ಸುದ್ದಿ

ಪ್ರೇಯಸಿ ಕೊಕ್ಕರೆಯ ಕಾಲು ಮುರಿದ ಬೇಟೆಗಾರ, ನಂತರ ಗಂಡು ಕೊಕ್ಕರೆ ಮಾಡಿದ ಕೆಲಸ ನೋಡಿ.

225

ಮನುಷ್ಯ ಪ್ರೀತಿಗಾಗಿ ಏನು ಮಾಡಲು ಕೂಡ ತಯಾರು ಇರುತ್ತಾನೆ, ಹಾಗೆ ಪ್ರಾಣಿ ಮತ್ತು ಪಕ್ಷಿಗಳು ಕೂಡ, ಬೇಟೆಗಾರನಿಂದ ಕಾಲು ಕಳೆದುಕೊಂಡ ಹೆಣ್ಣು ಕೊಕ್ಕರೆಗಾಗಿ ಈ ಗಂಡು ಕೊಕ್ಕರೆ ಮಾಡಿದ ಕೆಲಸವನ್ನ ಕೇಳಿದರೆ ನಿಮ್ಮ ಕಣ್ಣಲ್ಲಿ ಕೂಡ ನೀರು ಜಿನುಗುತ್ತದೆ. ಹಾಗಾದರೆ ಈ ಗಂಡು ಕೊಕ್ಕರೆ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಈ ಕೊಕ್ಕರೆಯ ಪ್ರೇಮ ಕಥೆ ಬಹಳ ರೋಚಕವಾಗಿದೆ, ಹೌದು ದಕ್ಷಿಣ ಆಫ್ರಿಕಾದಲ್ಲಿ ವಾಸವಿದ್ದ ಗಂಡು ಕೊಕ್ಕರೆ ಕ್ಲಿಪಿತಾನ್ ಮತ್ತು ಗಂಡು ಕೊಕ್ಕರೆ ಮಲೆನಾ ತುಂಬಾ ಅನ್ಯೋನ್ಯವಾಗಿ ಕಾಲ ಕಳೆಯುತ್ತಿದ್ದವು.

ಸುಮಾರು 15 ವರ್ಷಗಳ ಹಿಂದೆ ಮಾರ್ಚ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚಳಿ ಜಾಸ್ತಿ ಇರುವ ಕಾರಣ ಒಳ್ಳೆಯ ಸ್ಥಳವನ್ನ ಹುಡುಕಿಕೊಂಡು 14 ಸಾವಿರ ಕಿಲೋ ಮೀಟರ್ ಸಂಚಾರವನ್ನ ಮಾಡಿ ಕ್ರೋಷಿಯಾ ದೇಶಕ್ಕೆ ಬಂದಿದ್ದವು ಈ ಎರಡು ಕೊಕ್ಕರೆಗಳು. ಕ್ಲಿಪಿತಾನ್ ಮತ್ತು ಮಲೆನಾ ಮರದ ಮೇಲೆ ಕುಳಿತ್ತಿದ್ದಾಗ ಬೇಟೆಗಾರನೊಬ್ಬ ಗುಂಡು ಹಾರಿಸಿದ್ದಾನೆ, ಇನ್ನು ಆ ಬೇಟೆಗಾರ ಹಾರಿದ ಗುಂಡು ಹೆಣ್ಣು ಕೊಕ್ಕರೆ ಮಲೆನಾ ಕಾಲಿಗೆ ಬಿತ್ತು. ಇನ್ನು ಗಾಯಗೊಂಡ ಮಲೆನಾ ನದಿಯೊಂದರ ಬಳಿ ಬಿದ್ದು ಸಾವು ಬದುಕಿನ ನಡುವೆ ಹೋರಾಟವನ್ನ ಮಾಡುತ್ತಿತ್ತು, ಈ ಸಮಯದಲ್ಲಿ ಇದನ್ನ ನೋಡಿದ ಸ್ಟಿಫನ್ ಅನ್ನುವ ವ್ಯಕ್ತಿ ಆ ಕೊಕ್ಕರೆಯನ್ನ ಮನೆಗೆ ತಂದು ಅದಕ್ಕೆ ಚಿಕಿತ್ಸೆಯನ್ನ ಕೊಟ್ಟು ಅದನ್ನ ಸಾಕಿದರು.

