ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಧುವಿನೊಂದಿಗೆ ಹಾರ ಬದಲಾಯಿಸಿಕೊಂಡ ನಂತರ ಸಂಭ್ರಮಾಚರಣೆಯಲ್ಲಿ ಸ್ನೇಹಿತ ಗುಂಡು ಹಾರಿಸಿದ್ದ ಪರಿಣಾಮ ಬುಲೆಟ್ ವರನಿಗೆ ಬಿದ್ದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.ಸತ್ಯೇಂದ್ರ ಕುಮಾರ್ ಮೃತ ವರ. ಈ ಘಟನೆ ಭಾನುವಾರ ರಾತ್ರಿ ಶಹಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡು ಬಿದ್ದ ತಕ್ಷಣ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ವರನ ಸಹೋದರನಿಗೂ ಗಾಯಗಳಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಏನಿದು ಪ್ರಕರಣ?
ಮೃತ ಕುಮಾರ್ ಮದುವೆ ಭಾನುವಾರ ನಿಗದಿಯಾಗಿತ್ತು. ವರ ಕುಮಾರ್ ಅಖಿಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಷಮ್ ಚಕ್ ಗ್ರಾಮದನಾಗಿದ್ದು, ಭಾನುವಾರ ರಾತ್ರಿ ಸುಮಾರು 10 ಗಂಟೆಗೆ ವಧುವಿನ ಮನೆಗೆ ಬಂದಿದ್ದನು. ನಂತರ ನವಜೋಡಿ ಹೂ ಮಾಲೆಗಳನ್ನು ಬದಲಾಯಿಸಿಕೊಂಡಿದ್ದಾರೆ. ಈ ವೇಳೆ ವರನ ಸ್ನೇಹಿತರು ವೇದಿಕೆ ಮೇಲೆ ಬಂದು ಡ್ಯಾನ್ಸ್ ಮಾಡುತ್ತಿದ್ದರು. ಆಗ ವರನ ಸ್ನೇಹಿತರೊಬ್ಬ ವೇದಿಕೆ ಮೇಲೆ ಬಂದೂಕನ್ನು ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಲಾರಂಭಿಸಿದನು.
ಈ ವೇಳೆ ಬಂದೂಕಿನಲ್ಲಿ ಸಿಲುಕಿದ್ದ ಮೂರು ಗುಂಡುಗಳನ್ನು ತೆರವುಗೊಳಿಸಲು ಯತ್ನಿಸುತ್ತಿದ್ದಾಗ ಮೂರು ಗುಂಡುಗಳು ಆಕಸ್ಮಿಕವಾಗಿ ಹಾರಿವೆ. ಅದರಲ್ಲಿ ಒಂದು ವರನಿಗೆ ಮತ್ತು ಆತನ ಸಹೋದರ ಗುಡ್ಡುವಿಗೆ ತಗುಲಿವೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು,. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ವರ ಕುಮಾರ್ ಮೃತಪಟ್ಟಿದ್ದಾನೆ. ಸದ್ಯಕ್ಕೆ ವರನ ಸಹೋದರ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಸದ್ಯ ಅಪರಾಧಿ ಯಾರು ಎಂದು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸಂಭ್ರಮಾಚರಣೆ ನಡೆಸಿ ಗುಂಡು ಹಾರಿಸಿದ್ದ ವರನ ಸ್ನೇಹಿತ ಪರಾರಿಯಾಗಿದ್ದಾನೆ. ಸದ್ಯಕ್ಕೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿದೆ ಎಂದು ದಾನ್ಪುರದ ಸಹಾಯಕ ಪೊಲೀಸ್ ಕಮೀಷನರ್ ಅಶೋಕ್ ಮಿಶ್ರಾ ತಿಳಿಸಿದ್ದಾರೆ.ಸದ್ಯ ಎಫ್ಐಆರ್ ದಾಖಲಿಸಿರುವ ಪೊಲೀಸರು, ಘಟನೆ ಕುರಿತಂತೆ ವಿಡಿಯೋ ದೃಶ್ಯಾವಳಿಯನ್ನು ಕಲೆಹಾಕಲು ಮುಂದಾಗಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಬಿಹಾರ ಪೊಲೀಸರು ಸಂಭ್ರಮಾಚರಣೆ ಫೈರಿಂಗ್ನ್ನು ನಿಷೇಧಿಸಿದ್ದರೂ ಕೂಡ ಇಂತಹ ಅವಘಡಗಳು ನಡೆಯುತ್ತಲೇ ಇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭೋಪಾಲ್, ರಕ್ಷಾ ಬಂಧನ ಹಬ್ಬದಲ್ಲಿ ರಾಖಿ ಕಟ್ಟಿದ ಸಹೋದರಿಯರಿಗೆ ಸಹೋದರರು ಉಡುಗೊರೆ ಕೊಡುವುದು ಪದ್ಧತಿ. ಅದೇ ರೀತಿ ಮಧ್ಯಪ್ರದೇಶದಲ್ಲಿ ತಮಗೆ ರಾಖಿ ಕಟ್ಟಿದ ಹುತಾತ್ಮ ಯೋಧನ ಪತ್ನಿಗೆ ಊರಿನವರು ಸೇರಿ ಸರ್ಪ್ರೈಸ್ ಗಿಫ್ಟ್ ಕೊಟ್ಟು ಹಬ್ಬ ಆಚರಿಸಿದ್ದಾರೆ.ಹೌದು. ಮಧ್ಯಪ್ರದೇಶದ ದೆಪಲ್ಪುರ ಜಿಲ್ಲೆಯ ಪಿರ್ ಪಿಪ್ಲಿಯ ಗ್ರಾಮದ ಹುತಾತ್ಮ ಯೋಧ ಹವಾಲ್ದಾರ್ ಮೋಹನ್ ಸಿಂಗ್ ಕುಟುಂಬಕ್ಕೆ ಗ್ರಾಮಸ್ಥರು ಮನೆ ಕಟ್ಟಿಸಿಕೊಟ್ಟಿದ್ದಾರೆ. ಈ ಮನೆಯನ್ನು ಯೋಧನ ಪತ್ನಿ ರಾಜು ಬಾಯಿ ಅವರಿಗೆ ಗ್ರಾಮಸ್ಥರು ರಕ್ಷಾಬಂಧನ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಗ್ರಾಮಸ್ಥರು…
ಹೊಸ ವರ್ಷದ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ತತ್ತಿಗೆ ಒಂದು ದಿನ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮಳವಳ್ಳಿ ತಹಶೀಲ್ದಾರ್ ಕೆ.ಚಂದ್ರಮೌಳಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಮುತ್ತತ್ತಿಯು ಒಂದು ಪ್ರೇಕ್ಷಣಿಯ ಸ್ಥಳ. ಇಲ್ಲಿ ಸುತ್ತಮುತ್ತಲು ಕಾವೇರಿ ನದಿ ಹರಿಯುವುದರಿಂದ ಬೆಂಗಳೂರು, ಕನಕಪುರ, ಮಳವಳ್ಳಿ ಸೇರಿದಂತೆ ಹಲವೆಡೆಯಿಂದ ಹೊಸ ವರ್ಷದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಪ್ರವಾಸಿಗರು ಬಂದು ಆಚರಣೆ ಮಾಡುತ್ತಾರೆ. ನಿಸರ್ಗದ ಮಡಿಲಲ್ಲಿ ಮೋಜು ಮಸ್ತಿ ಮಾಡಿ ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸುತ್ತಾರೆ. ಹೀಗೆ ಸಂಭ್ರಮಿಸುವ ವೇಳೆ…
ಕೆಲವು ಗಿಡಗಳಿರುವಲ್ಲಿ ಹಾವುಗಳು ಬರುವುದಿಲ್ಲ. ಗೊಂಡೆಹೂವು, ಮಾಚಿಪತ್ರೆ, ಪಶ್ಚಿಮ ಭಾರತದ ಮಜ್ಜಿಗೆಹುಲ್ಲು, ಸರ್ಪಗಂಧ ಹಾಗೂ ಬೆಳ್ಳುಳ್ಳಿಯ ಗಿಡ ಬೆಳೆಯುವಲ್ಲಿ ಹಾವುಗಳು ಸುಳಿಯದಿರುವುದನ್ನು ಕೃಷಿಕರು ಗಮನಿಸಿದ್ದಾರೆ. ಇವುಗಳ ರುಚಿ ಹಾಗೂ ಪರಿಮಳದಲ್ಲಿ ಸರ್ಪಗಳನ್ನು ವಿಕರ್ಷಿಸುವ ಗುಣವಿದೆ.
