ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಿಂಧನೂರು : ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ಇಚ್ಛೆ ಬಂದಂತೆ ನಡೆದುಕೊಳ್ಳುವುದು ಸರಿಯಲ್ಲ. ಕಾನೂನು ತಿದ್ದುಪಡಿ ಮಾಡಬೇಕು ಎಂದು ರೈತ ಯುವ ಮುಖಂಡ ರವಿಗೌಡ ಮಲ್ಲದಗುಡ್ಡ ಆಗ್ರಹಿಸಿದ್ದಾರೆ ರಾಜ್ಯದಲ್ಲೂ ಸಂವಿಧಾನಾತ್ಮಕವಾಗಿ ವಜಾಗೊಳಿಸುವ ಕೆಲಸ ಆಗಬೇಕು. ಕ್ಷೇತ್ರದ ಅಭಿವೃದ್ದಿ ಮರೆತು ಸೀಟಿಗಾಗಿ ಪ್ರತಿದಿನ ಕಚ್ಚಾಡುತ್ತಿರುವ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಾದ ಕ್ಷೇತ್ರದಲ್ಲಿ ಅವರ ವಿರುದ್ದ ಎರಡನೇ ಸ್ತಾನದಲ್ಲಿ ಸೋತಿರುವ ಅಭ್ಯರ್ಥಿಯನ್ನು ಆ ಕ್ಷೇತ್ರದ ಮುಂದಿನ ಶಾಸಕರು ಎಂದು ಕಾನೂನು ಜಾರಿಗೆ ಬರಬೇಕು.

ಆಗ ಮಾತ್ರ ಪಕ್ಷೆ ನಿಷ್ಠೆ ಹಾಗು ಕ್ಷೇತ್ರದ ಜನಪರ ಅಭಿವೃದ್ದಿ ಕೆಲಸಗಳಾಗಳು ಸಾದ್ಯವಾಗುತ್ತದೆ. ಬೆಂಗಳೂರಿನ ವಿಧಾನಸೌಧದಲ್ಲಿ ಶಾಸಕರು ಕಚ್ಚಾಡುತ್ತಿರುವುದನ್ನು ನೋಡಿದರೆ ರೈತರಿಗೆ ಇವರು ಏನು ಮಾಡುತ್ತಾರೆ ಎಂಬ ಅನುಮಾನ ಮೂಡುತ್ತದೆ. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಶಾಸಕರ ವಿರುದ್ದ ಕಾನೂನು ತರುವುದು ಅವಶ್ಯವಾಗಿದೆ ಎಂದರು ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಬರಗಾಲ ಹಾಗು ಧನ ಕರುಗಳಿಗೆ ಮೇವು ಇಲ್ಲದೆ ರೈತರು ಕಂಗಾಲಾಗಿದ್ದಾರೆ . ಇದನ್ನು ಮರೆತು ತಮ್ಮ ಹಾಗು ಅವರ ಕುಟುಂಬ ಬೆಳವಣಿಗೆಗಾಗಿ ರಾಜಕಾರಣ ಮಾಡುತ್ತಿರುವ ರಾಜಕೀಯ ವ್ಯಕ್ತಿಗಳನ್ನು ದೂರ ಮಾಡಬೇಕು ಹಾಗು ರೈತರ ಪರವಾಗಿರುವ ಚಿಂತಕರನ್ನು ಬೆಳೆಸಬೇಕು. ಆಗ ಮಾತ್ರ ರಾಜಕೀಯ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ರಾಜ್ಯದ ರೈತರು ಮತ್ತಷ್ಟು ಬರಗಾಲ ಎದುರಿಸಬೇಕಾಗುತ್ತದೆ ಎಂದರು.

ಮತ್ತು ಇದಕ್ಕೆ ಸಂಭದಿಸಿದಂತೆ ಭಾರತ ದೇಶದಲ್ಲಿರುವ 29 ರಾಜ್ಯಗಳ ಎಲ್ಲಾ ವಿಧಾನಸಭೆ ಸದಸ್ಯರಿಗೆ ಅವರದೇ ಆದಂತಹ ಕಾನೂನು ವ್ಯವಸ್ಥೆ ಮತ್ತು ಸಂವಿಧಾನ ವ್ಯವಸ್ಥೆ ಇದೆ ಅದರೆ ಇತ್ತಿಚೆಗೆ ಕರ್ನಾಟಕ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಕೆಲ ಶಾಸಕರು ತಮ್ಮ ತಮ್ಮ ವಯಕ್ತಿಕ ವಿಚಾರವಾಗಿ ಮತ್ತು ನಮಗೆ ಮಂತ್ರಿ ಸ್ತಾನ ಕೊಟ್ಟಿಲ್ಲವೆಂಬ ಕಾರಣಕ್ಕೆ ಅಸಮಾಧಾನಗೊಂಡು ತಮ್ಮನ್ನು ಗೆಲ್ಲಿಸಿದ ಜನರನ್ನು ಧಿಕ್ಕರಿಸಿ ಮತ್ತು ತಮ್ಮ ಕ್ಷೇತ್ರದ ಅಭಿವೃದ್ದಿಯನ್ನು ಮರೆತು ಕೊನೆಗೆ ರಾಜಿನಾಮೆ ನೀಡಿ ಕರ್ನಾಟಕ ರಾಜ್ಯದ ಮರ್ಯಾದೆಯನ್ನು ವಿಶ್ವಕ್ಕೆ ಬಿತ್ತರಿಸಿದ ಶಾಸಕರು ಹೊರ ರಾಷ್ಟ್ರದವರು ನಮ್ಮ ಕರ್ನಾಟಕ ರಾಜಕೀಯ ಚಿತ್ರಣವನ್ನು ನೋಡಿ ನಗುವಂತಾಗಿದೆ ಇದಕ್ಕೆ ಕಡಿವಾಣ ಹಾಕಬೇಕಾದರೆ ಭಾರತ ಸರ್ಕಾರ ಸಂವಿಧಾನಕ್ಕೆ ಸ್ವಲ್ಪತಿದ್ದುಪಡಿ ಆಗಬೇಕಿದೆ .

