ಉಪಯುಕ್ತ ಮಾಹಿತಿ

ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವವರಿಗೆ ಎಚ್ಚ್ಚರಿಕೆ, ನಿಮ್ಮ ಜೀವಕ್ಕೆ ದೊಡ್ಡ ಅಪಾಯ.

255

ಈಗಿನ ಕಾಲದಲ್ಲಿ ಮೊಬೈಲ್ ಬಳಕೆ ಮಾಡದೆ ಇರುವವರು ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಹಿಂದಿನ ಕಾಲದಲಿ ಮೊಬೈಲ್ ಫೋನ್ ಗಳು ಇರಲಿಲ್ಲ ಮತ್ತು ಜನರು ಯಾರ ಬಳಿ ಆದರೂ ಮಾತನಾಡಬೇಕು ಅಂದರೆ ಲ್ಯಾಂಡ್ ಲೈನ್ ಅಥವಾ ಅಂಚೆ ಕಚೇರಿಯ ಮೊರೆ ಹೋಗುತ್ತಿದ್ದರು, ಆದರೆ ಈಗ ಒಬ್ಬ ವ್ಯಕ್ತಿ ಎಷ್ಟೇ ದೂರ ಇದ್ದರು ಆತನ ಜೊತೆ ಮೊಬೈಲ್ ಮೂಲಕ ಮಾತನಾಡಬಹುದಾಗಿದೆ. ಇನ್ನು ಕೆಲವು ಮೊಬೈಲ್ ಗಳನ್ನ ಮಾತನಾಡುವುದಕ್ಕೆ ಬಳಸಿದರೆ ಹೆಚ್ಚು ತೊಂದರೆ ಇರುವುದಿಲ್ಲ ಆದರೆ ಇಂದಿನ ಕಾಲದಲ್ಲಿ ಜನರು ಇಂಟೆರ್ ನೆಟ್ ಮೂಲಕ ಆಟವಾಡಲು ಮತ್ತು ಸಾಮಾಜಿಕ ಜಾಲತಾಣವನ್ನ ಬಳಸಲು ಹೆಚ್ಚಿನ ಸಮಯವನ್ನ ಕೊಡುತ್ತಿದ್ದಾರೆ.

ಇನ್ನು ಜನರು ಹೆಚ್ಚಾಗಿ ಮೊಬೈಲ್ ಗಳನ್ನ ಬಳಕೆ ಮಾಡುತ್ತಿರುವುದರಿಂದ ನಾನಾ ರೀತಿಯ ಖಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ ಅನ್ನುವುದು ತುಂಬಾ ಬೇಸರದ ಸಂಗತಿ ಆಗಿದೆ. ದಿನದ 24 ಘಂಟೆಯಲ್ಲಿ ಹೆಚ್ಚಿನ ಜನರು 10 ಘಂಟೆಗಳನ್ನ ಮೊಬೈಲ್ ಬಳಕೆ ಮಾಡಲು ಸೀಮಿತವಾಗಿ ಇಡುತ್ತಿದ್ದಾರೆ ಅನ್ನುವುದು ವಿಷಾದದ ಸಂಗತಿಯಾಗಿದೆ. ಇನ್ನು ಕೆಲವರು ಬೆಳಿಗ್ಗೆ ಕಣ್ಣು ಬಿಟ್ಟ ಕೂಡಲೇ ಮೊಬೈಲ್ ಬಳಸಲು ಶುರು ಮಾಡುತ್ತಾರೆ ಮತ್ತು ಮಲಗುವಾಗ ಕೂಡ ತುಂಬಾ ಸಮಯ ಮೊಬೈಲ್ ಬಳಕೆ ಮಾಡುತ್ತಾರೆ, ಇನ್ನು ಕೆಲವರು ಕೆಲಸದ ವಿಷಯವಾಗಿ ಹೆಚ್ಚು ಸಮಯ ಮೊಬೈಲ್ ಬಳಸಿದರೆ ಇನ್ನೂ ಕೆಲವರು ಟೈಮ್ ಪಾಸ್ ಮಾಡುವ ಸಲುವಾಗಿ ಮೊಬೈಲ್ ಬಳಕೆ ಮಾಡುತ್ತಾರೆ.

