ಸುದ್ದಿ

ಅಮ್ಮ ಸಾವನ್ನಪ್ಪಿರುವ ವಿಷಯ ತಿಳಿಯದ ಪುಟ್ಟ ಕಂದಮ್ಮಆಟವಾಡುತ್ತಾ, ಅಮ್ಮ ಎಂದು ಕರೆದು ಎಬ್ಬಿಸುತ್ತಿರುವ ವಿಡಿಯೋ ವೈರಲ್.

104

ಬಿಹಾರದ ಮುಜಾಫರ್ ನಗರದ ರೈಲ್ವೆ ನಿಲ್ದಾಣವೊಂದರಲ್ಲಿ ಶ್ರಮಿಕ್ ರೈಲಿನಲ್ಲಿ ಬಂದಿಳಿದ ಮಹಿಳೆಯೊಬ್ಬಳು ಹಸಿವು, ಸುಸ್ತಿನಿಂದ ರೈಲ್ವೆ ನಿಲ್ದಾಣದಲ್ಲೇ ಸಾವನ್ನಪ್ಪಿದ್ದಳು. ಆ ಮಹಿಳೆ ಸಾವನ್ನಪ್ಪಿರುವ ವಿಷಯ ಗೊತ್ತಾಗುತ್ತಿದ್ದಂತೆ ಜೊತೆಗಿದ್ದ ಸಂಬಂಧಿಕರು ಆಕೆಯ ಮೃತದೇಹವನ್ನು ಮುಜಾಫರ್ ನಗರದ ರೈಲ್ವೆ ನಿಲ್ದಾಣದಲ್ಲೇ ಬಟ್ಟೆಯಿಂದ ಸುತ್ತಿ ಇರಿಸಿದ್ದರು.

ಆದರೆ, ಆ ಬಟ್ಟೆಯನ್ನು ಎಳೆದು ತೆಗೆದ ಆಕೆಯ ಮಗು ಅಮ್ಮನನ್ನು ಎಬ್ಬಿಸಲು ಪರದಾಡುತ್ತಿತ್ತು. 23 ವರ್ಷದ ಬಿಹಾರ ಮೂಲದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಗುಜರಾತ್‍ನ ಅಲಹಾಬಾದ್‍ನಲ್ಲಿ ವಾಸವಾಗಿದ್ದಳು. ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಆಕೆಗೆ ಲಾಕ್​ಡೌನ್​ ಬಳಿಕ ಯಾವುದೇ ಸಂಪಾದನೆ ಇರಲಿಲ್ಲ.

ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಆಕೆ ಶ್ರಮಿಕ್ ರೈಲಿನಲ್ಲಿ ಊರು ಸೇರಿಕೊಳ್ಳಲು ಬಂದಿದ್ದಳು. ಆದರೆ, ನಿಶ್ಯಕ್ತಿ, ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಗೆ ರೈಲಿನಲ್ಲಿಯೂ ಊಟ, ತಿಂಡಿ ಸಿಕ್ಕಿರಲಿಲ್ಲ. ಬಿಹಾರದಲ್ಲಿ 50 ಡಿಗ್ರಿ ಸೆಲ್ಷಿಯಸ್​ಗೂ ಹೆಚ್ಚು ಉಷ್ಣಾಂಶವಿದ್ದುದರಿಂದ ಆಕೆ ಇನ್ನಷ್ಟು ಬಳಲಿದ್ದಳು. ಇದರಿಂದಾಗಿ ರೈಲ್ವೆ ನಿಲ್ದಾಣದಲ್ಲಿಯೇ ಆಕೆ ಸಾವನ್ನಪ್ಪಿದ್ದಳು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