ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮ ತಡೆಗೆ ಚುನಾವಣಾ ಆಯೋಗ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದೆ.

ಎಲ್ಲಾ ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಇತ್ತೀಚೆಗೆ ಗೌರಿಬಿದನೂರು ಬಳಿ ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ಚೆಕ್ ಪೋಸ್ಟ್ ನಲ್ಲಿ ಇದ್ದ ಸಿಬ್ಬಂದಿಗೆ ಅಚ್ಚರಿಯಾಗಿದೆ.
ಚುನಾವಣಾ ಸಿಬ್ಬಂದಿ ರಾಜ್ಯ ಹೆದ್ದಾರಿಯಲ್ಲಿ ಬಂದ ಕಾರು ತಡೆದು ಪರಿಶೀಲನೆ ನಡೆಸಲು ಮುಂದಾದಾಗ, ಕಾರಿನಲ್ಲಿ ಖ್ಯಾತ ನಟ ಶಿವರಾಜ್ ಕುಮಾರ್ ಅವರು ಇರುವುದು ಕಂಡುಬಂದಿದೆ. ಕಾರು ನಿಲ್ಲಿಸಿದ ಕೂಡಲೇ ಕಾರಿನಿಂದ ಇಳಿದ ಶಿವಣ್ಣ ಅವರನ್ನು ಕಂಡು ಚೆಕ್ ಪೋಸ್ಟ್ ಅಧಿಕಾರಿಗಳು ಅಚ್ಚರಿಯಾಗಿದ್ದಾರೆ.

ಬಳಿಕ ಕಾರು ಪರಿಶೀಲನೆ ನಡೆಸಿದ್ದಾರೆ. ಬಿಗ್ ಸ್ಟಾರ್ ಆಗಿದ್ದರೂ ಕೂಡ ಶಿವಣ್ಣ ಜನಸಾಮಾನ್ಯರಂತೆ ಚುನಾವಣಾ ಸಿಬ್ಬಂದಿ ಕಾರು ತಪಾಸಣೆ ಮಾಡಲು ಸಹಕರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎನ್ನಲಾಗಿದೆ. ಶಿವಣ್ಣ ಅವರನ್ನು ಕಂಡು ಖುಷಿಯಾದ ಚುನಾವಣಾ ಸಿಬ್ಬಂದಿ ಅವರೊಂದಿಗೆ ಫೋಟೋ, ಸೆಲ್ಫಿ ತೆಗೆದುಕೊಂಡಿದ್ದಾರೆ. ಬಳಿಕ ಶಿವಣ್ಣ ಚಿತ್ರೀಕರಣಕ್ಕಾಗಿ ತೆರಳಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಶಿವಣ್ಣ ಪ್ರಚಾರ ನಡೆಸಿದ್ದರು. ಈ ಬಾರಿ ಅವರು ಚುನಾವಣೆ ಪ್ರಚಾರದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡ್ರೈವಿಂಗ್ ಲೈಸೆನ್ಸ್ ನವೀಕರಣ ಅಥವಾ ಅದರಲ್ಲಿನ ವಿಳಾಸ ಬದಲಾವಣೆಗೆ ಸಾರಿಗೆ ಇಲಾಖೆ ಕಚೇರಿಗಳಿಗೆ ಇನ್ನು ಮುಂದೆ ಪದೇ ಪದೇ ಅಲೆಯಬೇಕಿಲ್ಲ. ಅಲ್ಲದೇ, ಈ ಪ್ರಕ್ರಿಯೆಗೆ ಯಾವುದೇ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ. ಬಹುತೇಕ ಜನ ಸ್ವಂತ ಊರಿನ ವ್ಯಾಪ್ತಿಯ ಆರ್.ಟಿ.ಓ. ಕಚೇರಿಯಲ್ಲಿ ಡಿಎಲ್ ಮಾಡಿಸಿಕೊಂಡಿರುತ್ತಾರೆ ಕಾರಣಾಂತರದಿಂದ ಅವರು ಬೇರೆ ನಗರ ಅಥವಾ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಡಿಎಲ್ ನವೀಕರಣ ಮತ್ತು ವಿಳಾಸ ಬದಲಾವಣೆಗೆ ಆರ್.ಟಿ.ಓ….
