ಸುದ್ದಿ

ವಿದ್ಯಾರ್ಥಿನಿ ವರಲಕ್ಷ್ಮಿ ಸೋಲಿಗೆ ಕಾರಣವಾಯಿತು ಅವರ ಟೀಚರ್ ಮಾಡಿದ ಎಡವಟ್ಟು…!

47

ಮಂಡ್ಯದ ಹುಡುಗಿ ವರಲಕ್ಷ್ಮಿ ಆಟ-ಪಾಠ ಎಲ್ಲದರಲ್ಲೂ ಸದಾ ಮುಂದು. ಆಶುಭಾಷಣ ಮಾಡುವುದರಲ್ಲಿ ಈಕೆ ಎತ್ತಿದ ಕೈ. ಕಬಡ್ಡಿ ಕೂಡ ಆಡುವ ವರಲಕ್ಷ್ಮಿಗೆ ಮುಂದೆ ಟೀಚರ್ ಆಗಿ ಬಡ ಮಕ್ಕಳಿಗೆ ಪಾಠ ಹೇಳಿಕೊಡುವ ಆಸೆ ಇದೆ. ಜೊತೆಗೆ ಸಿ.ಎ (ಚಾರ್ಟರ್ಡ್ ಅಕೌಂಟೆಂಟ್) ಆಗುವ ಕನಸಿದೆ. ಬೆಟ್ಟದಷ್ಟು ಆಸೆ ಹೊತ್ತು ‘ಕನ್ನಡದ ಕೋಟ್ಯಧಿಪತಿ’ ವೇದಿಕೆಗೆ ಬಂದಿದ್ದ ಈ ಪುಟ್ಟ ಹುಡುಗಿಯ ಕನಸು ಒಂದೇ ಕ್ಷಣದಲ್ಲಿ ನುಚ್ಚು ನೂರಾಗಿದ್ದು ಮಾತ್ರ ದುರಾದೃಷ್ಟಕರ.

‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಕೋಟಿ ರೂಪಾಯಿ ಗೆಲ್ಲಲೇಬೇಕು ಎಂಬ ಛಲ ವರಲಕ್ಷ್ಮಿಗಿತ್ತು. ಕೋಟಿ ಗೆಲ್ಲದೇ ಹೋದರೂ, 25 ಲಕ್ಷವಾದರೂ ಗೆಲ್ಲಬೇಕು ಎಂಬ ಹಠ ಆಕೆಯಲ್ಲಿತ್ತು. ಗೆಲ್ಲುವ ಹಣದಲ್ಲಿ ತನ್ನ ವಿದ್ಯಾಭ್ಯಾಸಕ್ಕೆ ಮತ್ತು ರಾಗಿ ಬೆಳೆಯುವ ತನ್ನ ತಂದೆಯ ವ್ಯವಸಾಯಕ್ಕೆ ಸಹಾಯ ಮಾಡುವ ಆಲೋಚನೆ ಹೊಂದಿದ್ದಳು. ಜೊತೆಗೆ ತಾನು ಓದುವ ಶಾಲೆಯಲ್ಲಿ ಕ್ಲಾಸ್ ರೂಮ್ ಕಟ್ಟಿಸುವ ಇಚ್ಛೆ ಕೂಡ ಆಕೆಯಲ್ಲಿತ್ತು.

‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಒಂಬತ್ತು ಪ್ರಶ್ನೆಗಳಿಗೆ ಸತತವಾಗಿ ಸರಿಯಾದ ಉತ್ತರ ನೀಡುತ್ತ 160,000 ರೂಪಾಯಿಗಳನ್ನು ವರಲಕ್ಷ್ಮಿ ಗಳಿಸಿದ್ದರು. ಅಚ್ಚರಿ ಅಂದ್ರೆ, ಈ ಒಂಬತ್ತು ಪ್ರಶ್ನೆಗಳಿಗೆ ಯಾವುದೇ ಲೈಫ್ ಲೈನ್ಬಳಸದೆ, ಎಲ್ಲಾ ಪ್ರಶ್ನೆಗಳಿಗೂ ಪಟಪಟ ಅಂತ ವರಲಕ್ಷ್ಮಿ ಉತ್ತರಕೊಟ್ಟಿದ್ದಳು.

ನಾನ್ ಸ್ಟಾಪ್ ಆಗಿ ಆಡಿಕೊಂಡು ಬಂದ ವರಲಕ್ಷ್ಮಿಗೆ ಸ್ಪೀಡ್ ಬ್ರೇಕರ್ ಆಗಿದ್ದು ಹತ್ತನೇ ಪ್ರಶ್ನೆ. 320,000 ರೂಪಾಯಿಗೆ ಕೇಳಲಾದ ಪ್ರಶ್ನೆ ಹೀಗಿತ್ತು

* ಈ ಕೆಳಗಿನವುಗಳಲ್ಲಿ ಯಾವ ಸ್ಥಳವು ಬಂಗಾಳ ಕೊಲ್ಲಿಯ ಕರಾವಳಿ ಪ್ರದೇಶದಲ್ಲಿದೆ?

