ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ಧರ್ಮದ ಹಲವಾರು ಆಚರಣೆಗಳು, ಸಂಪ್ರದಾಯಗಳನ್ನು ಮೂಢನಂಬಿಕೆಯೆಂದು ಜರಿಯುವವರು ಹಲವು. ಆದರೆ, ವಿಜ್ಞಾನ ಮುಂದುವರಿದಂತೆಲ್ಲ ಈ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ವಿವರಣೆ ದೊರೆಯುತ್ತ ಹೋಗುತ್ತಿದೆ.ಈ ವೈಜ್ಞಾನಿಕ ಜ್ಞಾನವನ್ನೇ ಸಂಪ್ರದಾಯದ ಹೆಸರಿನಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿಯಬಿಡಲಾಗಿದೆ ಸಾಮಾನ್ಯ ಜನರಿಗೆ ಈ ಆಚರಣೆಗಳ ಹಿಂದಿನ ವಿಜ್ಞಾನದ ಅರಿವು ಇಲ್ಲವಾದರೂ, ಅವರಿದನ್ನು ನಂಬಿಕೆಯ ತಳಹದಿ ಮೇಲೆ ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅಂಥ ಕೆಲವು ಆಚರಣೆಗಳು ಹಾಗೂ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ವಿವರಣೆಗಳನ್ನಿಲ್ಲಿ ಕೊಡಲಾಗಿದೆ.
ನಾಣ್ಯಗಳನ್ನು ನದಿಗೆಸೆಯುವುದು : ನಾಣ್ಯಗಳನ್ನುದೇವಸ್ಥಾನದ ಸಮೀಪದ ಕಲ್ಯಾಣಿಗೆ, ಕೆರೆಗೆ, ನದಿಗೆ ಎಸೆಯುವುದರಿಂದ ಅದೃಷ್ಟಒಲಿಯುತ್ತದೆ ಎಂಬ ನಂಬಿಕೆ ಇದೆ. ಇದೇ ನಂಬಿಕೆ ಮೇಲೆ ಈಗಲೂ ಹಲವರು ಹೀಗೆ ನಾಣ್ಯಗಳನ್ನು ಕಲ್ಯಾಣಿಗೆಸೆಯುವುದನ್ನುಕಾಣಬಹುದು .ಆದರೆ, ಹೀಗೆ ಸಾವಿರಾರು ಕೈಗಳನ್ನು ದಾಟಿ ಬ್ಯಾಕ್ಟೀರಿಯಾಗಳ ಆಗರವಾಗಿರುವ ನಾಣ್ಯಗಳನ್ನು ನೀರಿಗೆಸೆದು, ನೀರನ್ನು ಮಲಿನಗೊಳಿಸಲಾಗುತ್ತಿದೆ ಎಂಬ ಆರೋಪ ಇದಕ್ಕಿದೆ.
ಆದರೆ, ಈ ಅಭ್ಯಾಸ ಶುರುವಾದದ್ದು ಹೀಗಲ್ಲ,ಹಿಂದಿನ ಕಾಲದಲ್ಲಿ ತಾಮ್ರದ ನಾಣ್ಯಗಳನ್ನು ಬಳಸಲಾಗುತ್ತಿತ್ತು.ಈ ಕಾಪರ್ ಮನುಷ್ಯನ ದೇಹಕ್ಕೆ ಬಹಳಷ್ಟು ಆರೋಗ್ಯ ಲಾಭಗಳನ್ನು ತಂದುಕೊಡುತ್ತದೆ. ಅದೇಕಾರಣಕ್ಕೆ ಈಗೀಗ ಎಲ್ಲರೂ ಕಾಪರ್ ಬಾಟಲ್, ಲೋಟಗಳನ್ನು ಬಳಸುವುದು ಟ್ರೆಂಡ್ ಕೂಡಾ ಆಗಿದೆ ಹೀಗೆ ಕಾಪರ್ ನಾಣ್ಯಗಳನ್ನು ನೀರಿಗೆಹಾಕಿ, ನಂತರದಲ್ಲಿ ಆ ನೀರಿನ ಸೇವನೆಯಿಂದ ಮನುಷ್ಯನ ದೇಹಕ್ಕೆ ಅಗತ್ಯವಿರುವಷ್ಟು ಕಾಪರ್ಸೇರಿಸುವುದು ಹಿರಿಯರ ಉದ್ದೇಶವಾಗಿತ್ತು. ಆಗನದಿಯ ನೀರು ಮಾತ್ರ ಕುಡಿಯುವ ನೀರಿನ ಮೂಲವಾಗಿತ್ತು. ಇದನ್ನುದೇವರ ಹೆಸರಿನಲ್ಲೊಂದು ಆಚರಣೆಯಾಗಿಸಿದರೆ,ಎಲ್ಲರೂ ಈ ಮಾರ್ಗ ಅನುಸರಿಸುತ್ತಾರೆ, ಎಲ್ಲರಿಗೂಅಗತ್ಯವಾದ ಕಾಪರ್ ದೊರೆಯುತ್ತದೆ ಎಂಬುದುಈ ಆಚರಣೆ ಹಿಂದಿನ ಉದ್ದೇಶ.