ತನ್ನ ಪ್ರೇಯಸಿ ಮಲೆನಾಳನ್ನು ಹುಡುಕಿ ಹುಡುಕಿ ಸಾಕಾಗಿ ಮತ್ತೆ ದಕ್ಷಿಣ ಆಫ್ರಿಕಾಗೆ ಹೋಯಿತು ಗಂಡು ಕೊಕ್ಕರೆ ಕ್ಲಿಪಿತಾನ್, ಮುಂದಿನ ವರ್ಷ ಮಾರ್ಚ್ ನಲ್ಲಿ ಮತ್ತೆ ತನ್ನ ಪ್ರೇಯಸಿಯನ್ನ ಹುಡುಕಿಕೊಂಡು ಬಂದ ಕ್ಲಿಪಿತಾನ್ ಗೆ ಕ್ರೋಷಿಯಾದ ಒಂದು ಮನೆಯ ಬಳಿ ಮಲೆನಾ ಕಾಣಿಸಿಕೊಳ್ಳುತ್ತಾಳೆ ಮತ್ತು ನಂತರ ಎರಡು ಜೊತೆಗೂಡಿದವು. ಇನ್ನು ಮಲೆನಾ ಕಾಲಿಗೆ ಪೆಟ್ಟು ಬಿದ್ದ ಕಾರಣ ಅದಕ್ಕೆ ಹಾರಾಟ ಮಾಡಲು ಸಾಧ್ಯವಾಗುವುದಿಲ್ಲ, ಈ ಕಾರಣದಿಂದ ಮಾರ್ಚ್ ತಿಂಗಳಲ್ಲಿ ಪ್ರತಿ ವರ್ಷ 14 ಸಾವಿರ ಕಿಲೋ ಮೀಟರ್ ಸಂಚಾರ ಮಾಡಿ ಬರುವ ಕ್ಲಿಪಿತಾನ್ ಆಗಸ್ಟ್ ತಿಂಗಳ ತನಕ ತನ್ನ ಪ್ರೇಯಸಿ ಮಲೆನಾ ಜೊತೆಗೆ ಇದ್ದು ಮರಿ ಮಾಡುತ್ತದೆ. ಇನ್ನು ಮಲೆನಾ ಮತ್ತು ಕ್ಲಿಪಿತಾನ್ ತನ್ನ ಮರಿಗಳಿಗೆ ಹಾರುವುದನ್ನ ಕಲಿಸಿಕೊಡುತ್ತದೆ ಮತ್ತು ಆಗಸ್ಟ್ ತಿಂಗಳಲ್ಲಿ ಮರಿಗಳನ್ನ ಕರೆದುಕೊಂಡು ದಕ್ಷಿಣ ಆಫ್ರಿಕಾಗೆ ಹೋಗುತ್ತದೆ ಕ್ಲಿಪಿತಾನ್.

ಹೀಗೆ ಸುಮಾರು 15 ವರ್ಷಗಳಿಂದ ಇವರ ಪ್ರೇಮ ಪಯಣ ನಡೆಯುತ್ತಲೇ ಇದೆ. ಮಾರ್ಚ್ ತಿಂಗಳು ಆಗಮನ ಆಗುತ್ತಿದ್ದಂತೆ ತನ್ನ ಪ್ರಿಯಕರ ಕ್ಲಿಪಿತಾನ್ ಗಾಗಿ ಪ್ರತಿ ದಿನ ಎದುರು ನೋಡುತ್ತದೆ ಹೆಣ್ಣು ಕೊಕ್ಕರೆ ಮಲೆನಾ, ಈ ಕೊಕ್ಕರೆಗಳ ಮರಿಗಳು ವಾಪಾಸ್ ಬಂದು ಮಲೆನಳನ್ನ ನೋಡುತ್ತವೋ ಇಲ್ಲವೋ ಗೊತ್ತಿಲ್ಲ, ಆದರೆ ಅದೆಷ್ಟೇ ಕಷ್ಟಕರ ವಾತಾವರಣ ಇದ್ದರೂ ಕೂಡ ಕ್ಲಿಪಿತಾನ್ ತನ್ನ ಪ್ರೇಯಸಿ ಮಲೆನಳನ್ನ ನೋಡಲು ಬಂದೆ ಬರುತ್ತದೆ. ಸ್ನೇಹಿತರೆ ಎಂತಹ ಪ್ರೀತಿ ಅಲ್ಲವೇ ಈ ಹಕ್ಕಿಗಳದ್ದು, ಈ ಕೊಕ್ಕರೆಗಳ ಪ್ರೇಮ ಕಥೆ ಈಗ ಇಡೀ ಪ್ರಪಂಚದಾದ್ಯಂತ ವೈರಲ್ ಆಗುತ್ತಿದೆ, ಇನ್ನು ಈ ಹೆಣ್ಣು ಕೊಕ್ಕರೆಯನ್ನ ಸಾಕುತ್ತಿರುವ ಸ್ಟಿಫನ್ ಅವರ ಒಳ್ಳೆಯ ಮನಸ್ಸಿಗೆ ನಾವು ಮೆಚ್ಚಲೇಬೇಕು, ಸ್ನೇಹಿತರೆ ಈ ಕೊಕ್ಕರೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಕೊಲೆಸ್ಟ್ರಾಲ್ ನಿಯಂತ್ರಿಸಲು ನೆಲ್ಲಿಕಾಯಿ ಉಪಯೋಗ ತಿಳಿಯಲು ಈ ಲೇಖನಿ ಓದಿ…