ಹಾಗಾದರೆ ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ ಮನುಷ್ಯನ ದೇಹಕ್ಕೆ ಆಗುವ ತೊಂದರೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ. ಮೊಬೈಲ್ ಫೋನ್ ಗಳನ್ನ ಹೆಚ್ಚಾಗಿ ಬಳಕೆ ಮಾಡುವುದರಿಂದ ಮನುಷ್ಯನ ಮಾನಸಿಕ ಒತ್ತಡ ಜಾಸ್ತಿ ಆಗುತ್ತದೆ ಮತ್ತು ಯಾವುದೇ ಕೆಲಸವನ್ನ ಪೂರ್ತಿ ಮಾಡಲು ನಿಮಗೆ ಬಹಳ ಹೆಚ್ಚಿನ ಸಮಯ ಬೇಕಾಗುತ್ತದೆ. ಇನ್ನು ಮೊಬೈಲ್ ಫೋನ್ ಗಳನ್ನ ಜಾಸ್ತಿ ಬಳಕೆ ಮಾಡಿದರೆ ನಿಮ್ಮ ಕೆಲಸಕ್ಕಿಂತ ಜಾಸ್ತಿ ಬೆರೆ ಕಡೆ ನಮ್ಮ ಗಮನ ಹೆಚ್ಚಾಗಿ ಹೋಗುತ್ತದೆ, ಚಾರ್ಜ್ ಕಡಿಮೆ ಆಗಿ ಕೆಲವು ಸಮಯ ನಿಮಗೆ ಮೊಬೈಲ್ ಬಳಸಲು ಆಗಲಿಲ್ಲ ಅಂದರೆ ಹುಚ್ಚು ಹಿಡಿದ ಅನುಭವ ಆಗುತ್ತದೆ ಮತ್ತು ಇದರ ಪರಿಣಾಮ ಜೀವನದಲ್ಲಿ ಹತಾಶೆ ಜಾಸ್ತಿ ಆಗಿ ಯಾವುದೇ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ.

ಮೊಬೈಲ್ ಬಳಕೆ ಹೆಚ್ಚು ಬಳಕೆ ಮಾಡುವವರಿಗೆ ಸಣ್ಣ ಸಣ್ಣ ವಿಚಾರಗಳಿಗೂ ಹೆಚ್ಚು ಕೋಪ ಬರುತ್ತದೆ ಮತ್ತು ಭಾವನೆಗಳ ಮೇಲೆ ನಿಯಂತ್ರಣ ಕಡಿಮೆ ಆಗುತ್ತದೆ ಮತ್ತು ಎದುರುಗಡೆ ಇರುವ ವ್ಯಕ್ತಿಯ ಭಾವನೆಗಳು ನಮಗೆ ಅರ್ಥ ಆಗುವುದಿಲ್ಲ. ಇನ್ನು ಇಷ್ಟು ಮಾತ್ರವಲ್ಲದೆ ಮೆದುಳಿನಲ್ಲಿನ ಡೊಫೋಮೈನ್ ರಿಸೆಪ್ಟರ್ಸ್ ಕಡಿಮೆ ಆಗಿ ಮಾನಸಿಕ ಖಿನ್ನತೆ ಅಥವಾ ಡಿಪ್ರೆಶನ್ ಉಂಟಾಗುತ್ತದೆ. ಇನ್ನು ಮೊಬೈಲ್ ಹೆಚ್ಚಾಗಿ ಬಳಸುವವರಿಗೆ ಪದೇ ಪದೇ ಕಾಫಿ ಬೇಕು, ಟೀ ಬೇಕು ಅಥವಾ ಎಣ್ಣೆ ಹೊಡಿಬೇಕು ಮತ್ತು ಹೋಗೆ ಎಳಿಬೇಕು ಅನಿಸುವುದು ಆಗುತ್ತದೆ ಮತ್ತು ಅದನ್ನ ನಿಯಂತ್ರಣಕ್ಕೆ ತರಲು ಆಗುವುದಿಲ್ಲ. ಇನ್ನು ಮೊಬೈಲ್ ಗಳಿಂದ ಬರುವ ವಿಕಿರಣಗಳಿಂದ ಕಣ್ಣಿನ ದೃಷ್ಟಿ ಕಡಿಮೆ ಆಗುತ್ತದೆ ಮತ್ತು ತಲೆ ನೋವು ಹಾಗೆ ಮೈಗ್ರೇನ್ ಪೇನ್ ಕೂಡ ಜಾಸ್ತಿ ಆಗುತ್ತದೆ.