ಯಾರನ್ನಾದರೂ ನೋಡಿದೊಡನೆ ನಮಸ್ಕರಿಸುವುದು : ಹಿಂದೂಸಂಸ್ಕೃತಿಯಲ್ಲಿ ಜನರು ಮತ್ತೊಬ್ಬರನ್ನು ಭೇಟಿಯಾದಕೂಡಲೇ ಎರಡೂ ಕೈ ಜೋಡಿಸಿ ನಮಸ್ಕರಿಸುವುದು ಪದ್ಧತಿಸಾಮಾನ್ಯವಾಗಿ ಹೀಗೆ ನಮಸ್ಕರಿಸುವುದು ಗೌರವಿಸುವಪ್ರತೀಕ ಎಂಬ ನಂಬಿಕೆಯಿದೆ. ಆದರೆ, ವೈಜ್ಞಾನಿಕವಾಗಿ ಹೇಳಬೇಕೆಂದರೆಹೀಗೆಕೈ ಜೋಡಿಸಿದಾಗ ಎರಡೂ ಕೈಗಳ ಎಲ್ಲ ಬೆರಳುಗಳೂ ಪ್ರೆಸ್ ಆಗುತ್ತವೆ. ಎಲ್ಲ ಬೆರಳುಗಳ ತುದಿಯಲ್ಲಿ ನರತಂತುಗಳಿವೆ. ಇವುಕಣ್ಣು, ಕಿವಿ, ಮನಸ್ಸಿನ ಪ್ರೆಶರ್ ಪಾಯಿಂಟ್‌ಗಳು.
ಕಾಲುಂಗುರ ಧರಿಸುವುದು : ಹೆಂಗಸಿಗೆ ಮದುವೆಯಾಗಿದೆ ಎಂಬುದನ್ನುಸೂಚಿಸಲು ಆಕೆ ಕಾಲುಂಗುರ ಧರಿಸಬೇಕೆಂದು ನಾವುನಂಬಿದ್ದೇವೆ. ಆದರೆ ಈಆಚರಣೆ ಜಾರಿಗೆ ತಂದ ಹಿಂದೆ ಬೇರೆ ಸದುದ್ದೇಶವಿದೆ. ಸಾಮಾನ್ಯವಾಗಿಕಾಲುಂಗುರವನ್ನು ಮಹಿಳೆಯರು ಎರಡನೇ ಬೆರಳಿಗೆ ಧರಿಸುತ್ತಾರೆ.ಈ ಬೆರಳಿನಲ್ಲಿರುವ ನರತಂತುಗಳುಗರ್ಭಕೋಶ ಹಾಗೂ ಹೃದಯಕ್ಕೆ ಸಂಪರ್ಕ ಹೊಂದಿರುತ್ತವೆ. ಹಾಗಾಗಿ ಈಬೆರಳಿಗೆ ಉಂಗುರ ತೊಡುವುದರಿಂದ ಗರ್ಭಕೋಶವನ್ನುಬಲಪಡಿಸುತ್ತದೆ….
