ಜ್ಯೋತಿಷ್ಯ

ದಿನ ಭವಿಷ್ಯ ಬುಧವಾರ ….ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

109

ಪ್ರತಿನಿತ್ಯ ಎದುರಿಸುವ ಆಧುನಿಕ ಬದುಕಿನ ಗೋಜಲು ಗದ್ದಲಗಳಿಗೂ ಹುಟ್ಟಿದ ಜನ್ಮರಾಶಿಗಳಿಗೂ ಒಂದು ನಿಕಟ ಸಂಬಂಧ ಇದೆ ಎಂಬುದು ಲಕ್ಷಾಂತರ ಜನರ ನಂಬಿಕೆ. ಪ್ರಪಂಚದಾದ್ಯಂತ ನಿತ್ಯ ರಾಶಿಗಳ ಆಧಾರದ ಮೇಲೆ ದಿನವನ್ನು ಎದುರುಗೊಳ್ಳುವ ಸಂಪ್ರದಾಯವಿದೆ. ಬದುಕಿನ ಭವಿಷ್ಯವನ್ನು ಒಟ್ಟು 12 ರಾಶಿಗಳ ಆಧಾರದ ಮೇಲೆ ಹೇಳಿಕೊಂಡು ಬರಲಾಗುತ್ತಿದೆ….

ಈ ಹಿನ್ನೆಲೆಯಲ್ಲಿ ಇದು ನಿತ್ಯ ಭವಿಷ್ಯ. ನಿಮ್ಮ ನಿಮ್ಮ ರಾಶಿಯ ಫಲಾಫಲವನ್ನು ವಯೋಮಾನಕ್ಕೆ ಅನುಗುಣವಾಗಿಯೂ ಇಲ್ಲಿ ನೀಡಲಾಗಿದೆ. ದಿನ ಆರಂಭಕ್ಕೆ ಉತ್ತಮ ಮಾರ್ಗದರ್ಶಿ ಇದು.

ಮೇಷ…

ಯುವಜನರಿಗೆ: ಗೆಳತಿಯೊಬ್ಬಳ ಸಹವಾಸದಿಂದ ನಿಮ್ಮಆಸಕ್ತಿಗಳ ಬದಲಾಗುತ್ತದೆ. ಸದ್ಯದಲ್ಲಿರುವ ಕೆಲಸವನ್ನು ಬಿಡುವುದು ಸೂಕ್ತವಲ್ಲ.

ವಯಸ್ಕರಿಗೆ: ಪೋಷಕರನ್ನು ಕಡೆಗಾಣಿಸುತ್ತಿದ್ದೀರಿ ಇದರಿಂದ ಪಾಪ ಪ್ರಜ್ಙೆ ಕಾಡಿಸುತ್ತಿದೆ, ಮನಸ್ಸು ಬದಲಾಯಿಸಿಕೊಳ್ಳುವುದರಿಂದ ಲಾಭವಿದೆ.

ಹಿರಿಯರಿಗೆ: ಸದಾ ಸಾವಿನ ಬಗ್ಗೆ ಯೋಚನೆ ಮಾಡುವುದನ್ನು ಬಿಡಿ, ನಿಮ್ಮಲ್ಲಿರುವ ಶಕ್ತಿಗೆ ಅನುಗುಣವಾದದನ್ನು ನಿತ್ಯವೂ ಮಾಡಿ….

ವೃಷಭ…

ಯುವಜನರಿಗೆ: ಯಾರದೋ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುತ್ತೀರಿ. ಹೊಸ ವಿಷಯಗಳತ್ತ ಹುಸಿ ಹುರುಪು ಬೇಡ.

ವಯಸ್ಕರಿಗೆ: ದಾಂಪತ್ಯದಲ್ಲಿನ ವಿರಸ ಮಾನಸಿಕ ಆರೋಗ್ಯ ಕೆಡಿಸುತ್ತದೆ. ನ್ಯಾಯಾಲಯಲ್ಲಿ ಗೆಲವು.

ಹಿರಿಯರಿಗೆ: ಹಣದ ಬಗ್ಗೆ ಎಚ್ಚರದಿಂದ ಇರಿ. ಆರೋಗ್ಯದ ತಪಾಸಣೆಯಿಂದ ಒಳ್ಳೆಯದಾಗುತ್ತದೆ. ಭಯ ನಿವಾರಣೆ ಸಾಧ್ಯ.