ಅಜಂತಾ, ತಂಜಾವೂರು, ಕೊನಾರ್ಕ್, ಉಜ್ಜಯನಿ –

ಈ ಪ್ರಶ್ನೆಗೆ ಉತ್ತರ ಗೊತ್ತಿಲ್ಲದ ವರಲಕ್ಷ್ಮಿ ಮೊಟ್ಟ ಮೊದಲ ಬಾರಿಗೆ ಲೈಫ್ ಲೈನ್ ಬಳಸಿದಳು. ಹಾಗ್ನೋಡಿದ್ರೆ, ವರಲಕ್ಷ್ಮಿ ‘ಆಡಿಯನ್ಸ್ ಪೋಲ್’ ಬಳಸಬಹುದಿತ್ತು. ಆದ್ರೆ, ಆಕೆ ‘ಫೋನ್ ಎ ಫ್ರೆಂಡ್’ ಆಯ್ಕೆ ಮಾಡಿಕೊಂಡಳು. ತನಗೆ ಸೋಷಿಯಲ್ ಮತ್ತು ಸೈನ್ಸ್ ಹೇಳಿಕೊಡುವ ಗೌರಮ್ಮ ಟೀಚರ್ ಗೆ ವರಲಕ್ಷ್ಮಿ ಫೋನ್ ಮಾಡಿದಳು. ಆ ಕಡೆಯಿಂದ ಶಿಕ್ಷಕಿ ಗೌರಮ್ಮ ‘ತಂಜಾವೂರು’ ಎಂದು ಉತ್ತರಿಸಿದರು. ಇನ್ನೊಂದು ಬಾರಿ ವರಲಕ್ಷ್ಮಿ ಪ್ರಶ್ನೆ ಕೇಳುವಷ್ಟರಲ್ಲಿ ಮೂವತ್ತು ಸೆಕೆಂಡ್ ಮುಗಿದಿತ್ತು, ಫೋನ್ ಕಟ್ ಆಯ್ತು.

ಪುನೀತ್ಕೊಟ್ಟ ಸೂಚನೆ ಅರ್ಥ ಆಗಲಿಲ್ಲ.!”ಡೌಟ್ ಇದ್ದರೆ, ಇನ್ನೊಂದು ಲೈಫ್ಲೈನ್ ಬಳಸಬಹುದು.. ಟೈಮ್ ಇದೆ.. ಇನ್ನೂಎರಡು ಲೈಫ್ ಲೈನ್ ಇದೆ”ಅಂತ ಪದೇ ಪದೇ ಪುನೀತ್ರಾಜ್ ಕುಮಾರ್ ಹೇಳುತ್ತಿದ್ದರು. ಈಸೂಚನೆಯನ್ನು ಅರ್ಥ ಮಾಡಿಕೊಳ್ಳದ ವರಲಕ್ಷ್ಮಿ,ಶಿಕ್ಷಕಿ ಗೌರಮ್ಮ ಮೇಲೆ ನಂಬಿಕೆಇಟ್ಟು ‘ತಂಜಾವೂರು’ ಲಾಕ್ ಮಾಡಿಬಿಟ್ಟಳು. ದುರಾದೃಷ್ಟಅಂದ್ರೆ, ಅದು ತಪ್ಪು ಉತ್ತರ.

ಸರಿಯಾದ ಉತ್ತರ ‘ಕೊನಾರ್ಕ್’. 320,000 ವರೆಗೂಯಾವುದೇ ಲೈಫ್ ಲೈನ್ ಬಳಸದೇಬಂದಿದ್ದ ವರಲಕ್ಷ್ಮಿ ಏಕ್ದಂ ಹತ್ತು ಸಾವಿರಕ್ಕೆಕುಸಿದು ಬಿಟ್ಟಳು. ಅಲ್ಲಿಗೆ, ತಂದೆಗೆ ಸಹಾಯ ಮಾಡುವಆಸೆ, ಕ್ಲಾಸ್ ರೂಮ್ ಕಟ್ಟಿಸುವಕನಸು.. ಎರಡೂ ಕನಸಾಗಿಯೇ ಉಳಿಯಬೇಕಾಯಿತು.ಟೀಚರ್ ಮಾಡಿದ ಒಂದೇ ಒಂದುಎಡವಟ್ಟಿನಿಂದ ವರಲಕ್ಷ್ಮಿ ಆಸೆ ಈಡೇರದೇ ಹೋಯಿತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