ದೇವಸ್ಥಾನಗಳಲ್ಲಿ ಗಂಟೆ : ಗರ್ಭಗುಡಿಯ ಬಳಿಹೋಗುವಾಗ ಗಂಟೆ ಬಡಿಯುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡುಬಂದಿದೆ. ಈ ಗಂಟೆಯ ಶಬ್ದ ಕೆಟ್ಟ ಶಕ್ತಿಗಳನ್ನು ದೂರವಿರಿಸುತ್ತದೆಎಂಬ ನಂಬಿಕೆ ಇದೆಯಾದರೂ, ವೈಜ್ಞಾನಿಕವಾಗಿ, ಈಗಂಟೆ ಹೊಮ್ಮಿಸುವ ನಿನಾದ ಹಾಗೂ ಅದರ ಮೊಳಗುವಿಕೆ ಮನಸ್ಸಿನಿಂದ ಬೇರೆಲ್ಲ ಯೋಚನೆ ದೂರವಾಗಿಸಿ, ಏಕಾಗ್ರಚಿತ್ತ ನೀಡುತ್ತದೆ.
ಅಶ್ವತ್ಥ ಮರ ಪೂಜೆ : ಅಶ್ವತ್ಥ ಮರವು ಸಾಮಾನ್ಯ ಜನರಿಗೆ ಅಷ್ಟೇನು ಪ್ರಯೋಜನವಿಲ್ಲ. ಅದರಹಣ್ಣನ್ನು ನಾವು ತಿನ್ನುವುದಿಲ್ಲ. ಇದರಕಟ್ಟಿಗೆ ಯಾವುದಕ್ಕೂಬಳಸುವಷ್ಟು ಗಟ್ಟಿಯಿರುವುದಿಲ್ಲ. ಹಾಗಿದ್ದರೂ,ಅಶ್ವತ್ಥ ಮರವನ್ನು ದೇವರೆಂದು ಪೂಜಿಸುವುದೇಕೆ? ಏಕೆಂದರೆಇದೊಂದೇ ಮರ ರಾತ್ರಿ ಹೊತ್ತಿನಲ್ಲೂ ಆಮ್ಮಜನಕವನ್ನೇಹೊರಸೂಸುತ್ತದೆ. ಈ ಕಾರಣಕ್ಕಾಗಿ ಈ ಮರವನ್ನು ರಕ್ಷಿಸಬೇಕಾಗಿರುವುದರಿಂದಅದಕ್ಕೆ ದೇವರ ಪಟ್ಟ ಕಟ್ಟಿ ಪೂಜಿಸುವ ಯೋಚನೆ ಹಿರಿಯರಿಗೆ ಬಂದಿದೆ.
ಸೂರ್ಯ ನಮಸ್ಕಾರ : ಹಿಂದೂಗಳು ಬೆಳಗ್ಗೆ ಹಾಗೂ ಸಂಜೆಯ ಹೊತ್ತಿನಲ್ಲಿ ಸೂರ್ಯನಮಸ್ಕಾರ ಹಾಗೂ ಸಂಧ್ಯಾವಂದನೆ ಆಚರಿಸಿಕೊಂಡುಬರುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ ಬೆಳಗಿನ ಹಾಗೂ ಸಂಜೆಯ ಬಿಸಿಲು ಮನುಷ್ಯನ ದೇಹಕ್ಕೆ ಅತ್ಯಗತ್ಯ. ಇದು ವಿಟಮಿನ್ ಡಿ ನೀಡುವ ಜೊತೆಗೆ ದೇಹವನ್ನು ಚೇತೋಹಾರಿಯಾಗಿಸುತ್ತದೆ.ಇದರೊಂದಿಗೆ ಬೆಳಗ್ಗೆ ಬೇಗ ಏಳುವುದು ಅಭ್ಯಾಸವೂ ಆಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎರಡು ಬಟ್ಟಲು ಎಲೆಕೋಸು,ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಮೀಡಿಯಂ ಸೈಜು ಈರುಳ್ಳಿ, ಕಾನ್೯ ಫ್ಲೋರ್ ಎರಡು ಟೀ ಸ್ಪೂನ್, ಮೈದಾಹಿಟ್ಟು ಎರಡು ಟೀ ಸ್ಪೂನ್, ಅಜಿನ ಮೋಟು ಕಾಲು ಚಮಚ, ಅಚ್ಚ ಕಾರದ ಪುಡಿ 1 ಟೀ ಸ್ಪೂನ್, ಗರಂ ಮಸಾಲ ಅರ್ದ ಟೀ ಸ್ಪೂನ್ ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎಲೆಕೋಸನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ, ಅದಕ್ಕೆ ಎರಡು ಟೀ ಸ್ಪೂನ್ ಕಾನ್೯ ಫ್ಲೋರ್, ಎರಡು…
ಪ್ರತಿ ವರ್ಷದಂತೆ ಈ ಬಾರಿಯೂ ಹೊಸತನದೊಂದಿಗೆ ಐತಿಹಾಸಿಕ ಕಡಲೆಕಾಯಿ ಪರಿಷೆಗಾಗಿ ಬಸವನಗುಡಿ ಸಜ್ಜಾಗುತ್ತಿದೆ. ಕಡೇ ಕಾರ್ತೀಕ ಸೋಮವಾರ(ನ.25)ದಂದು ಕಡಲೆಕಾಯಿ ಪರಿಷೆ ನಡೆಯಲಿದೆ. ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ಪರಿಚಯಿಸಲು ಭಿನ್ನರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲು ಆಯೋಜಕರು ನಿರ್ಧರಿಸಿದ್ದಾರೆ. ಸಾಮಾನ್ಯವಾಗಿ ಪರಿಷೆಗೆ ರಾಮನಗರ, ಮಾಗಡಿ, ಕನಕಪುರ,ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಿಂದ ಕಡ್ಲೆಕಾಯಿ ಬರುತ್ತದೆ. ಈ ಬಾರಿ ಈ ಭಾಗಗಳಲ್ಲಿ ಒಳ್ಳೆಯ ಮಳೆಯಾಗಿದ್ದು, ಬೆಳೆಯೂ ಚೆನ್ನಾಗಿ ಬಂದಿದೆ. ಹೀಗಾಗಿ, ಪರಿಷೆಗೆ ಭರಪೂರ ಕಡ್ಲೆಕಾಯಿಗಳು ಬರುವ…
ಕೆಲವರು ಸದಾಕಾಲ ಬಿಸಿಬಿಸಿ ನೀರನ್ನೇ ಕುಡಿಯಲು ಇಷ್ಟಪಡ್ತಾರೆ, ಇನ್ನು ಕೆಲವರಿಗೆ ನೀರು ಎಷ್ಟು ತಣ್ಣಗಿದ್ರೂ ಸಾಲದು. ಚರ್ಮದ ಆರೋಗ್ಯ, ಜೀರ್ಣಕ್ರಿಯೆ, ಮೈಗ್ರೇನ್ ನಿಂದ ಹಿಡಿದು ಎಲ್ಲದಕ್ಕೂ ನೀರು ಪರಿಹಾರ. ಬಿಸಿ ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದನ್ನು ವೈದ್ಯಕೀಯ ಲೋಕ ಕೂಡ ಒಪ್ಪಿಕೊಂಡಿದೆ. ಊಟದ ಜೊತೆಗೆ ಒಂದು ಲೋಟ ಬಿಸಿ ನೀರು ಸೇವನೆ ಒಳ್ಳೆಯದು ಅನ್ನೋದು ಆಯುರ್ವೇದ ವೈದ್ಯರ ಸಲಹೆ. ಚೀನಾ ಮತ್ತು ಜಪಾನ್ ನಲ್ಲಿ ಊಟದ ಜೊತೆ ಬಿಸಿಬಿಸಿ ಚಹಾ ಕುಡಿಯುವ ಪದ್ಧತಿಯಿದೆ. ಹಾಗಂತ ಅದೇನು…
