ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅವನು ಕರ್ಣ. ಆತ ಕುಂತಿಯ ಮೊದಲ ಮಗ. ಪಾಂಡವರ ಹಿರಿಯಣ್ಣ. ಪರಶುರಾಮರ ಮೆಚ್ಚಿನ ಶಿಷ್ಯ. ದುರ್ಯೋಧನನ ಆಪ್ತಮಿತ್ರ. ಅರ್ಜುನನ ಪರಮಶತ್ರು. ಅವನು, ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ ಉಂಟುಮಾಡುವ ಆಸಾಮಿ. ಭೀಮನ ಪಾಲಿಗೊಂದು ಅಸೂಯೆ. ಕರ್ಣನೆಂದರೆ ಅಷ್ಟೇ ಅಲ್ಲ. ಆತ, ದ್ರೌಪದಿಯಂಥ ದ್ರೌಪದಿಯ ಎದೆಯಲ್ಲೂ ಆಸೆಯ ತರಂಗ ಎಬ್ಬಿಸಿದ ಸುಂದರಾಂಗ. ಕೊಡುಗೈ ದೊರೆ. ಅಂಗರಾಜ, ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ, ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ ನತದೃಷ್ಟ ಮತ್ತು ಮಹಾಭಾರತದ ದುರಂತ ನಾಯಕ! ಕುಂತಿ-ಸೂರ್ಯದೇವನ ಸಮಾಗಮದ ಕಾರಣಕ್ಕೆ ಹುಟ್ಟಿದವನು ಕರ್ಣ. ಮಗನ ಮೇಲಿನ ಮಮತೆಯಿಂದ ಅವನು ಕವಚ ಕುಂಡಲಗಳೊಂದಿಗೇ ಜನಿಸುವಂತೆ ನೋಡಿಕೊಂಡ ಸೂರ್ಯದೇವ.
ಮುಂದೆ, ಅಪವಾದಕ್ಕೆ ಹೆದರಿದ ಕುಂತಿ, ಆಗ ತಾನೆ ಹುಟ್ಟಿದ ಮಗುವನ್ನು ನದಿಯಲ್ಲಿ ತೇಲಿ ಬಿಡುವುದು, ಹಾಗೆ ತೇಲಿ ಹೋದ ಮಗು ರಾಧಾ-ಅದಿರಥ ಎಂಬ ಬೆಸ್ತ ದಂಪತಿಗೆ ಸಿಗುವುದು; ಅವರಿಬ್ಬರೂ ಈತನನ್ನು ಸಾಕುವುದು ಮತ್ತು ಅದೇ ಕಾರಣಕ್ಕೆ ಸೂತಪುತ್ರ ಎಂಬ ಹೀಯಾಳಿಕೆಯಂಥ ಮಾತಿಗೆ ಕರ್ಣ ಪದೇಪದೇ ಈಡಾಗುವುದು. ಈ ಕಥೆ ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲ, ಬಿಲ್ವಿದ್ಯೆ ಕಲಿಯಬೇಕೆಂಬ ಮಹದಾಸೆಯಿಂದ ತಾನು ಬ್ರಾಹ್ಮಣ ಕುಮಾರ ಎಂದು ಹೇಳಿಕೊಂಡು ಪರಶುರಾಮರ ಬಳಿ ಹೋಗುವುದು, ವಿದ್ಯೆ ಕಲಿಯುವುದು, ಅವರ ಮೆಚ್ಚಿನ ಶಿಷ್ಯನಾಗುವುದು ಹಾಗೂ ಕಡೆಗೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಬಾಣ ಪ್ರಯೋಗದ ಮಂತ್ರವೇ ನೆನಪಿಗೆ ಬಾರದಿರಲಿ’ ಎಂಬ ಶಾಪಕ್ಕೆ ಗುರಿಯಾಗುವುದು.

ಕೊನೆಗೆ ಮಹಾಭಾರತ ಯುದ್ಧದ ಸಮಯದಲ್ಲಿ ಪರಶುರಾಮನ ಶಾಪದ ಕಾರಣ ತನ್ನ ವಿದ್ಯೆ ಮರೆತುಹೋಗಿ ರಥ ಮಣ್ಣಿನಲ್ಲಿ ಹೂತಿದ್ದಾಗ ಅರ್ಜುನನ ಬಾಣದಿಂದ ಸಾಯುತ್ತಾನೆ. ಕರ್ಣ ಪರಾಕ್ರಮಿ ಎಂದು ಕೃಷ್ಣನಿಗೆ ತಿಳಿದಿತ್ತು, ಕರ್ಣ ಅಸಾಧಾರಣ ಯೋಧನೆಂದು ಕೃಷ್ಣನಿಗೆ ಮೊದಲೇ ತಿಳಿದಿತ್ತು, ಅರ್ಜುನ ಎಷ್ಟೇ ದೊಡ್ಡ ಬಿಲ್ಲುಗಾರನಾಗಿದ್ದರೂ ಅವನನ್ನು ಕರ್ಣ ಮುಂದೆ ಸೋಲಿಸಬಹುದು ಎಂಬ ಭಯ ಕೂಡ ಕ್ರಷ್ಣನನಿಗಿತ್ತು.
