ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕತ್ತಿನ ಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆಯನ್ನು ಹೊಂದಿರುವ 65 ವರ್ಷದ ವೃದ್ಧರೊಬ್ಬರು ಕೈ ಚಲನೆಯನ್ನು ಊಹಿಸಿಕೊಳ್ಳುವ ಮೂಲಕ ಬರವಣಿಗೆಯನ್ನು ಸಾಧಿಸಿದ್ದಾರೆ. ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ (BCI) ಸಾಧನವನ್ನು ಬಳಸಿ ಹೆಚ್ಚು ಕಾರ್ಯಕ್ಷಮತೆಯುಳ್ಳ ಮೆದುಳು ಪಠ್ಯದ ಮೂಲಕ ಸಂವಹನವನ್ನು ಸಾಧಿಸಿದೆ. ಅಮೆರಿಕದ ನರವಿಜ್ಞಾನಿಗಳು ಈ ಸಾಧನೆಯನ್ನು ಸಂಶೋಧನಾ ಸಹಯೋಗಿ ಬ್ರೈನ್‌ಗೇಟ್‌ನೊಂದಿಗೆ ಸೇರಿ ಅಭಿವೃದ್ಧಿಪಡಿಸಿದ್ದಾರೆ.

ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ ಎನ್ನುವ ಸಾಧನವು ಮೆದುಳಿನ ಮೇಲೆ ಚಿಪ್‌ಗಳಿಂದ ಕಾರ್ಯ ನಿರ್ವಹಿಸುತ್ತದೆ. ಅದು ಬಳಕೆದಾರರು ಯೋಚಿಸಿದಾಗ ಮೆದುಳಿನ ಚಟುವಟಿಕೆಯನ್ನು ಪತ್ತೆ ಮಾಡುತ್ತದೆ ಮತ್ತು ಅದನ್ನು ಕಂಪ್ಯೂಟರ್‌ನಿಂದ ಓದಬಲ್ಲ ಸಂಕೇತಗಳಾಗಿ ಭಾಷಾಂತರಿಸುತ್ತದೆ. ಇದನ್ನು ಅಳವಡಿಸಿರುವ ವ್ಯಕ್ತಿ ತಾನು ಬರೆಯುತ್ತಿದ್ದೇನೆ ಎಂದು ಊಹಿಸಿದಾಗ ಬ್ರೈನ್ ಚಿಪ್‌ನಲ್ಲಿರುವ ಸೆನ್ಸಾರ್ಗಳು ಆತನ ನ್ಯೂರಾನ್‌ಗಳಿಂದ ಸಿಗ್ನಲ್‌ಗಳನ್ನು ತೆಗೆದುಕೊಳ್ಳುತ್ತವೆ. ಈ ಸಿಗ್ನಲ್‌ಗಳು ಮೆಷಿನ್ ಲರ್ನಿಂಗ್ ಆಲ್‌ಗರಿದಮ್ಸ್‌ನಿಂದ ಗುರುತಿಸಿಕೊಂಡು ನೈಜ ಸಮಯದಲ್ಲಿ ನೀಡುತ್ತದೆ.
ಈ ಇಂಟರ್ಫೇಸ್ ಬಳಸಿಕೊಂಡು ಕಂಪ್ಯೂಟರ್ ನೇರವಾಗಿ ವ್ಯಕ್ತಿಯ ಮೆದುಳಿನಿಂದ ಬರುವ ಸೂಚನೆಗಳನ್ನು ಅನುಸರಿಸುತ್ತದೆ. ಆ ಮೂಲಕ ಆ ವ್ಯಕ್ತಿಯೂ ಅದನ್ನು ಯೋಚಿಸುತ್ತಾ, ಕಂಪ್ಯೂಟರ್ ಮೂಲಕ ಆ ಕೆಲಸವನ್ನು ಮಾಡಬಹುದು. ಈ ಪ್ರಕರಣದಲ್ಲಿ ವ್ಯಕ್ತಿಯ ಕೈಗಳು ಬೆನ್ನು ಹುರಿ ಗಾಯದಿಂದ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಕೈಗಳ ಚಲನೆಯನ್ನು ಊಹಿಸಿಕೊಂಡಿದ್ದಾರೆ. ಆ ಮೂಲಕ ಒಂದು ನಿಮಿಷದಲ್ಲಿ 90 ಅಕ್ಷರಗಳನ್ನು ಶೇಕಡಾ 94 ರಷ್ಟು ನಿಖರವಾಗಿ ಬರೆಯಲು ಸಾಧ್ಯವಾಗಿದೆ.