ಮಿಥುನ…

ಯುವಜನರಿಗೆ: ವೃತ್ತಿ ಶಿಕ್ಷಣದ ಕೊನೆಯ ಹಂತದಲ್ಲಿದ್ದೀರಿ. ಇದುವರೆವಿಗೂ ಎದುರಾಗುತ್ತಿದ್ದ ನೆನಪಿನ ಸಮಸ್ಯೆಗಳು ಬದಲಾಗುವ ಸೂಚನೆಗಳಿವೆ.

ವಯಸ್ಕರಿಗೆ: ನಿವೃತ್ತಿಯ ಅಂಚಿನಲ್ಲಿದ್ದೀರಿ. ಮುಂದಿನ ದಿನಗಳ ಬಗ್ಗೆ ಕೊಂಚ ಕಾಳಜಿಯಿಂದ ಯೋಚಿಸಿ. ಕುಡಿತದಿಂದ ಅಪಾಯ.

ಹಿರಿಯರಿಗೆ: ಮನೆಮಂದಿಯೊಂದಿಗೆ ಮುನಿಸಿಕೊಂಡರೆ ನಿಮಗೆ ತೊಂದರೆ. ಗತಿಸಿದ ಬಾಳ ಸಂಗಾತಿಯ ಬಗ್ಗೆ ತುಂಬಾ ಯೋಚನೆ ಬೇಡ.

ಕರ್ಕಾಟಕ…

ಯುವಜನರಿಗೆ: ಸೋಲು ಸತತವಾಗಿ ಬರುತ್ತಿರುವುದರಿಂದ ನಿಮ್ಮ ಬಗ್ಗೆ ನಕಾರಾತ್ಮ ಭಾವಗಳು ಎದ್ದಿವೆ. ಯಶಸ್ಸಿಗೆ ಬಹಳ ಹತ್ತಿರದಲ್ಲಿದ್ದೀರಿ ಎನ್ನುವುದನ್ನು ನಂಬಿ ಮುನ್ನುಗ್ಗಿ.

ವಯಸ್ಕರಿಗೆ: ನಿಮ್ಮಂತೆಯೇ ನಿಮ್ಮ ಮಕ್ಕಳು ಬೆಳೆಯಬೇಕೆಂಬ ಹಠ ಬೇಡ. ನೀವು ನಿಮ್ಮ ಯಶಸ್ಸಿನ ಕಡೆ ಗಮನ ಹರಿಸಿ. ನಿಮ್ಮ
ಚಟವೊಂದು ಕುಟುಂಬದ ಶಾಂತಿಯನ್ನು ಕೆದಡಲಿದೆ.

ಹಿರಿಯರಿಗೆ: ಭೂತದ ಆರಾಧಕರಿಂದ ದೂರವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ.

ಸಿಂಹ…

ಯುವಜನರಿಗೆ: ಸದಾ ಒಂದಲ್ಲಾ ಒಂದು ತೊಂದರೆಗೆ ಸಿಕ್ಕಿಕೊಳ್ಳುವುದಕ್ಕೆ ನಿಮ್ಮ ಮೊಂಡುತನ ಕಾರಣ. ಇಂದು ಇದರ ಸಲುವಾಗಿಯೇ ಹಿಂಸೆಗೆ ಒಳಗಾಗುತ್ತೀರಿ.

ವಯಸ್ಕರಿಗೆ: ಕುಟುಂಬದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳದಿರುವುದರಿಂದಾಗಿಯೇ ಜಗಳ-ಕದನ. ಸಾಲಗಾರರಿಂದ ಹಿಂಸೆ ಹೆಚ್ಚಾಗಲಿದೆ.

ಹಿರಿಯರಿಗೆ: ನೀವು ನೆನೆಪಿನ ಶಕ್ತಿ ಹೀನತೆಯ ಬಗ್ಗೆ ಗಮನ ಹರಿಸದಿರುವುದರಿಂದಾಗಿ ತಪ್ಪು ಅಭಿಪ್ರಾಯಗಳು ಹೆಚ್ಚಾಗುತ್ತಿವೆ ತಜ್ಙ ವೈದ್ಯರ ಸಲಹೆ ಉಪಯುಕ್ತ.

ಕನ್ಯಾ…

ಯುವಜನರಿಗೆ: ನೀವು ಇರುವ ಸಧ್ಯದ ಪರಿಸ್ಥಿತಿಯಲ್ಲಿ ಹೊಸ ದಾರಿಗಳನ್ನು ಆರಿಸುವ ಮನಸ್ಸು ಪ್ರಬಲ. ನಿಮಗಿರುವ ಚಂಚಲ ಮನಸ್ಸುನನ್ನು ಬದಲಾಯಿಸಿಕೊಳ್ಳಿ.

