ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಯಚೂರು/ವಿಜಯಪುರ/ಬೆಳಗಾವಿ: ಜುಲೈಮುಗಿಯುತ್ತಿದ್ದರೂ ರಾಜ್ಯದ ಯಾವ ಪ್ರಮುಖ ಡ್ಯಾಂಗಳು ಭರ್ತಿಯಾಗಿಲ್ಲವೆಂಬುವುದು ದುಃಖದಸಂಗತಿ. ಅದರೊಟ್ಟಿಗೆ ಅಲ್ಲಲ್ಲಿ ಮಳೆಯಾಗಿರುವ ಸುದ್ದಿ ಕೇಳಿದರೂ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಮಳೆಯಾಗುತ್ತಿದ್ದು, ನಾರಾಯಣಪುರಜಲಾಶಯದ ತುಂಬಿದೆ. ಕೃಷ್ಣಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ಹೈಅಲರ್ಟ್ ಘೋಷಿಸಲಾಗಿದೆ. ಕೃಷ್ಣಾ ನದಿ ಪಾತ್ರಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.
ನಾರಾಯಣಪುರ ಜಲಾಶಯದಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು 18 ಗೇಟ್ ಮೂಲಕ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ತಾಲೂಕು ಆಡಳಿತ, ತಾಲೂಕು ಪಂಚಾಯತ್ ಅಗ್ನಿಶಾಮಕ ದಳ ಅಧಿಕಾರಿಗಳು ಸುರಕ್ಷತೆ ಕ್ರಮಕ್ಕೆ ಸೂಚಿಸಿದ್ದಾರೆ. ಕೃಷ್ಣಾ ನದಿಗೆ ಇಳಿಯದಂತೆ ನದಿ ಪಾತ್ರದ ಗ್ರಾಮಸ್ಥರಿಗೆಎಚ್ಚರಿಸಲಾಗಿದೆ.
ನಾರಾಯಣಪುರ ಜಲಾಶಯವೆಂದು ಕರೆಯುತ್ತಿದ್ದ ಬಸವ ಸಾಗರ ಡ್ಯಾಮನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಬಿಜಾಪುರ ಜಿಲ್ಲೆಯ, ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಈ ಡ್ಯಾಮಿಗೆ 30 ಗೇಟ್‌ಗಳಿದ್ದು, 37.965 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.
ಬೆಳಗಾವಿಯಲ್ಲಿಯೂ ಮಳೆ: ಬೆಳಗಾವಿ ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೂ ಬಿಡದೇ ಸುರಿಯುತ್ತಿದೆ ಮಳೆ. ಖಾನಾಪುರ, ಕಿತ್ತೂರು, ಬೈಲಹೊಂಗಲ ಸೇರಿ ಹಲವಡೆ ತುಂತುರು ಮಳೆಯಾಗುತ್ತಿದೆ. ಬೆಳಗಾವಿ ನಗರದಲ್ಲೂ ಮಳೆರಾಯನ ಅಬ್ಬರ ಜೋರಾಗಿದ್ದು, ಚೆನ್ನಮ್ಮ ವೃತ್ತ ಸೇರಿ ಹಲವೆಡೆ ರಸ್ತೆ ಮೇಲೆ ಬಾರೀ ಪ್ರಮಾಮದ ನೀರು ಹರಿಯುತ್ತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಜನರು ಮನೆಯಿಂದ ಹೊರ ಬರಲಾಗದೇ, ಜನಜೀವನ ಅಸ್ತವ್ಯಸ್ಥವಾಗಿದೆ. ಆದರೆ, ಪಶ್ಚಿಮಘಟ್ಟಗಳಲ್ಲಿ ವರ್ಷಧಾರೆ ತುಸು ತಗ್ಗಿದೆ. ಮತ್ತಷ್ಟು ಮಳೆಯಾಗಲಿ. ರಾಜ್ಯದ ದೊಡ್ಡ ದೊಡ್ಡ ಜಲಾಶಯಗಳು ತುಂಬಲಿ. ಆದರೆ, ಯಾವ ಅನಾಹುತವೂ ಆಗದಿರಲಿ ಎಂಬುವುದು ಸುವರ್ಣನ್ಯೂಸ್.