ಮೊಬೈಲ್ ಹೆಚ್ಚು ಬಳಕೆ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶಗಳ ಸಂಗ್ರಹ ಜಾಸ್ತಿ ಆಗಿ ದೇಹ ದಪ್ಪ ಆಗುತ್ತದೆ, ಇನ್ನು ಇದರ ಜೊತೆಗೆ ಕುತ್ತಿಗೆ ನೋವು, ಬೆನ್ನು ನೋವಿನಂತಹ ಸಮಸ್ಯೆಗಳು ಬರುತ್ತದೆ. ಇನ್ನು ಮೊಬೈಲ್ ಹೆಚ್ಚಾಗಿ ಬಳಕೆ ಮಾಡುವವರಿಗೆ ರಾತ್ರಿಯ ಸಮಯದಲ್ಲಿ ಹೆಚ್ಚಾಗಿ ನಿದ್ರೆ ಬರುವುದಿಲ್ಲ, ಸ್ನೇಹಿತರೆ ಮೊಬೈಲ್ ಗಳನ್ನ ಹೆಚ್ಚು ಬಳಕೆ ಮಾಡುವುದರಿಂದ ಹೀಗೆ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಈಗಿನ ಕಾಲದಲ್ಲಿ ಯುವಕರು ಮತ್ತು ಯುವತಿಯರು ಪಬ್ ಜಿ ಆಟವನ್ನ ಆಡಲು ಹೆಚ್ಚಿನ ಸಮಯ ಹಾಳು ಮಾಡುತ್ತಿದ್ದು ಅದೂ ಅವರ ಆರೋಗ್ಯದ ಮೇಲೆ ತುಂಬಾ ಪ್ರಭಾವನ್ನ ಬೀರುತ್ತಿದೆ, ಸ್ನೇಹಿತರೆ ಇನ್ನಾದರೂ ಸ್ವಲ್ಪ ಎಚ್ಛೆತ್ತುಕೊಳ್ಳಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ಪ್ರವಾಸೋದ್ಯಮ ಇಲಾಖೆಯಲ್ಲಿ 243 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ’…!

    ಪ್ರವಾಸೋದ್ಯಮ ಇಲಾಖೆಯೂ 40 ಪ್ರಮುಖ ಪ್ರವಾಸಿ ವರ್ತುಲ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಅವರು ಗುರುವಾರ ಹೇಳಿದರು. ವಿಕಾಸಸೌಧದಲ್ಲಿಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಫಲ ಅವಕಾಶವಿದೆ, ಪ್ರಧಾನ ಮಂತ್ರಿಗಳು ದೇಶವನ್ನು ಟೂರಿಸ್ಟ್ ಹಬ್ ಮಾಡಲು ಉಲ್ಲೇಖ ಮಾಡಿದ್ದಾರೆ ಹೀಗಾಗಿ ದೇಶದ್ಯಂತ ಪ್ರಮುಖವಾಗಿ 17 ಸ್ಥಳಗಳನ್ನು ಗುರುತಿಸಿದ್ದಾರೆ ಅದರಲ್ಲಿ ಕರ್ನಾಟಕದ ಹಂಪಿ ಕೂಡ ಸೇರಿದೆ ಎಂದು ಅವರು ಮಾಹಿತಿ ನೀಡಿದರು. ಇದೇ ವಿಷಯಕ್ಕೆ…

  • ಕಾನೂನು

    10ರೂ ನಾಣ್ಯವನ್ನು, ಅಂಗಡಿಯವ ಮುಲಾಜಿಲ್ಲದೆ ತಿರಸ್ಕರಿಸಿದಕ್ಕೆ, ಅವನಿಗಾದ ಶಿಕ್ಷೆ ಏನು ಗೊತ್ತಾ..?

    ಹತ್ತು ರುಪಾಯಿಯ ನಾಣ್ಯವನ್ನು ತೆಗೆದುಕೊಳ್ಳುವುದರ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.ವ್ಯಾಪಾರಿಗಳು ತಮಗಿರುವ ಗೊಂದಲದಲ್ಲಿ, 10ರುಪಾಯಿಯ ನಾಣ್ಯವನ್ನು ಮುಲಾಜಿಲ್ಲದೆ ತಿರಸ್ಕರಿಸುತ್ತಿದ್ದಾರೆ.

  • ಸುದ್ದಿ

    ಮದ್ಯಪಾನ ಮಾರಾಟದಲ್ಲಿ ಈ ಬಾರಿ ದಾಖಲೆ ನಿರ್ಮಿಸಿದ ಮಂಡ್ಯ…..!

    ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಅಂತಾ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಜನ ಬೆಚ್ಚಿಬೀಳುವಂತಹ ಸುದ್ದಿ ಇದು. ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ಒಂದೆಡೆ ಬರಗಾಲ. ಮತ್ತೊಂದೆಡೆ ನಾಲೆಗಳಲ್ಲಿ ಕಾಣಿಸದ ನೀರು. ಮಗದೊಂದು ಕಡೆ ರಾಜಕೀಯದ ಅಬ್ಬರ. ಇದರ ನಡುವೆ ಮದ್ಯದ ಹೊಳೆಯೇ ಜೋರಾಗಿ ಅಬ್ಬರಿಸುವಂತೆ ರಭಸವಾಗಿ ಹರಿಯುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹದಿಹರೆಯದ ಹುಡುಗರು ಎಣ್ಣೆ ಮಬ್ಬಲ್ಲಿ ಸುತ್ತಾಡೋದು. ಇದನ್ನೆಲ್ಲ ನಿಲ್ಲಿಸಬೇಕಿದ್ದ ನಾಯಕರುಗಳೆಲ್ಲ ಇಂಥಹ ಹದಿಹರಿಯದ ಹುಡುಗರಿಗೆ ಮತ್ತಷ್ಟು ಎಣ್ಣೆ ಸುರಿದು ಅವರನ್ನೆಲ್ಲ ಕುಡುಕರನ್ನಾಗಿ ಮಾಡುತ್ತಿದ್ದಾರೆ….