ಸ್ನೇಹಿತರೆ ಕರ್ಣ ಸಾಯಲು ಅನೇಕ ಕಾರಣಗಳಿವೆ, ಇದರಲ್ಲಿ ಒಂದು ಕಾರಣ ಕರ್ಣನು ಸೂರ್ಯನಿಂದ ಪಡೆದ ರಕ್ಷಾಕವಚ, ಇದು ಇರುವವರೆಗೂ ಕೂಡ ಯಾವುದೇ ಆಯುಧವು ಅವನಿಗೆ ಹಾನಿ ಮಾಡಲು ಸಾದ್ಯವಿರಲಿಲ್ಲ ಆದ್ದರಿಂದ ಅರ್ಜುನ ಕರ್ಣನನ್ನು ಕೊಲ್ಲುವುದು ಅಸಾಧ್ಯವಾಗಿತ್ತು. ಕರ್ಣನ ಪರಾಕ್ರಮ ಜನಜನಿತವಾಗಿ ಬೆಳಗಿದಂತೆಯೇ ಅವನ ದಾನಗುಣವೂ ವಿಖ್ಯಾತವಾಯಿತು, ಭೀಮ ದುರ್ಯೋಧನರಿಗೆ ಹೇಗೆ ಬದ್ಧವೈರವೋ ಹಾಗೆಯೇ ಕರ್ಣ ಅರ್ಜುನರಿಗೆ ಎಲ್ಲ ವಿಷಯಗಳಲ್ಲಿಯೂ ಸ್ಪರ್ಧೆ ನಡೆಯುತ್ತಿತ್ತು. ಅರ್ಜುನನ ಮೇಲ್ಮೈಯಲ್ಲಿ ಆಸಕ್ತನಾಗಿದ್ದ ಇಂದ್ರನಿಗೆ ಕರ್ಣನನ್ನು ಹೇಗಾದರೂ ಮಾಡಿ ನಿಶ್ಶಕ್ತನನ್ನಾಗಿ ಮಾಡಬೇಕೆಂಬ ಯೋಚನೆ ಬಲವಾಗಿ ಕಾಡಲಾರಂಭಿಸಿತು. ಕರ್ಣನ ಉದಾರಗುಣವನ್ನು ಕೇಳಿದ ಆತ ಒಂದು ದಿನ ವಿಪ್ರವೇಷದಲ್ಲಿ ಕರ್ಣನಲ್ಲಿಗೆ ಬಂದು ಆತನ ಕವಚಕುಂಡಲಗಳನ್ನು ಬೇಡಿದ.

ಇಂದ್ರನ ಸಂಚನ್ನು ಮೊದಲೇ ತಿಳಿದ ಸೂರ್ಯ ಕರ್ಣನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಎಚ್ಚರಸಿದ್ದರೂ ಕರ್ಣ ತನ್ನ ಸಹಜಗುಣಕ್ಕೆ ಅನುಸಾರವಾಗಿ ತನಗೆ ರಕ್ಷೆಯಂತಿದ್ದ ಕವಚಕುಂಡಲಗಳನ್ನು ಮನಃಪೂರ್ವಕವಾಗಿ ಇಂದ್ರನಿಗೆ ಒಪ್ಪಿಸಿದ. ನಂತರ ತಾನು ಅರಿಯದೆ ಮಾಡಿದ ತಪ್ಪಿನಿಂದಾಗಿ ಹಾಗು ಅಗತ್ಯ ಇರುವ ಸಂದರ್ಭದಲ್ಲೇ ಕರ್ಣನಿಗಿದ್ದ ಶಾಪಗಳು ಅವನಿಗೆ ಮುಳುವಾಗಿ ಸಾಯಬೇಕಾಯಿತು. ಇಷ್ಟಕ್ಕೂ ಸಾಯುವ ಮುನ್ನ ಕೃಷ್ಣನಿಂದ ಮೂರು ವರ ಪಡೆದಕೊಂಡ ಈ ರೋಚಕ ಕಥೆ ನಿಮಗೆ ಗೊತ್ತಾ ಹೇಳುತ್ತೇವೆ ಕೇಳಿ, ಕೊನೆಯ ಕ್ಷಣಗಳಲ್ಲಿ ಕರ್ಣನ ಕೌಶಲ್ಯ ಮತ್ತು ಭಕ್ತಿಯಿಂದ ಸಂತಸಗೊಂಡ ಶ್ರೀ ಕೃಷ್ಣ ಕರ್ಣನಿಗೆ ಮೂರು ವರಗಳನ್ನು ಕೇಳುವಂತೆ ಹೇಳುತ್ತಾನೆ. ಇದೆ ಸಮಯದಲ್ಲಿ ಕರ್ಣ ಕೇಳಿದ ಆ ಕೊನೆಯ ಆಸೆಗಳು ಏನಾಗಿದ್ದವು ಗೊತ್ತಾ, ಹಾಗಾದರೆ ಕರ್ಣ ಕೇಳಿದ ಕೊನೆಯ ಆಸೆಯ ಬಗ್ಗೆ ನಾವು ಈಗ ನಿಮಗೆ ತಿಳಿಸುತ್ತೇವೆ ಓದಿ.

