ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ನ ಬಳಕೆ ಅತಿ ಹೆಚ್ಚಾಗಿದ್ದು ನದಿಯ ಮಾಲಿನ್ಯಕ್ಕೆ ತುತ್ತಾಗಿದೆ, ಇಲ್ಲಿಗೆ ಬರುವ ಪ್ರವಾಸಿಗಳು ಕೂಡ ತಾವು ತರುವ ವಸ್ತುಗಳ ಪ್ಲಾಸ್ಟಿಕ್ ಅನ್ನು ಎಲ್ಲೆಂದರೆ ಅಲ್ಲಿ ಬಿಸಾಡಿ ಹೋಗುತ್ತಾರೆ. ಇದು ತೀರಾ ನದಿಯ ಮಾಲಿನ್ಯಕ್ಕೆ ತುತ್ತಾಗಿದೆ. ಆದರೆ ಇಲ್ಲಿ 48 ವರ್ಷದ ಕಾಳಿಪದ ದಾಸ್ ಎಂಬುವವರು ಪ್ರತಿದಿನ ಗಂಗಾ ನದಿಯಲ್ಲಿ ಕಸವನ್ನು ಎತ್ತುವ ಕಾರ್ಯವನ್ನು ಮಾಡುತ್ತಾರೆ. ಇವರು ಮೂಲತಃ ಪಶ್ಚಿಮ ಬಂಗಳಾದವರಾಗಿದ್ದು ಕಾಳಿಪದ ಮೀನುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ 3 ವರ್ಷಗಳಿಂದ ಇವರು ಮೀನು ಹಿಡಿಯುವ ಕೆಲಸವನ್ನು ಬಿಟ್ಟು ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ಎತ್ತುವ ಕೆಲಸವನ್ನು ಮಾಡುತ್ತಿದ್ದಾರೆ.

ಗಂಗಾ ನದಿಯಲ್ಲಿ ಸ್ವಚ್ಛವಾಗಿಡಲು ಕೇಂದ್ರ ಸರ್ಕಾರ ‘ನಮಾಮಿ ಗಂಗೆ’ ಎಂಬ ಯೋಜನೆಯನ್ನು ಶುರು ಮಾಡಿತ್ತು. ಆದರೆ ಕಾಳಿಪದ ಅವರು ಈ ಯೋಜನೆಯ ಹೆಸರು ಕೂಡ ಕೇಳಿಲ್ಲ. ಆದರು ಸಹ ಅವರು ಗಂಗಾ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿದ್ದಾರೆ. ಕಾಳಿಪದ ಬೆಲ್ಡಂಗಾದ ಕಲಾಬೇರಿಯಾದಿಂದ ಕೆಲಸ ಶುರು ಮಾಡುತ್ತಾರೆ. ಅವರು ತಮ್ಮ ದೋಣಿಯಿಂದ ಅನೇಕ ಘಾಟ್ಗಳಿಗೆ ಹೋಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎತ್ತುತ್ತಿದ್ದಾರೆ. ಅವರ ಕೆಲಸ ಭಗೀರಥ ಸೇತುವೆ ಅಥವಾ ಬೆಹ್ರಾಂಪೋರ್ನ ಫರ್ಶ್ದಂಗಾ ಘಾಟ್ನಲ್ಲಿ ಕೊನೆ ಆಗುತ್ತೆ.

