ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಸದಿಲ್ಲಿ, ಮಹಾತ್ಮಾ ಗಾಂಧಿ ಅವರ 150ನೇ ಹುಟ್ಟುಹಬ್ಬದಂದು ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಮಹಾ ಆಂದೋಲನ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದಾರೆ.
ದೇಶವನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಂದಿನಿಂದ ಸ್ವಚ್ಛ ಭಾರತ ಮಾದರಿಯ ಆಂದೋಲನ ನಡೆಸುವಂತೆ ಕೇಳಿಕೊಂಡಿರುವ ಪ್ರಧಾನಿ, ಪ್ಲಾಸ್ಟಿಕ್ನ ಸುರಕ್ಷಿತ ವಿಲೇವಾರಿಗೆ ದೀಪಾವಳಿ ಒಳಗೆ ಹೊಸ ವಿಧಾನಗಳನ್ನು ಆವಿಷ್ಕರಿಸುವಂತೆ ನಗರಸಭೆಗಳು, ಸರಕಾರೇತರ ಸಂಘಟನೆಗಳು ಮತ್ತು ಕಾರ್ಪೊರೇಟ್ ವಲಯಕ್ಕೆ ಮನವಿ ಮಾಡಿದ್ದಾರೆ. ಪ್ಲಾಸ್ಟಿಕ್ನ್ನು ಒಂದೇ ಬಾರಿ ಬಳಸಿ ಎಸೆಯುವ ಆಭ್ಯಾಸವನ್ನು ಬಿಡುವ ಮೂಲಕ ಪರಿಸರ ರಕ್ಷಣೆಗೆ ಸಹಕರಿಸುವಂತೆ ಸ್ವಾತಂತ್ರ್ಯದಿನದ ಭಾಷಣದಲ್ಲಿ ಕರೆ ನೀಡಿದ್ದ ಪ್ರಧಾನಿ, ಆಗಸ್ಟ್ ತಿಂಗಳ ಮನ್ಕಿ ಬಾತ್ನಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರವನ್ನೇ ಸಾರಿದ್ದಾರೆ.
ಸೆ.11ರಿಂದ ‘ಸ್ವಚ್ಛತಾ ಹೀ ಸೇವಾ’
ಸ್ವಚ್ಛತೆಯನ್ನು ಸೇವೆ ಎಂದು ಪರಿಗಣಿಸಬೇಕೆಂದು ಮನವಿ ಮಾಡಿ ಪ್ರತಿ ವರ್ಷ ನಡೆಸಲಾಗುವ ಸ್ವಚ್ಛತಾ ಹೀ ಸೇನಾ ಕಾರ್ಯಕ್ರಮ ಈ ವರ್ಷ ಸೆಪ್ಟೆಂಬರ್ 11ರಿಂದ ಆರಂಭವಾಗಲಿದೆ ಎಂದು ಮೋದಿ ಹೇಳಿದರು.
ಪ್ಲಾಸ್ಟಿಕ್ ಮುಕ್ತ ಭಾರತ ಮಾತೆ
-ಭಾರತ ಮಾತೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಪ್ರತಿಜ್ಞೆಯೊಂದಿಗೆ ಎಲ್ಲರೂ ಈ ಬಾರಿ ಗಾಂಧಿ ಜಯಂತಿ ಆಚರಿಸಬೇಕು.
– ಎಲ್ಲಾ ನಗರಾಡಳಿತ ಮತ್ತು ಜಿಲ್ಲಾಡಳಿತಗಳು, ಪಂಚಾಯಿತಿಗಳು, ಸರಕಾರ ಮತ್ತು ಸರಕಾರೇತರ ಸಂಘಟನೆಗಳು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮತ್ತು ಶೇಖರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
– ಸಂಗ್ರಹಿಸಲಾದ ಪ್ಲಾಸ್ಟಿಕ್ನ್ನು ಮರುಬಳಕೆ ಮಾಡುವ, ಇಂಧನವಾಗಿ ಪರಿವರ್ತಿಸುವ ಸಾಧ್ಯತೆಗಳ ಬಗ್ಗೆ ಕಾರ್ಪೊರೇಟ್ ವಲಯ ಆವಿಷ್ಕಾರ ಮಾಡಬೇಕು.
ದೀಪಾವಳಿ ಡೆಡ್ಲೈನ್
ಪ್ಲಾಸ್ಟಿಕ್ ತ್ಯಾಜ್ಯದ ಸುರಕ್ಷಿತ ವಿಲೇವಾರಿಗೆ ಅಕ್ಟೋಬರ್ 27ರ ದೀಪಾವಳಿ ಒಳಗೆ ಹೊಸ ವಿಧಾನಗಳನ್ನು ಹುಡುಕುವಂತೆ ಅವರು ಮನವಿ ಮಾಡಿದ್ದಾರೆ.
