ಸುದ್ದಿ

2 ದಿನಗಳ ಭೇಟಿಗಾಗಿ ಕೇದಾರನಾಥಕ್ಕೆ ಬಂದಿಳಿದ ಪ್ರಧಾನಿ ಮೋದಿ, ಪುನರ್ನಿರ್ಮಾಣ….

44

ಶನಿವಾರ ಬೆಳಗ್ಗೆ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ, ಬಳಿಕ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕೇದಾರನಾಥ ಮಂದಿರಕ್ಕೆ ತೆರಳಿದರು. ಸಮುದ್ರ ಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ಮಂದಿರದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರವಾಹ ಮತ್ತು ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಕೇದಾರನಾಥ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯಗಳ ಪ್ರಗತಿಯನ್ನು ಪ್ರಧಾನಿ ಪರಾಮರ್ಶಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಉತ್ತರಾಖಂಡದ ಕೇದಾರನಾಥಕ್ಕೆ ಶನಿವಾರ ಆಗಮಿಸಿದರು. ಸಾರ್ವತ್ರಿಕ ಚುನಾವಣೆಯ ಪ್ರಚಾರ ಕೊನೆಗೊಂಡ ಮರುದಿನವೇ ಪ್ರಧಾನಿ ಕೇದಾರನಾಥಕ್ಕೆ ಭೇಟಿ ನೀಡಿದರು. ಶನಿವಾರ ಬೆಳಗ್ಗೆ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ, ಬಳಿಕ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕೇದಾರನಾಥ ಮಂದಿರಕ್ಕೆ ತೆರಳಿದರು.

ಸಮುದ್ರ ಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ಮಂದಿರದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರವಾಹ ಮತ್ತು ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಕೇದಾರನಾಥ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯಗಳ ಪ್ರಗತಿಯನ್ನು ಪ್ರಧಾನಿ ಪರಾಮರ್ಶಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕೇದಾರನಾಥ ಕಣಿವೆಯ ಸುತ್ತಲಿನ ಎಲ್ಲ ಅಧಿಕಾರಿಗಳೂ ಕಟ್ಟೆಚ್ಚರದಿಂದ ಇರುವಂತೆ ರಾಜ್ಯ ವಿಕೋಪ ಪರಿಹಾರ ಪಡೆಯ (ಎಸ್‌ಡಿಆರ್‌ಎಫ್‌) ಕಮಾಂಡೆಂಟ್ ತೃಪ್ತಿ ಭಟ್‌ ನಿರ್ದೇಶನ ನೀಡಿದ್ದಾರೆ.

ಕೇದಾರನಾಥದ ಭಗವಾನ್ ಶಿವನ ಮಂದಿರಕ್ಕೆ ಪ್ರಧಾನಿ ಮೋದಿ ಹಿಂದೆಯೂ ಹಲವು ಬಾರಿ ಭೇಟಿ ನೀಡಿದ್ದರು. ಆರು ತಿಂಗಳ ಚಳಿಗಾಲದ ರಜೆಯ ಬಳಿಕ ಕೇದಾರನಾಥ ಮಂದಿರದ ವೆಬ್‌ಸೈಟ್‌ ಅನ್ನು ಪ್ರವಾಸಿಗರ ಬುಕಿಂಗ್‌ಗಾಗಿ ಮತ್ತೆ ಮೇ 9ರಂದು ತೆರೆಯಲಾಗಿದೆ..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಕಾರಿನ ಹಿಂಭಾಗದಲ್ಲಿ ಈ ರೀತಿ ಶೇಪ್ ಯಾಕೆ ಇರುತ್ತದೆ ಗೊತ್ತಾ?