ಮದುವೆಗಳಲ್ಲಿ ಹಲವಾರು ವಿಚಿತ್ರ ಸನ್ನಿವೇಶಗಳು ನಡೆಯುವುದನ್ನ ಕೇಳಿರುತ್ತೇವೆ, ನೋಡಿರುತ್ತೇವೆ.ಅದರಲ್ಲಿ ಕೆಲವೊಂದು ಇನ್ನೇನು ತಾಳಿ ಕಟ್ಟುವ ಸಮಯಕ್ಕೆ ಹುಡುಗಿ ಕಾಣೆಯಾಗುವುದು, ಇಲ್ಲವಾದ್ರೆ ಹುಡುಗನೇ ಇಲ್ಲದಿರುವುದು. ಅಣ್ಣನ ಮದುವೆಯಲ್ಲಿ ತಮ್ಮ ಅಣ್ಣನ ಕೈಯಿಂದ ತಾಳಿ ಕಿತ್ತುಕೊಂಡು ವಧುವಿಗೆ ಕಟ್ಟುವುದು ಇಂತಹ ಹಲವಾರು ಸನ್ನಿವೇಶಗಳನ್ನು ಎಲ್ಲರೂ ನೋಡಿಯೇ ಇರುತ್ತೇವೆ. ಇದೇ ರೀತಿ ಇಲ್ಲಿ ವರ ಮಹಾಶಯನೊಬ್ಬ ವಧುವಿಗೆ ತಾಳಿ ತಾಳಿ ಕಟ್ಟುವ ವೇಳೆ ಎಡವಟ್ಟು ಮಾಡಿಕೊಂಡು ಬಿಟ್ಟಿದ್ದಾನೆ.ಇದನ್ನು ತಿಳಿದೇ ಮಾಡಿದ್ದಾನೋ, ತಿಳಿಯದೇ ಮಾಡಿದ್ದಾನೋ ಗೊತ್ತಿಲ್ಲ ಆ ವಿಡಿಯೋ ಮಾತ್ರ ಈಗ ಸೋಶಿಯಲ್…
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ ಸ್ಯಾಂಡಲ್ವುಡ್ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಇಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ. ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಮುಂಜಾನೆ 5.30ರಿಂದ ಪ್ರದರ್ಶನ ಶುರುವಾಗಿದೆ. ಇತ್ತ ಮೆಜೆಸ್ಟಿಕ್ನ ಸಂತೋಷ್ ಚಿತ್ರಮಂದಿರದಲ್ಲಿ ಇದೇ ಮೊದಲ ಬಾರಿಗೆ ಬೆಳಗ್ಗೆ 7 ಗಂಟೆಗೆ ಶೋ ಆರಂಭವಾಗಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಚಿತ್ರಮಂದಿರದ ಎದುರು 101 ತೆಂಗಿನ ಕಾಯಿಯನ್ನು ಒಡೆದಿದ್ದಾರೆ. ಸುದೀಪ್ ಅವರ ಸಿನಿಮಾ ಇದೇ ಮೊದಲ…
ನೀವು ಕೂಡ ಒಂದಲ್ಲ ಒಂದು ಬಾರಿ ರೈಲಿನಲ್ಲಿ ಪ್ರಯಾಣ ಮಾಡಿರುತ್ತೀರಿ. ಆಗ ಟ್ರೈನ್ನ ಪ್ರತಿ ಕಂಪಾರ್ಟ್ಮೆಂಟ್ನ ಮೇಲೆ ಐದು ಡಿಜಿಟ್ ಹೊಂದಿರುವ ಒಂದು ನಂಬರ್ ಬರೆದಿರುವುದನ್ನು ನೀವು ಗಮನಿಸಿರುತ್ತೀರಿ.ಈ ಐದು ಡಿಜಿಟ್ ನಂಬರ್ನ ಹಿಂದಿರುವ ರಹಸ್ಯ ಏನ್ ಗೊತ್ತಾ. ಆದರೆ ಯಾವತ್ತಾದರೂ ಈ ನಂಬರ್ ಏನು..? ಯಾಕೆ ಈ ನಂಬರ್ ಬರೆಯುತ್ತಾರೆ ಅನ್ನೋದನ್ನು ಯೋಚನೆ ಮಾಡಿದ್ದೀರಾ…? ರೈಲಿನ ಪ್ರತಿ ಕಂಪಾರ್ಟ್ಮೆಂಟ್ ಮೇಲೆಯೂ ಐದು ಡಿಜಿಟ್ನ ಈ ನಂಬರ್ ಇರುವುದು ಏಕೆ ಗೊತ್ತಾ..? ರೈಲಿನ ಪ್ರತಿ ಕಂಪಾರ್ಟ್ಮೆಂಟ್ ಮೇಲೆಯೂ…