ಸ್ಪೂರ್ತಿ

ಮದ್ವೆಯಾಗಿ ಮೂರೇ ಮೂರು ವಾರದಲ್ಲಿ ಬಿಟ್ಟು ಹೋದ ಪತಿ ಈಗ ಆಕೆ ಐಎಎಸ್ ಅಧಿಕಾರಿ!

209

ಇದು 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬದುಕಿನಂತೆಯೇ ಇದೆ, ನೋಡಿ 2008, ಆಗ ಕೋಮಲ್ ಗಣಾತ್ರ ಅವರಿಗೆ 26 ವರ್ಷ. ಮುಂದೆ ತಾನು ಕೂಡ ಸಮಾಜಕ್ಕೆ ದೊಡ್ಡ ವ್ಯಕ್ತಿಯಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ, ಆ ಸಮಯದಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನೆಲೆ ಕಂಡಿದ್ದ ಆನಿವಾಸಿ ಭಾರತೀಯ ತಾನು ಕೋಮಲ್ ಗಣಾತ್ರ ಅವರನ್ನು ಕೈ ಹಿಡಿಯುವುದಾಗಿ ಮನೆಯವರಿಂದ ಒತ್ತಡ ತಂದು ಕೊನೆಗೆ 2008ರಲ್ಲಿ ಕೋಮಲ್ ಅವರನ್ನು ಮದುವೆಯಾಗುತ್ತಾನೆ.

ಮದುವೆ ವೇಳೆ ಮಗಳು ಮತ್ತು ಅಳಿಯ ಚೆನ್ನಾಗಿರಲಿ ಎಂದು ಕೋಮಲ್ ಅವರ ತಂದೆ ಪರ್ವಿಣ್ ಗಣಾತ್ರ ಮತ್ತು ತಾಯಿ ರಂಜನ್ ಗಣಾತ್ರ, ಹಣ, ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ಕೊಡುತ್ತಾರೆ. ಇನ್ನು ಕೋಮಲ್ ಅವರನ್ನು ಆನಿವಾಸಿ ಭಾರತೀಯ, ನ್ಯೂಜಿಲ್ಯಾಂಡಿನ ಉದ್ಯಮಿ ಮದುವೆಯಾದ ಮೂರೇ ವಾರದಲ್ಲಿ ಮತ್ತೆ ವರದಕ್ಷಿಣೆಗೆ ಪೀಡಿಸಿ, ಕೋಮಲ್ ಅವರನ್ನು ತ್ಯಜಿಸಿದ.

ಆತ ನ್ಯೂಜಿಲ್ಯಾಂಡ್ನಲ್ಲಿ ಉದ್ಯಮಿಯಾಗಿದ್ದು ಆತನನ್ನು ಹುಡುಕಿಕೊಂಡು ಆಕೆ ಅಲ್ಲಿಗೂ ಹೋದರು. ಆದರೆ ಪ್ರಯೋಜನವಾಗಲಿಲ್ಲ. ನೂರಾರು ಸಮಸ್ಯೆಗಳೆಲ್ಲವನ್ನು ಎದುರಿಸಿ ಕೊನೆಗೆ ಕೋಮಲ್ ನ್ಯೂಜಿಲ್ಯಾಂಡ್ನಿಂದ ಭಾರತಕ್ಕೆ ವಾಪಸ್ಸಾಗಲು ಸಫಲಳಾದಳು. ನ್ಯೂಜಿಲ್ಯಾಂಡಿನಿಂದ ಬಂದ ಕೋಮಲ್ ಕೊನೆಗೆ ಗುಜರಾತಿನ ಒಂದು ಕುಗ್ರಾಮದಲ್ಲಿ ಸರಕಾರಿ ಶಿಕ್ಷಕಿ ಕೆಲಸ ಗಿಟ್ಟಿಸಿಕೊಂಡರ. ಅದು ತಿಂಗಳಿಗೆ 5 ಸಾವಿರ ರೂಪಾಯಿ ಸಂಬಳದ ಕೆಲಸ. ಈ ವೇಳೆಯಲ್ಲೇ UPSC ಗಾಗಿ ತಯಾರಿ ಆರಂಭಿಸುತ್ತಾರೆ. ಇದಕ್ಕೆ ಕೋಮಲ್ ತಂದೆ ಮತ್ತು ಸಹೋದರರು ಪೂರ್ಣ ಸಹಕಾರ ನೀಡುತ್ತಾರೆ.

ಕೋಮಲ್ ಅಂತರ್ಜಾಲ ಅಷ್ಟೇ ಅಲ್ಲ ಸುದ್ದಿ ಪತ್ರಿಕೆ ಸಹ ಬರದ ಹಿಂದುಳಿದ ಗ್ರಾಮದಲ್ಲಿ ಅವರ ಪರೀಕ್ಷಾ ತಯಾರಿ ನಡೆಸುತ್ತಾರೆ. ಕೆಲಕಾಲ ಗುಜರಾತಿನ ಸರ್ದಾರ್ ವಲ್ಲಬಾಯಿ ಪಟೇಲ್ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿಯನ್ನೂ ಕೂಡ ಪಡೆಯುತ್ತಾರೆ. ಕೊನೆಗೆ ಕೋಮಲ್ ಅವರು ಕಠಿಣ ಅಭ್ಯಾಸದ ಪರಿಣಾಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪಾಸು ಮಾಡುತ್ತಾರೆ. ಮತ್ತೆ 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೋಮಲ್ ಗಣಾತ್ರ ಅವರೀಗ ಭಾರತೀಯ ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದಾರೆ.

ಗುಜರಾತಿನಲ್ಲಿ ಉತ್ತಮ ಅಧಿಕಾರಿ ಎಂಬ ಹೆಸರನ್ನು ಕೂಡ ಗಳಿಸಿದ್ದಾರೆ. ಬಡವರು ಮತ್ತು ಶೋಷಿತ ಹೆಣ್ಣು ಮಕ್ಕಳ ಪರವಾಗಿ ನಿಂತು, ಅವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ ಐಎಎಸ್ ಅಧಿಕಾರಿ ಕೋಮಲ್ ಅವರು. ಜನಪ್ರತಿನಿಧಿಗಳ ವಿಶ್ವಾಸಕ್ಕೂ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಮದುವೆಯಾದ ಮೂರೇ ವಾರದಲ್ಲಿ ಗಂಡ ತೊರೆದರೂ ದೃತಿಗೆಡದೆ ಛಲದಿಂದ ಓದಿ ದೊಡ್ಡ ಐಎಎಸ್ ಅಧಿಕಾರಿಯಾಗಿರುವ ಕೋಮಲ್ ಗಣಾತ್ರ ಮಹಿಳೆಯರಿಗೂ ಸ್ಫೂರ್ತಿಯ ಶಕ್ತಿ ಅಲ್ಲವೇ?

🙏🙏

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