    ಕಾರು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಜೀವನದಲ್ಲಿ ನಾವು ಒಂದು ಒಳ್ಳೆಯ ಕಾರ್ ಖರೀದಿ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ ಮತ್ತು ಕೆಲವರಿಂದ ಅದೂ ಸಾದ್ಯವಾದರೆ ಇನ್ನು ಕೆಲವರಿಗೆ ಅದೂ ಕನಸಾಗಿಯೇ ಉಳಿಯುತ್ತದೆ. ಇನ್ನು ಕಾರ್ ಗಳನ್ನ ಖರೀದಿ ಮಾಡದೆ ಇದ್ದರೆ ಏನು ಕಾರನ್ನ ಪ್ರತಿಯೊಬ್ಬರೂ ನೋಡಿರುತ್ತಾರೆ, ಇನ್ನು ಕಾರಿನ ಹಿಂಭಾಗದಲ್ಲಿ ಸ್ಪೋಲೈರ್ ಅನ್ನುವ ಒಂದು ಭಾಗ ಇರುತ್ತದೆ, ಹಾಗಾದರೆ ಸ್ಪೋಲೈರ್ ಎಲ್ಲಾ ಕಾರುಗಳಲ್ಲಿ ಯಾಕೆ ಇರುತ್ತದೆ ಮತ್ತು ಅದರಿಂದ ಆಗುವ…

  • ಸುದ್ದಿ

    ಗೂಗಲ್ ಕಂಪನಿ 200 ಮೇಕೆಗಳನ್ನು ನೇಮಿಸಿಕೊಂಡು,ಸಂಬಳ ಸಮೇತ ಹೊಟ್ಟೆ ತುಂಬಾ ಆಹಾರ ಕೊಡ್ತಾ ಇದೆ..!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ…

    ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿದೆ.ಈಗ ಗಾದೆ ಏತಕ್ಕೆ ಬಂತು ಅಂತೀರಾ…ವಿಷಯ ಇದೆ.ಅದೆಂದರೆ ನಮಗೆಲ್ಲಾ ಗೊತ್ತಿರುವ ಹಾಗೆ , ಸರ್ಚ್ ಎಂಜಿನ್ ಗೂಗಲ್ ನಲ್ಲಿ ಸಿಗದೇ ಇರೋ ವಿಷಯವೇ ಇಲ್ಲ.

  • ಸಾಧನೆ

    ಒಂದು ಸಾಮಾನ್ಯ ಪುಟ್ಟ ಹಳ್ಳಿಯಿಂದ ಬಂದು ಕನಸನ್ನು ಕನಸಾಗಿ ಬಿಡದೆ ಸಾಧನೆ ಮಾಡಿದ ಮಹಿಳೆ!

    ಸಾಧಿಸುವವನಿಗೆ ಛಲ ಇದ್ರೆ ಖಂಡಿತ ಯಶಸ್ಸು ತನ್ನದಾಗಿಸಿ ಕೊಳ್ಳಬಹುದು ಹಾಗೂ ಅದಕ್ಕೆ ತಕ್ಕ ಪರಿಶ್ರಮ ಇದ್ರೆ ಖಂಡಿತ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದನ್ನ ಈ 23 ವಯಸ್ಸಿನ ಹೆಣ್ಣು ಮಗಳು ಸಾಧನೆ ಮಾಡಿ ತೋರಿಸಿದ್ದಾಳೆ. ಸಾಧನೆ ಅನ್ನೋದು ಬರಿ ಶ್ರೀಮಂತರಿಗೆ ಅಷ್ಟೇ ಅಲ್ಲ ಅನ್ನೋದನ್ನ ಕೂಡ ತೋರಿಸಿದ್ದಾಳೆ. ಈಕೆಯ ಸಾಧನೆಯ ದಾರಿ ಹೇಗಿತ್ತು ಹಾಗೂ ಇದರ ಇಂದಿನ ಪರಿಶ್ರಮ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿಸುತ್ತೇವೆ ಬನ್ನಿ. ಈಕೆಯ ಹೆಸರು ಅನುಪ್ರಿಯಾ ಲಾಕ್ರಾ ಎಂಬುದಾಗಿ ಒಬ್ಬ ಸಾಮಾನ್ಯ…