ನಾನು ಈಗ ಮೀನು ಹಿಡಿಯುವುದನ್ನು ಬಿಟ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಗಂಗಾ ನದಿಯಿಂದ ಎತ್ತುತ್ತಿದ್ದೇನೆ. ನನಗೆ ನಾನು ಮಾಡುವ ಕೆಲಸದ ಮೇಲೆ ಹೆಮ್ಮೆ ಇದೆ. ಸರ್ಕಾರ ಅಥವಾ ಯಾವುದೇ ಸರ್ಕಾರೇತರ ಸಂಸ್ಥೆ ಗಂಗಾ ನದಿ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹಾಗಾಗಿ ನಾನು ಅನೇಕ ಘಾಟ್ಗಳಿಂದ ಕಸ ಎತ್ತುತ್ತಿದ್ದೇನೆ ಎಂದು ಕಾಳಪದ ತಿಳಿಸಿದ್ದಾರೆ. ನಾನು ಇತರೆ ಮೀನುಗಾರರಿಂದಿಗೆ ದೋಣಿಯಲ್ಲಿ ಹೋಗುತ್ತೇನೆ. ಬಳಿಕ ನಾನು ನದಿಯಲ್ಲಿ ತೇಲುವ ಪ್ಲಾಸ್ಟಿಕ್ ಬಾಟಲಿಗಳನ್ನು ಎತ್ತುತ್ತೇನೆ. ಪ್ರತಿದಿನ 5ರಿಂದ 6 ಗಂಟೆ ಕೆಲಸ ಮಾಡಿ 2 ಕ್ವಿಂಟಲ್ ಪ್ಲಾಸ್ಟಿಕ್ ಹೆಕ್ಕುತ್ತೇನೆ. ಬಳಿಕ ಇದನ್ನು ರಿಸೈಕಲ್ಗೆ ಕೊಟ್ಟು 2,400 ರೂ.ರಿಂದ 2,600 ರೂ.ವರಗೂ ಸಂಪಾದಿಸುತ್ತೇನೆ. ನಾನು ವಿದ್ಯಾಭ್ಯಾಸ ಮಾಡಿಲ್ಲ. ಆದರೆ ವಿದ್ಯಾಭ್ಯಾಸ ಮಾಡಿರುವ ಜನರನ್ನು ನಾನು ನೋಡುತ್ತೇನೆ. ಅವರು ಪ್ಲಾಸ್ಟಿಕ್ ಬಳಸಿ ಅದನ್ನು ಎಸೆಯುತ್ತಾರೆ ಎಂದು ಕಾಳಿಪದ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆ ಮುದ್ದಿನ ಶ್ವಾನ ಆರು ಮಂದಿಯ ಜೀವ ಉಳಿಸಿದೆ…! ಅಚ್ಚರಿಯಾದರೂ ಇದು ನಿಜ. ಈ ಘಟನೆ ನಡೆದಿದ್ದು ಒಡಿಸ್ಸಾದ ಕೊರಪುತ್ ಜಿಲ್ಲೆಯಲ್ಲಿ. ಶಂಕರ್ ಪ್ರಸಾದ್ ತ್ರಿಪಾಠಿ ಎಂಬವರ ಮನೆಗೆ ಭಾನುವಾರ ಬೃಹತ್ ಸರ್ಪ ಎಂಟ್ರಿ ಕೊಟ್ಟಿತ್ತು. ಮನೆಯವರು ತಮ್ಮ ಕೆಲಸದಲ್ಲಿ ನಿರತರಾಗಿದ್ದ ಕಾರಣ ಈ ಹಾವನ್ನು ಯಾರೂ ಗಮನಿಸಿರಲಿಲ್ಲ. ಇದು ನೇರವಾಗಿ ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಳ್ಳಲು ಯತ್ನಿಸಿತ್ತು. ಆದರೆ, ಅದೃಷ್ಟ ಚೆನ್ನಾಗಿತ್ತು. ಶಂಕರ್ ಪ್ರಸಾದ್ ಅವರ ಸಾಕು ನಾಯಿ `ಡಾಗಿ’ ಈ ಸರ್ಪವನ್ನು ಕಂಡಿತ್ತು. ಇದನ್ನು ನೋಡಿದ…
ವಿಶ್ವ ಆಹಾರ ದಿನದ ಹಿನ್ನೆಲೆ ಆಹಾರ ವಿಷವಾಗಲು ಕಾರಣಗಳೇನು, ಅದಕ್ಕೆ ಚಿಕಿತ್ಸೆ ಹಾಗೂ ಪರಹಾರವೇನು ಎಂದು ಮುಂದೆ ಲೇಖನದಲ್ಲಿ ತಿಳಿಯೋಣ. ಆಹಾರಕ್ಕಾಗಿಯೇ ಮನುಷ್ಯ ದಿನವಿಡೀ ನಾನಾ ಸರ್ಕಸ್ ಮಾಡಿಕೊಂಡು ಜೀವನ ಸಾಗಿಸುತ್ತಾನೆ. ಆದರೆ ಮನುಷ್ಯ ಕೆಲವೊಮ್ಮೆ ತಿನ್ನುವಂತಹ ಆಹಾರವು ವಿಷವಾಗುವುದು ಇದೆ. ಇಂತಹ ಸಮಸ್ಯೆಯು ಹೆಚ್ಚಿನವರನ್ನು ಕಾಡುವುದು ಇದೆ. ಆಹಾರವು ವಿಷವಾಗುವ ಪರಿಣಾಮ ಹಲವಾರು ರೀತಿಯ ಅಡ್ಡಪರಿಣಾಮಗಳು ದೇಹದ ಮೇಲೆ ಆಗಬಹುದು. ಆಹಾರ ವಿಷವಾಗುವುದು ಹೇಗೆ, ಅದಕ್ಕೆ ಪರಿಹಾರವೇನು ಎಂದು ನಾವು ಈ ಲೇಖನದ ಮೂಲಕ ತಿಳಿಯುವ….
