ಸುದ್ದಿ

ರಷ್ಯಾ ಅಭಿಮಾನಿಯ ವಿಡಿಯೋ ನೋಡಿ ಬೆರಗಾದ ಕಿಚ್ಚ ಸುದೀಪ್,.!

32

ಅಭಿಮಾನಿ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ರಷ್ಯಾದ ಅಭಿಮಾನಿಯೊಬ್ಬರು ವಿಡಿಯೋ ಮಾಡಿ ಅವರ  ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ನೋಡಿ ಕಿಚ್ಚ ಸುದೀಪ್ ಅವರು ರಷ್ಯಾದ ಅಭಿಮಾನಿಗೆ ಬೆರಗಾಗಿದ್ದಾರೆ  ಮರೀನಾ ಕಾರ್ಟಿಂಕಾ ಎಂಬವರು ಈ ವಿಡಿಯೋದಲ್ಲಿ ಸುದೀಪ್ ಅವರ ನಟನೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಮರೀನಾ ವಿಡಿಯೋದಲ್ಲಿ ತಿಳಿಸಿದ್ದಾರೆ .

ವಿಡಿಯೋದಲ್ಲಿ ಏನಿದೆ? :ನಾನು ನಿಮ್ಮ ಬಹುದೊಡ್ಡ ಅಭಿಮಾನಿ. ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನಾನು ನೋಡಲು ಪ್ರಯತ್ನಿಸುತ್ತೇನೆ. ನೀವು ಅತ್ಯುತ್ತಮ ನಟರಾಗಿದ್ದು, ನಾನು ನಿಮ್ಮ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತೇನೆ. ನೀವು ನಟಿಸಿದ ಪುಲಿ, ಕೋಟಿಗೊಬ್ಬ, ಹೆಬ್ಬುಲಿ, ಪೈಲ್ವಾನ್ ಸಿನಿಮಾಗಳನ್ನು ನೋಡಿದ್ದೇನೆ. ನೀವು ಯಾವಾಗಲೂ ಸಂತೋಷವಾಗಿ ಹಾಗೂ ಆರೋಗ್ಯವಾಗಿ ಇರಬೇಕು ಎಂದು ಬಯಸುತ್ತೇನೆ. ನೀವು ನಮಗೆ ಮನರಂಜನೆ ನೀಡುತ್ತಿರುವುದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಸುದೀಪ್, ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಿದ್ದ ‘ಸೈರಾ ನರಸಿಂಹರೆಡ್ಡಿ’ ಚಿತ್ರ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಸುದೀಪ್ ಅವುಕು ರಾಜನ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರಕ್ಕೆ ಫಿದಾ ಆದ ಅಭಿಮಾನಿಗಳು ಅವುಕು ರಾಜು ಫ್ಯಾನ್ ಗರ್ಲ್ ಎಂದು ಟ್ವಿಟ್ಟರ್ ಖಾತೆ ತೆರೆದಿದ್ದರು. ರಷ್ಯಾ ಅಭಿಮಾನಿಯ ಈ ವಿಡಿಯೋವನ್ನು ಅವುಕು ರಾಜು ಫ್ಯಾನ್ ಗರ್ಲ್ಸ್ ಟ್ವಿಟ್ಟರಿನಲ್ಲಿ ಟ್ವೀಟ್ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ಅಭಿಮಾನಿ ಮರೀನಾ ಕಾರ್ಟಿಂಕಾಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ಸುದೀಪ್ ಅವರು ‘ಕೋಟಿಗೊಬ್ಬ-3’ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಬಳಿಕ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