ಸುದ್ದಿ

ಕೇವಲ 21 ವರ್ಷಕ್ಕೆ ಜಗತ್ತಿನ ಎಲ್ಲ ‘ದೇಶ’ ಸುತ್ತಿ ಬಂದಂತಹ ಯುವತಿ…!

56

ನಮ್ಮ ದೇಶದಲ್ಲಿ ಮಕ್ಕಳು 21 ವರ್ಷದವರಾದರೆ ಅವರು ಇನ್ನು ಬಹುತೇಕ ಕಾಲೇಜಿನಲ್ಲಿರುತ್ತಾರೆ. ಪ್ರಮುಖವಾಗಿ ತಮ್ಮ ಓದನ್ನು ಮುಗಿಸಿಕೊಳ್ಳುವ ಒತ್ತಡವಿರುತ್ತದೆ. ಪ್ರವಾಸವೊಂದು ಐಷಾರಾಮಿ ಬದುಕಾಗಿರುತ್ತದಷ್ಟೇ.

ಆದರೆ ಅಮೆರಿಕದ ಲೆಕ್ಸಿ ಅಲ್ಫೋರ್ಡ್ ಎನ್ನುವ ಯುವತಿ 21 ವರ್ಷ ದಾಟುವಷ್ಟರಲ್ಲಿ 196 ದೇಶಗಳಲ್ಲಿ ಹೋಗಿ ಜಗತ್ತಿನ ಎಲ್ಲ ದೇಶಗಳಲ್ಲಿ ಪ್ರಯಾಣಿಸಿದ, ಅತ್ಯಂತ ಕಿರಿಯ ವ್ಯಕ್ತಿ ಎಂದು ಗಿನ್ನಿಸ್ ಬುಕ್ ಆಫ್ ರೇಕಾರ್ಡ್ಸ್‌ನಲ್ಲಿ ಸೇರಿದ್ದಾರೆ. ಮೇ 31ರಂದು ಉತ್ತರ ಕೊರಿಯಾ ಪ್ರವೇಶಿಸಿದ ನಂತರ ಅವರು ಈ ದಾಖಲೆಗೆ ಭಾಜನರಾಗಿದ್ದಾರೆ. ಈ ಹಿಂದೆ ಈ ದಾಖಲೆ ಇಂಗ್ಲೆಂಡಿನ ಜೇಮ್ಸ್ ಅಕ್ವಿಟ್ ಅವರ ಹೆಸರಲ್ಲಿತ್ತು. ಅವರು 24 ನೇ ವಯಸ್ಸಿನಲ್ಲಿ ಈ ದಾಖಲೆ ಬರೆದಿದ್ದರಂತೆ.

ಲೆಕ್ಸಿ ಅಲ್ಫೋರ್ಡ್ ತಂದೆ-ತಾಯಿ ಪ್ರವಾಸ ಏಜೆನ್ಸಿ ನಡೆಸುತ್ತಿದ್ದು, ಮಗಳಿಗೆ ಚಿಕ್ಕ ವಯಸ್ಸಿನಿಂದಲೇ ಹಲವು ದೇಶಗಳಿಗೆ ಪ್ರವಾಸಕ್ಕೆ ಕಳಿಸುತ್ತಿದ್ದರಂತೆ. ಜಗತ್ತಿನ ಎಲ್ಲ ರೀತಿಯ ಜೀವನ ಅವಳಿಗೆ ಅರ್ಥವಾಗಲಿ ಎಂದು ಅವರ ಆಶಯವಾಗಿತ್ತಂತೆ.

ಲೆಕ್ಸಿಗೆ ತನ್ನ ಈ ದಾಖಲೆ ಜಗತ್ತಿನ ಮಹಿಳೆಯರಿಗೆ ಪ್ರೇರಣೆಯಾಗಬಹುದು ಎಂಬ ಆಶಯವಂತೆ. ನಾವು ಅಪಾಯಕಾರಿ ಅಂದುಕೊಂಡ ದೇಶಗಳಲ್ಲೂ ಒಳ್ಳೆಯವರಿರುತ್ತಾರೆ ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