ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಣಗಳಿಸುವುದಕ್ಕೆ ಶಕ್ತಿಯೊಂದಿದ್ದರೆ ಸಾಕಾಗುವುದಿಲ್ಲ, ಯುಕ್ತಿಯೂ ಇರಬೇಕು. ತಮ್ಮ ಕಠಿಣ ಪರಿಶ್ರಮದೊಂದಿಗೆ ಚಾಣುಕ್ಯ ತನವಿದ್ದರೆ, ಹಣಗಳಿಸುವುದರ ಜೊತೆ ಹೆಸರನ್ನು ಕೂಡ ಸಂಪಾದಿಸಬಹುದು! ಹೀಗೆ ಒಬ್ಬ ವ್ಯಕ್ತಿ ಹಳ್ಳಿಯ ಜನರ ಮನಸ್ಥಿತಿಯನ್ನು ಅರಿತು ಅವರಿಂದ ಹೇಗೆ ಹಣವನ್ನು ಸಂಪಾದಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಮುಂದೇ ಓದಿ.. ಇದನ್ನು ಮೋಸ ಎನ್ನಬೇಕಾ? ಅಥವಾ ಅವನ ಚಾಣಕ್ಷತನ ಎನ್ನಬೇಕಾ? ನೀವೇ ನಿರ್ಧರಿಸಿ !
ಚಿಕ್ಕದೊಂದು ಹಳ್ಳಿ, ಅಲ್ಲಿಯ ಜನತೆಗೆ ಕೃಷಿಯೆ ಬಂಡವಾಳ, ಬಾಳೆ, ತೆಂಗು, ಮಾವು ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿರುತ್ತಾರೆ, ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ನೆಮ್ಮದಿಯಿಂದ ಬದುಕುವ ಸಂದರ್ಭದಲ್ಲಿ ಆ ಹಳ್ಳಿಗೆ ಕೋತಿಗಳ ದಂಡೆ ಬಂದು ಸೇರುತ್ತವೆ, ದಿನದಿಂದ ದಿನಕ್ಕೆ ಕೋತಿಗಳ ಹಾವಳಿ ಜಾಸ್ತಿಯಾಗುತ್ತಾ ಹೋಗುತ್ತದೆ, ರೈತರು ಬೆಳೆದಿದ್ದ ಎಳನೀರುಗಳನ್ನು ಕುಡಿದು, ಮಾವು ಮತ್ತು ಬಾಳೆಗಳನ್ನು ಚಪ್ಪರಿಸಿ ತಿನ್ನುತ್ತಾ ರೈತರ ಬೆಳೆಗಳನ್ನು ನಾಶ ಮಾಡುತ್ತಿರುತ್ತವೆ.. ಅಂಜನೇಯ ಎಂದು ಪೂಜಿಸುವ ಮಂಗಗಳು, ಆ ಹಳ್ಳಿಯ ಜನತೆಗೆ ರಾವಣನಂತಾಗಿರುತ್ತವೆ!
ಮಂಗಗಳ ಚೇಷ್ಟೆಗೆ ಹಳ್ಳಿಯ ಜನತೆ ಬೇಸತ್ತಿರುತ್ತಾರೆ, ಈ ವಿಚಾರವನ್ನು ಪೊಲೀಸ್ ಅಧಿಕಾರಿಗಳಿಗೆ ಮತ್ತು ರಾಜಕೀಯ ನಾಯಕರಿಗೆ ದೂರು ನೀಡಿದ್ದರು, ಅವರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಮತ್ತು ಅವರ ಸಹಾಯಕ್ಕೆ ಯಾರು ಬರುವುದಿಲ್ಲ. ಹಳ್ಳಿಯ ಮಂದಿ ನಮ್ಮನ್ನು ರಕ್ಷಿಸಲು ಯಾರು ಇಲ್ಲವೇ ಎಂದು ದೇವರ ಬಳಿ ಕೇಳಿಕೊಳ್ಳುವ ಸಂದರ್ಭದಲ್ಲಿ, ನಗರದಿಂದ ಸುಶಿಕ್ಷಿತ ವ್ಯಕ್ತಿಯೊಬ್ಬ ಆ ಹಳ್ಳಿಗೆ ಬಂದು ಸೇರಿಕೊಳ್ಳುತ್ತಾನೆ. ದಿನಗಳುರುಳಿದಂತೆ ಆ ಹಳ್ಳಿಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಾನೆ..