    ಇಂದಿನ ಸವಲತ್ತುಗಳ ಜೀವನದಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವ ಮತ್ತು ಸಿದ್ಧ ಆಹಾರಗಳ ಮೂಲಕ ಮತ್ತು ಸರಿಯಾದ ಸಮಯ ಮತ್ತು ಕ್ರಮದಲ್ಲಿ ಆಹಾರ ಸೇವಿಸದೇ ಇರುವ ಮೂಲಕಕೊಲೆಸ್ಟ್ರಾಲ್ ಮಟ್ಟಗಳು ಏರುಪೇರಾಗುತ್ತಾ ಇರುತ್ತವೆ. ರಕ್ತಪರೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನವರ ಫಲಿತಾಂಶ ಕೊಲೆಸ್ಟ್ರಾಲ್ ಇದೆ ಎಂದೇ ಇರುತ್ತದೆ. ಇಲ್ಲಿ ಕೊಲೆಸ್ಟ್ರಾಲ್ ಇದೆ ಎಂದರೆ ಮೂರೂ ಅಂಶಗಳ ಒಟ್ಟು ಪ್ರಮಾಣದಲ್ಲಿ ಎಲ್‌ಡಿಎಲ್ ಪ್ರಮಾಣ ಶೇಖಡಾವಾರು ಹೆಚ್ಚಿದ್ದು ವೈದ್ಯರು ಸೂಕ್ತ ಔಷಧಿ ಮತ್ತು ಆಹಾರದಲ್ಲಿ ಕಟ್ಟುಟ್ಟು ಸಾಧಿಸಲು ಸಲಹೆ ಮಾಡುತ್ತಾರೆ. ಕೊಲೆಸ್ಟ್ರಾಲ್  ಪ್ರಮಾಣ ಹೆಚ್ಚಿದಷ್ಟು ಹೃದಯ ಸಂಬಂಧಿ ರೋಗಗಳಿಗೆ ಮುಕ್ತ ಆಹ್ವಾನ ನೀಡಿದಂತೆ. ಒಂದು…

  • ಸುದ್ದಿ

    ರೈಲಿನ ಪ್ರಯಾಣದ ಮಧ್ಯೆ ಹೆರಿಗೆ ಮಾಡಿಸಿದ ಧರಣಿಗೆ ಹೊರಟಿದ್ದ ಅಂಗನವಾಡಿ ಕಾರ್ಯಕರ್ತೆಯರು.!

    ಅನಿರ್ಧಿಷ್ಟಾವಧಿ ಧರಣಿಗಾಗಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯೊಬ್ಬರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯಾದಗಿರಿ ಜಿಲ್ಲೆಯ ಸೈದಾಪುರ ನಿವಾಸಿ ಗೀತಾ ಎಂಬುವರು ಉದ್ಯಾನ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದವರು.  ಬೆಂಗಳೂರಿಗೆ ಪತಿ ಜೊತೆ ಹೊರಟಿದ್ದ ಗೀತಾ ಅವರಿಗೆ ಪ್ರಯಾಣದ ಮಧ್ಯೆ ಹೆರಿಗೆ ನೋವು ಕಾಣಿಸಿತ್ತು.‌ ಚಿತ್ತಾಪುರ ತಾಲೂಕು ನಾಲವಾರದ ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಲಿಕಾ, ಹಾಲಾಬಾಯಿ ಮತ್ತಿತರರು ಸುಲಭ ಹೆರಿಗೆ ಮಾಡಿಸಿದ್ದಾರೆ. ವಿಷಯ ತಿಳಿದ ಕಾರ್ಯಕರ್ತೆಯರು ಗೀತಾ ಅವರಿಗೆ ಸುಲಭ ಹೆರಿಗೆ ಮಾಡಿಸಿದರು.  ರಾಯಚೂರು…

  • ಸುದ್ದಿ

    ಬಿಹಾರದಲ್ಲಿ ಹಣ್ಣಿನ ನಿಗೂಢ ಕಾಯಿಲೆಗೆ ಮೃತರಾದವರ ಸಂಖ್ಯೆ 165 ಕ್ಕೆ ಏರಿಕೆ…..

