ಸುದ್ದಿ

ಬಾಲಕನಿಂದ ಮೋದಿಯವರಿಗೆ 37ನೇ ಪತ್ರ….ಕಾರಣ ಏನು?

99

ಉತ್ತರ ಪ್ರದೇಶದ ಕಾನ್ಪುರದಲ್ಲಿ 8ನೇ ತರಗತಿಯ ಬಾಲಕನೊಬ್ಬ ತನ್ನ ತಂದೆಯ ಕೆಲಸವನ್ನು ಮರಳಿ ಕೊಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಬರೋಬ್ಬರಿ 37 ಪತ್ರವನ್ನು ಬರೆದಿದ್ದಾನೆ.13 ವರ್ಷದ ಈ ಬಾಲಕ 2016ರಿಂದ ಮೋದಿಗೆ ಪತ್ರಗಳನ್ನು ಬರೆಯುತ್ತಿದ್ದಾನೆ. ಇದುವರೆಗೆ 36 ಪತ್ರಗಳನ್ನು ಬರೆದಿದ್ದಾನೆ. ಆದರೆ ಪ್ರಧಾನಿ ಮೋದಿ ಅವರಿಂದ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

ಸರ್ಥಕ್ ತ್ರಿಪಾಠಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಬಾಲಕ. ಈತನ ತಂದೆ ಉತ್ತರ ಪ್ರದೇಶದಲ್ಲಿ ಸ್ಟಾಕ್ ಎಕ್ಸ್ ಚೇಂಜ್‍ನಲ್ಲಿ(ಯುಪಿಎಸ್‍ಇ)ಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ತಂದೆ ಕೆಲಸ ಕಳೆದುಕೊಂಡಿದ್ದರಿಂದ ನಮ್ಮ ಕುಟುಂಬದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಾಲಕ ಪತ್ರದಲ್ಲಿ ತಿಳಿಸಿದ್ದಾನೆ. ಜೊತೆಗೆ ತನ್ನ ತಂದೆಗೆ ಕೆಲಸವನ್ನು ಮರಳಿ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ತಮ್ಮ ತಂದೆಯನ್ನು ಯುಪಿಎಸ್‍ಇ ಕೆಲಸದಿಂದ ಬಲವಂತವಾಗಿ ಕಳುಹಿಸಿದ್ದಾರೆ ಎಂದು ಬಾಲಕ ತಿಳಿಸಿದ್ದಾನೆ.

ಬಾಲಕ ಪತ್ರದಲ್ಲಿ ನಾನು “ಮೋದಿ ಹೈ ತೊ ಮಮ್ಕಿನ್ ಹೈ”(ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂಬ ಘೋಷಣೆಯನ್ನು ಕೇಳಿದ್ದೇನೆ. ಹಾಗಾಗಿ ನಿಮಗೆ ಪತ್ರ ಬರೆಯುತ್ತಿದ್ದೇನೆ. ದಯವಿಟ್ಟು ಒಂದು ಸಾರಿ ನನ್ನ ಮನವಿಯನ್ನು ಕೇಳಿ ಮತ್ತು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

ಕಾರಣ ಇಲ್ಲದೆ ಕೆಲ ಜನರು ಸೇರಿ ನನ್ನ ತಂದೆಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಹಾಗಾಗಿ ನನ್ನ ತಂದೆಗೆ ಸಹಾಯ ಮಾಡುವಂತೆ ನಾನು ಮೋದಿಯ ಬಳಿ ಕೋರಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ. ಜೊತೆಗೆ ನನ್ನ ತಂದೆಗೆ ಅನ್ಯಾಯ ಮಾಡಿದವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಬೇಕು ಎಂದು ಬಾಲಕ ಒತ್ತಾಯಿಸಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ಹೊಸ ಜಿಯೋ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದು?ಈ ಫೋನ್’ನಲ್ಲಿ ಬೇರೆ ಕಂಪನಿ ಸಿಮ್ ಹಾಕ್ಬಹುದಾ???

    ಜಿಯೋ ಕಂಪನಿ ಫ್ರೀ ಫೋನ್ ಕೊಡುವುದಾಗಿ ಹೇಳಿದ ದಿನವೇ, ಎಲ್ಲರಲ್ಲೂ ಮೂಡಿದ ಪ್ರಶ್ನೆ ಏನಂದರೆ ಈ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದೆಂದು? ಅಂದರೆ ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್ ಫೋನ್ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ.

