ಸುದ್ದಿ

ಟೈಮ್ ಪಾಸ್ ಮತ್ತು ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತೀದ್ದಿರಾ?, ಆರೋಗ್ಯಕ್ಕೆ ಅದು ಒಳ್ಳೆಯದಲ್ಲ!

37

ಮೆಲ್ಬೋರ್ನ್: ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ನೀವು ಸ್ಮಾರ್ಟ್ ಫೋನ್ ಮೊರೆ ಹೋಗುತ್ತೀರಿ ಎಂದಾದರೆ ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ! ಹೀಗೆಂದು ಮಾನವ ವರ್ತನೆಗಳಲ್ಲಿ ಕಂಪ್ಯೂಟರ್ ಗಳು (Computers in Human Behavior) ಎಂಬ ನಿಯತಕಾಲಿಕೆಯ ಸಂಶೋಧನಾ ವರದಿ ಹೇಳುತ್ತಿದೆ. ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದ ಸಂಶೋಧಕರು ಸ್ಮಾರ್ಟ್ಫೋನ್ ನ ನಿರಂತರ ಬಳಕೆ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಮಾನಸಿಕ ಆರೋಗ್ಯದ ಮಟ್ಟ ಅತ್ಯುತ್ತಮವಾಗಿಲ್ಲದವರು, ನಕಾರಾತ್ಮಕ ಭಾವನೆಯುಳ್ಳವರು, ಸಂಯಮ ಕಡಿಮೆಯುಳ್ಳವರು, ಜೀವನದ ಉದ್ದೇಶವೇ ಕಳೆದುಕೊಂಡಿರುವಂತಾಗಿರುವವರು, ಸಾಮಾಜಿಕ ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಕುಗ್ಗಿದವರು ಟೈಮ್ ಪಾಸ್, ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತಿರುತ್ತಾರೆ ಎಂಬುದನ್ನು ಸಂಶೋಧಕರು ಮನಗಂಡಿದ್ದಾರೆ.

ಹಾಗಂತ ಸ್ಮಾರ್ಟ್ ಫೋನ್ ಸಂಪೂರ್ಣ ಕೆಟ್ಟದ್ದೂ ಅಲ್ಲ ಸಂವಹನದ ಮಟ್ಟ ಅಂದರೆ ಕರೆ, ಸಂದೇಶ ರವಾನೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಸ್ಮಾರ್ಟ್ ಫೋನ್ ಗಳು ಮಾನಸಿಕ ಆರೋಗ್ಯಕ್ಕೆ ಸಕಾರಾತ್ಮಕವಾಗಿರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ನೇರ ಸಂಪರ್ಕ ಹೊಂದುವುದಕ್ಕೆ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡುವುದು ಒಳ್ಳೆಯದು ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಏನು ಮಾಡುತ್ತಿದ್ದಾರೆ ಎಂಬುದನ್ನು ನಿಷ್ಕ್ರಿಯವಾಗಿ ಗಮನಿಸುತ್ತಾ ಕೂರುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೇಯದಲ್ಲ ಎಂಬುದು ಸಂಶೋಧಕರು ಕಂಡುಕೊಂಡಿರುವ ಅಂಶ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    Video Game; 4 ತಿಂಗಳಲ್ಲಿ 30 ಗೇಮ್‌ ರಚಿಸಿ ಅಚ್ಚರಿ ಮೂಡಿಸಿದ ಬಾಲಕ,.!!