ರಾಜಿನಾಮೆ ನೀಡಿರುವ ಆಯಾ ಮತಕ್ಷೇತ್ರ ಮತ್ತೆ ಚುನಾವಣೆ ಜನರ ತೆರಿಗೆ ಹಣ ಪೋಲ್ ಮಾಡುವ ಬದಲು ಹಿಂದಿನ ಚುನಾವಣೆಯಲ್ಲಿ 2 ನೇ ಸ್ತಾನದಲ್ಲಿ ಸೋತಿರುವ ಅಭ್ಯರ್ತಿಯನ್ನು ಶಾಸಕನೆಂದು ಆಯ್ಕೆಮಾಡಿದರೆ ಯಾರು ರಾಜಿನಾಮೆ ನೀಡುವುದಿಲ್ಲ ಹಾಗು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬಿಟ್ಟು ಹೋಗುವುದಿಲ್ಲ ಇದಕ್ಕೆ ರಾಜಿನಾಮೆ ನೀಡಿರುವ ಅಭ್ಯರ್ಥಿಗಳು ಒಪ್ಪದಿದ್ದರೆ ತಮ್ಮ ತಮ್ಮ ಕ್ಷೇತ್ರದ ಚುನಾವಣೆ ವೆಚ್ಚವನ್ನು ಅವರವರೆ ಭರಿಸಬೇಕಾಗಿದೆ ಹಾಗು ಇಗಾಗಲೇ ರಾಜಿನಾಮೆ ನೀಡಿ ರಾಜ್ಯದ ಜನರ ಮತ್ತು ರಾಜಧಾನಿ ಬೆಂಗಳೂರಿನಲ್ಲಿರುವ ಶಕ್ತಿ ಸೌದವೆಂದೆ ಹೆಸರಾದ ವಿಧಾನ ಸೌಧದ ಶಕ್ತಿ ಕಳೆದಿರುವ ರಾಜಿನಾಮೆ ಕೊಟ್ಟ ಎಲ್ಲಾ ಶಾಸಕರಿಗೆ ಭಾರಿ ಮೊತ್ತದ ದಂಡವನ್ನು ವಿಧಿಸಿ ಶಾಸಕರಿಗೆ ಎಚ್ಚರ ಕಲಿಸಬೇಕಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಂಬೈ ನ ಕಿರುತೆರೆ ನಟಿ ಹಾಗೂ ನಚ್ ಬಲ್ಲಿಯೆ ಸೀಸನ್ 8ರ ಸ್ಪರ್ಧಿ ಅಬಿಗೈಲ್ ಪಾಂಡೆ ಟಾಪ್ಲೆಸ್ ಯೋಗಾ ಪೋಸ್ನಿಂದಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದ್ದಾರೆ.ಟಾಪ್ಲೆಸ್ ಆಗಿ ಯೋಗ ಮಾಡಿದ ಬ್ಯಾಕ್ ಪೋಸ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಬಿಗೈಲ್ ಪಾಂಡೆ ಹಂಚಿಕೊಂಡಿದ್ದು, ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗಿದೆ. ಯೋಗಾಸನ ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರೇರೆಪಿಸಲು ಈ ರೀತಿ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ನಟಿ ಟಾಪ್ಲೆಸ್ ಆಗಿ ಬೆನ್ನಿನ ಹಿಂದೆ ಎರಡು ಕೈಗಳಿಂದ ನಮಸ್ಕಾರ ಮಾಡಿದ್ದಾರೆ….