ನಂತರ ಹಳ್ಳಿಯ ಜನರೆನೆಲ್ಲಾ ಪಂಚಾಯಿತಿ ಕಟ್ಟೆ ಸೇರಿಸಿ, ನಿಮ್ಮ ಊರಿನಲ್ಲಿ ಆಗುತ್ತಿರುವ ಸಮಸ್ಯೆಯನ್ನು ತಡೆಯಲು ನನ್ನನ್ನು ಅಧಿಕಾರಿಗಳು ಕಳುಹಿಸಿದ್ದಾರೆ, ಅದುದರಿಂದ ನಾನು ಬಂದಿದ್ದೇನೆ, ನನ್ನೊಟ್ಟಿಗೆ ಯಾರು ಬಂದಿಲ್ಲ, ಒಬ್ಬನೇ ಬಂದಿದ್ದೇನೆ, ನಿಮ್ಮ ಸಮಸ್ಯೆಯನ್ನು ತೀರಿಸುವ ಜೊತೆಗೆ ಒಂದಿಷ್ಟು ಹಣವನ್ನು ಗಳಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತೇನೆ, ಎಂದು ನಗರದ ಸುಶಿಕ್ಷಿತ ವ್ಯಕ್ತಿ ಹೇಳುತ್ತಾನೆ.. ಇವನ ಮಾತನ್ನು ಕೇಳಿದ ಹಳ್ಳಿಯ ಜನತೆ ಬಹಳ ಖುಷಿಯಾಗುತ್ತಾರೆ !
ನಿಮ್ಮ ಊರಿನಲ್ಲಿ ಕೋತಿಗಳ ದಂಡೆ ಇದೆ, ಆ ಕೋತಿಗಳು ನನಗೆ ಬೇಕು, ಅವುಗಳಿಂದ ನಮಗೆ ಉಪಯೋಗಗಳಿವೆ, ಆದುದರಿಂದ ನಿಮಗೆಲ್ಲರಿಗೂ ಒಂದು ಅವಕಾಶ ಕಲ್ಪಿಸಿಕೊಡುತ್ತೇನೆ, ನೀವೆಲ್ಲಾ ಒಟ್ಟುಗೂಡಿ ಕೋತಿಗಳನ್ನು ಹಿಡಿದುಕೊಂಡು ನನಗೆ ತಂದು ಕೊಡಿ, ಒಂದು ಕೋತಿಗೆ 20 ರೂಪಾಯಿಯಂತೆ ನಿಮಗೆ ಪಾವತಿಸುತ್ತೇನೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಹಳ್ಳಿಯವರು, ಆಶ್ಚರ್ಯ ಮತ್ತು ಖುಷಿಯಿಂದ ಕೋತಿಗಳನ್ನು ಹಿಡಿಯಲು ಮುಂದಾಗುತ್ತಾರೆ..