  • Uncategorized

    ಹಳ್ಳಿ ಹುಡುಗರಿಂದ ಕ್ರಿಕೆಟ್ ಕನ್ನಡದಲ್ಲಿ ಲೈವ್ ಕಾಮೆಂಟ್ರಿ

    ನಮ್ಮ ತಂಡದವರಿಂದ ಹಳ್ಳಿಯ ಪ್ರತಿಯೊಬ್ಬನಿಗೂ ಮನಮುಟ್ಟುವಾಗೆ ಕನ್ನಡಲ್ಲಿ ಕ್ರಿಕೆಟ್ ರಸದೌತಣವನ್ನು ಸವಿಯಲು ಸಿದ್ದರಾಗಿ …. ಸಾಧಾರಣ ಮೊತ್ತ ಬೆನ್ನತ್ತಿದರೂ ಆತಂಕದ ಕ್ಷಣಗಳನ್ನು ಎದುರಿಸಿದ ಪಾಕಿಸ್ತಾನ ಒತ್ತಡ ಮೆಟ್ಟಿ ನಿಂತು ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಹಂತ ಪ್ರವೇಶಿಸಿತು. 237 ರನ್‌ಗಳ ಜಯದ ಗುರಿ ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭ ಕಂಡರೂ ನಂತರ ಆತಂಕಕ್ಕೆ ಒಳ ಗಾಯಿತು. ಅಜರ್‌ ಅಲಿ ಮತ್ತು ಫಕ್ರ್ ಜಮಾನ್‌ ಮೊದಲ ವಿಕೆಟ್‌ಗೆ 68 ಎಸೆತಗಳಲ್ಲಿ 74…

  • Health, ಆರೋಗ್ಯ, ಉಪಯುಕ್ತ ಮಾಹಿತಿ

    ಅವಕಾಡೊ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಅವಕಾಡೊ ಹಣ್ಣು ಎಲ್ಲರಿಗೂ ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಹೆಸರಿನಲ್ಲಿ ಚಿರಪರಿಚಿತ. ಭಾರತದಲ್ಲಿ ಈ ಹಣ್ಣನ್ನು ಶ್ರೀಲಂಕಾದಿಂದ ಪರಿಚಯಿಸಲ್ಪಟ್ಟಿತು ಎನ್ನಲಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಬಟರ್​ ಫ್ರೂಟ್​ನ್ನು ಬೆಳೆಯಲಾಗುತ್ತದೆ. ತನ್ನ ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಂತೆಯೇ ಇದೆ. ಇದನ್ನು ಹಾಗೆ ತಿನ್ನಲು ತುಂಬಾ ರುಚಿಕರ ದೇ ರೀತಿಯಾಗಿ ಇದನ್ನು ಹಲವಾರು ಖಾದ್ಯಗಳಲ್ಲೂ ಬಳಕೆ ಮಾಡಲಾಗುತ್ತದೆ. ಬೇರೆಲ್ಲಾ ಹಣ್ಣಿಗಿಂತಲೂ ಅವಕಾಡೊ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಯಾಕೆಂದರೆ…

  • ಸುದ್ದಿ

    ಶ್ರುತಿ ಹರಿಹರನ್ ಮತ್ತೆ ಮೀಟೂ ಬಗ್ಗೆ ಮಾತಾಡಿದ್ದೇಕೆ.! ಶ್ರುತಿ ತಾಯಿ ಸಭೆಯಲ್ಲಿದ್ದ ಮಹಿಳೆಯರಿಗೆಳಿದ ಮಾತೇನು ಗೊತ್ತಾ?

    ನಟಿ ಶ್ರುತಿ ಹರಿಹರನ್ ಮತ್ತೆ ಮೀಟೂ ಬಗ್ಗೆ ಮಾತನಾಡಿದ್ದು, ನಗರದ ಖಾಸಗಿ ಹೋಟೆಲ್‌ನಲ್ಲಿ ಫೇಸ್‌ಬುಕ್ ವತಿಯಿಂದ ಹಿರಿಯ ಪತ್ರಕರ್ತೆ ಬರ್ಖಾ ದತ್ ನೇತೃತ್ವದಲ್ಲಿ ‘ವಿ ದಿ ವುಮೆನ್’ ಎಂಬ ಸಂವಾದವನ್ನು ಇಂದು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರುತಿ ಹರಿಹರನ್ ಮೀಟೂ ವಿಚಾರವಾಗಿ ಮಾತನಾಡಿದ್ದಾರೆ. ನನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಮೀಟೂ ದೂರು ಕೊಟ್ಟಿದ್ದಕ್ಕೆ ಹೆಮ್ಮೆ ಇದೆ. ನಾನು ಯಾವುತ್ತೂ ಮುಜುಗರ ಪಟ್ಟುಕೊಂಡಿಲ್ಲ. ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಶ್ರುತಿ ಹರಿಹರನ್ ತಿಳಿಸಿದ್ದಾರೆ. ಮೀಟೂ ವಿಚಾರದಿಂದಾಗಿ…