ವಯಸ್ಕರಿಗೆ: ಹೀಗೆ ಬಾಳ ಸಂಗಾತಿಯ ಆಯ್ಕೆಯನ್ನು ಒಂದಲ್ಲಾ ಒಂದು ಕಾರಣದಿಂದ ಮುಂದು ಹಾಕುವುದ ಸರಿಯಲ್ಲ ಇದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಹಿರಿಯರಿಗೆ: ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.

ತುಲಾ…

ಯುವಜನರಿಗೆ: ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯತ್ತ ಒಗೆಯುವ ಸ್ವಭಾವ ನಿಮ್ಮದು. ಇಂದದು ಅಪಾಯದ ಮಟ್ಟ ಮುಟ್ಟಲಿದೆ.

ವಯಸ್ಕರಿಗೆ: ಒಂಟಿ ತಾಯಿ ಆಗಿ ಮಕ್ಕಳನ್ನು ಬೆಳೆಸುತ್ತಿರುವುದು ಕಷ್ಟದ ಕೆಲಸ. ಆದರೂ ದೃಢ ಮನಸ್ಸಿನಿಂದ ಮುಂದುವರೆಯರಿ.

ಹಿರಿಯರಿಗೆ: ಒಡ ಹುಟ್ಟಿದವರ ಬಗ್ಗೆ ಇನ್ನೆಷ್ಟು ದಿನ ಈರ್ಷ್ಯೆ ವ್ಯಕ್ತಪಡಿಸುವಿರಿ. ಇದು ನಿಮ್ಮ ಮನೋಬಲವನ್ನು ಹಿಂಡುತ್ತದೆ. ಇಂದು ಎಚ್ಚರದಿಂದ ಅತ್ತ ಗಮನಿಸಿ.

ವೃಶ್ಚಿಕ…

ಯುವಜನರಿಗೆ: ನಿಮ್ಮ ಕ್ರೀಡಾಪಟುತ್ವ ಇಂದು ಮುಖ್ಯ ಪರೀಕ್ಷೆಯನ್ನು ಎದುರಿಸಲಿದೆ. ಗುರಿಯತ್ತ ಮಾತ್ರವಷ್ಟೇ ಗಮನವಿರಲಿ.

ವಯಸ್ಕರಿಗೆ: ಇಷ್ಟ ಪಟ್ಟವರನ್ನು ಮದುವೆಯಾಗುವ ನಿಮ್ಮ ಮಗಳ ಬಗ್ಗೆ ನಿಶ್ಚಿಂತೆ ಇಂದ ಇರುವುದೇ ಸರಿ. ಹಲವಾರು ವರ್ಷಗಳ ಹಿಂದೆ ನೀವೂ ಕೂಡ ಅದನ್ನೇ ಮಾಡಿದ್ದಿರಿ ಎಂಬುದನ್ನು ನೆನಪಿಸಿಕೊಳ್ಳಿ.

ಹಿರಿಯರಿಗೆ: ಇಳಿ ವಯಸ್ಸಿನಲ್ಲಿ ನಂಬಿಕೆಗಳನ್ನು ಬದಲಾಯಿಸಿಕೊಳ್ಳುವುದು ಸಾಹಸ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ.

ಧನಸ್ಸು…

ಯುವಜನರಿಗೆ: ನಿಮ್ಮ ಪೋಷಕರ ಸಂಬಂಧಗಳ ಬಗ್ಗೆ ಹೆಚ್ಚು ಆಲೋಚಿಸುವುದರಿಂದ ನಿಮ್ಮ ನಕಾರಾತ್ಮಕ ಭಾವನೆಗಳು ಕಡಿಮೆಯಾಗುವುದಿಲ್ಲ.

ವಯಸ್ಕರಿಗೆ: ನಿಮ್ಮ ಸ್ವಭಾವ ಎಲ್ಲರನ್ನು ನಂಬುವಂತಹದ್ದು. ಅದನ್ನು ಬದಲಾಯಿಸುವ ಪ್ರಸಂಗ ಎದುರಾಗಲಿದೆ.