ಕಾಂ ಆಶಯ ಹಾಗೂ ಹಾರೈಕೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗರ್ಭಿಣಿಯರು ಹೆಚ್ಚಾಗಿ ಕಾಫಿ ಸೇವಿಸುವುದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದಲ್ಲ. ದಿನಕ್ಕೊಮ್ಮೆಯೋ, ಎರಡು ಬಾರಿಯೋ ಕಾಫಿ ಸೇವಿಸಿದರೆ ಅದು ಚೈತನ್ಯ ನೀಡುವುದಲ್ಲದೆ, ಚಟುವಟಿಕೆಯಿಂದ ಇರಲು ಸಹಕರಿಸುತ್ತದೆ. ಆದರೆ ಇದೇ ಅಭ್ಯಾಸ ಅತಿಯಾಗಿ, ದಿನಕ್ಕೆ ಐದಾರು ಬಾರಿ ಅಥವಾ ಇನ್ನೂ ಹೆಚ್ಚು ಬಾರಿ ಕಾಫಿ ಸೇವಿಸುತ್ತಲೇ ಇರುವುದರಿಂದ ಶರೀರದ ಆರೋಗ್ಯ ಸಂಪೂರ್ಣ ಹದಗೆಡುವುದು ಖಂಡಿತ. ಮಾನಸಿಕ ಆರೋಗ್ಯದ ಮೇಲೂ ಇದು ಪ್ರಭಾವ ಬೀರುತ್ತದೆ ಎಂಬುದೂ ಸಹ ಇತ್ತೀಚೆಗೆ ದೃಢಪಟ್ಟಿದೆ. ಅತಿಯಾಗಿ ಕಾಫಿ ಸೇವಿಸುವ ವ್ಯಕ್ತಿ…
ಲಟಿಕೆ ತಗೆಯದ ವ್ಯಕ್ತಿ ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಲಟಿಕೆ ಎಲ್ಲರೂ ತೆಗೆಯುತ್ತಾರೆ, ಇನ್ನು ಕೆಲವರು ಕೈ ಕಾಲು ಬೆರಳುಗಳ ನೋವಿನಿಂದ ಲಟಿಕೆ ತೆಗೆದರೆ ಇನ್ನು ಕೆಲವರು ಲಟಿಕೆಯ ಶಬ್ದವನ್ನ ಕೇಳಲು ಲಟಿಕೆ ತೆಗೆಯುತ್ತಾರೆ. ಇನ್ನು ಕೆಲವರಿಗೆ ಈ ಲಟಿಕೆ ತೆಗೆಯುವುದು ಒಂದು ತರಾ ಚಟ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಕೆಲವು ಜನರು ಇಡೀ ಹೊತ್ತು ಕೈ ಮತ್ತು ಕಾಲುಗಳ ಲಟಿಕೆ ತೆಗೆಯುತ್ತಲೇ ಇರುತ್ತಾರೆ ಮತ್ತು…
ಮಹಾಶಿವರಾತ್ರಿ ದಿನದಂದು ಮಾಡುವ ರುದ್ರಾಭಿಷೇಕಕ್ಕೆ ಬಹಳ ಮಹತ್ವ ಇದೆ.ಅವರವರ ರಾಶಿಗಳಿಗೆ ತಕ್ಕಂತೆ ಮಾಡಿದ್ರೆ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತೆ ಎಂದು ಹೇಳಲಾಗಿದೆ.
2 ವರ್ಷದಲ್ಲಿ ಜಾರಿಯಾದ ಕೇ೦ದ್ರ ಸರಕಾರದ ಯೋಜನೆಗಳು:
ಈಗಂತೂ ಈ ಜಗತ್ತಿನಲ್ಲಿ ಒಬ್ಬರೊನ್ನೊಬ್ಬರು ನಂಬುವುದು ತುಂಬಾ ಕಷ್ಟ. ಯಾರ ಮೇಲೂ ಯಾರಿಗೂ ನಂಬಿಕೆ ಅನ್ನುವುದೇ ಇಲ್ಲ.ಇದಕ್ಕೆ ಕಾರಣಗಳು ಬೇಕಾದಷ್ಟು ಇವೆ. ನಮ್ಮಲ್ಲಿರುವ ಅಥವಾ ಬೇರೆಯವರಲ್ಲಿರುವ ಕೆಲವೊಂದು ನ್ಯೂನತೆಗಳು ಬೇರೆಯವರನ್ನು ನಂಬದಂತೆ ಮಾಡಿರುತ್ತವೆ.
ಇಲ್ಲ, ನಾನು ವಾಟ್ಸ್ಯಾಪ್ ಯೂಸ್‌ಮಾಡ್ತಿಲ್ಲ… ಹಾಗಂತ ಯಾರಾದರು ಹೇಳಿದರೆ , ಇವನ್ಯಾರೋ ಗುಗ್ಗು ಅಂತ ನೋಡೋ ಕಾಲ ಇದು.ಯಾಕಂದ್ರೆ, ಹಳ್ಳಿ ಯಿಂದ ದಿಲ್ಲಿಯವರಿಗೆ, ಹೈದನಿಂದ ವೃದ್ಧರವರೆಗೆ ಎಲ್ಲರೂ ವಾಟ್ಸ್ಯಾಪ್ ಬಳಸುವವರೇ. ಆದರೆ, ಜನರನ್ನು ಬೆಸೆಯುವ ವಾಟ್ಸ್ಯಾಪ್‌ಈಗ ಹಳಿ ತಪ್ಪಿದ ರೈಲಿನಂತಾಗಿರುವುದು ಸುಳ್ಳಲ್ಲ. ವಾಟ್ಸ್ಯಾಪ್‌ಅನ್ನೋದು ಗೀಳು ರೋಗವಾಗಿ ಬದುಕನ್ನು ಆವರಿಸುತ್ತಿರೋದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ.