ಸುದ್ದಿ

ತಾಳಿ ಕಟ್ಟುವಾಗ ಪ್ರೇಮಿಯ ಎಂಟ್ರಿಗೆ ಸಿಕ್ತು ಟ್ವಿಸ್ಟ್! ಕೊನೆಗೂ ಒಂದಾದ ಪ್ರೇಮಿಗಳು…

426

ರಾತ್ರಿ ಎಲ್ಲಾ ಮದುವೆ ಗಂಡಿನ ಜೊತೆ ಮಾಡಿದ ಶಾಸ್ತ್ರ ಸಂಪ್ರದಾಯಗಳಿಗೆ ನಗು ನಗುತ್ತಲೇ ನವ ವಧು ಪಾಲ್ಗೊಂಡಿದ್ದಳು.ಆದರೆ ಬೆಳಿಗ್ಗೆ ತಾಳಿ ಕಟ್ಟುವ ಮಹೂರ್ತದಲ್ಲಿ ತಾನು ಪ್ರ್ರಿತಿಸುತ್ತಿದ್ದ ಹುಡುಗ ಬಂದು ಎದುರಿಗೆ ನಿಂತಿರುವುದನ್ನ ನೋಡಿದ್ದಾಳೆ.

ಆತ ಅಳುವುದನ್ನು ಕಂಡು ಮನಸ್ಸು ಕರಗಿ ನಾನು ಈ ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು, ನಾನು ನನ್ನ ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ತಿಳಿಸಿದ್ದಳು ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರೇ ಮುಂದೇ ನಿಂತು ಪ್ರೇಮಿಗಳಿಗೆ ಮದುವೆ ಮಾಡಿಸಿದ್ದಾರೆ.

ಈ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲ ಪಟ್ಟಣದ ವಿಶ್ವಶಾಂತಿ ಸಮುದಾಯ ಭವನದಲ್ಲಿ ಭಾನುವಾರ ನಡೆದಿದೆ.ರಾತ್ರಿ ಆರತಕ್ಷತೆ ಯಾವುದೇ ಸಮಸ್ಯಯಿಲ್ಲದೆ ತುಂಬಾ ಭರ್ಜರಿಯಾಗೇ ನಡೆದಿದೆ.ಆದರೆ ಮರುದಿನ ಮಹುರ್ತದ ಸಂದರ್ಭದಲ್ಲಿ ವಧುವಿನ ಪ್ರಿಯಕರ ಸಂಜು ಪ್ರತ್ಯಕ್ಷವಾಗಿದ್ದನು. ಹಾಗಾಗಿ ವಧು ಪದ್ಮಪ್ರೀಯ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಮದುವೆ ನಿರಾಕರಿಸಿದ್ದಳು.

ಫೇಸ್ ಬುಕ್ ಮುಖಾಂತರ ಸಂಜು ಮತ್ತು ಪದ್ಮಪ್ರಿಯಾ ಪರಿಚಯವಾಗಿದ್ದು ಹಲವು ವರ್ಷಗಳಿಂದ ಇವರಿಬ್ಬರು ಪ್ರೀತಿ ಮಾಡುತ್ತಿದರು.ಇದು ಮನೆಯವರಿಗೆ ಗೊತ್ತಾದ ನಂತರ ಪದ್ಮಪ್ರಿಯಾ ತಂದೆ ತಾಯಿಗಳು ಅವರ ಸಂಬಂದಿಯೇ ಆಗಿದ್ದ ರಂಗನಾಥ್‍ನೊಂದಿಗೆ ಮದುವೆ ನಿಶ್ಚಯಿಸಿದ್ದರು. ಪ್ರಿಯಕರ ಬಂದಿದ್ದರಿಂದ ಎರಡು ಕುಟುಂಬದವರ ನಡುವೆ ಕೆಲಕಾಲ ಗಲಾಟೆ ನಡೆದಿತ್ತು.