ಕನ್ನಡದ ಕಾಮಿಡಿ ನಟರಿದ್ದರೆ ಸಿನಿಮಾ ನೋಡಲು ಚೆಂದ ಹಾಗೆಯೇ ಕನ್ನಡದ ಖ್ಯಾತ ಕಾಮಿಡಿ ಕಲಾವಿದರಾದ ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಎಲ್ಲರು ಒಟ್ಟಿಗೆ ಮನೆ ಮಾರಾಟಕ್ಕಿಟ್ಟಿರೋದು ಎಲ್ಲರಿಗು ಆಶ್ಚರ್ಯ ಇಷ್ಟಕ್ಕೂ ಎಲ್ಲರೂ ಒಟ್ಟಿಗೆ ಮನೆ ಮಾರಾಟಕ್ಕಿಟ್ಟಿರೋದಕ್ಕೆ ಕಾರಣವೇನು ಗೊತ್ತಾ ಆ ಮನೆಯಲ್ಲಿ ಭೂತ ಪ್ರೇತ ಬಾಧೆಗೀಡಾಗಿದೆ ಎಂದು ಹೇಳಿದ್ದಾರೆ ಇದು ತಮಾಷೆಯಲ್ಲಾ ಸತ್ಯ. ಇಂಥಾದ್ದು ಸಂಭವಿಸಿರೋದು ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಎಂಬ ಚಿತ್ರದ ವಿಚಾರದಲ್ಲಿ. ಇದರಲ್ಲಿ ಈ ನಾಲ್ವರು…
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮವೂ ಐತಿಹಾಸಿಕ ಹಿನ್ನೆಲೆ ಇರುವ ಗರುಡ ದೇವಸ್ಥಾನ ಹೊಂದಿರುವ ಗ್ರಾಮ. ಮುಳಬಾಗಿಲು ತಾಲೂಕು ಕೇಂದ್ರದಿಂದ 14 ಕೀ.ಮೀ. ದೂರದಲ್ಲಿ ಕೊಲದೇವಿ ಗ್ರಾಮ ಸಿಗುತ್ತದೆ. ಈ ದೇವಾಲಯ ಸಾವಿರ ವರ್ಷಗಳ ಹಿಂದೆ ರಾಮಾನುಜಾಚಾರ್ಯರಿಂದ ಪ್ರತಿಷ್ಠಾಪನೆ ಆಗಿದೆ. ಹಾಗು ದ್ರಾವಿಡ ಶೈಲಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಇಲ್ಲಿಯ ಗರುಡ ದೇವರು ಒಂದು ಕೈಯಲ್ಲಿ ನಾರಾಯಣ, ಇನ್ನೊಂದು ಕೈಯಲ್ಲಿ ಲಕ್ಷ್ಮೀಯನ್ನು ಹೊಂದಿರುವುದನ್ನು ಕಾಣಬಹುದು. ಈ ಗ್ರಾಮ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಹಿನ್ನೆಲೆ ಹೊಂದಿರುವ…
ವಾಸ್ತು ಪ್ರಕಾರ ಮನೆ ಕಟ್ಟಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.. ಆದರೆ ಯಾವುದೋ ಕಾರಣದಿಂದ ಸಾಧ್ಯವಾಗಿರುವುದಿಲ್ಲ.. ಅಷ್ಟು ತಲೆ ಕೆಡಿಸಿಕೊಳ್ಳುವ ಅವಷ್ಯಕತೆ ಇಲ್ಲ.. ಇಲ್ಲಿ ನೋಡಿ ನಿಮಗಾಗಿ ಸಿಂಪಲ್ ವಾಸ್ತು.