ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಿಲಿಕಾನ್ ಸಿಟಿಯ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಗೀತಾಳ ತಂದೆ, ತಾಯಿಯ ಮನವೊಲಿಸಿ ಕೊನೆಗೂ ಬಾಲಕಿಗೆ ಶಿಕ್ಷಣ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿ ರಾಮನಗರದ ಕೈಲಾಂಚದಲ್ಲಿರುವ ವಸತಿ ಶಾಲೆಯಲ್ಲಿ 7ನೇ ತರಗತಿಗೆ ದಾಖಲಾತಿ ಪಡೆದಿದ್ದಾಳೆ.
ಮನೆಯಲ್ಲಿ ಕಡು ಬಡತನವಿರುವ ಕಾರಣಕ್ಕೆ ತಂದೆ ತಾಯಿ ಇದ್ದರೂ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಗೀತಾ ಹೂವು ಮಾರುತ್ತಿದ್ದಳು. ಸಂಗೀತ ತಂದೆ ಆಕೆಯನ್ನು ಕಾಟಾಚಾರಕ್ಕೆ ಸರ್ಕಾರಿ ಶಾಲೆಗೆ ಸೇರಿಸಿದ್ದರು. ಆದರೆ ಶಾಲೆ ಮುಗಿದ ಮೇಲೆ ಸಂಗೀತಾ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಳು. ಶಾಲೆ ಕಡೆ ಹೆಚ್ಚು ಗಮನ ಕೊಡಲಾಗದೇ, ಕಷ್ಟ ಪಟ್ಟು ಚಿಕ್ಕ ವಯಸ್ಸಿನಲ್ಲಿಯೇ ತಂದೆ, ತಾಯಿಗೆ ಕುಟುಂಬ ನಡೆಸಲು ಸಹಾಯ ಮಾಡುತ್ತಿದ್ದ ಸಂಗೀತಾಳನ್ನು ಕಂಡ ಸಚಿವರು ಆಕೆಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಸಂಗೀತ ಎಂಬ ಈ ಬಾಲಕಿ ಕೆಂಗೇರಿ ರೈಲ್ವೇ ನಿಲ್ದಾಣದ ಬಳಿ ಹೂವು ಮಾರುತ್ತಿದ್ದಳು.
— S.Suresh Kumar, Minister – Govt of Karnataka (@nimmasuresh) December 18, 2019
ನಮ್ಮ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಆಕೆಯ ಪೋಷಕರ ಮನ ಒಪ್ಪಿಸಿ ಸಂಗೀತ ಳನ್ನು ರಾಮನಗರದ ಮೊರಾರ್ಜೀ ದೇಸಾಯಿ ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಲು ಸಜ್ಜಾಗಿದ್ದಾರೆ.
ಇಂತಹ ಇನ್ನೂ ಅನೇಕ ಬಾಲ ಕಾರ್ಮಿಕರಿಗೆ ಶಿಕ್ಷಣ ಕೊಡಿಸುವ ಯೋಜನೆ ನಮ್ಮ ಇಲಾಖೆಯದ್ದು. pic.twitter.com/cTwY82KN9o