ಆಫ್‌ಲೈನ್ ಜೆನೆರಲ್ ಪರ್ಪಸ್ ಸ್ವಯಂ ತಿದ್ದುವಿಕೆಯಿಂದ ನಿಖರತೆಯೂ ಶೇಕಡಾ 99 ರಷ್ಟು ಇತ್ತು. ಇದು ದೊಡ್ಡ ಸಾಧನೆಯಾಗಿದ್ದು, ಒಂದು ನಿಮಿಷದಲ್ಲಿ 115 ಅಕ್ಷರಗಳಿಗೆ 90 ಅಕ್ಷರಗಳ ಸಾಮರ್ಥ್ಯವನ್ನು ಹೋಲಿಸಬಹುದಾದ ಕಾರಣ ಇದು ನಿಜವಾಗಿಯೂ ಅತ್ಯುತ್ತಮ ಸಾಧನೆಯಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಈ ವಯಸ್ಸಿನ ವ್ಯಕ್ತಿಯ ಟೈಪಿಂಗ್ ವೇಗವನ್ನು ಗಮನಿಸಿ ಈ ತೀರ್ಮಾನಕ್ಕೆ ಬರಲಾಗಿದೆ.
ಈ ಸಾಧನೆಯೂ ಹಿಂದಿನ ‘ಮೆದುಳಿನಿಂದ ಪಠ್ಯದವರೆಗಿನ ಸಂವಹನ’ದ ದಾಖಲೆಗಳಿಗಿಂತ ದುಪ್ಪಟ್ಟಾಗಿದೆ. ಹೊಸ ವ್ಯವಸ್ಥೆಯು ಪಾರ್ಶ್ವವಾಯು ಪೀಡಿತರಿಗೆ ತಮ್ಮ ದೈನಂದಿನ ಜೀವನದಲ್ಲಿ ಕಷ್ಟ ಪಡದೇ ಸರಾಗವಾಗಿ ಸಂವಹನ ನಡೆಸಲು ಸಕ್ರಿಯಗೊಳಿಸುವ ಮೂಲಕ ಸಹಾಯ ಮಾಡುತ್ತದೆ’ ಎಂದು ವಿಜ್ಞಾನಿಗಳು ನಂಬಿದ್ದಾರೆ. ಮಾತು, ಸ್ಕ್ರೋಲಿಂಗ್, ಪಾಯಿಂಟಿಂಗ್ ಮತ್ತು ಕ್ಲಿಕ್ ಮಾಡುವಂತಹ ಇತರ ಕಾರ್ಯಗಳಿಗೆ ಅನುಕೂಲವಾಗುವಂತಹ ಸಮಗ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳಿಗೆ ಈ ಯಶಸ್ಸು ಕಾರಣವಾಗುತ್ತದೆ.

ಇನ್ನು ಈ ಅಧ್ಯಯನವು ಮೇ 12 ರಂದು Nature ನಲ್ಲಿ ಪ್ರಕಟವಾಗಿದೆ. ಸ್ಪೇಸ್ ಎಕ್ಸ್‌ನ ಸಿಇಒ ಎಲಾನ್ ಮಸ್ಕ್ ‘ಮೆದುಳಿನಿಂದ ಬ್ರೈನ್ ಟು ಮೆಷಿನ್ ಇಂಟರ್ಫೇಸ್’ ಎನ್ನುವ ನ್ಯೂರೋ ಲಿಂಕ್ ಅನ್ನು ಸೆಪ್ಟೆಂಬರ್ 2020 ರಂದು ಅನಾವರಣಗೊಳಿಸಿದ ನಂತರ ಬ್ರೈನ್ ಚಿಪ್‌ಗಳು ಕಳೆದ ವರ್ಷವೂ ಸುದ್ದಿಯಲ್ಲಿತ್ತು.