ಹಿರಿಯರಿಗೆ: ವಯೋಮಾನಕ್ಕೆ ಅನುಗುಣವಾದ ನಡೆ ನುಡಿ ನಿಮ್ಮಲ್ಲಿ ಇಲ್ಲವೆನ್ನುವುದನ್ನು ನೆನಪಿಗೆ ತರುವ ದಿನಗಳು ಮುಂದೆ ಬರಲಿವೆ.

ಮಕರ…

ಯುವಜನರಿಗೆ: ಹೆಣ್ಣು ಎನ್ನುವ ಕಾರಣದಿಂದ ಎಲ್ಲದರ ಬಗ್ಗೆ ಮುಜುಗರ ಬೇಡ. ನಿಮಗೆ ಇಷ್ಟವಾದದನ್ನು ಪಡೆಯುವುದರತ್ತ ಹೆಚ್ಚು ಗಮನ ಇರಲಿ.

ವಯಸ್ಕರಿಗೆ: ನೀವು ವೃತ್ತಿಯಲ್ಲಿದ್ದುಕೊಂಡೇ ಉನ್ನತ ಪದವಿಯ ಶಿಕ್ಷಣ ಮುಂದುವರೆಸಿ. ಯಶಸ್ಸು, ಕೀರ್ತಿ ಅದರ ಹಿಂದೆ ತಾನಾಗಿಯೇ ಬರುವುದು.

ಹಿರಿಯರಿಗೆ: ಸಾವಿನ ಬಗ್ಗೆ ಅಷ್ಟೊಂದು ಆಲೋಚಿಸಿ ಪ್ರಯೋಜನವಿಲ್ಲ. ಮುಂದಾಗುವುದರ ಮುನ್ಸೂಚನೆ ಇದ್ದರೂ ಆ ಬಗ್ಗೆ ಆತಂಕ, ಅಂಜಿಕೆ ಬೇಡ.

ಕುಂಭ…

ಯುವಜನರಿಗೆ: ನಿಮ್ಮ ಒಳಮುಖದ ಸ್ವಭಾವದಿಂದ ಅನಗತ್ಯವಾಗಿ ಕಿರಿಕಿರಿ ಎದುರಿಸುತ್ತೀರಿ. ಇದರಿಂದಾಗಿಯೇ ನಿಕಟವಾಗಲಿದ್ದ ಸಂಬಂಧವೊಂದಕ್ಕೆ ಹಿನ್ನಡೆ. ಕೋಪ-ತಾಪದಿಂದ ಹಾನಿಯಾಗುವುದು.

ವಯಸ್ಕರಿಗೆ: ಮಕ್ಕಳಿಂದ ತುಂಬಾ ನಿರೀಕ್ಷಿಸುತ್ತೀರಿ. ಇದು ಸಂಯಮ ಕೆಡಿಸುತ್ತದೆ. ವೃತ್ತಿಯಲ್ಲಿ ಕಿರಿಕಿರಿ; ಮೆಚ್ಚುಗೆಯ ಮಾತುಗಳನ್ನು ಆಡುವುದರಿಂದ ಬಿಟ್ಟು ಹೋಗಿದ್ದ ಸಂಬಂಧವೊಂದು ಗಟ್ಟಿಯಾಗುತ್ತದೆ.

ಹಿರಿಯರಿಗೆ: ಆರೋಗ್ಯದ ಬಗ್ಗೆ ತವಕ ಬೇಡ. ಇಷ್ಟ ದೇವತಾ ಸ್ಮರಣೆ ನಿಷ್ಠೆಯಿಂದ ಮಾಡಿ. ಮಕ್ಕಳ ಸೋಲಿನ ಬಗ್ಗೆ ಆತಂಕ ಪಡುವುದರಿಂದ ನಿದ್ದೆ ಕೆಡಿಸಿಕೊಳ್ಳುತ್ತೀರಿ.

ಮೀನ…

ಯುವಜನರಿಗೆ: ಸಾಮಾಜಿಕ ಜಾಲತಾಣವನ್ನು ನಂಬಿ ಸಮಸ್ಯೆಗೆ ಸಿಕ್ಕಿಕೊಳ್ಳುತ್ತೀರಿ. ಕೆಡಕು ಮಾಡುವ ಮನಸ್ಸು ಬಿಡಿ.

ವಯಸ್ಕರಿಗೆ: ಕರ್ತವ್ಯ ಮಾಡುವ ಮನಸ್ಸನ್ನು ಬೆಳಸಿಕೊಳ್ಳದಿದ್ದರೇ ಅವಕಾಶಗಳು ಕೈ ತಪ್ಪುತ್ತದೆ. ಸಂಗಾತಿಯ ಬಗ್ಗೆ ಸಂಶಯ ಬೇಡ.

ಹಿರಿಯರಿಗೆ: ಹಳೆಯದನ್ನು ಎಷ್ಟು ನೆನಪಿಸಿಕೊಂಡರೂ ಪ್ರಯೋಜನವಿಲ್ಲ. ತಪ್ಪದೇ ವ್ಯಾಯಮ ಮಾಡಿ. ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳಬೇಕಾ? ಹಾಗಾದರೆ ಈ ಆಹಾರಗಳನ್ನು ಸೇವಿಸಿ.

    ತೂಕ ಹೆಚ್ಚಿದ್ದರೆ ಹೇಗೆ ಸಮಸ್ಯೆಯೋ ಹಾಗೆಯೇ ತೂಕ ಕಡಿಮೆ ಇದ್ದರೂ ಕಷ್ಟ. ಜಾಹಿರಾತಿನಲ್ಲಿ ಬಂದ ಪುಡಿಯನ್ನೆಲ್ಲ ತಿಂದು ತೇಗಿದರೂ ಪ್ರಯೋಜನವಾಗಿಲ್ಲವೇ? ಅವೆಲ್ಲ ಏನೂ ಬೇಡ, ಸೂಕ್ತ ಆಹಾರ ಸೇವಿಸಿ ಸಾಕು. ತೂಕ ಕಳ್ಕೊಳೋ ಬಗ್ಗೆ ಎಲ್ಲರೂ ಮಾತಾಡ್ತಾರೆ, ಎಲ್ಲ ಪತ್ರಿಕೆಗಳಲ್ಲೂ ಅದಕ್ಕೆ ಸಂಬಂಧಪಟ್ಟ ಟಿಪ್ಸ್, ಲೇಖನ ದಿನಕ್ಕೊಂದರಂತೆ ಹರಿದು ಬರುತ್ತವೆ, ಇಂಟರ್ನೆಟ್‌ನಲ್ಲಿ ತೂಕ ಕಳೆದುಕೊಂಡವರ ಸಕ್ಸಸ್‌ ಸ್ಟೋರಿಗಳಿಗೂ ಕೊರತೆ ಇಲ್ಲ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ. ಕಡ್ಡಿ, ಸಿಳ್ಳೆಕ್ಯಾತ, ಅಸ್ಥಿಪಂಜರ ಎಂದೆಲ್ಲ ಕರೆಸಿಕೊಂಡು,…

  • ಸುದ್ದಿ

    ವೇಶ್ಯೆಯರನ್ನೂ ಬಿಡದ ಕಾಮುಕರು, ಮೂವರ ಮೇಲೆ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ…!

    ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಮೂವರು ವೇಶ್ಯರನ್ನು 9 ಮಂದಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದಿರುವ ವಿದ್ರಾವಕ ಘಟನೆ ನಡೆದಿದೆ. ದೆಹಲಿಯ ಲಜಪತ್ ನಗರದ ಮೆಟ್ರೋ ನಿಲ್ದಾಣದ ಬಳಿ ಗಿರಾಕಿಗಳಿಗಾಗಿ ಕಾಯುತ್ತಿದ್ದಾಗ ಓಲಾ ಕ್ಯಾಬ್ ನ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಬಂದ ಇಬ್ಬರು ಗಿರಾಕಿಗಳ ಸೋಗಿನಲ್ಲಿ ಮಹಿಳೆಯರನ್ನು ಸಂಪರ್ಕಿಸಿದ್ದಾರೆ. 3000 ಸಾವಿರ ರೂಗಳಿಗೆ ಡೀಲ್ ಮಾಡಿಕೊಂಡ ದುಷ್ಕರ್ಮಿಗಳು ಮಹಿಳೆಯರನ್ನು ನೊಯ್ಡಾದ ಸೆಕ್ಟರ್ 18ಗೆ ಬರುವಂತೆ ಹೇಳಿ 3600 ರೂ ಮುಂಗಡ ಹಣವನ್ನೂ ನೀಡಿದ್ದಾರೆ. ಬಳಿಕ ಮಹಿಳೆಯರನ್ನು…