ಈ ಬಗ್ಗೆ ಸ್ವತಃ ಶಿಕ್ಷಣ ಸಚಿವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಸಂಗೀತ ಎಂಬ ಈ ಬಾಲಕಿ ಕೆಂಗೇರಿ ರೈಲ್ವೇ ನಿಲ್ದಾಣದ ಬಳಿ ಹೂವು ಮಾರುತ್ತಿದ್ದಳು. ನಮ್ಮ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಆಕೆಯ ಪೋಷಕರ ಮನ ಒಪ್ಪಿಸಿ ಸಂಗೀತ ಳನ್ನು ರಾಮನಗರದ ಮೊರಾರ್ಜೀ ದೇಸಾಯಿ ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಲು ಸಜ್ಜಾಗಿದ್ದಾರೆ.ಇಂತಹ ಇನ್ನೂ ಅನೇಕ ಬಾಲ ಕಾರ್ಮಿಕರಿಗೆ ಶಿಕ್ಷಣ ಕೊಡಿಸುವ ಯೋಜನೆ ನಮ್ಮ ಇಲಾಖೆಯದ್ದು..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೌದು, ನೀವು ಕೇಳಿದ್ದು ನಿಜ…ಈ ಜಗತ್ತಿನಲ್ಲಿ ಏನೆಲ್ಲಾ ವಿಸ್ಮಯ ಅಚ್ಚರಿಗಳು ನಡೆಯುತ್ತವೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ.ನಾವೆಲ್ಲಾ ಕೋಳಿ,ಪಕ್ಷಿಗಳು,ಹಾವುಗಳು ಹಾಗೂ ಕೆಲವೊಂದು ಜೀವಿಗಳು ಮೊಟ್ಟೆ ಇಡುವುದನ್ನು ಕೇಳಿದ್ದೇವೆ.ಆದರೆ ಮನುಷ್ಯ ಮೊಟ್ಟೆ ಇದುತ್ತಾನೆಂದ್ರೆ ಇದು ಎಂತಹವರಿಗೂ ನಂಬೋದಕ್ಕೆ ಅಸಾಧ್ಯ ಆಲ್ವಾ…
ಬೆಂಗಳೂರು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುಗಳಿಗೆಯೇ ರೈತರು, ಮೀನುಗಾರರು ಮತ್ತು ನೇಕಾರರಿಗೆ ಸಿಹಿಸುದ್ದಿ ನೀಡಿದ್ದ ಸಿಎಂ ಯಡಿಯೂರಪ್ಪ ವಿದ್ಯಾರ್ಥಿಗಳಿಗೂ ಶೀಘ್ರದಲ್ಲೇ ಶುಭ ಸುದ್ದಿ ನೀಡಲಿದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸ್ತುತ ನೀಡುತ್ತಿರುವ ವಾರ್ಷಿಕ ವೆಚ್ಚವನ್ನು ಹೆಚ್ಚಳ ಮಾಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಪ್ರಸ್ತುತ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ 2438 ಹಾಸ್ಟೆಲ್ಗಳಿದ್ದು, 1,88,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಾರ್ಷಿಕ ವೆಚ್ಚವಾಗಿ ಪ್ರತಿ ವಿದ್ಯಾರ್ಥಿಗೆ 1600 ರೂ. ನೀಡಲಾಗುತ್ತಿದೆ. ಇದೀಗ…
ಕೆಲವರು ಸದಾಕಾಲ ಬಿಸಿಬಿಸಿ ನೀರನ್ನೇ ಕುಡಿಯಲು ಇಷ್ಟಪಡ್ತಾರೆ, ಇನ್ನು ಕೆಲವರಿಗೆ ನೀರು ಎಷ್ಟು ತಣ್ಣಗಿದ್ರೂ ಸಾಲದು. ಚರ್ಮದ ಆರೋಗ್ಯ, ಜೀರ್ಣಕ್ರಿಯೆ, ಮೈಗ್ರೇನ್ ನಿಂದ ಹಿಡಿದು ಎಲ್ಲದಕ್ಕೂ ನೀರು ಪರಿಹಾರ. ಬಿಸಿ ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದನ್ನು ವೈದ್ಯಕೀಯ ಲೋಕ ಕೂಡ ಒಪ್ಪಿಕೊಂಡಿದೆ. ಊಟದ ಜೊತೆಗೆ ಒಂದು ಲೋಟ ಬಿಸಿ ನೀರು ಸೇವನೆ ಒಳ್ಳೆಯದು ಅನ್ನೋದು ಆಯುರ್ವೇದ ವೈದ್ಯರ ಸಲಹೆ. ಚೀನಾ ಮತ್ತು ಜಪಾನ್ ನಲ್ಲಿ ಊಟದ ಜೊತೆ ಬಿಸಿಬಿಸಿ ಚಹಾ ಕುಡಿಯುವ ಪದ್ಧತಿಯಿದೆ. ಹಾಗಂತ ಅದೇನು…