ಅಂತೆಯೇ ಹಗಲು ರಾತ್ರಿಯೆಂದು ಲೆಕ್ಕಿಸಿದೇ, ಗೌಪ್ಯವಾಗಿ ಕಾಯುತ್ತಾ, ಹೊಲದಲ್ಲೆಲ್ಲಾ ಒದ್ದಾಡಿ ಸಾಕಷ್ಟು ಕೋತಿಗಳನ್ನು ಹಿಡಿದು ಆತನಿಗೆ ತಂದು ಕೊಟ್ಟು, ಅವನ ಮಾತಿನಂತೆ ತಲಾ ಒಂದು ಕೋತಿಗೆ 20ರೂ ಅಂತೆ ಪಡೆದುಕೋಳ್ಳುತ್ತಾರೆ, ಹಳ್ಳಿಯಲ್ಲಿ ಶೇಕಡ 70 ಭಾಗದಷ್ಟು ಕೋತಿಗಳನ್ನು ಸೆರೆಹಿಡಿಯಲಾಗಿರುತ್ತದೆ, ಇನ್ನುಳಿದ ಕೋತಿಗಳು ಸ್ವಲ್ಪ ಬುದ್ದಿವಂತ ಕೋತಿಗಳು, ಯಾರ ಕೈಗೂ ಸಿಗುತ್ತಿರಲಿಲ್ಲ.. ಮತ್ತೇ ಆ ವ್ಯಕ್ತಿ ಪಂಚಾಯಿತಿ ಸೇರಿಸಿ, ನೋಡಿ ಇನ್ನು ಸ್ವಲ್ಪ ಕೋತಿಗಳಿರುವುದನ್ನು ನಾನು ನೋಡಿದ್ದೇನೆ, ಅವುಗಳನ್ನು ಹಿಡಿದು ಕೊಟ್ಟರೆ, ಒಂದು ಕೋತಿಗೆ ತಲಾ 40 ರೂಪಾಯಿ ನೀಡುತ್ತಾನೆ ಎಂದು ಹೇಳುತ್ತಾನೆ !
ಹಳ್ಳಿಯ ಮಂದಿ ಅವನ ಮಾತನ್ನು ಕೇಳಿ ಸಂತಸದ ತುತ್ತ ತುದಿಗೇರುತ್ತಾರೆ, ಅವನ ಮಾತಿನಂತೆ ಕಠಿಣ ಪರಿಶ್ರಮ ವಹಿಸಿ ಮೂರ್ನಾಲ್ಕು ದಿನಗಳು ಕಾಯ್ದು, ಇನ್ನೊದಷ್ಟು ಕೋತಿಗಳನ್ನು ಹಿಡಿದು ತಂದು ತಲಾ 40 ರೂಪಾಯಿನಂತೆ ಒಂದೊಂದು ಕೋತಿಗಳಿಗೆ ಪಡಿದುಕೊಳ್ಳುತ್ತಾರೆ, ಅಲ್ಲಿಗೆ ಶೇಕಡ 90 ಭಾಗದಷ್ಟು ಕೋತಿಗಳನ್ನು ಸೆರೆಹಿಡಿಯಲಾಗಿತ್ತು.. ಇನ್ನು ನಾಲ್ಕು ಕೋತಿಗಳನ್ನು ಹಿಡಿಯಲು ಎಷ್ಟೆ ಪ್ರಯ್ನಿಸಿದರು ಸಾಧ್ಯವಾಗುತ್ತಿರಲಿಲ್ಲ, ಆಗ ಮತ್ತೆ ಆವ್ಯಕ್ತಿ ಈ ನಾಲ್ಕು ಕೋತಿಗಳನ್ನು ಹಿಡಿದು ತಂದವರಿಗೆ ಒಂದು ಕೋತಿಗೆ 80 ರೂಪಾಯಿನಂತೆ ನೀಡುತ್ತೇನೆ ಎಂಬ ದೊಡ್ಡ ಆಫರ್ ನೀಡುತ್ತಾನೆ.. !