  • ಸಿನಿಮಾ

    ನಮ್ಮ ಸರ್ಕಾರ ಇದೆ ಎಂದು ಧಮಕಿ ಹಾಕಿದ ಶಾಸಕನಿಗೆ ತಿರುಗೇಟು ನೀಡಿದ ದರ್ಶನ್…

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆಯ ವೇಳೆ ಜನಸಾಗರವೇ ಹರಿದು ಬಂದಿದ್ದು, ಶಕ್ತಿ ಪ್ರದರ್ಶನದ ಮೂಲಕ ಸುಮಲತಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ನಾನು ಇಲ್ಲಿ ನಿಂತಿದ್ದಕ್ಕೆ ಹಳೆ ಮ್ಯಾಟರ್ ಓಪನ್ ಆಗುತ್ತಿದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ, ಅದೂ ಆಗಲಿ, ಅದರಿಂದ ಖುಷಿ,…

  • ಸರ್ಕಾರದ ಯೋಜನೆಗಳು

    ಬಿ.ಪಿ.ಎಲ್. ಕುಟುಂಬಗಳಿಗೆ ಸರ್ಕಾರದಿಂದ “ಇಂದಿರಾ ಬಟ್ಟೆ ಭಾಗ್ಯ”..! ತಿಳಿಯಲು ಈ ಓದಿ..

    ಈಗಾಗಲೇ ಹಲವು ‘ಭಾಗ್ಯ’ ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಮತ್ತೊಂದು ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಇಂದಿರಾ ಗಾಂಧಿ ಹೆಸರು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‌ ಈಗಾಗಲೇ ಇಂದಿರಾ ಹೆಸರಿನಲ್ಲಿ ಕ್ಯಾಂಟೀನ್‌, ಕ್ಲಿನಿಕ್‌ ತೆರೆದಿರುವ ಸರ್ಕಾರ ಈಗ ಇಂದಿರಾ ವಸ್ತ್ರ ಭಾಗ್ಯ ಯೋಜನೆ ಜಾರಿಗೆ ಚಿಂತನೆ ನಡೆಸಿದೆ.

  • ಆರೋಗ್ಯ, ಉಪಯುಕ್ತ ಮಾಹಿತಿ

    ಟೀ-ಕಾಫಿ ಕುಡಿಯುವ ಮುಂಚೆ ನೀರು ಕುಡಿದರೆ ಏನಾಗುತ್ತೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸೇವಿಸುವ ಮೊದಲು ನೀರು ಕುಡಿದರೆ ಆಗುವ ಪ್ರಯೋಜನ ಇನ್ನೂ ಜಾಸ್ತಿ. ಹಲ್ಲು ಕೊಳೆಯಾಗಲ್ಲ :-ಕಡು ಬಣ್ಣದ ಕಾಫಿ, ಟೀ ಕುಡಿಯುವುದರಿಂದ ಬಿಳಿ ಹಲ್ಲು ಹಳದಿಗಟ್ಟುವ ಸಾಧ್ಯತೆಯಿದೆ. ಹೀಗಾಗಿ ಮೊದಲು ನೀರು ಕುಡಿದು ಬಳಿಕ ಕಾಫಿ-ಟೀ ಕುಡಿದರೆ ಈ ಸಮಸ್ಯೆಯಿರದು.  ಅಸಿಡಿಟಿ:-ಏನೇ ಸೇವಿಸುವ ಮೊದಲು ನೀರು ಕುಡಿದರೆ ಅಸಿಡಿಟಿ ಸಮಸ್ಯೆ ಬರದು. ಕಾಫಿ ಅಥವಾ ಟೀ ಸೇವನೆ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ತರಬಹುದು. ಇಂತಹ…

  • ಸಂಬಂಧ

    ನಾಗಿಣಿ ಡ್ಯಾನ್ಸ್ ಮಾಡಿದ್ರಿಂದ, ಆಗಬೇಕಿದ್ದ ಮದುವೇನೇ ನಿಂತುಹೋಯಿತು!ಶಾಕ್ ಆಗ್ಬೇಡಿ,ಈ ಲೇಖನಿ ಓದಿ..

    ಈಗಿನ ಮದುವೆಗಳ ಟ್ರೆಂಡೇ ಬದಲಾಗಿದೆ.ಮದುವೆ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ,ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯ.ಆದ್ರೆ ಇಲ್ಲೊಂದು ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದ್ದರಿಂದ, ವಧು ಮದುವೆಯನ್ನೇ ತಿರಸ್ಕರಿಸಿದ ಘಟನೆ ನಡೆದಿದೆ.