ನಂತರ ಈ ಗಲಾಟೆಯ ನಡುವೆ ಬಂದ ಪೊಲೀಸರು ಸಂಜು ಹಾಗೂ ಪದ್ಮಪ್ರಿಯಾ ಇಬ್ಬರನ್ನು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ಅಲ್ಲಿ ವಧು ಪದ್ಮಪ್ರಿಯ ನಿಮ್ಮ ತಂದೆ ತಾಯಿಗಳು ಬಂದ್ರೆ ನಿನ್ನ ಜೊತೆ ಬರುವುದಾಗಿ ಸಂಜುವಿಗೆ ಹೇಳಿದ್ದಾರೆ.ನಂತರ ನೆಲಮಂಗಲ ಪಟ್ಟಣ ಗಣೇಶನ ಗುಡಿಯಲ್ಲಿ ಸ್ನೇಹಿತರು ಹಾಗೂ ಕೆಲ ಸಂಬಂಧಿಗಳ ಸಮ್ಮುಖದಲ್ಲಿ ಇವರಿಬ್ಬರ ಮದುವೆ ಮಾಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಹಣ ಕಾಸು

    ನಿಮ್ಗೆ ಗೊತ್ತಾ, ಎಟಿಎಂ ಮೂಲಕ ಈ 15 ಕೆಲಸಗಳನ್ನು ನೀವು ಸುಲಭವಾಗಿ ಮಾಡಬಹುದು!

    ಸಾಮಾನ್ಯವಾಗಿ ಈ ಹಿಂದೆ ಗ್ರಾಹಕರು ಎಟಿಎಂ ಕೇಂದ್ರಗಳನ್ನು ಹಣ ವಿತ್ ಡ್ರಾ ಮಾಡುವುದಕ್ಕಾಗಿ ಮಾತ್ರ ಬಳಸುತಿದ್ದರು. ಆದರೆ ಇದೀಗ ಇನ್ನೂ ಅನೇಕ ವ್ಯವಹಾರಗಳನ್ನು ಎಟಿಎಂ ಯಂತ್ರಗಳ ಮೂಲಕ ಮಾಡಬಹುದಾಗಿದೆ

  • ಸುದ್ದಿ

    ಈ ಏಡಿಯ ಬೆಲೆ ಕೇಳಿದ್ರೆ ಅಚ್ಚರಿ ಪಡೋದಲ್ಲಾ ಶಾಕ್ ಆಗೋದಂತು ಗ್ಯಾರಂಟಿ,ಇಷ್ಟು ಲಕ್ಷಾನಾ,.!

    ಒಂದು ಏಡಿ ಬೆಲೆ ಎಷ್ಟಿರಬಹುದು…? ಜಾಸ್ತಿಅಂದರೆ ಭಾರತದಲ್ಲಿ ನಾವು ಸಾವಿರ ಲೆಕ್ಕದಲ್ಲಿ ಅಂದಾಜು ಹಾಕಬಹುದೇನೋ… ಆದರೆ, ಜಪಾನಿನಲ್ಲಿ ಒಂದು ಏಡಿ ಬಿಕರಿಯಾದ ಬೆಲೆ ಕೇಳಿದರೆ ತಲೆತಿರುಗುವುದು ಗ್ಯಾರಂಟಿ…! ಯಾಕೆಂದರೆ, ಇಲ್ಲಿ ಬೃಹತ್ ಏಡಿಮಾರಾಟವಾಗಿದ್ದು ಬರೋಬ್ಬರಿ 32 ಲಕ್ಷಕ್ಕೆ…! ಜಪಾನಿನ ಬಿಡ್ಡರ್ ಒಬ್ಬರು42 ಯುಎಸ್‌ ಡಾಲರ್ ಅಂದರೆ ಸರಿಸುಮಾರು ಭಾರತದ 32,61,216 ರೂಪಾಯಿಗೆ ಈ ಹಿಮ ಏಡಿಯನ್ನು ಹರಾಜಿನಲ್ಲಿ ಖರೀದಿಸಿದ್ದಾರೆ. ಪಶ್ಚಿಮ ಟೊಟೊರಿ ಪ್ರಾಂತ್ಯದಲ್ಲಿ ಈ ವಾರದಿಂದ ಚಳಿಗಾಲದ ಮತ್ಸ್ಯ ಬೇಟೆ ಆರಂಭವಾಗಿದೆ. ಈ ವೇಳೆ, ಈ ಬೃಹತ್ ಪ್ರಮಾಣದ ಏಡಿ…