    ಮಕ್ಕಳು ಮೊಬೈಲ್‌ ಹಿಡಿದುಕೊಂಡರೆ, ಮೊದಲು ಹುಡುಕುವುದು ಗೇಮ್ಸ್ ಇದೆಯೇ ಎಂದು! ಅದಾದ ಬಳಿಕ ವಿಡಿಯೋ, ಕ್ಯಾಮರಾ ಎಂದೆಲ್ಲ ವಿವಿಧ ಆಯ್ಕೆಗಳನ್ನು ಹುಡುಕುತ್ತಾರೆ. ಅಲ್ಲದೆ ಮೊಬೈಲ್, ಕಂಪ್ಯೂಟರ್ ಮತ್ತು ಟ್ಯಾಬ್ ಬಳಕೆಯನ್ನು ಕೂಡ ಬಹಳ ಬೇಗನೆ ಕಲಿತುಕೊಂಡು ಬಿಡುತ್ತಾರೆ. ಹೀಗೆ ಸ್ಮಾರ್ಟ್ ಆಗಿರುವ ನೈಜೀರಿಯಾದ 9 ವರ್ಷದ ಬಾಲಕನೊಬ್ಬ ನಾಲ್ಕೇ ತಿಂಗಳಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್‌ಗಳಿಗಾಗಿ 30 ಗೇಮ್‌ಗಳನ್ನು ಅಭಿವೃದ್ಧಿ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ. ಈ ಬಾಲಕನ ಹೆಸರು ಬೇಸಿಕ್‌ ಓಕ್ಪರಾ ಜ್ಯೂ. ಲಾಗೋಸ್‌ ನಿವಾಸಿಯಾಗಿರುವ…

  • ಸುದ್ದಿ

    ಬರದಿಂದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋದ ರೈತರು…..!

    ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ಗಳು ಮೊರೆ ಹೋಗಿದ್ದಾರೆ. ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು. ಬೆಳೆ ಮೊಳಕೆಯೊಡೆದು ಈಗ ನೆಲ…

  • ಕರ್ನಾಟಕ

    ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್ ನೀಡಿದ ಕರ್ನಾಟಕ ಸಾರಿಗೆ..!ತಿಳಿಯಲು ಈ ಲೇಖನ ಓದಿ..

    ಮಹದಾಯಿ ವಿವಾದ ಬಗೆ ಹರಿಸಲು ಜನವರಿ 25ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸಲು ಕರೆ ನೀಡಿದರೆ. ಈ ನಡುವೆ ಜ.30 ರಂದು ಸಾರಿಗೆ ಬಂದ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

  • ಸ್ಪೂರ್ತಿ

    ತಿಂಗಳಿಗೆ 35 ಸಾವಿರ ದುಡಿಯುತ್ತಿರುವ 3 ನೇ ತರಗತಿ ಓದಿರುವ ಹುಡುಗ, ಹೇಗೆ ಗೊತ್ತಾ.

    ನಮ್ಮ ಸಮಾಜದಲ್ಲಿ ಹೈಷಾರಾಮಿ ಜೀವನ ನಡೆಸುವ ಜನರಿಗಿಂತ ಒಪ್ಪತ್ತಿನ ಊಟಕ್ಕಾಗಿ ದಿನಗೂಲಿ ಮಾಡುವ ಮಂದಿ ಜಾಸ್ತಿ. ಅಲ್ಲದೇ ಪೋಷಕರ ಜೊತೆ ತಮ್ಮ ಮಕ್ಕಳು ಕೂಡ ಕೆಲಸ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಆಂಧ್ರಪ್ರದೇಶದ ರೈಲಿನಲ್ಲಿ ಒಬ್ಬ ಹುಡುಗ ಬಹಳ ಆಯಾಸದಿಂದ ಕುಳಿತ್ತಿದ್ದ. ಇದನ್ನು ಕಂಡ ಸಾಫ್ಟವೇರ್ ಉದ್ಯಮಿ ಏನ್ ತಮ್ಮ ಬಹಳ ಆಯಾಸದಿಂದ ಕುಳಿತ್ತಿದ್ದೀಯಾ? ಸಮೋಸ ಎಲ್ಲಾ ಮಾರಿಬಿಟ್ಟೆಯಾ? ಎಂದು ಕೇಳಿದ. ಇದಕ್ಕೆ ಉತ್ತರಿಸಿದ ಸಮೋಸ ಮಾರುವ ಹುಡುಗ, ಹೌದು ಸಾರ್ ಎಲ್ಲಾ ಮಾರಿಬಿಟ್ಟೆ, ಇನ್ನೇನ್ ಮಾಡುವುದು…