ಜನ, ವರ್ತಕರುಏನು ಮಾಡಬಹುದು?
* ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ಎಸೆಯುವ ಅಭ್ಯಾಸ ಬಿಟ್ಟು ಬಿಡಿ
* ಅಂಗಡಿಗೆ ಹೋಗುವಾಗ ಬಟ್ಟೆ ಚೀಲ ಒಯ್ಯುವುದನ್ನು ಮರೀಬೇಡಿ
* ಗ್ರಾಹಕರು ತಾವೇ ಚೀಲ ತರಬೇಕೆಂದು ಅಂಗಡಿಗಳಲ್ಲಿ ಬೋರ್ಡ್ ಹಾಕಬಹುದು.
* ಅಂಗಡಿಗಳಲ್ಲೇ ಬಟ್ಟೆ,, ಪೇಪರ್ ಚೀಲ ಒದಗಿಸುವ ವ್ಯವಸ್ಥೆ ಮಾಡಬಹುದು.
ಪ್ಲಾಸ್ಟಿಕ್ ಸಮಸ್ಯೆಯಅಗಾಧತೆ
25,940 ಟನ್
ದೇಶದಲ್ಲಿ ಪ್ರತಿದಿನ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯ
ಇದು 9,000 ಏಷ್ಯನ್ ಆನೆಗಳ ತೂಕಕ್ಕಿಂತಲೂ ಹೆಚ್ಚು!
10,376ಟನ್ ಪ್ರತಿದಿನಸಂಗ್ರಹಿಸಲಾಗದೆಉಳಿಯುವಪ್ಲಾಸ್ಟಿಕ್
ದಿಲ್ಲಿ, ಮುಂಬಯಿ, ಬೆಂಗಳೂರು, ಚೆನ್ನೈ, ಕೋಲ್ಕೊತಾ
ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ನಡೆಯುವ ನಗರಗಳು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಪ್ರಯತ್ನವಾಗಿ ಕೇಂದ್ರ ಸರಕಾರವು, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ದಲಿತ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯ ಹಿನ್ನಲೆಯಲ್ಲಿ ಬಾಹುಬಲಿ 2 ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗವ ಬಗ್ಗೆಯೇ ಹಲವು ಪ್ರಶ್ನೆಗಳು ಎದ್ದಿದ್ದವು. ಕಡೆಗೂ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ತಮ್ಮ ಹೇಳಿಕೆಯ ಕುರಿತು ಕ್ಷಮೆಯಾಚಿಸಿದ ಬಳಿಕ ಚಿತ್ರ ಬಿಡುಗೆಡೆಯಾಗಿ ಚಿತ್ರಮಂದಿಗಳು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿಕೊಂಡಿದ್ದವು.
ನಮ್ಮನ್ನು ಕಾಡುವ ಬಹುತೇಕ ರೋಗಗಳಿಗೆ ಮನೆಯಲ್ಲಿಯೇ ಮದ್ದಿದೆ. ಅಡುಗೆ ಮನೆಯಲ್ಲಿರುವ ಪದಾರ್ಥಗಳಿಗೆ ನಮ್ಮ ಆರೋಗ್ಯ ಕಾಪಾಡುವ ಶಕ್ತಿ ಇದೆ. ಅದ್ರಲ್ಲಿ ಬೆಲ್ಲ ಕೂಡ ಒಂದು. ಬೆಲ್ಲ ತಿನ್ನಲ್ಲೊಂದೇ ಸಿಹಿಯಲ್ಲ. ಆರೋಗ್ಯಕ್ಕೂ ಒಳ್ಳೆಯದು. ಪ್ರತಿದಿನ 20 ಗ್ರಾಂ ಬೆಲ್ಲವನ್ನು ಸೇವನೆ ಮಾಡಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.ಬೆಲ್ಲ ತಿನ್ನುವುದು ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಬೆಲ್ಲ ಹೊಟ್ಟೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆಹಾರ ಸೇವನೆ ನಂತ್ರ ಬೆಲ್ಲ ತಿನ್ನುವುದ್ರಿಂದ ಜೀರ್ಣಕ್ರಿಯೆ ಸರಿಯಾಗುವ ಜೊತೆಗೆ ಗ್ಯಾಸ್ ಸಮಸ್ಯೆ ದೂರವಾಗುತ್ತದೆ. 7…
ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮಾನಸಿಕ ಸಮತೋಲನ ಕಳೆದುಕೊಂಡು ಓಡಾಡುತ್ತಿದ್ದಾರೆ. ಇವರ ಸ್ಥಿತಿಯನ್ನು ನೋಡಿ ಕೆಲವರು ವಿಡಿಯೋ ಮಾಡಿ ಲೇವಡಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ವೆಂಕಟ್ ಸ್ಥಿತಿಗೆ ಮರುಗುತ್ತಿದ್ದಾರೆ. ಸದ್ಯ ಊಟ ಇಲ್ಲದೆ ಕೆಲವರಿಂದ ಹಲ್ಲೆಗೊಳಗಾಗಿರುವ ವೆಂಕಟ್ಗೆ ಸುದೀಪ್ ಚಿಕಿತ್ಸೆಗೆ ನೆರವಾಗಲು ಮುಂದಾಗಿದ್ದಾರೆ. ಕಿಚ್ಚ ಚಾರಿಟೇಬಲ್ ಸೊಸೈಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಜನರು ಸ್ವಲ್ಪ ಸಂಯಮದಿಂದ ವರ್ತಿಸಬೇಕೆಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ ಮನವಿ ಮಾಡಿದ್ದಾರೆ. ಆತ್ಮೀಯರೆ ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಜರ್ಜಿರಿತರಾಗಿ…
2ನೇ ಟೆಸ್ಟ್ ಪಂದ್ಯ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ಕೆಎಲ್ ರಾಹುಲ್ ಈ ಪಂದ್ಯಕ್ಕೆ ನಾಯಕ. ಬೆನ್ನುನೋವಿನ ಸೆಳೆತದಿಂದ ವಿರಾಟ್ ಕೊಹ್ಲಿ ಅಲಭ್ಯ,ಹನುಮ ವಿಹಾರಿ ಕಣಕ್ಕೆ ಅಂತಿಮ 11ರ ಬಳಗ ಭಾರತ ಮಾಯಾಂಕ್ ಅಗರ್ವಾಲ್ ಕೆ ಎಲ್ ರಾಹುಲ್(ನಾಯಕ) ಚೇತೇಶ್ವರ ಪೂಜಾರಾ ಅಜಿಂಕ್ಯ ರಹಾನೆ ಹನುಮ ವಿಹಾರಿ ರಿಷಭ್ ಪಂತ್ (ವಿ.ಕೀ) ರವಿಚಂದ್ರನ್ ಅಶ್ವಿನ್ ಶಾರ್ದೂಲ್ ಠಾಕೂರ್ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾ ಡೀನ್ ಎಲ್ಗರ್(ನಾಯಕ) ಐಡೆನ್…
ಫ್ಲೋರೋಸಿಸ್ ಎಂಬದು ಅತಿಯಾದ ಫ್ಲೋರೈಡ್ ಸೇವನೆಯಿಂದ ಬರುತ್ತದೆ. ದುಷ್ಪರಿಣಾಮಕಾರಿ ಫ್ಲೋರೈಡ್ ಅಂತರ್ಜಲದಲ್ಲಿ ಕಂಡುಬರುತ್ತದೆ. ಕಲ್ಲುಬಂಡೆಗಳಲ್ಲಿರುವ ನೀರಿನಲ್ಲಿ ಹೆಚ್ಚಾಗಿ ಫ್ಲೋರೈಡ್ ಅಂಶ ದೃಢಪಟ್ಟಿರುತ್ತದೆ. ಜೀವರಾಶಿಗಳು ಫ್ಲೋರೈಡ್ಯುಕ್ತ ನೀರನ್ನು ಸೇವನೆ ಮಾಡುವುದರಿಂದ, ಫ್ಲೋರೋಸಿಸ್ ನಿಂದ ಬಳಲುತ್ತಾರೆ. ಸಂಶೋಧಕಗಳ ಪ್ರಕಾರ ಫ್ಲೋರೈಡ್ ಮಕ್ಕಳ ಬುದ್ಧಿಮತ್ತೆಯ ಪ್ರಮಾಣದಲ್ಲಿ ಪ್ರಭಾವ ಬೀರಿರುವುದನ್ನು ದಾಖಲಿಸಿದ್ದಾರೆ. ದೀರ್ಘಕಾಲ ಫ್ಲೋರೈಡ್ ಸೇವನೆ ಮಾಡುವುದರಿಂದ ದಂತ ಮತ್ತುಮೂಳೆಗಳಲ್ಲದೆ, ಇತರೆ ಭಾಗದಲ್ಲೂ ದುಃಷ್ಪರಿಣಾಮಗಳು ಬೀರುತ್ತಿವೆ. ಸಕಲ ಅಂಗಾAಗಗಳ ಮೇಲೆಫ್ಲೋರೈಡ್ ಪ್ರಭಾವ ಬೀರುತ್ತದೆ ಹಾಗೂ ಪ್ರಮುಖವಾಗಿ ಹೃದಯ, ಸ್ವಾಶಕೊಶ, ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಮತ್ತು…