ಈ ಭಾರಿ ಹಳ್ಳಿಯ ಜನರು ಶಕ್ತಿಯ ಜೊತೆ ತಮ್ಮ ಯುಕ್ತಿಯನ್ನು ಸಹ ಉಪಯೋಗಿಸಿ, ಬಲೆಗಳ ಮೂಖಾಂತರ ನಾಲ್ಕು ಕೋತಿಗಳನ್ನು ಹಿಡಿದು ಆತನಿಗೆ ಕೊಟ್ಟು ತಮ್ಮ ಹಣವನ್ನು ಪಡೆದುಕೊಂಡು ಸಂಭ್ರಮಿಸುತ್ತಾರೆ.. ನಂತರ ಹಳ್ಳಿಯ ಜನರು, ನಮ್ಮ ಊರಿಗೆ ದೇವರಂತೆ ಬಂದ್ರಿ, ಕೋತಿಗಳ ಹಾವಳಿಯಿಂದ ಬೇಸತ್ತಿದ್ದೆವು, ಅವುಗಳ್ಳನ್ನು ನಮ್ಮ ಕೈಯಿಂದನೆ ಹಿಡಿಸಿ, ಅವುಗಳನ್ನು ನೀವು ಕೊಂಡು, ನಮ್ಮ ಸಮಸ್ಯೆಯನ್ನು ತೀರಿಸುವ ಜೊತೆಗೆ ಹಣವನ್ನು ಕೂಡ ಕೊಟ್ರಿ, ಧನ್ಯವಾದಗಳು.. ಎಂದು ಹೃದಯ ಪೂರ್ವಕವಾಗಿ ಹೇಳುತ್ತಾರೆ !
ಈ ಮಾತುಗಳಿಗೆ ಉತ್ತರಿಸಿದ ಆ ಸುಶಿಕ್ಷಿತ ವ್ಯಕ್ತಿ, ನಿಮ್ಮ ಸಮಸ್ಯೆಗಳು ಇಲ್ಲಿಗೆ ತೀರಿತು, ಇನ್ನು 15 ದಿನಗಳನ್ನು ಬಿಟ್ಟು ಮತ್ತೆ ಬರುತ್ತೇನೆ, ಆಗ ನಿಮ್ಮ ಊರಿನಲ್ಲಿ ಕೋತಿಗಳೇನಾದರು ನಿಮಗೆ ಕಂಡು ಬಂದು ಅವುಗಳನ್ನು ನೀವು ಹಿಡಿದು ಇಟ್ಟುಕೊಂಡಿದ್ದರೆ, ಅವುಗಳನ್ನು ನನಗೆ ಕೊಡಿ, ಆಗ ನಾನು ಒಂದು ಕೋತಿಗೆ ಸಾವಿರ ರೂ ನೀಡುತ್ತೇನೆ, ಎಂದು ಹೇಳಿ ಹೊರಟು ಹೋಗುತ್ತಾನೆ.. ನಂತರ 10 ದಿನಗಳ ಕಾಲ ಹಳ್ಳಿಯ ಜನರು ಕೋತಿಗಳನ್ನು ಹಡುಕುತ್ತಲೇ ಇರುತ್ತಾರೆ, ಆದರೆ ಒಂದು ಸಿಕ್ಕುವುದಿಲ್ಲ..
ನಂತರ ಆ ವ್ಯಕ್ತಿ ತನ್ನ ಹುಡುಗನನ್ನು ಕರೆದು, ನೋಡು ಎರಡು ಕೋತಿ ಕೊಡುತ್ತೇನೆ, ಆ ಕೋತಿಯನ್ನು ತೆಗೆದುಕೊಂಡು ನಾನು ಹೇಳುವ ಹಳ್ಳಿಗೆ ಹೋಗಿ ಒಂದು ಕೋತಿಗೆ ತಲಾ 200 ರೂಪಾಯಿ ನಂತೆ ಮಾರಿ ಬಾ, ಅವರು ತೆಗೆದುಕೊಂಡೆ ಕೊಳ್ಳುತ್ತಾರೆ ಎಂದು ಹೇಳುತ್ತಾನೆ, ತನ್ನ ಯಜಮಾನನ ಮಾತಿನಂತೆ ಆ ಹುಡುಗ ಆ ಹಳ್ಳಿಗೆ ಮಂಗಗಳನ್ನು ತೆಗೆದುಕೊಂಡು ಹೋಗುತ್ತಾನೆ, ನಂತರ ವಿಪರ್ಯಾಸವೇನೆಂದರೆ ಆ ವ್ಯಕ್ತಿಯ ಮಾತಿನಂತೆ ಹಳ್ಳಿಯನೊಬ್ಬ ಎರಡು ಕೋತಿಗಳನ್ನು ತೆಗೆದುಕೊಳ್ಳುತ್ತಾನೆ, ನಂತರ ಎರಡನೇ ದಿನ ಹಳ್ಳಿಯ ಜನರ ಹತ್ತಿರ ಹಿಡಿಸಿ ತಂದಿದ್ದ ಎಲ್ಲಾ ಮಂಗಗಳನ್ನು ತಲಾ 200 ರೂಪಾಯಿ ನಂತೆ ಆ ಹುಡುಗ ಅವರಿಗೆ ಮಾರಿ ಬಿಡುತ್ತಾನೆ..!