ನವದೆಹಲಿ, ಮೇ 02: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಗಳ ಏರಿಕೆ ಮಾಡದೆ ನಷ್ಟ ಅನುಭವಿಸಿದ್ದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಈಗ ಹೊಸ ಸರ್ಕಾರ ಸ್ಥಾಪನೆಯಾದ ಬಳಿಕ, ಹಂತ ಹಂತವಾಗಿ ಬೆಲೆ ಏರಿಕೆ ಮಾಡಲು ಆರಂಭಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮುಂದುವರೆದಿದೆ. ಈಗ ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ…
ಮತದಾನ ಪ್ರತಿಯೊಬ್ಬರ ಹಕ್ಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ , ಮತದಾನದ ದಿನ ಎಷ್ಟೋ ಮಂದಿ ಮನೆಯಿಂದ ಹೊರಬರುವುದಿಲ್ಲ.. ಅದರಲ್ಲಿ ಕೆಲವರು ಯುವ ಜನತೆಯೂ ಕೂಡ ಸೇರಿರುತ್ತಾರೆ..
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚಿತ್ರಮಂದಿರಕ್ಕೆ ಅಪ್ಪಳಿಸಲು ತಯಾರಾಗಿದೆ. ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ‘ಚಕ್ರವರ್ತಿ’ ಅಭಿಮಾನಿಗಳಲ್ಲಿ ಈಗೊಂದು ಗೊಂದಲ ಕಾಡುತ್ತಿದೆ.[‘ಬಾಹುಬಲಿ’ ಮೀರಿಸಿದ ದರ್ಶನ್ ‘ಚಕ್ರವರ್ತಿ’] ಗಾಂಧಿನಗರದಲ್ಲಿ ‘ಚಕ್ರವರ್ತಿ’ ಚಿತ್ರಕ್ಕೆ ಯಾವುದು ಪ್ರಮುಖ ಚಿತ್ರಮಂದಿರವೆಂಬುದು ಈಗ ಪ್ರಶ್ನೆಯಾಗಿದೆ. ಸದ್ಯ, ದರ್ಶನ್ ಸಿನಿಮಾಗಳ ನೆಚ್ಚಿನ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿನಯದ ‘ಹೆಬ್ಬುಲಿ’ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಪ್ರದರ್ಶನವಾಗುತ್ತಿದೆ. ಹೀಗಿರುವಾಗ ‘ಚಕ್ರವರ್ತಿ’ಯ ಎಂಟ್ರಿ ಎಲ್ಲಿ ಎಂಬುದು ಕುತೂಹಲ…
ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿವೆ. ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರನ್ನು ಪತ್ತೆಹಚ್ಚಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಸರ್ಕಾರ ಬಿಪಿಎಲ್ ಪಡಿತರ ಚೀಟಿ ಪಡೆಯಲು 1.20 ಲಕ್ಷ ರೂ. ಒಳಗೆ ಕುಟುಂಬದ ಆದಾಯ ನಿಗದಿಪಡಿಸಿದೆ. ಆದಾಯವನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ್ದಾರೆ. ನೌಕರರು, ವರ್ತಕರು,…