  • ಉಪಯುಕ್ತ ಮಾಹಿತಿ

    ಬೆಳಗಿನ ತಿಂಡಿ ಸ್ಕಿಪ್ ಮಾಡುತ್ತಿದ್ದೀರಾ; ಹಾಗಾದರೆ ಈ ಎಲ್ಲಾ ಕಾಯಿಲೆಗಳು ಬರಬಹುದು ಎಚ್ಚರ!

    ಬಿಸಿ ಬಿಸಿ ತಿಂಡಿ ಟೇಬಲ್ ಮೇಲೆ ರೆಡಿ ಇದ್ದರೂ ತಿನ್ನುವಷ್ಟು ವ್ಯವಧಾನ ನಮ್ಮ ಜನರಿಗೆ ಇರುವುದಿಲ್ಲ. ಹರಿಬಿರಿ ಮಾಡಿಕೊಂಡು ಬ್ಯಾಗ್ ನೇತಾಕಿಕೊಂಡು, ನಾನು ಆಫೀಸ್ ನಲ್ಲೇ ತಿನ್ನುತ್ತೇನೆ ಎಂದು ಹೊರಡುವವರೇ ಹೆಚ್ಚು. ಕೆಲವರು ಹಾಸಿಗೆಯಿಂದ ಏಳುವುದು ತಡ ಮಾಡಿಕೊಂಡು ತಿನ್ನದೆ ಹಾಗೆ ಹೊರಟರೆ, ಇನ್ನು ಕೆಲವರಿಗೆ ಬೆಳಗ್ಗೆ ತಿನ್ನಬೇಕೆಂದರೆ ಅಲರ್ಜಿ. ಆದರೆ ನೀವು ಬೆಳಗಿನ ಹೊತ್ತು ಉಪಹಾರ (ಬ್ರೇಕ್ ಫಾಸ್ಟ್) ಸೇವಿಸಿದಿದ್ದರೆ ಮುಂದೆ ಏನೆಲ್ಲಾ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಗೊತ್ತಾ? ಇಲ್ಲಿ ನೋಡಿ. ಹೃದಯಾಘಾತದ ಸಾಧ್ಯತೆ ಜಾಮಾ…

  • ಸುದ್ದಿ

    ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ,..!

    ಬೆಂಗಳೂರು, ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮಹಿಳೆಯರ ಸುಖಃಕರ ಪ್ರಯಾಣಕ್ಕಾಗಿ ಬಸ್‌ಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮಾರಗಳನ್ನು ಆಳವಡಿಸಲು ಮುಂದಾಗಿದೆ. ಬೆಂಗಳೂರಿನಾದ್ಯಂತ ಸಂಚಾರಕ್ಕೆ ಹೆಚ್ಚಿನ ಮಹಿಳೆಯರು ಬಿಎಂಟಿಸಿಯನ್ನೇ ಅವಲಂಭಿಸಿದ್ದಾರೆ. ಹೀಗಾಗಿ ನಮ್ಮ ಬೆಂಗಳೂರಲ್ಲಿ ದೆಹಲಿ ನಿರ್ಬಯಾ ಪ್ರಕರಣದಂತ ಘಟನೆ ನಡೆಯಬಾರದೆಂದು, ಮುನ್ನೆಚ್ಚರಕಾ ಕ್ರಮವಾಗಿ ಮಹಿಳೆಯರ ಭದ್ರತೆಗೆ ಹೆಚ್ಚಿನ ಆಧ್ಯತೆ ನೀಡಿದ್ದು, ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿದೆ. 48 ಗಂಟೆಗಳ ಕಾಲ ಕೊಟಿಂಗ್ ಕೆಪಾಸಿಟಿ ಇರೋ ಕ್ಯಾಮಾರಗಳು ಇವಾಗಿದ್ದು, ಮಹಿಳೆಯ ಮೇಲಿನ…