ಆ ಸುಶಿಕ್ಷಿತ ವ್ಯಕ್ತಿ 20,40,80 ರೂಪಾಯಿ ಕೊಟ್ಟು ಖರೀದಿಸಿದ ಕೋತಿಗಳನ್ನು ಅದೇ ಊರಿನವರಿಗೆ 200 ರೂಪಾಯಿಯಂತೆ ಮಾರಿ, ಸಿಕ್ಕಾಪಟ್ಟೆ ಹಣ ಸಂಪಾದಿಸತ್ತಾನೆ. ಇತ್ತ ಹಳ್ಳಿಯವರು ಕೊಂಡು ಕೊಂಡ ಮಂಗಗಳನ್ನು ಮನೆಯಲ್ಲೇ ಸಾಕುತ್ತಾ ಈ ವ್ಯಕ್ತಿಗಾಗಿ ಎದುರು ನೋಡುತ್ತಿರುತ್ತಾರೆ.. ಹಿರಿಯರ ಮಾತಿನಂತೆ ಕೊಟ್ಟೋನು ಕೋಡಂಗಿ ಇಸ್ಕೊಂಡೋನು ವೀರಭದ್ರ ಎಂಬಂತೆ ಆ ಕೋಡಂಗಿಗಳಿಂದಲೆ ಹಳ್ಳಿಯ ಅಸಾಧರಣ ಮನಸನ್ನು ಉಪೋಯೋಗಿಸಿಕೊಂಡು ಅವನು ವೀರಭದ್ರನಾಗುತ್ತಾನೆ (ಶ್ರೀಮಂತನಾಗುತ್ತಾನೆ).
ಅದಕ್ಕೇ ಹೇಳುವುದು ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು, ಸುಮ್ಮನೇ ಆ ಕೋತಿಗಳಿಗೆ ಭಯ ಪಡಿಸಿ ಓಡಿಸಿಯೋ ಅಥವಾ ತಾವೇ ಹಿಡಿದು ಬೇರೆ ಎಲ್ಲಾದರು ಬಿಟ್ಟು ಬಂದ್ದಿದ್ದರೋ ಅವರ ಸಮಸ್ಯೆ ತೀರುವುದರ ಜೊತೆಗೆ ಹಣವೂ ಸಹ ಉಳಿಯುತ್ತಿತ್ತು, ಈಗ ಕಾಸು ಹಾಳು ತಲೆಯೂ ಬೋಳು ಎಂಬಂತೆ, ತಮಗೆ ಸಮಸ್ಯೆಯಾಗಿದ್ದ ಕೋತಿಗಳನ್ನು ತಾವೇ ಸಾಕುತ್ತಾ, ಹಣವನ್ನು ಕಳೆದುಕೊಂಡು, ಆ ವ್ಯಕ್ತಿಯಿಂದ ಒಳ್ಳೆಯ ಪಾಠ ಕಲ್ಲಿತಿದ್ದಾರೆ.. ಹೀಗೆ ನಮ್ಮ ಜೀವನದಲ್ಲಿ ಕೋತಿಗಳಂತೆ ಅದೇಷ್ಟೋ ಜನರು ಬಂದು ನಮ್ಮನ್ನು ಕೆಣಕುತ್ತಾರೆ, ಆಗ ನಾವು ಯಾರ ಸಹಾಯವಿಲ್ಲದೇ ಅವರನ್ನು ಹೆದರಿಸಿ ನಿಲ್ಲಬೇಕು.. ಇಲ್ಲವಾದಲ್ಲಿ ಈ ಹಳ್ಳಿಯವರಿಗಾದಂತೆ ನಮಗೂ ಆಗುತ್ತದೆ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರದ ಮಟ್ಟದಲ್ಲಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 01ನೇ ತರಗತಿಯಿಂದ 05 ತರಗತಿಯವರೆಗೆ ಶಾಲಾ ಕಿಟ್ಗಳನ್ನು ಕೋಲಾರ ಜಿಲ್ಲೆÀಯ ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳಿಗೆ ನೇರವಾಗಿ ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸೆಂಟ್ರ್ರಿAಗ್ ಮತ್ತು ಇತರೆ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷರಾದ ನವೀನ್ ಕುಮಾರ್…
ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ಗೆ ಅಂದಾಜು ಎರಡು ತಿಂಗಳು ಮಾತ್ರವೇ ಬಾಕಿ ಇದೆ. ಈ ಸಂಬಂಧ ಭಾರತೀಯ ಚುನಾವಣೆ ಆಯೋಗವು ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೇಳಾಪಟ್ಟಿ ಕುರಿತಂತೆ ಸಾಕಷ್ಟು ವದಂತಿಗಳು, ತಪ್ಪು ವೇಳಾಪಟ್ಟಿ ಮಾಹಿತಿ ಹಬ್ಬುತ್ತಿವೆ. ನೆಟ್ಟಿಗರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ವೇಳಾಪಟ್ಟಿ ಫೋಟೊ ಹಂಚುವಾಗ ಸತ್ಯಾಸತ್ಯತೆ ಪರಿಶೀಲಿಸಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಪರಿಶೀಲನೆಗೆ ಒಂದುಷ್ಟು ಮಾಹಿತಿ, ಸತ್ಯತೆ ಇಲ್ಲಿ…
ಪಾಲಕರಾದ ಬಳಿಕ ಮಗುವಿನ ಲಾಲನೆ ಪಾಲನೆಯ ಕರ್ತವ್ಯಗಳಲ್ಲಿ ಮಗುವನ್ನು ಮಲಗಿಸುವುದೇ ಬಹಳ ಕಷ್ಟಕರವಾದ ಕೆಲಸವಾಗಿದೆ. ಈ ಬಗ್ಗೆ ನಡೆಸಿದ ಹಲವಾರು ಅಧ್ಯಯನಗಳ ಪ್ರಕಾರ ಇನ್ನೂ ಶಾಲೆಗೆ ಹೋಗಲು ಪ್ರಾರಂಭಿಸಿಲ್ಲದ ಮಕ್ಕಳಿಗೆ ದಿನಕ್ಕೆ ಹತ್ತರಿಂದ ಹದಿಮೂರು ಘಂಟೆ ನಿದ್ದೆಯ ಅಗತ್ಯವಿದೆ. ಮಕ್ಕಳು ಬೆಳೆಯುತ್ತಾ ಹೋದಂತೆಯೇ ಈ ಅವಧಿಯೂ ಕಡಿಮೆಯಾಗುತ್ತಾ ಬರುತ್ತದೆ. 6 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಸುಮಾರು ಒಂಭತ್ತು ಘಂಟೆ ನಿದ್ದೆ ಅವಶ್ಯವಾಗಿದೆ. ನೈಸರ್ಗಿಕ ಬೆಳಕಿಗೆ ಒಡ್ಡುವಂತೆ ಮಾಡುವುದು ನಿಮ್ಮ ಮಕ್ಕಳನ್ನು ಆದಷ್ಟೂ ಹಗಲಿನ ವೇಳೆಯಲ್ಲಿ…