  • ಆರೋಗ್ಯ

    ಕ್ಯಾರೆಟ್ ನ ಉಪಯೋಗಗಳು ಗೊತ್ತಾದ್ರೆ ಅಚ್ಚರಿ ಪಡ್ತಿರಾ.! ಈ ಮಾಹಿತಿ ನೋಡಿ.

    ಆರೋಗ್ಯ ತಜ್ಞರ ಪ್ರಕಾರ  ಸೇಬಿಗಿಂತಲೂ ದಿನಕ್ಕೊಂದು ಕ್ಯಾರೆಟ್ ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಸಾಧ್ಯವಾದಷ್ಟು ತಮ್ಮ ಆಹಾರಕ್ರಮದಲ್ಲಿ ಕ್ಯಾರೆಟ್‌ನ್ನು ಸೇವಿಸಬೇಕಂತೆ. ಕ್ಯಾರೆಟ್ ಅನ್ನು ಹೆಚ್ಚಾಗಿ ಮಕ್ಕಳಿಗೆ ನೀಡಬೇಕು. ಇದರಿಂದ ಅವರ ಬೆಳವಣಿಗೆ ಚೆನ್ನಾಗಿ ಆಗುವುದರ ಜೊತೆಗೆ ಅವರುಗಳಲ್ಲಿ ಮೂಳೆಗಳು ಸದೃಢಗೊಳ್ಳುತ್ತವೆ. ನಿತ್ಯದಲ್ಲೂ ಅವರಿಗೆ ಲಂಚ್ ಬಾಕ್ಸ್ಗಳಿಗೆ ಪೀಸ್ಗಳನ್ನೂ ಹಾಕಬೇಕು, ಅವರಿಗೆ 2 ದಿನೊಕೊಮ್ಮೆ ಅದರಲ್ಲಿ ಪಾಯಸ ಮಾಡಿ ಕೊಡಬೇಕು. ಇಲ್ಲದೆ ಹೋದಲ್ಲಿ ಚಿಕ್ಕ ತುಂಡುಗಳನ್ನು ಮಾಡಿ ಅದರ ಮೇಲೆ ಸ್ವಲ್ಪ ಉಪ್ಪು ಪೆಪ್ಪರ್/ ಮೆಣಸಿನ ಪುಡಿ ಹಾಕಿ…

  • ರಾಜಕೀಯ

    ಆತಂಕದ ಭೀತಿಯಲ್ಲಿ ಜೆಡಿಎಸ್ ನ ಬಂಡಾಯ ಶಾಸಕರು..!ಅಸಲಿಗೆ ಆಗಿದ್ದೇನು ಗೊತ್ತಾ.?ತಿಳಿಯಲು ಈ ಲೇಖನ ಓದಿ ಇಷ್ಟ ಆದ್ರೆ ಶೇರ್ ಮಾಡಿ…

    ಜೆಡಿಎಸ್ ನ ಶಾಸಕರಾಗಿದ್ದ ಚಲುವರಾಯಸ್ವಾಮಿ, ಎಚ್‌.ಸಿ.ಬಾಲಕೃಷ್ಣ, ಜಮೀರ್‌ ಅಹ್ಮದ್‌ ಖಾನ್‌, ರಮೇಶ್‌ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್‌ ಅನ್ಸಾರಿ ಮತ್ತು ಭೀಮಾ ನಾಯ್ಕ್‌ ಪಕ್ಷದಲ್ಲಿಯೇ ಸಂಚಲನ ಸೃಷ್ಟಿಸುವುದರ ಮೂಲಕ ಪಕ್ಷದ ದೋರಣೆಗೆ ಗುರಿಯಾಗಿದ್ದರು. ಅಡ್ಡಮತದಾನ ಮಾಡಿರುವ ಏಳು ಮಂದಿ ಶಾಸಕರಿಗೆ ಈ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡದಂತೆ ಅದೇಶಿಸುವಂತೆ ಕೋರಿ ಜೆಡಿಎಸ್​ನ ಶ್ರವಣಬೆಳಗೊಳದ ಶಾಸಕ ಸಿ.ಎನ್​. ಬಾಲಕೃಷ್ಣ, ಮೂಡಿಗೆರೆಯ ಬಿ.ವಿ ನಿಂಗಯ್ಯ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಕಳೆದ 2016ರಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿದ್ದ…