  • Uncategorized, ಸಿನಿಮಾ

    ರಾಜಕುಮಾರ ಚಿತ್ರ ಪ್ರದರ್ಶನ ಅರ್ಧಕ್ಕೆ ಸ್ಥಗಿತ……..!!!!!

    ಕನ್ನಡ ಚಿತ್ರಗಳಿಗೆ ಎಸಿ ಹಾಕೋಲ್ಲ. ಫಿಲ್ಮ್ ನೋಡೋರಿದ್ರೆ ನೋಡ್ಬಹುದು, ಇಲ್ಲ ಎದ್ದು ಹೋಗ್ಬಹುದು. ಇದು ಬೆಂಗಳೂರಿನ ಎಲಿಮೆಂಟ್ಸ್ ಮಾಲ್ ಸಿಬ್ಬಂದಿಯ ಉದ್ಧಟತನದ ಮಾತುಗಳು. ನಾಗವಾರ ಬಳಿ ಇರೋ `ಎಲಿಮೆಂಟ್ಸ್ ಮಾಲ್’ನ ಪಿವಿಆರ್‍ನಲ್ಲಿ ರಾಜಕುಮಾರ ಚಿತ್ರ ಪ್ರದರ್ಶನ ನಡೀತಿತ್ತು. ಚಿತ್ರ ಪ್ರಾರಂಭವಾಗಿ ಅರ್ಧ ತಾಸು ಕಳೆದ್ರೂ ಥಿಯೇಟರ್‍ನಲ್ಲಿ ಎಸಿ ಆನ್ ಆಗಿರಲಿಲ್ಲ. ಸೆಕೆಯಿಂದ ಬೇಸರಗೊಂಡ ಪ್ರೇಕ್ಷಕರು ಎಸಿ ಆನ್ ಮಾಡುವಂತೆ ಮಾಲ್ ಸಿಬ್ಬಂದಿಯನ್ನ ಕೇಳಿದ್ದಾರೆ. ಆದ್ರೆ ಎಸಿ ಆನ್ ಮಾಡುವ ಬದಲಿಗೆ ಮಾಲ್‍ನವವರು ಉದ್ಧಟತನದಿಂದ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಚಲನಚಿತ್ರಗಳಿಗೆಲ್ಲಾ ಎಸಿ…

  • ಆಧ್ಯಾತ್ಮ

    ‘ಬಟಾಣಿ’ಯಲ್ಲಿರುವ 09 ಆರೋಗ್ಯಕಾರಿ ಉಪಯೋಗಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಬಟಾಣಿ ತಿಂದ್ರೆ ವಾಯು ಬರತ್ತೆ ಅನ್ನೋರೆಲ್ಲಾ ಇಲ್ಕೇಳಿ. ಬಟಾಣಿ ಗಿಡ ನಮ್ ದೇಶದಲ್ಲಿ ಹುಟ್ಟಿದಲ್ಲ. ಇದು ವಿಚಿತ್ರವಾಗಿರೋ ಗಿಡಗಳ ಸಾಲ್ನಲ್ಲಿ ಸೇರತ್ತೆ. ಆದ್ರೂ ಕೂಡಾ ಇದ್ರ ಉಪಯೋಗ ಇದ್ಯಲ್ಲಾ ಅದು ಒಂದೆರಡಲ್ಲ. ಇದ್ರಲ್ಲಿರೋ ಪಿಷ್ಟ ಇದ್ನ ಸಿಹಿಯಾಗಿರೋವಾಗೆ ಮಾಡ್ಸತ್ತೆ. ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರನ್ನ ಗುಣಪಡ್ಸತ್ತೆ.