ಸುದ್ದಿ

ನಗರಕ್ಕೆ ಬಂದಿದೆ ಲೂಸಿಯಾ ಮಾತ್ರೆ! ಟೆಕ್ಕಿ ಮತ್ತು ಸ್ಟುಡೆಂಟ್​​ಗಳೇ ಇವರ ಟಾರ್ಗೆಟ್​​!!

189

ಸ್ಯಾಂಡಲವುಡ್​ನಲ್ಲಿ ಹೊಸತನದಿಂದ ಗೆದ್ದಿದ್ದ ಚಿತ್ರ ಲೂಸಿಯಾ ಎಲ್ಲರ ಗಮನವನ್ನು ಸೆಳೆದಿದ್ದದ್ದು ಆ ಚಿತ್ರದಲ್ಲಿ ಹೀರೋ ಸತೀಶ್ ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ.

ಇದೀಗಾ ಅಂತಹದ್ದೇ ಮಾತ್ರೆ ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ.

ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್‌ನ ಬೆಲೆ 1000 ರೂಪಾಯಿ. ಇದೀಗ ನಗರದಲ್ಲಿ ಈ ಮಾತ್ರೆಗಳ ಲಭ್ಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಲೂಸಿಯಾ ಅಲಿಯಾಸ್ ಮೆಥಾಂಪ್ಟಮೈನ್ ಮಾತ್ರೆ ಮಾರಾಟದ ಆರೋಪದ ಮೇರೆಗೆ ಪೊಲೀಸರು ಪಶ್ಚಿಮ ಬಂಗಾಳ ಮೂಲದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದು,

ಈ ಮೂಲಕ ಲೂಸಿಯಾ(ಮೆಥಾಂಪ್ಟಮೈನ್) ಟ್ಯಾಬ್ಲೆಟ್ ಮಾರಾಟ ಜಾಲ ಬೆಳಕಿಗೆ ಬಂದಿದೆ. ನಗರದಲ್ಲಿರುವ ಪಶ್ಚಿಮ ಬಂಗಾಳ ಮೂಲದವರೇ ಈತನ ಟಾರ್ಗೆಟ್ ಆಗಿದ್ದು, ಸಿಸಿಬಿ ಪೊಲೀಸರು ಡ್ರಗ್ಸ್ ಮಾರಾಟ ಜಾಲದ ಬೇರುಗಳ ಬೆನ್ನತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