ಮೂಲಂಗಿ ಕೆಲವರಿಗೆ ಹಿಡಿಸುವುದಿಲ್ಲ. ಮತ್ತೆ ಕೆಲವರು ಹಾಗೇ ಹಸಿ ಹಸಿ ತಿನ್ನುವುದನ್ನೇ ಇಷ್ಟ ಪಡುತ್ತಾರೆ. ನಿಜಕ್ಕೂ ಮೂಲಂಗಿ ಹಾಗೂ ಅದರ ಬೀಜ ದೇಹಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನ ತಿಳಿಯೋಣ. * ಅರ್ಧ ಲೋಟ ಮೂಲಂಗಿ ರಸಕ್ಕೆ ಸಮಪ್ರಮಾಣದ ನೀರನ್ನು ಬೆರೆಸಿ ಒಂದು ಚಮಚ ನಿಂಬೆ ರಸ ಸೇರಿಸಿ ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತದಲ್ಲಿನ ಕೆಟ್ಟ ಕೊಬ್ಬಿನಾಂಶ ಕಡಿಮೆಯಾಗುತ್ತದೆ. * ಹೊಟ್ಟೆ ಉಬ್ಬರ, ಗ್ಯಾಸ್ ಹೆಚ್ಚಿದ್ದರೆ ಬಾರ್ಲಿಯನ್ನು ಬೇಯಿಸಿ ಅದಕ್ಕೆ…
ಕೆಲವರಿಗೆ ಎಣ್ಣೆ ಚರ್ಮದಿಂದ ಮುಖದಲ್ಲಿ ಎಣ್ಣೆ ಜಿನುಗುವಂತೆ ಕಾಣಿಸುತ್ತದೆ. ಇದರಿಂದ ಕೆಲವರಿಂದ ಕೀಟಲೆಯ ಮಾತು ಕೇಳಬಹುದು. ಮುಖದಲ್ಲಿ ಎಣ್ಣೆ ಪ್ರಮಾಣ ಕಡಿಮೆ ಮಾಡಿಕೊಂಡ ಮುಖ ಫ್ರೆಶ್ ಆಗಿ ಚೆನ್ನಾಗಿ ಕಾಣಲು ಕೆಲ ಸಲಹೆ ಇಲ್ಲಿವೆ.
ಒಬ್ಬೊಬ್ಬ ನಿರ್ದೇಶಕನಿಗೂ ಒಂದೊಂದು ಶೈಲಿ ಇದ್ದರೂ, ಸಿನಿಮಾ ನಿರ್ದೇಶಕರನ್ನು ಎರಡು ವರ್ಗವಾಗಿ ವಿಂಗಡಿಸಬಹುದು. ಮೊದಲನೆಯ ವರ್ಗದ ನಿರ್ದೇಶಕರು ಸಿನಿರಸಿಕರನ್ನು ರಂಜಿಸಲೆಂದೇ ಸಿದ್ದಸೂತ್ರದ ಅಂಶಗಳನ್ನು ಇಟ್ಟುಕೊಂಡು, ಜನ ಬಯಸುವ ಅಂಶಗಳನ್ನೇ ಗ್ರಹಿಸಿ, ಅಳೆದು ತೂಗಿ ಅಂಥದ್ದೇ ಸಿನಿಮಾ ಮೂಲಕ ಜನರನ್ನು ರಂಜಿಸಬಯಸುವವರು. ಹೊಸ ಪ್ರಯೋಗಗಳಿಗೆ ಹಾತೊರೆಯುವ ಮನಸು ಮಾಡದವರು. ಎರಡನೆಯ ವರ್ಗದ ನಿರ್ದೇಶಕರು ತಮ್ಮೊಳಗಿನ ಕಥೆಯನ್ನು ಚೌಕಟ್ಟಿನ ಹಂಗಿಲ್ಲದೆ, ಸಿದ್ಧ ಸೂತ್ರಗಳಿಗೆ ಮೊರೆ ಹೋಗದೇ, ತಮ್ಮದೇ ರೀತಿಯಲ್ಲಿ, ರೂಪಿಸಿ, ನಿರೂಪಿಸಿ ತೆರೆಗೆ ತರುವವರು. ಸದಾ ಹೊಸ ಪ್ರಯೋಗಗಳಿಗೆ ಮಿಡಿಯುವವರು,…