಆರ್ಗಾನಿಕ್ ಹೆಚ್ಚಾಗಿ ಇರುವುದರಿಂದ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸ್ನೇಹಿತರೆ ನೇರಳೆ ಹಣ್ಣಿನಲ್ಲಿ ಕಬ್ಬಿಣದ ಅಂಶ ಬಹಳ ಹೆಚ್ಚಾಗಿ ಇರುವುತ್ತದೆ ಮತ್ತು ಈ ಹಣ್ಣು ರಕ್ತವನ್ನ ಶುದ್ದಿ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ ಮತ್ತು ರಕ್ತ ಶುದ್ಧ ಆಗುವುದರಿಂದ ನಮ್ಮ ಮುಖದ ತ್ವಚೆ ಕಾಂತಿಯುತವಾಗಿ ಕಾಣುತ್ತದೆ. ಇನ್ನು ಈ ಹಣ್ಣಿನ ಬೀಜವನ್ನ ಜಜ್ಜಿ ಮುಖಕ್ಕೆ ಹಚ್ಚುವುದರಿಂದ ಅಮ್ಮ ಮುಖದಲ್ಲಿನ ಮೊಡವೆಯ ಸಮಸ್ಯೆ ನಿವಾರಣೆ ಆಗುತ್ತದೆ, ಇನ್ನು ಅಜೀರ್ಣ, ಭೇದಿ ಮತ್ತು ಹೊಟ್ಟೆ ನೋವುಗಳನ್ನ ಕಡಿಮೆ ಮಾಡುವಲ್ಲಿ ಈ ನೇರಳೆ ಹಣ್ಣು ತುಂಬಾ ಸಹಕಾರಿ.

ಇನ್ನು ನೇರಳೆ ಹಣ್ಣಿನ ಜ್ಯುಸ್ ಮಾಡಿ ಕುಡಿಯುದರಿಂದ ನಮ್ಮ ದೇಹದಲ್ಲಿನ ಲಾಲಾರಸ ಹೆಚ್ಚಾಗುತ್ತದೆ ಮತ್ತು ಈ ಲಾಲಾರಸ ನಮ್ಮ ಜೀರ್ಣ ಕ್ರಿಯೆಗೆ ತುಂಬಾ ಸಹಕಾರಿ. ಇನ್ನು ಈ ನೇರಳೆ ಹಣ್ಣು ದೇಹದಲ್ಲಿ ಇರುವ ಸಕ್ಕರೆಯ ಪ್ರಮಾಣದ ಮೇಲೆ ಯಾವುದೇ ಪ್ರಮಾಣದ ಬೀರದೆ ಇರುವುದರಿಂದ ಡಯಾಬಿಟಿಸ್ ಇರುವವರಿಗೆ ಈ ಹಣ್ಣು ತುಂಬಾ ಒಳ್ಳೆಯದು, ಇನ್ನು ಡಯಾಬಿಟಿಸ್ ಲಕ್ಷಣಗಳಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆಯಂತಹ ತೊಂದರೆಗಳನ್ನ ಈ ಹಣ್ಣು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಇನ್ನು ನೇರಳೆ ಹಣ್ಣಿನಲ್ಲಿ ಇರುವ ಕೆಲವು ಗುಣಗಳು ನಮ್ಮ ದೇಹವನ್ನ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ.

ಇನ್ನು ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುವುದರಿಂದ ಕೆಮ್ಮು ಮತ್ತು ಗಂಟಲು ನೋವಿನ ಸಮಸ್ಯೆಯನ್ನ ನಿವಾರಣೆ ಮಾಡುತ್ತದೆ. ಒಟ್ಟಾರೆ ಹಳ್ಳಿಗಳಲ್ಲಿ ಸಿಗುವ ಈ ನೇರಳೆ ಹಣ್ಣುಗಳನ್ನ ತಿನ್ನುವುದರಿಂದ ನಮ್ಮ ದೇಹವನ್ನ ಆರೋಗ್ಯವಾಗಿ ಇಟ್ಟುಕೊಳ್ಳಬಹುದು, ಇನ್ನು ಈ ಹಣ್ಣನ್ನ ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕೊಡ ಹೆಚ್ಚಾಗುತ್ತದೆ. ಈಗಿನ ನಮ್ಮ ಜೀವನ ಶೈಲಿನಲ್ಲಿ ನಾವು ತಿನ್ನುವ ಆಹಾರ ನಮ್ಮ ಆರೋಗ್ಯವನ್ನ ಹಾಳು ಮಾಡುತ್ತಿದೆ, ಇನ್ನು ನೈಸರ್ಗಿಕವಾಗಿ ಸಿಗುವ ಇಂತಹ ಹಣ್ಣುಗಳನ್ನ ತಿನ್ನುವುದರಿಂದ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