ತನ್ನ ಮೊದಲ ವರದಲ್ಲಿ ಜ್ಞಾನಿ ಕರ್ಣನು ಕೃಷ್ಣನನ್ನು ಮುಂದಿನ ಜೀವನದಲ್ಲಿ ತನ್ನ ರೀತಿಯ ಜನರ ಉನ್ನತಿಗಾಗಿ ವಿಶೇಷವಾದ ಏನನ್ನಾದರೂ ಮಾಡಲು ವರವನ್ನು ಕೇಳಿದನು, ಏಕೆಂದರೆ ಅವನು ಸೂತ್ರ ಪುತ್ರನಾಗಿರುವುದರಿಂದ ಅವನ ಜೀವನದುದ್ದಕ್ಕೂ ಮೋಸ ಮತ್ತು ದುಃಖವನ್ನು ಎದುರಿಸಿದ್ದ. ಎರಡನೆಯ ವರವಾಗಿ ಕರ್ಣನು ತನ್ನ ಮುಂದಿನ ಜೀವನದಲ್ಲಿ ಕೃಷ್ಣನು ತನ್ನ ರಾಜ್ಯದಲ್ಲಿ ಜನಿಸಬೇಕೆಂದು ಕರ್ಣನು ಕೇಳಿಕೊಳ್ಳುತ್ತಾನೆ, ಇನ್ನು ತನ್ನ ಕೊನೆಯ ವರದಲ್ಲಿ ಕರ್ಣ ತನ್ನ ಕೊನೆಯ ವಿಧಿಗಳನ್ನು ಭೂಮಂಡಲದಲ್ಲಿ ಯಾವುದೇ ಪಾಪವಿಲ್ಲದ ಸ್ಥಳದಲ್ಲಿ ನಡೆಸಬೇಕೆಂದು ಕೃಷ್ಣನಿಗೆ ಹೇಳಿದನು, ಇನ್ನು ಇಡೀ ಭೂಮಿಯ ಮೇಲೆ ಅಂತಹ ಸ್ಥಳವಿಲ್ಲದ ಕಾರಣ ಕೃಷ್ಣನು ತನ್ನ ಅಂಗೈಯಲ್ಲೇ ಕರ್ಣನ ಕೊನೆಯ ವಿಧಿಗಳನ್ನು ಮಾಡಿದನು ಇದರಿಂದ ಕರ್ಣ ಮೋಕ್ಷವನ್ನು ಕೂಡ ಪಡೆಯುತ್ತಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕ ಸರ್ಕಾರದ ಹೊಸ ಯೋಜನೆಯಾದ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭವಾಗಿದ್ದು, ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಇದು ರ್ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಬೆಂಗಳೂರು ನಗರದಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗ ದವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಇಂದಿರಾ ಕ್ಯಾಂಟೀನ್’ ಎಂಬ ಹೆಸರಿನಲ್ಲಿ ಆರಂಭಿಸಿದೆ.