ಮದುವೆಯ ದಿನ ವರನ ಕುಟುಂಬದವರು ನಗದು, ಒಡವೆ ಸೇರಿದಂತೆ ಒಂದು ಕೋಟಿ ಮೌಲ್ಯದ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದರಿಂದ ಯುವತಿಯೊಬ್ಬಳು, ವೈದ್ಯನೊಂದಿಗೆ ನಿಗದಿಯಾಗಿದ್ದ ತನ್ನ ಮದುವೆಯನ್ನೇ ಸ್ಥಗಿತಗೊಳಿಸಿದ್ದಾಳೆ. ಡಾ. ರಾಶಿ ವರದಕ್ಷಿಣೆ ವಿರುದ್ಧ ಹೀಗೆ ಸಿಡಿದೆದ್ದ ವಧು.
ನಮ್ಮ ಪ್ರಪಂಚದಲ್ಲಿ ಅದೆಷ್ಟೋ ನಿಗೂಢಗಳು ಇನ್ನು ಇದೆ ಮತ್ತು ಆ ನಿಗೂಢಗಳನ್ನ ಭೇದಿಸಲು ಮನುಷ್ಯನಿಂದ ಇನ್ನು ಕೂಡ ಸಾಧ್ಯವಾಗಿಲ್ಲ, ದೇವರ ಸೃಷ್ಟಿಯಾದ ಈ ಪ್ರಪಂಚದಲ್ಲಿ ಯಾವುದೇ ಜೀವಿ ಕೂಡ ಜೀವಿಸಬೇಕು ಅಂದರೆ ಆಹಾರ, ನೀರು ಮತ್ತು ಗಾಳಿಯನ್ನ ಸೇವನೆ ಮಾಡಲೇಬೇಕು, ಹೆಚ್ಚುಕಮ್ಮಿ ಒಂದೆರಡು ದಿನ ಊಟ ಇಲ್ಲದೆ ಜೀವನವನ್ನ ಮಾಡಬಹುದು ಆದರೆ ಜಾಸ್ತಿ ದಿನ ಊಟ ಮಾಡದೆ ಇರಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಮತ್ತು ಹೆಚ್ಚು ದಿನ ಆಹಾರವನ್ನ ಬಿಟ್ಟು ಇದ್ದರೆ ಆ ಜೀವಿಯ ಸಾವು ಕೂಡ…
ವೃತ್ತಿಪರ ಕೋರ್ಸ್ಗಳ ಸರ್ಕಾರಿ ಕೋಟದ ಸೀಟುಗಳಿಗೆ ಆನ್ಲೈನ್ ನೋಂದಣಿ, ಆಪ್ಶನ್ ಎಂಟ್ರಿ, ಶುಲ್ಕಪಾವತಿ ಮಾಡುವ ಅಭ್ಯರ್ಥಿಗಳು ಮುಂದಿನ ಸಾಲಿನಿಂದ ಸೈಬರ್ ಕೆಫೆ ಸೇರಿದಂತೆ ಕಂಪ್ಯೂಟರ್ ಮೊರೆ ಹೋಗುವ ಅಗತ್ಯವಿಲ್ಲ. ಇದನ್ನೆಲ್ಲಾ ಬೆರಳ ತುದಿಯಲ್ಲೇ ಮಾಡಿ ಮುಗಿಸಬಹುದು.
ನವೆಂಬರ್ 1 ಬಂದರೆ ಮತ್ತೊಮ್ಮೆ ಶಿಕ್ಷಕರ ದಿನಾಚರಣೆ ಬಂದಷ್ಟೇ ಖುಷಿಯಾಗುತ್ತದೆ. ಕನ್ನಡ ಹೇಳಿಕೊಟ್ಟ ಮೇಷ್ಟ್ರುಗಳು, ಅವರು ಪಾಠ ಮಾಡುತ್ತಿದ್ದ ರೀತಿ ನೆನಪಾಗುತ್ತದೆ..
ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಂತರ್ಜಾಲ ಸಂಪರ್ಕವನ್ನು ಕಲ್ಪಿಸಲಾಗುತ್ತಿದ್ದು, ಅಂತರ್ಜಾಲದ ಮೂಲಕ ಪಡಿತರ ಚೀಟಿ ಪಡೆಯಬಹುದಾಗಿದೆ. ಜೊತೆಗೆ ರಾಜ್ಯದ ಯಾವುದೇ ಮೂಲೆಯಲ್ಲಿ ವಾಸವಾಗಿದ್ದರೂ, ಆ ಪ್ರದೇಶದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳ ಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.