    ಬಿಹಾರದ ಮುಜಾಫರ್ಪುರದಲ್ಲಿ ಕಂಡುಬಂದ ವಿಚಿತ್ರ ಕಾಯಿಲೆಯಿಂದಾಗಿ ಮೃತರಾದ ಮಕ್ಕಳ ಸಂಖ್ಯೆ 165 ಕ್ಕೇರಿದ್ದು, ಮಕ್ಕಳ ಸಾವಿಗೆ ಮೆದುಳಿನ ಉರಿಯೂತವೇ ಕಾರಣ ಎನ್ನಲಾಗಿದೆ. ಮೆದುಳಿನ ಉರಿಯೂತ ಅಂದರೆ Acute Encephalitis Syndrome ಸಮಸ್ಯೆಯಿಂದ ಮಕ್ಕಳು ಮೃತರಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಈಗಾಗಲೇ ಇಲ್ಲಿನ ಕೃಷ್ಣ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ(ಎಸ್ ಕೆ ಎಂಸಿಎಚ್) ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಹೆಚ್ಚಿಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶಿಸಿದ್ದಾರೆ. ಈಗಾಗಲೇ ಈ ಕಾಯಿಲೆಗೆ ಲಿಚಿ ಹಣ್ಣೂ ಕಾರಣ ಎನ್ನಲಾಗುತ್ತಿದ್ದು, ಬಿಹಾರ ಸರ್ಕಾರವು…

  • ಸುದ್ದಿ

    ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಸಚಿವ. ಈ ಸುದ್ದಿ ನೋಡಿ.!

    ಸಿಲಿಕಾನ್ ಸಿಟಿಯ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಗೀತಾಳ ತಂದೆ, ತಾಯಿಯ ಮನವೊಲಿಸಿ ಕೊನೆಗೂ ಬಾಲಕಿಗೆ ಶಿಕ್ಷಣ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿ ರಾಮನಗರದ ಕೈಲಾಂಚದಲ್ಲಿರುವ ವಸತಿ ಶಾಲೆಯಲ್ಲಿ 7ನೇ ತರಗತಿಗೆ ದಾಖಲಾತಿ ಪಡೆದಿದ್ದಾಳೆ. ಮನೆಯಲ್ಲಿ ಕಡು ಬಡತನವಿರುವ ಕಾರಣಕ್ಕೆ ತಂದೆ ತಾಯಿ ಇದ್ದರೂ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಗೀತಾ ಹೂವು ಮಾರುತ್ತಿದ್ದಳು. ಸಂಗೀತ ತಂದೆ…

  • ಉಪಯುಕ್ತ ಮಾಹಿತಿ

    ನಿಮ್ಮ ಮುಖದ ಮೇಲಿನ ಅನಾವಶ್ಯಕ ಕೂದಲನ್ನು ತೆಗೆಯಲು ಹೀಗೆ ಮಾಡಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

    ಪ್ರತಿಯೊಬ್ಬ ಮಹಿಳೆಯು ತಾನು ಸುಂದರವಾಗಿ ಕಾಣಲು ಬಯಸುವುದು ಸಹಜ. ತತ್ವಚೆಗೆ ಹೆಚ್ಚಿನ ಅರಿಕೆಯನ್ನ ಮಾಡುತ್ತಾರೆ. ಆದರೆ ಮುಖದ ಅಂದವನ್ನ ಮುಖದ ಮೇಲಿನ ಬೇಡವಾದ ಕೂದಲುಗಳು ಹಾಳುಮಾಡುತ್ತವೆ. ಇಂತಹ ಬೇಡವಾದ ಕೂದಲುಗಳನ್ನ ತೆಗೆಯಲು ಹಲವು ಬಗೆಯ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ಇದಕ್ಕೆ ಮನೆಯಲ್ಲೇ ಪರಿಹಾರವಿದೆ ಎಂಬುದನ್ನ ಮರೆತಿರುತ್ತಾರೆ. ನಿಮ್ಮ ಮುಖದಲ್ಲಿನ ಬೇಡವಾದ ಕೂದಲನ್ನ ನಿವಾರಿಸಲು ಇಲ್ಲಿದೆ ನೋಡಿ ಸುಲಭ ಉಪಾಯ… * ಎರಡು ಚಮಚ ಸಕ್ಕರೆ ಮತ್ತು ಒಂದು ಚಮಚ ಲಿಂಬೆರಸ. ಸಕ್ಕರೆಯನ್ನು ಸಂಪೂರ್ಣವಾಗಿ ಲೀನವಾಗದಂತೆ ಕದಡಿ. ದೊರಗಾದ…