ಈ ಸರ್ಕಾರದಲ್ಲಿ ನಾನು ಆರೋಗ್ಯ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡೋಕ್ಕೆ ನಿಮಗೆ ಆಗಲ್ಲ ಎಂದ್ರೆ ಇಲ್ಲಿಂದ ತೊಲಗಿ ಎಂದು ಕೊಡಗು ಜಿಲ್ಲೆಯ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾತ್ರಿ ವೇಳೆಯಲ್ಲಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ, ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಹಾಗೂ ವಾಸ್ತವ್ಯ ಹೂಡಲು ಭೇಟಿ ನೀಡಿದ ಆರೋಗ್ಯ ಮಂತ್ರಿ ಶ್ರೀರಾಮುಲುರವರು, ಆಸ್ಪತ್ರೆಯ ಒಳಗೆ ಪರಿಶೀಲನೆ ನಡೆಸಿ ಆಸ್ಪತ್ರೆಯಲ್ಲಿ ಇದ್ದಂತಹ ರೋಗಿಗಳನ್ನು…
ಜಿಯೋ ಬಂದಮೇಲೆ ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿ ಶುರುವಾಗಿದ್ದು,ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದ್ದು, 98 ರೂಪಾಯಿಗೆ
ಈ ಹೊಸ 1,999 ರಲ್ಲಿನ Jio-Fi ಹಾಟ್ಸ್ಪಾಟ್ ಸಾಧನವನ್ನು ಖರೀದಿಸಿದ ನಂತರ ಗ್ರಾಹಕರನ್ನು ಮೂರು ಮೊದಲ ರೀಚಾರ್ಜ್ ಆಯ್ಕೆಗಳ ನಡುವೆ ಆಯ್ಕೆ ಮಾಡಲು ಕೇಳಲಾಗುತ್ತದೆ. ಈ ಆಯ್ಕೆಯನ್ನು ಜಿಯೋ ಎಂಟು ರೀಚಾರ್ಜ್ಗಳಿಗಾಗಿ (ಕಡಿಮೆ ಎಂಟು ತಿಂಗಳಲ್ಲಿ) ದಿನಕ್ಕೆ 1.5GBಗೆ 4G ಡೇಟಾವನ್ನು ಒದಗಿಸುತ್ತಿದೆ. ರಿಲಾಯನ್ಸ್ ಜಿಯೋ ಭಾರತದಲ್ಲಿ ಮತ್ತೊಂದು ಡಿವೈಸ್ ಬಿಡುಗಡೆ ಮಾಡಿದೆ. ಇದೊಂದು ಹಾಟ್ಸ್ಪಾಟ್ ಸಾಧನವಾಗಿದೆ. ಜಿಯೋದ ಈ JioFi JMR815 ಸಾಧನವನ್ನು ಆನ್ಲೈನ್ ಶಾಪಿಂಗ್ ವೆಬ್ಸೈಟ್ ಫ್ಲಿಪ್ಕಾರ್ಟ್ ನಲ್ಲಿ ಖರೀದಿ ಮಾಡಬಹುದಾಗಿದೆ. ಜಿಯೋ JioFi…
ಭಾರತದ ಹಿಂದೂ ಧರ್ಮವು ಸನಾತನವಾಗಿದ್ದು, ಈ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ. ಭಾರತದ ಉದ್ದಗಲಕ್ಕೂ ಪ್ರತಿಯೊಂದು ದೇವರುಗಳ ದೇವಸ್ಥಾನಗಳು, ಪೂಜಾ ಮಂದಿರಗಳು ನಮಗೆ ಸಿಗುತ್ತವೆ. ಆದರೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವ ಇವರು ಸೃಷ್ಟಿ, ಸ್ಥಿತಿ, ಲಯ
ಕರ್ತರಾಗಿದ್ದು, ಸೃಷ್ಟಿಯ ಮೂಲಕ್ಕೆ ಆಧಾರವಾಗಿರುವ ಬ್ರಹ್ಮನಿಗೆ ಮಾತ್ರ ದೇವಾಲಯಗಳಿಲ್ಲ.ಹಾಗಂತ ಇಲ್ಲವೇ ಇಲ್ಲ ಅಂತಲ್ಲ. ಇಡಿ ವಿಶ್ವದಲ್ಲಿರುವುದು ಒಂದೇ ಒಂದು ದೇವಾಲಯ ಮಾತ್ರ.
ಏಲಕ್ಕಿ ಒಂದು ಸಾಂಬಾರು ಬೆಳೆ. ಇದನ್ನು ಔಷಧೀಯ ಸಸ್ಯವಾಗಿಯೂ ಉಪಯೋಗಿಸುತ್ತಾರೆ. ಇದು ತನ ಪರಿಮಳದಿಂದಾಗಿ ಜಗತ್ಪ್ರಸಿದ್ಧವಾಗಿದೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ ಉಪಯೋಗಿಸಲಾಗುತ್ತದೆ.