  • ಸ್ಪೂರ್ತಿ

    ಓ ದೇವ್ರೇ ಇವರೇನಪ್ಪಾ ಭಾರತದಲ್ಲಿರೋ ಯಾವ ಡಿಗ್ರಿಯನ್ನು ಬಿಟ್ಟಿಲ್ಲಾ..!ಇವ್ರು ಮಾಡಿರೋ ಪದವಿಗಳ ಬಗ್ಗೆ ಕೇಳ್ತಾ ಹೋದ್ರೆ ನೀವ್ ಶಾಕ್ ಆಗೋದು ಗ್ಯಾರಂಟಿ…

    ಹತ್ತನೇ ತರಗತಿ ಓದಿ, ಒಂದು ಡಿಗ್ರಿ ತಗೊಳಷ್ಟರಲ್ಲಿ ಸಾಕಾಗಿ ಹೋಗಿರುತ್ತೆ.ಆದ್ರೆ ಈ ವ್ಯಕ್ತಿ ಭಾರತದಲ್ಲಿರೋ ಹಲವಾರು ಡಿಗ್ರಿ (ಪದವಿ)ಗಳನ್ನು ಮಾಡಿ ಮುಗಿಸಿದ್ದಾರೆ.ಇವರು ಎಷ್ಟು ಓದಿದ್ದಾರೆಂದ್ರೆ ಇವರು ಹೆಸರು ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಆಗಿದೆ.

  • inspirational

    ದರ್ಶನ್‌ ಮತ್ತು ಸುದೀಪ್ ಒಟ್ಟಿಗೆ ನಟಿಸಬೇಕಾಗಿದ್ದ ಆ ಸಿನಿಮಾ ನಿಂತಿದ್ದೇಕೆ? ಇಂದ್ರಜಿತ್ ಬಿಚ್ಚಿಟ್ರು ಮೂಲ ಕಾರಣ.

    ಕನ್ನಡ ಸಿನಿಪ್ರಿಯರ ಬಹುದಿನಗಳ ಕನಸು ಏನೆಂದರೆ, ದರ್ಶನ್‌ ಮತ್ತು ಸುದೀಪ್ ಒಟ್ಟಿಗೆ ನಟಿಸುವುದು! ಬೆಳ್ಳಿತೆರೆ ಮೇಲೆ ಅವರಿಬ್ಬರನ್ನು ಏಕಕಾಲಕ್ಕೆ ನೋಡಲು ಅಭಿಮಾನಿಗಳು ಕಾದಿದ್ದಾರೆ. ಇಬ್ಬರು ಕನ್ನಡದ ಸ್ಟಾರ್ ನಟರು. ಅವರದ್ದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಿರುವಾಗ ಅವರಿಬ್ಬರು ಒಟ್ಟಿಗೆ ನಟಿಸಿಬಿಟ್ಟರೆ? ಅದು ಅಭಿಮಾನಿಗಳಿಗೆ ಹಬ್ಬವೇ ಸರಿ. ಅದಿನ್ನೂ ಸಾಧ್ಯವಾಗಿಲ್ಲ. ಮುಂದೆ ಯಾವತ್ತು ಆಗುತ್ತದೆಯೋ ಅದು ಗೊತ್ತಿಲ್ಲ. ಆದರೆ, ಬಹುವರ್ಷಗಳ ಈ ಹಿಂದೆ ಸ್ಟಾರ್ ನಟರನ್ನು ಒಟ್ಟಿಗೆ ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನವೊಂದು ನಡೆದಿತ್ತು! ಅವರಿಬ್ಬರು…