ಸಿನಿಮಾವೊಂದರ ಬಗ್ಗೆ ಬಿಡುಗಡೆಗು ಮುನ್ನವೇ ಸಹಜವಾಗಿ ಬರುವ ನಿರೀಕ್ಷೆಯಾ ತೀವ್ರತೆಯಿದೆಯಲ್ಲಾ? ಅದಕ್ಕೆ ಮಾಸ್ಟರ್ ಪೀಸ್ನಂಥಾ ಚಿತ್ರಗಳು ಅನೇಕವಿವೆ. ಇತ್ತೀಚಿನ ತಾಜಾ ಮಾದರಿಯಾಗಿ ನಿಲ್ಲುವಂಥಾ ಚಿತ್ರ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ. ಈ ಟೈಟಲ್ ಅನೌನ್ಸ್ ಮಾಡಿದಗಿನಿಂದಲೇ ಸೆನ್ಸೇಷನಲ್ ಭರಾಟೆ ಶುರುವಾಗಿ ಹೋಗಿತ್ತು. ರಾಜಸ್ಥಾನದ ಸುಂದರ ಸ್ಥಳಗಲ್ಲಿ , ವಿಭಿನ್ನ ಗೆಟಪ್ನಲ್ಲಿ ಮಿಂಚಿದ್ದ ಶ್ರೀಮುರಳಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿ ಕುಣಿಸಿದ್ದರು. ಅದೇ ರಭಸದೊಂದಿಗೆ ಸಾಗಿ ಬಂದಿರೋ ಭರಾಟೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಯುವ ಆವೇಗದ ಚೇತನ್ ಅವರು ಈ…
ಯಶಸ್ಸಿಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ. ಆದರೆ ಕೆಲ ಹವ್ಯಾಸಗಳನ್ನು ಅನುಸರಿಸಿದರೆ ಅವು ಸ್ವಯಂ ನಿರ್ಮಿತಕೋಟ್ಯಾಧಿಪತಿ ಆಗುವಂತೆ ಉತ್ತೇಜನ ಹಾಗೂ ಪ್ರೇರೆಪಣೆ ನೀಡಬಲ್ಲವು ಎಂಬುದರಲ್ಲಿ ಸಂಶಯವಿಲ್ಲ. ಟಾಟಾ, ಅಂಬಾನಿ, ನಾರಾಯಣಮೂರ್ತಿ, ಬಿಲ್ ಗೇಟ್ಸ್ ಹೀಗೆ ಹಲವರ ಜೀವನಶೈಲಿ ನಮ್ಮನ್ನು ಸ್ಪೂರ್ತಿ ನೀಡಬಲ್ಲದು.
ಇಲ್ಲಿನ ವಿದ್ಯಾರಣ್ಯ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬರ್ತ್ಡೇ ಪಾರ್ಟಿ ಆಚರಿಸಿದ್ದಾರೆ. ತಾನು ಪೊಲೀಸ್ ಎಂದು ಯಾಮಾರಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದ ವಿದ್ಯಾರಣ್ಯಪುರ ಪೊಲೀಸರು, ಠಾಣೆಯಲ್ಲಿ ಕೇಕ್ ಕತ್ತರಿಸಿ, ಆತನ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಭಿಷೇಕ್ (25) ಬಂಧಿತ ಆರೋಪಿಯಾಗಿದ್ದು, ಪದವಿಧರನಾಗಿದ್ದಾನೆ. ಈತ ತಾನು ವಿದ್ಯಾರಣ್ಯಪುರ ಕ್ರೈಂ ಪಿಸಿ ಎಂದು ಹೇಳಿಕೊಂಡಿದ್ದ. ಎನಕೌಂಟರ್ಗೆ ಹುಬ್ಬಳ್ಳಿ ಮತ್ತು ಗೋವಾಗೆ ಹೋಗ್ಬೇಕು ಗಾಡಿಲಿ ಎಸಿ ಇಲ್ಲ ಎಂದು ಐಡಿ ಕಾರ್ಡ್ ತೋರಿಸಿ ನಂಬಿಸಿದ್ದ. ಈತನ ಮಾತು…