Published by : Mayoon N / Biotechnologist / Director of DRM Career Build Center, kolar.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ಧರ್ಮದಲ್ಲಿ ಬಣ್ಣಕ್ಕೂ, ಶಕುನಕ್ಕೂ ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಬಣ್ಣಕ್ಕೂ ಅದ್ರದೇ ಆದ ಮಹತ್ವ, ಪ್ರಾಮುಖ್ಯತೆಯಿರುತ್ತದೆ. ವಾರದಲ್ಲಿ ಏಳು ದಿನ ಏಳು ದೇವತೆಗಳ ಆಧಾರದ ಮೇಲೆ ಬಣ್ಣಕ್ಕೆ ಶುಭ-ಅಶುಭ ಸ್ಥಾನ ನೀಡಲಾಗಿದೆ. ಶಾಸ್ತ್ರಗಳ ಪ್ರಕಾರ, ಗುರುವಾರ ಹಳದಿ ಬಣ್ಣ ಶ್ರೇಷ್ಠ. ಗುರುವಾರ ಹಳದಿ ಬಟ್ಟೆ ಧರಿಸಿದ ಹುಡುಗಿ ಕಣ್ಣ ಮುಂದೆ ಬಂದ್ರೆ ಶೀಘ್ರವೇ ಜೀವನದಲ್ಲಿ ಧನಪ್ರಾಪ್ತಿಯಾಗಲಿದೆ ಎಂದರ್ಥ. ಇನ್ನು ಶುಕ್ರವಾರದ ದಿನ ಅಂಗೈ ತುರಿಸಿದ್ರೆ ಹಣ ಪ್ರಾಪ್ತಿಯಾಗಲಿದೆ ಎಂದರ್ಥ. ಆದಷ್ಟು ಬೇಗ ಆರ್ಥಿಕ ಸಮಸ್ಯೆ…
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಬಿಜೆಪಿ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಪ್ರಧಾನ ಮಂತ್ರಿ ಶ್ರಮ ಮಾನ್ ಧನ್ ಯೋಜನೆ ಘೋಷಿಸಿದ್ದಾರೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದ್ದು, ನಿರ್ದಿಷ್ಟ ವಯಸ್ಸು ತಲುಪಿದ ನಂತರ ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರಕಾರ ಪಿಂಚಣಿ ನೀಡುತ್ತದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯನ್ನು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಮೂಲಕ ಜಾರಿಗೆ ತರಲಾಗುತ್ತಿದೆ. ಐಆರ್ಡಿಎಐ…
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಇಡೀ ದೇಶದಲ್ಲಿ ಪ್ರಖರವಾದ ಭಾಷಣ ಮಾಡಿ ಜನರನ್ನ ಸೆಳೀತಿದ್ದ ವ್ಯಕ್ತಿ ಅಂದ್ರೆ ಪ್ರಧಾನಿ ನರೇಂದ್ರ ಮೋದಿ. ತಮ್ಮ ಮೊನಚು ಮಾತುಗಳಿಂದಲೇ ಜನರ ಮನ ಗೆದ್ದು ತಮ್ಮ ಬಹುಮತದಿಂದ, ಯಾವ ಪಕ್ಷಗಳ ಸಹಾಯವಿಲ್ಲದೆ ಅಧಿಕಾರದ ಗದ್ದುಗೆ ಏರಿದ ಜಾದುಗಾರ
ನೀವು ಮನೆ ಖರೀದಿಸುವ ಯೋಚನೆಯಲ್ಲಿದ್ದೀರಾ? ನಿಲ್ಲಿ …..? ಸರ್ಕಾರ ಜಿಎಸ್ಟಿ ವ್ಯವಸ್ಥೆ ಜಾರಿಗೊಳಿಸುವವರೆಗೂ ನಿಮ್ಮ ನಿರ್ಧಾರಕ್ಕೆ ಬ್ರೇಕ್ ಹಾಕಿ. ಜುಲೈ ಒಂದರಿಂದ ಆರಂಭವಾಗುವ ಹೊಸ ತೆರಿಗೆ ವ್ಯವಸ್ಥೆಯಲ್ಲಿ, ದೊಡ್ಡ ಪ್ರಮಾಣದ ತೆರಿಗೆ ಹಣವನ್ನು ನೀವು ಉಳಿಸಬಹುದು.
ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ಗಳು ಮೊರೆ ಹೋಗಿದ್ದಾರೆ. ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು. ಬೆಳೆ ಮೊಳಕೆಯೊಡೆದು ಈಗ ನೆಲ…
ಮೊಳಕೆ ಬಂದ ಕಾಳುಗಳು ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಾಗಿ ಡಯೆಟ್ ಮಾಡುವವರು ಮೊಳಕೆ ಬಂದ ಕಾಳುಗಳನ್ನು ತಿನ್ನುತ್ತಾರೆ. ಸಾಮಾನ್ಯವಾಗಿ ಹೆಸರು, ಕಡಲೆಯನ್ನು ಮೊಳಕೆ ಬರಿಸಿ ಸೇವಿಸುತ್ತಾರೆ.