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವ ಸುಮಲತಾ ಅಂಬರೀಶ್ ಅವರಿಗೆ ಸ್ಯಾಂಡಲ್ ವುಡ್ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಂದು ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದು, ಸುಮಲತಾ ಅಂಬರೀಶ್ ಅವರೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ನಾವು ಸುಮಲತಾ ಅವರ ಜೊತೆ ಕಲಾವಿದರಾಗಿ ಕೂತಿಲ್ಲ. ಮನೆ ಮಕ್ಕಳಾಗಿ ಕುಳಿತ್ತಿದ್ದೇವೆ. ಮನೆ ತಾಯಿಯ ನಿರ್ಧಾರಕ್ಕೆ ಮಕ್ಕಳಾದ ನಾವು ಜೊತೆ ಇರುತ್ತೇವೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಖಾಸಗಿ ಹೋಟೆಲ್…
ರಾಮ ಸೇತುವಿನ ಬಗ್ಗೆ ನಿಮಗೆ ತಿಳಿದೇ ಇದೆ. ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿಟ್ಟಾಗ ಆಕೆಯನ್ನು ಲಂಕೆಯಿಂದ ಕರೆದುಕೊಂಡು ಬರುವ ಸಲುವಾಗಿ ಭಾರತ ಮತ್ತು ಶ್ರೀಲಂಕಾದ ನಡುವೆ ರಾಮೇಶ್ವರದಲ್ಲಿ ನಿರ್ಮಾಣ ಮಾಡಿದ ರಾಮನ ಸೇತುವೆ ಇದಾಗಿದೆ. ಈ ಸೇತುವೆ ಸುಮಾರು 30 ಮೈಲು ಉದ್ದ ಇದೆ. ಈ ಹಿಂದೆ ಇದೆಲ್ಲಾ ಸುಳ್ಳು ಎಂದು ಹೇಳಲಾಗಿತ್ತು. ಆದರೆ ಈ ಸೇತುವೆಯ ಇರುವಿಕೆಯನ್ನು ನಾಸಾ ಸ್ಪಷ್ಟಪಡಿಸಿತ್ತು.
ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ದಾಂಪತ್ಯ ಜೀವನಕ್ಕೆ ಕಾಲಿಡಲು ಮೈಸೂರು ದಸರಾ ವೇದಿಕೆಯಲ್ಲೇ ಮುನ್ನುಡಿ ಬರೆದಿದ್ದಾರೆ. ಯುವ ದಸರಾದಲ್ಲಿ ನಿವೇದಿತಾ ಅವರಿಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ರಂಗೇರಿದ್ದು ಕಾರ್ಯಕ್ರಮ ಮುಗಿಯುವ ವೇಳೆಯಲ್ಲಿ ಚಂದನ್ ಶೆಟ್ಟಿ ವೇದಿಕೆಯಲ್ಲಿಯೇ ಐ ಲವ್ ಯು ಹೇಳಿದ್ದಾರೆ….
ನಾವು ದಶಕಗಳಿಂದಲೂ ನೀರಿನಲ್ಲಿ ಓಡುವ ಬೈಕ್ ಗಳ ಕತೆಗಳ ಬಗ್ಗೆ ಓದಿರುತ್ತೇವೆ. ಅದೇ ರೀತಿ ಬ್ರೆಜಿಲ್ ಒಬ್ಬರು ನೀರಿನಲ್ಲಿ ಓಡುವ ಬೈಕ್’ನ್ನು ಕಂಡುಹಿಡಿದಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಡೆಯಿತು. ಸಾಂಪ್ರದಾಯಿಕ ಶೈಲಿಯ ಉಡುಗೆಯಲ್ಲಿ ನಿಖಿಲ್ ಮತ್ತು ರೇವತಿ ಕಂಗೊಳಿಸಿದರು. ಪಿಂಕ್ ಕಲರ್ ಸೀರೆಯಲ್ಲಿ ರೇವತಿ ಕಂಗೊಳಿಸಿದರೆ, ಕ್ರೀಮ್ ಕಲರ್ ಕುರ್ತಾದಲ್ಲಿ ನಿಖಿಲ್ ಮಿಂಚುತ್ತಿದ್ದರು. ನಿಖಿಲ್ ಕುಮಾರ್ ಅವರ ಫೇಸ್ಬುಕ್ ಪೇಜ್ನಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮದ ಲೈವ್ ಪ್ರಸಾರ ಮಾಡಲಾಗುತ್ತಿದೆ. ಮಾಜಿ ಪ್ರಧಾನಿ ಮತ್ತು ಅಜ್ಜ ದೇವೇಗೌಡರ ದಂಪತಿ ಸಮಕ್ಷಮದಲ್ಲಿ ವಜ್ರದುಂಗುರ ಬದಲಾಯಿಸಿಕೊಂಡರು. ದೇವೇಗೌಡರ ಅಳಿಯ ಡಾ. ಮಂಜುನಾಥ್ ಸೇರಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ನಿಖಿಲ್ ಕುಮಾರಸ್ವಾಮಿ ರೇವತಿ ನಿಶ್ಚಿತಾರ್ಥಕ್ಕೆ ಪವರ್…