  • ಶ್ರದ್ಧಾಂಜಲಿ

    ಹಿರಿಯ ನಟಿ ಜಮುನಾ ನಿಧನ

    ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಅವರು ಇಂದು (ಜನವರಿ 27) ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ ಜನಿಸಿದರು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿದರು. ಅವರ ಅಗಲಿಕೆಗೆ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಜಮುನಾ ಪಾರ್ಥಿವ ಶರೀರವನ್ನು ಬೆಳಗ್ಗೆ 11ಗಂಟೆಗೆ ಹೈದರಾಬಾದ್​ನಲ್ಲಿರುವ ಫಿಲಂ ಚೇಂಬರ್‌ಗೆ ತರಲಾಗುತ್ತದೆ….

  • ಸುದ್ದಿ

    ಪೋರ್ನ್ ಚಿತ್ರ ತೋರಿಸಿ ಸ್ವಂತ ಮಗಳನ್ನೇ ರೇಪ್ ಮಾಡಿ, ಹಣ ನೀಡ್ತಿದ್ದ ನೀಚ ತಂದೆ…!

    ಸ್ವಂತ ಮಗಳ ಮೇಲೆಯೇ ತಂದೆ ಅತ್ಯಾಚಾರ ನಡೆಸಿ ನಂತರ ಆಕೆಯ ಬಾಯಿ ಮುಚ್ಚಿಸಲು ಹಣ ನೀಡುತ್ತಿದ್ದ ಅಮಾನವೀಯ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಮಗಳ ಮೇಲೆಯೇ ತಂದೆ 4 ವರ್ಷಗಳಿಂದ ನಿರಂತರ ಅತ್ಯಾಚಾರವೆಸಗಿದ್ದಾನೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವನ್ನೂ ಕೂಡ ಪಾಪಿ ತಂದೆ ಮಾಡಿಸಿದ್ದಾನೆ. ತಾಯಿ ವಿದೇಶಕ್ಕೆ ತೆರಳಿದ ಬಳಿಕ ಬಾಲಕಿ 7 ವರ್ಷದವಳಾಗಿದ್ದಾಗ ತಂದೆ ಜೊತೆ ವಾಸಿಸಲು ಶುರು ಮಾಡಿದ್ದಾಳೆ. ಆದರೆ ಮಗಳಿಗೆ 11 ವರ್ಷವಾಗುತ್ತಿದ್ದಂತೆ ಕಾಮುಕ ತಂದೆ ಮಗಳ…

  • ಉಪಯುಕ್ತ ಮಾಹಿತಿ

    ಬುದ್ಧನ ಕಾಲದ ಈ ಮಹಾನ್ ಚಿಂತಕ ಹೇಳಿರೋ ಈ 10 ಮಾತಿನಿಂದ ನಿಮ್ಮ ಜೀವನದ ದಿಕ್ಕು ಬದಲಾಗುತ್ತೆ!ಆ ಮಹಾನ್ ಚಿಂತಕ ಯಾರು ಗೊತ್ತಾ?

    ಸಮಾಜ ಅಂದಮೇಲೆ ಅವರಲ್ಲಿ ಜನರ ನಡುವೆ ಎಂಥ ಸಂಬಂಧ ಇರಬೇಕು, ಎಂತೆಂಥ ನೀತಿಗಳಿರಬೇಕು ಅನ್ನೋ ವಿಷಯದ ಬಗ್ಗೆ ಎಲ್ಲಾ ಅವರು ತುಂಬಾ ಬರೆದಿಟ್ಟು ಹೋಗಿದ್ದಾರೆ.

  • ಆಧ್ಯಾತ್ಮ

    ಮಹಾಲಕ್ಷ್ಮಿಯ ಹದಿನೆಂಟು ಪುತ್ರರ ಹೆಸರುಗಳು.

    ದೇವಸಖ – ಓಂ ದೇವಸಖಾಯ ನಮಃ, ಚಿಕ್ಲೀತ – ಓಂ ಚಿಕ್ಲೀತಾಯ ನಮಃ, ಆನಂದ – ಓಂ ಆನಂದಾಯ ನಮಃ ಕರ್ದಮ – ಓಂ ಕರ್ದಮಾಯ ನಮಃ , ಶ್ರೀಪ್ರದ – ಓಂ ಶ್ರೀಪ್ರದಾಯ ನಮಃ, ಜಾತವೇದ – ಓಂ ಜಾತವೇದಾಯ ನಮಃ, ಅನುರಾಗ – ಓಂ ಅನುರಾಗಾಯ ನಮಃ, ಸಂವಾದ – ಓಂ ಸಂವಾದಾಯ ನಮಃ, ವಿಜಯ – ಓಂ ವಿಜಯಾಯ ನಮಃ, ವಲ್ಲಭ – ಓಂ ವಲ್ಲಭಾಯ ನಮಃ, ಮದ – ಓಂ ಮದಾಯ…

  • ಸುದ್ದಿ

    ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆಯನ್ನು ಬಗೆಹರಿಸಿ ಅಂತೀರಾ… ಆಕ್ರೋಶದಿಂದ ಸಿಎಂ !

    ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು…